ಎಲ್‌ಪಿಜಿಗೆ ಪರ್ಯಾಯ ಎಲ್‌ಎನ್‌ಜಿ: ಇದು ಭಾರತದಲ್ಲೂ ಲಭ್ಯವಿದೆಯಾ?

Date:

ಎಲ್‌ಪಿಜಿ ಅಭಾವ ಹಿನ್ನೆಲೆ ದೇಶದ ನಾಗರಿಕರು ಪೈಪ್ಡ್‌ ಗ್ಯಾಸ್‌ ಸಂಪರ್ಕ ಪಡೆಯಬೇಕು ಇಲ್ಲದಿದ್ದರೆ ಎಲ್‌ಪಿಜಿ ಸಂಪರ್ಕ ಬಂದ್‌ ಮಾಡುವುದಾಗಿ ಕೇಂದ್ರ ಆದೇಶಿಸಿದೆ.

- Advertisement -

ಇಂಧನ ಪರ್ಯಾಯ ಹುಡುಕುವಾಗ ಎಲ್‌ಎನ್‌ಜಿ ಆಯ್ಕೆ ಮಾಡಿರುವ ಸರ್ಕಾರದ ಬಳಿ ಎಲ್‌ಎನ್‌ಜಿ ದಾಸ್ತಾನು ಇದೆಯಾ? ಎಲ್‌ಎನಜಿ ಎಂದರೇನು? ಭಾರತದಲ್ಲಿ ಎಲ್‌ಎನ್‌ಜಿ ಉತ್ಪಾದನೆ ಮಾಡಲಾಗುತ್ತಿದೆಯಾ ಎಂಬುದು ಹಲವರ ಪ್ರಶ್ನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಭಾರತದಲ್ಲಿ ಲಭ್ಯವಿದೆಯಾ ಎಲ್‌ಎನ್‌ಜಿ?

ಭಾರತವು ಕಾವೇರಿ ಗೋದಾವರಿ ಜಲಾನಯನ ಪ್ರದೇಶದಿಂದ ನೈಸರ್ಗಿಕ ಅನಿಲವನ್ನು ಉತ್ಪಾದಿಸುತ್ತದೆ. ಅಸ್ಸಾಂ ಮತ್ತು ತ್ರಿಪುರದ ಕೆಲವು ಪ್ರದೇಶಗಳಿಂದಲೂ ನೈಸರ್ಗಿಕ ಅನಿಲದ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಈ ಪ್ರದೇಶಗಳಲ್ಲಿ ಲಭ್ಯವಿರುವ ಎಲ್‌ಎನ್‌ಜಿ ದೇಶದ ಅನಿಲ ಬೇಡಿಕೆಯ ಅರ್ಧದಷ್ಟು ಮಾತ್ರ.

ಪ್ರಸ್ತುತ ಜಗತ್ತಿನ ಎಲ್‌ಎನ್‌ಜಿ ಆಮದುವಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಂಧನ ಬೇಡಿಕೆ ಹೆಚ್ಚುತ್ತಿದ್ದಂತೆ ದರವೂ ಜಾಸ್ತಿಯಾಗಿದೆ ಇದರಿಂದ ಹಿಂದೆಂದೂ ಕಾಣದ ಇಂಧನ ದಾಹ ದೇಶವನ್ನು ಬಾಧಿಸಿದೆ.

ಭಾರತ ಪೂರ್ತಿಯಾಗಿ ಆಮದಿನ ಮೇಲೆ ಅವಲಂಬನೆಯಾಗಿಲ್ಲ. 2023 ರಲ್ಲಿ ಭಾರತದ ಒಟ್ಟು ಅನಿಲ ಉತ್ಪಾದನೆಯು 36.4 ಬಿಲಿಯನ್‌ ಕ್ಯುಬಿಕ್‌ ಮೀ‌ಟರ್ಸ್‌ ತಲುಪಿತ್ತು. ಈ ಪ್ರಮಾಣವು ದೇಶದ ಅರ್ಧದಷ್ಟು ಅನಿಲ ಬೇಡಿಕೆಯನ್ನು ಪೂರೈಕೆ ಮಾಡಿತ್ತು.

ಕೃಷ್ಣ ಗೋದಾವರಿ ನದಿತೀರದಲ್ಲಿ 3 ಘಟಕಗಳಿದ್ದು ಈ ಘಟಕಗಳಲ್ಲಿ ಭವಿಷ್ಯದ 85 ಬಿಸಿಎಮ್‌ ಅನಿಲ ಉತ್ಪಾದನೆಯಾಗಲಿದೆ ಎಂದು ವರದಿಯಾಗಿದೆ.

ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರಾ ದೇಶದ 13% ಅನಿಲ ಅಗತ್ಯತೆ ಪೂರೈಸುತ್ತಿದ್ದು, ಇವು ಭೂಮಿಯ ಮೇಲಿನ ಘಟಕಗಳಾದರಿಂದ ಕಡಿಮೆ ವೆಚ್ಚದಲ್ಲಿ ಎಲ್‌ಎನ್‌ಜಿ ಸಂಗ್ರಹವಾಗಲಿದೆ.

ಎಲ್‌ಎನ್‌ಜಿ ಎಂದರೇನು ಇದರ ಬಳಕೆ ಹೇಗೆ?

ಎಲ್‌ಎನ್‌ಜಿ ಕೆಲ ಭೂ ಭಾಗಗಳಲ್ಲಿ ಹಾಗೂ ನದಿತೀರಗಳಿಂದ ಹೊರತೆಗೆಯಲಾಗುವ ನೈಸರ್ಗಿಕ ಅನಿಲ. ಹೊರತೆಗೆದ ಅನಿಲವನ್ನು 162 ಸೆಲ್ಸಿಯಸ್‌ ಮಟ್ಟದಲ್ಲಿ ತಂಪುಗೊಳಿಸಿ ನೈಜ ತೂಕದ 600 ಪ್ರಮಾಣಕ್ಕೆ ಕುಗ್ಗಿಸಿ ಟ್ಯಾಂಕರ್‌ಗಳಿಗೆ ತುಂಬಲಾಗುತ್ತದೆ. ಸಮುದ್ರ ಸುತ್ತುವರೆದು ಬಂದ ಟ್ಯಾಂಕರ್‌ಗಳು ಬಂದರು ತಲುಪಿದ ನಂತರ ಮತ್ತೆ ನೈಜ ಉಷ್ಣಾಂಷಕ್ಕೆ ಮಾರ್ಪಾಟು ಮಾಡಿ ಕೊಳವೆಗಳಿಗೆ ಹಾಯಿಸಲಾಗುತ್ತದೆ.

ಭಾರತದಲ್ಲಿ ನೈಸರ್ಗಿಕ ಅನಿಲವನ್ನು ವಿಶಾಲ ವಲಯಗಳಲ್ಲಿ ಬಳಕೆ  ಮಾಡಲಾಗುತ್ತಿದೆ. ವಿದ್ಯುತ್‌ ಸ್ಥಾವರಗಳು,  ರಸಗೊಬ್ಬರ ಕಾರ್ಖಾನೆಗಳು, ಕೈಗಾರಿಕಾ ವಲಯ, ಹಾಗೂ ಗೃಹ ಬಳಕೆಯ ಪಿಎನ್‌ಜಿ ಹೀಗೆ ವಿಭಿನ್ನ ಕ್ಷೇತ್ರಗಳಿಗೆ ಎಲ್‌ಎನ್‌ಜಿ ಅಗತ್ಯವಿದೆ. ಕಡಿಮೆ ಇಂಗಾಲವನ್ನು ಹೊರಹಾಕುವುದರಿಂದ ಭವಿಷ್ಯದಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಎಲ್‌ಪಿಜಿ ಬಳಸುವ ಯೋಚನೆಯೂ ಪ್ರಗತಿಯಲ್ಲಿದೆ.

ಯುದ್ಧದ ಕಾವು ಎಲ್‌ಎನ್‌ಜಿ ಕೊರತೆ ಸೃಷ್ಟಿಸಿದೆಯಾ? ಹೌದು, ಇರಾನ್‌ ಇಸ್ರೇಲ್‌ ಸಂಘರ್ಷದ ಬಿಸಿ ಎಲ್‌ಎನ್‌ಜಿ ಲಭ್ಯತೆಯ ಮೇಲೆ ಪರಿಣಾಮ ಬೀರಿದ್ದು‌, ಭಾರತ 50% ಎಲ್‌ಎನ್‌ಜಿ ಕತಾರ್ ಮತ್ತು ಇತರೆ ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಸದ್ಯ ಉಲ್ಬಣವಾಗಿರುವ ಎಲ್‌ಎನ್‌ಜಿ ಬಿಕ್ಕಟ್ಟಿನಿಂದ ಸರ್ಕಾರವು ದೇಶದ ಮೂರು ಯೂರಿಯಾ ಉತ್ಪಾದಕ ಘಟಕಗಳನ್ನು ಸ್ಥಗಿತಗೊಳಿಸಿದೆ, ಇದು ದೇಶದಲ್ಲಿ ರಸಗೊಬ್ಬರ ಅಭಾವ ಸೃಷ್ಟಿಸಿದೆ ಮತ್ತು ಭಾರತದ ಆಹಾರ ಸರಪಳಿಯ ಮೇಲೆ ನೇರ ದುಷ್ಪರಿಣಾಮ ಬೀರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...