ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ 2 ರೂ.ಗೂ ಅಧಿಕ ಹೆಚ್ಚಳ: ಮೇ.15ರ ಬಳಿಕ ನಾಲ್ಕನೇ ದರ ಏರಿಕೆ

Date:

ಸೋಮವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.61 ರೂಪಾಯಿ, ಡೀಸೆಲ್ ಬೆಲೆ 2.71 ರೂಪಾಯಿ ಹೆಚ್ಚಳವಾಗಿದೆ. ಮೇ 15ರ ಬಳಿಕ ಸತತ ನಾಲ್ಕನೇ ಬಾರಿಗೆ ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಏರಿಸುತ್ತಿವೆ.

- Advertisement -

ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿ ಯುದ್ಧ ಆರಂಭವಾದಾಗಿನಿಂದ ಜಾಗತಿಕವಾಗಿ ತೈಲ ಬಿಕ್ಕಟ್ಟು ಆರಂಭವಾಗಿದೆ. ದೇಶದಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಮುಗಿಯುವವರೆಗೂ ಇಂಧನ ಬೆಲೆಯನ್ನು ಏರಿಸದ ಕೇಂದ್ರ ಸರ್ಕಾರ, ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದು, ಸರ್ಕಾರಗಳು ರಚನೆಯಾಗುತ್ತಿದ್ದಂತೆ ಇಂಧನ ದರವನ್ನು ಪದೇ ಪದೇ ಹೆಚ್ಚಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು ಎಂಟು ತಿಂಗಳಿಂದ...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು ಕೆವಿಎನ್ ಅವರು ವರ್ಗ ನೆಲೆಯ ಹಿನ್ನೆಲೆಯಲ್ಲಿ ನೋಡುತ್ತ ನೀಡುವ ಒಳನೋಟಗಳು ಭಾಷೆ ಮತ್ತು ಸಮಾಜದ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಯಾಗಿವೆ....

ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ‘ಗ್ಲೆನ್ ಮ್ಯಾಕ್ಸ್‌ವೆಲ್’ ಅಂತಾರಾಷ್ಟ್ರೀಯ...

"ಆಸ್ಟ್ರೇಲಿಯಾ ತಂಡದ ಬ್ಯಾಗಿ ಗ್ರೀನ್ ಮತ್ತು ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ನನ್ನ ಬದುಕಿನ ಅತ್ಯುನ್ನತ ಹೆಮ್ಮೆ. ನನ್ನ ದೇಶಕ್ಕಾಗಿ ಮೈದಾನದಲ್ಲಿ ನನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದೇನೆ. ನನ್ನ ಬ್ಯಾಟಿಂಗ್‌ ಶೈಲಿ ಮತ್ತು ಹೊಡೆತಗಳು...

ಇದನ್ನು ಓದಿದ್ದೀರಾ? 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ: ಬೆಂಗಳೂರಿನಲ್ಲಿ ಬೆಲೆ ಎಷ್ಟು?

ಮೇ 15ರಂದು ಪೆಟ್ರೋಲ್, ಡೀಸೆಲ್ ಬೆಲೆಯನ್ನು 3 ರೂಪಾಯಿ ಹೆಚ್ಚಿಸಲಾಗಿದೆ. ಅದಾದ ಬಳಿಕ ಮೇ 19ರಂದು ಇಂಧನ ದರ 90 ಪೈಸೆ ಏರಿಸಲಾಗಿದೆ. ನಾಲ್ಕು ದಿನದಲ್ಲೇ ಅಂದರೆ ಮೇ 23ರಂದು ಪೆಟ್ರೋಲ್ ಬೆಲೆ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ, ಡೀಸೆಲ್‌ ಬೆಲೆ 98 ಪೈಸೆ ಏರಿಸಲಾಗಿದೆ. ಈಗ ಮೇ 25ರಂದು ಎರಡು ರೂಪಾಯಿಗೂ ಅಧಿಕ ಬೆಲೆ ಹೆಚ್ಚಿಸಲಾಗಿದೆ. ಅಂದರೆ ಹತ್ತು ದಿನದಲ್ಲಿ ನಾಲ್ಕು ಬಾರಿ ಇಂಧನ ಬೆಲೆ ಏರಿಸಿ ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ.

ಬೆಂಗಳೂರಿನಲ್ಲಿ ಇತ್ತೀಚಿನ ಸರಣಿ ಇಂಧನ ದರ ಏರಿಕೆಯ ನಂತರ, ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ಗೆ ₹2.84 ಹೆಚ್ಚಳವಾಗಿ ₹110.93ಗೆ ತಲುಪಿದೆ. ಡೀಸೆಲ್ ಬೆಲೆ ಲೀಟರ್‌ಗೆ ₹2.81 ರೂಪಾಯಿ ಏರಿಕೆಯಾಗಿ ₹98.80ರಷ್ಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 99.51 ರೂ. ಇದ್ದದ್ದು 102.12 ರೂ.ಗೆ ಏರಿದ್ದರೆ, ಡೀಸೆಲ್ ದರವು 92.49 ರೂ. ಇದ್ದದ್ದು 95.20 ರೂ.ಗೆ ಏರಿಕೆಯಾಗಿದೆ.

ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರಲ್​ಗೆ ಸುಮಾರು $98.74 (ಅಂದಾಜು ₹8,150) ವರೆಗೆ ಕುಸಿದಿದೆ. ಹಿಂದಿನ ವಹಿವಾಟಿಗಿಂತ ಸುಮಾರು 4.64% ಕುಸಿತ ಕಂಡಿದೆ.

ರಾಷ್ಟ್ರೀಯ ಚುನಾವಣೆಗಳ ಮೊದಲು ಅಂದರೆ 2024ರ ಮಾರ್ಚ್ ಲೀಟರ್‌ಗೆ 2 ರೂ.ಗಳಷ್ಟು ಕಡಿತವನ್ನು ಮಾಡಲಾಗಿತ್ತು. ಆದರೆ 2022ರ ಏಪ್ರಿಲ್‌ನಿಂದ ದರ ಸ್ಥಿರವಾಗಿದೆ. ಎಷ್ಟು ಬಾರಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಇಂಧನ ಬೆಲೆ ಮಾತ್ರ ಇಳಿಸಿರಲಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುವಾಗ ಅದರ ಲಾಭವನ್ನು ಜನರಿಗೆ ನೀಡದ ಅಂದರೆ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸದ ಕೇಂದ್ರ ಸರ್ಕಾರವು ಕಚ್ಚಾ ತೈಲ ಬೆಲೆ ಹೆಚ್ಚಾಗುತ್ತಿದ್ದಂತೆ ಅದರ ಹೊರೆಯನ್ನು ನೇರವಾಗಿ ಜನರ ಮೇಲೆ ಹಾಕುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದೂ ಚುನಾವಣೆ ಮುಗಿಯುವರೆಗೂ ಕಾದು ಬಳಿಕ ಪದೇ ಪದೇ ಬೆಲೆ ಹೆಚ್ಚಿಸುತ್ತಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ, ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಎಸ್.ಡಿ.ಪಿ.ಐ ಕಿಡಿ

ಇಂದು ನಾವು ದೇಶ ಮತ್ತು ರಾಜ್ಯದಲ್ಲಿ ಆಳುತ್ತಿರುವ ಸರ್ಕಾರಗಳ ಜನವಿರೋಧಿ ಮತ್ತು...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು...

ದಕ್ಷಿಣ ಕನ್ನಡ | ಜಿಲ್ಲಾ ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ನವೆಂಬರ್ 18ರಂದು ಮಂಗಳೂರಿನ ಪುರಭವನದಲ್ಲಿ ದ.ಕ...

ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ‘ಗ್ಲೆನ್ ಮ್ಯಾಕ್ಸ್‌ವೆಲ್’ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

"ಆಸ್ಟ್ರೇಲಿಯಾ ತಂಡದ ಬ್ಯಾಗಿ ಗ್ರೀನ್ ಮತ್ತು ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು...