ಬಾಂಬೆ ಐಐಟಿ: ರಾಮನ ಬಗ್ಗೆ ನಾಟಕದಲ್ಲಿ ಕೆಟ್ಟದಾಗಿ ಬಿಂಬಿಸಿದ 8 ವಿದ್ಯಾರ್ಥಿಗಳಿಗೆ ದಂಡ

Date:

ನಾಟಕದಲ್ಲಿ ರಾಮ ಹಾಗೂ ರಾಮಾಯಣದ ಬಗ್ಗೆ ಕೆಟ್ಟದಾಗಿ ಬಿಂಬಿಸಿದ 8 ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ ಆಡಳಿತ ಮಂಡಳಿ 1.2 ಲಕ್ಷ ರೂ. ದಂಡ ವಿಧಿಸಿದೆ.

ಈ ವರ್ಷದ ಮಾರ್ಚ್‌ 31 ರಂದು ನಡೆದ ಕಲಾ ಪ್ರದರ್ಶನ ಉತ್ಸವದಲ್ಲಿ ಈ ವಿದ್ಯಾರ್ಥಿಗಳು ‘ರಾಹೊವನ್‌’ ಎಂಬ ಹೆಸರಿನಲ್ಲಿ ನಾಟಕ ಪ್ರದರ್ಶಿಸಿದ್ದರು.

ಈ ನಾಟಕದಲ್ಲಿ ರಾಮನನ್ನು ಅಪಹಾಸ್ಯ ಮಾಡಿರುವುದರ ಜೊತೆ ರಾಮಾಯಣವನ್ನು ಅಶ್ಲೀಲ ಹಾಗೂ ಅವಹೇಳಕಾರಿಯಾದ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ

ವಿದ್ಯಾರ್ಥಿಗಳ ಗುಂಪೊಂದು ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಏ.8 ರಂದು ಆಡಳಿತ ಮಂಡಳಿಗೆ ದೂರು ನೀಡಿತ್ತು.

ದೂರಿನ ಆಧಾರದ ಮೇಲೆ ನಾಟಕ ಪ್ರದರ್ಶಿಸಿದ 8 ವಿದ್ಯಾರ್ಥಿಗಳಿಗೆ  40 ಸಾವಿರ ರೂ. ನಿಂದ  1.20 ಲಕ್ಷ ರೂ ವರೆಗೆ ದಂಡ ವಿಧಿಸಲಾಗಿದೆ.

ಐಐಟಿ ಬಾಂಬೆ ರಿಜಿಸ್ಟ್ರಾರ್‌ ಕಚೇರಿ ಜೂನ್‌ 4 ರಂದು ನೋಟಿಸ್ ನೀಡಿದ್ದು, ಜುಲೈ 30ರೊಳಗೆ ದಂಡವನ್ನು ಪಾತಿಸಬೇಕೆಂದು ತಿಳಿಸಲಾಗಿದೆ.

ಬಾಂಬೆ ಐಐಟಿ ಆಡಳಿತ ಮಂಡಳಿ ಈ ವಿಷಯದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...

ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ

ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ...

ಟ್ರಂಪ್ ಮೇಲೆ ಗುಂಡಿನ ದಾಳಿ: ಸ್ನೇಹಿತನ ಬಗ್ಗೆ ಕಳವಳಗೊಂಡಿದ್ದೇನೆ ಎಂದ ಮೋದಿಗೆ ನೆಟ್ಟಿಗರ ಪಾಠ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್...