ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭದ್ರತೆ ಇಲ್ಲದೆ ಬಿಜೆಪಿ ನಾಯಕರು ಹೊರಬರಲು ಸಾಧ್ಯವಿಲ್ಲ: ಪವನ್ ಖೇರಾ

Date:

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕಳೆದ 12-15 ವರ್ಷಗಳ ಆಡಳಿತದ ಲೆಕ್ಕಾಚಾರವನ್ನು ನಾವು ಮುಂದಿಟ್ಟಾಗ ಬಿಜೆಪಿ ನಾಯಕರು ಭದ್ರತೆಯಿಲ್ಲದೆ ರಸ್ತೆಗಿಳಿಯಲು ಅಥವಾ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ. ಈ 12-15 ವರ್ಷಗಳಲ್ಲಿ ನಡೆದಿರುವ ಘಟನೆಗಳನ್ನು ನಾವು ಮತ್ತೆ ಕೆದಕಿದಾಗ, ಬಿಜೆಪಿ ನಾಯಕರಿಗೆ ರಕ್ಷಣೆಯ ಅಗತ್ಯ ಖಂಡಿತಾ ಬೀಳಲಿದೆ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ’ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

‘ಮಾಧ್ಯಮಗಳ ಬಾಯಿ ಮುಚ್ಚಿಸಿರುವುದು ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ಹೈಜಾಕ್ ಮಾಡಿರುವುದು ಜನರಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಚುನಾವಣಾ ಆಯೋಗವು ಅವರ ಜೇಬಿನಲ್ಲಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಸಂಸ್ಥೆಗಳನ್ನು ಅವರು ತಮ್ಮ ಕಾಲ್ಕೆಳಗೆ ತುಳಿದಿದ್ದಾರೆ. ನಕಲಿ ಸಹಿಗಳನ್ನು ಮಾಡಲಾಗುತ್ತಿದೆ ಮತ್ತು ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ. ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ಈಗಾಗಲೇ ದಾಖಲಾಗುತ್ತಿವೆ,’ ಎಂದು ಅವರು ಆರೋಪಿಸಿದರು.

ಇದನ್ನು ಓದಿದ್ದೀರಾ? ಎಂಜಿನ್‌ಗೆ ತುಕ್ಕು, ಮೈಲೇಜ್‌ಗೆ ಕತ್ತರಿ: ಮಾಲೀಕರಿಗೆ ತಲೆನೋವಾದ ‘ಎಥೆನಾಲ್ ಪೆಟ್ರೋಲ್’

‘ಧರ್ಮ, ಸಂಸ್ಕೃತಿ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಎಲ್ಲಾ ರೀತಿಯ ತಪ್ಪುಗಳನ್ನು ಮಾಡುತ್ತಿದೆ. ತಾವು ಮಾಡುವ ಪ್ರತಿಯೊಂದು ತಪ್ಪನ್ನೂ ಮುಚ್ಚಿಕೊಳ್ಳಲು ಅವರು ಧರ್ಮ, ದೇಶಭಕ್ತಿ ಅಥವಾ ಸಂಸ್ಕೃತಿಯ ಹಿಂದೆ ಅಡಗಿಕೊಳ್ಳುತ್ತಾರೆ. ಅವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಅವರು ಯಾವುದೇ ಒಂದು ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಉದಾಹರಣೆಗೆ ಅಯೋಧ್ಯೆ ಮತ್ತು ಉಜ್ಜಯಿನಿಯಲ್ಲಿ ನಡೆದದ್ದನ್ನು ಗಮನಿಸಿ’ ಎಂದು ಟೀಕಿಸಿದರು.

ಪಠ್ಯಪುಸ್ತಕ ಮುದ್ರಣ ವಿವಾದವನ್ನು ಪ್ರಸ್ತಾಪಿಸಿದ ಅವರು, ‘ಈ ಹಿಂದೆ ಸರ್ಕಾರವೇ ಮಾಡುತ್ತಿದ್ದ ಪಠ್ಯಪುಸ್ತಕ ಮುದ್ರಣದ ಗುತ್ತಿಗೆಯನ್ನು, ಬಿಜೆಪಿಯೊಂದಿಗೆ ನಂಟಿರುವ ಖಾಸಗಿ ಸಂಸ್ಥೆಗೆ ನೀಡಿದ್ದರಿಂದಲೇ ಇಂತಹ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ. ವಿಧಾನಸಭೆ ಹೇಗಿರುತ್ತದೆ ಎಂಬುದೇ ಗೊತ್ತಿಲ್ಲದವರಿಗೆ ಪಠ್ಯಪುಸ್ತಕ ಮುದ್ರಣದ ಜವಾಬ್ದಾರಿ ನೀಡಲಾಗಿದೆ. ಪರಿಣಾಮವಾಗಿ ಪಠ್ಯಪುಸ್ತಕಗಳಲ್ಲಿ 1,700 ರಿಂದ 2,000 ದಷ್ಟು ತಪ್ಪುಗಳು ನುಸುಳಿವೆ. ಹೀಗಿರುವಾಗ ನಮ್ಮ ಮುಂದಿನ ಪೀಳಿಗೆಗೆ ಅವರು ಏನನ್ನು ಕಲಿಸುತ್ತಿದ್ದಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ,’ ಎಂದು ಕಳವಳ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...