ರಾಜಸ್ಥಾನದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷ ಭಾಷಣಗೈದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತೊಮ್ಮೆ ದ್ವೇಷ ಭಾಷಣಗೈದಿದ್ದಾರೆ.
“ಇಂಡಿಯಾ ಮೈತ್ರಿಕೂಟದ ಇನ್ನೊಂದು ರಣ ನೀತಿ ಹೊರಗಡೆ ಬಂದಿದೆ. ಅದರ ನಾಯಕರೇ ದೇಶದ ಮುಂದಿಟ್ಟಿದ್ದಾರೆ. ಇಂಡಿಯಾ ಒಕ್ಕೂಟವು ಮುಸಲ್ಮಾನರಿಗೆ ವೋಟ್ ಜಿಹಾದ್ ನಡೆಸುವಂತೆ ಕರೆ ನೀಡಿದೆ.” ಎಂದು ಪ್ರಧಾನಿ ನರೇಂದ್ರ ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಲವ್ ಜಿಹಾದ್, ಲ್ಯಾಂಡ್ ಜಿಹಾದ್‌ನಂತೆ ಇದೀಗ ವೋಟ್ ಜಿಹಾದ್ ಪ್ರಾರಂಭಿಸಲಿದ್ದಾರೆ. ಎಲ್ಲಾ ಮುಸಲ್ಮಾನರು ಒಗ್ಗಟ್ಟಾಗಿ ವೋಟ್ ಜಿಹಾದ್ ಮಾಡುವಂತೆ ಹೇಳಲಾಗಿದೆ. ವಿಪಕ್ಷಗಳ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ” ಎಂದು ಮೋದಿ ಹೇಳಿಕೆ ನೀಡಿದ್ದಾರೆ.
#WATCH | Anand, Gujarat: On Congress leader Salman Khurshid’s niece Maria Alam Khan’s statement, PM Modi says, “A leader from the INDI alliance has exposed their strategy in front of the country. The INDI alliance has asked Muslims to go for Vote Jihad. This has come from an… pic.twitter.com/C8wNxG17AI
— ANI (@ANI) May 2, 2024
ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, “ಲವ್ ಜಿಹಾದ್ ಬಗ್ಗೆ ಕೇಳಿದ್ದೆವು, ಲ್ಯಾಂಡ್ ಜಿಹಾದ್ ಬಗ್ಗೆ ಕೇಳಿದ್ದೆವು. ಈಗ ವೋಟ್ ಜಿಹಾದ್ ಕೇಳುತ್ತಿದ್ದೇವೆ. ಅದು ಕೂಡ ಸುಶಿಕ್ಷಿತ ಮುಸ್ಲಿಂ ಕುಟುಂಬದ ಈ ಮಾತು ಹೊರಗೆ ಬಂದಿದೆ. ಸಾಮಾನ್ಯ ಮದ್ರಸಾದಿಂದ ಹೊರಬಂದ ಮಕ್ಕಳು ಇದನ್ನು ಹೇಳಿದ್ದಲ್ಲ. ಅತ್ಯಂತ ಸುಶಿಕ್ಷಿತ ಕುಟುಂಬ, ಕಾಂಗ್ರೆಸ್‌ನ ಉನ್ನತ ಸ್ಥಾನದಲ್ಲಿರುವ ಕುಟುಂಬದಿಂದ ಈ ಮಾತು ಕೇಳಿಬಂದಿದೆ. ಮುಸಲ್ಮಾನರಿಗೆ ವೋಟ್ ಜಿಹಾದ್ ನಡೆಸುವಂತೆ ಕರೆ ನೀಡಲಾಗಿದೆ ಎಂದು ಈ ಮುಸಲ್ಮಾನ ಕುಟುಂಬವು ಹೇಳಿದೆ” ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ.
“ಜಿಹಾದ್ ಎಂದರೆ ಏನು ಎಂಬುದು ನಿಮಗೆ ಗೊತ್ತಲ್ಲವೇ? ಜಿಹಾದ್ ಯಾರ ವಿರುದ್ಧ ಮಾಡಲಾಗುತ್ತದೆ. ಎಲ್ಲ ಮುಸಲ್ಮಾನರು ಒಟ್ಟಾಗಿ ವೋಟ್ ಜಿಹಾದ್ ನಡೆಸುವಂತೆ ಇಂಡಿಯಾ ಒಕ್ಕೂಟವು ಕರೆ ನೀಡಿದೆ. ವೋಟ್ ಜಿಹಾದಿನ ಮಾತುಗಳನ್ನು ಆಡುವ ಮೂಲಕ ಇಂಡಿಯಾ ಮೈತ್ರಿಕೂಟವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಪಮಾನ ಮಾಡಿದೆ. ಈವರೆಗೆ ಕಾಂಗ್ರೆಸ್‌ನ ಒಬ್ಬನೇ ಒಬ್ಬ ನಾಯಕ ಇದುವರೆಗೆ ಇದನ್ನು ವಿರೋಧಿಸಿಲ್ಲ. ಮೌನ ಸಮ್ಮತಿ ನೀಡಿದ್ದಾರೆ. ವೋಟ್ ಜಿಹಾದ್‌ನ ಮಾತುಗಳು ಕಾಂಗ್ರೆಸ್‌ನ ತುಷ್ಟೀಕರಣ ನೀತಿಯನ್ನು ಮುಂದುವರಿಸಿದೆ” ಎಂದು ಪ್ರಧಾನಿ ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂಡಿ ಒಕ್ಕೂಟ ಮುಸಲ್ಮಾನರಿಗೆ ವೋಟ್ ಜಿಹಾದ್ ನಡೆಸುವಂತೆ ಕರೆ ನೀಡಿದೆ.
ಲವ್ ಜಿಹಾದ್, ಲ್ಯಾಂಡ್ ಜಿಹಾದ್‌ನಂತೆ ಇದೀಗ ವೋಟ್ ಜಿಹಾದ್ ಪ್ರಾರಂಭಿಸಲಿದ್ದಾರೆ. ಎಲ್ಲಾ ಮುಸಲ್ಮಾನರು ಒಗ್ಗಟ್ಟಾಗಿ ವೋಟ್ ಜಿಹಾದ್ ಮಾಡುವಂತೆ ಹೇಳಲಾಗಿದೆ. ವಿಪಕ್ಷಗಳ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ.
– ಪ್ರಧಾನಿ ಶ್ರೀ… pic.twitter.com/8w3wYuLTdi
— BJP Karnataka (@BJP4Karnataka) May 2, 2024
“ಒಂದು ಕಡೆ ಇಂಡಿಯಾ ಮೈತ್ರಿಕೂಟವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೊಂದು ಕಡೆ ವೋಟ್ ಜಿಹಾದ್ ನಡೆಸುವಂತೆ ಕರೆ ಕೊಡುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟದ ಉದ್ದೇಶ ಅದೆಷ್ಟು ಭಯಾನಕ ಎಂಬುದನ್ನು ಇದರಿಂದ ತಿಳಿಯಬಹುದು” ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
One more nail to the coffin of bjp, let’s wait who will put last nails