ರಾಯಚೂರು | ಹೈಟೆಕ್‌ ಟ್ಯಾಂಕ್‌ಗಳಿದ್ದರೂ ನೀರಿಗಾಗಿ ಹಾಹಾಕಾರ; ಹೆಚ್ಚಿದ ಜನಾಕ್ರೋಶ

Date:

ದೇವದುರ್ಗ ತಾಲೂಕಿನ ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಶುದ್ಧ ನೀರು ಒದಗಿಸಲು ನಿರ್ಮಿಸಲಾದ ಹೈಟೆಕ್ ಟ್ಯಾಂಕ್‌ಗಳು ಇಂದು ಕೇವಲ ʼಪ್ರದರ್ಶನ ವಸ್ತುʼಗಳಾಗಿವೆ. ಒಂಬತ್ತು ಗ್ರಾಮಗಳ ಪೈಕಿ 8 ಕಡೆ ಸುಸಜ್ಜಿತ ಟ್ಯಾಂಕ್‌ಗಳಿದ್ದರೂ, ನಿರ್ವಹಣೆಯಿಲ್ಲದೆ ಅವುಗಳ ಕಂಬಿಗಳು ತುಕ್ಕು ಹಿಡಿಯುತ್ತಿವೆ. ಪರಿಣಾಮವಾಗಿ, ಸುಡುವ ಬೇಸಿಗೆಯಲ್ಲಿ ಹನಿ ನೀರಿಗಾಗಿ ಗ್ರಾಮಸ್ಥರು ಮೈಲುಗಟ್ಟಲೆ ಅಲೆಯುವಂತಾಗಿದ್ದು, ಸ್ಥಳೀಯ ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

- Advertisement -

ಇದೇ ಸಮಸ್ಯೆಯ ಕುರಿತು ಕಳೆದ ವರ್ಷವೂ ಮೇಲಿಂದ ಮೇಲೆ ವರದಿಗಳು, ಮನವಿಗಳು ಹೋದರೂ ಯಾವ ಅಧಿಕಾರಿಯೂ ಕ್ಯಾರೆ ಅಂದಿಲ್ಲ. ಲಕ್ಷಾಂತರ ಅನುದಾನ ತಂದು ಸುರಿದರೂ ಹನಿ ನೀರಿಗೂ ಪರದಾಡಬೇಕಾದ ಸಂದರ್ಭ ಸೃಷ್ಟಿಸಿರುವುದು ಯಾರು? ಹಾಗಾದರೆ ಅಭಿವೃದ್ಧಿಯ ಅನುದಾನ ಎಲ್ಲಿಗೆ ಸೇರಿತು? ಸಾಮಾನ್ಯ ಜನರ ಕುರಿತು ಕಿಂಚಿತ್ತೂ ಕಾಳಜಿಯಿಲ್ಲದ ಜನಪ್ರತಿನಿಧಿಗಳು, ಅವರು ಹೇಳಿದಂತೆ ಕೇಳಿಕೊಂಡಿರುವ ಅಧಿಕಾರಿಗಳಿಂದ ಯಾವ ಅಭಿವೃದ್ಧಿಯನ್ನು ತಾನೆ ನಿರೀಕ್ಷಿಸಲು ಸಾಧ್ಯ? ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
1000103531


ಜಲ ನಿರ್ಮಾಣ ಯೋಜನೆಯಲ್ಲಿ ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಯೋಜನೆಯಡಿಯಲ್ಲಿ ಮೂಷ್ಟೂರು ಗ್ರಾಪಂ ವ್ಯಾಪ್ತಿಯ ಪಿಲಿಗುಂಡ ಗ್ರಾಮ 2, ಶಿವಂಗಿ 2, ಮಯಷ್ಟೂರು 1, ಚಿಂತಲಕುಂಟಿ 1, ಗೆಜ್ಜೇಬಾವಿ 1 ಹಾಗೂ ಆಲದತ್ತಿ 1 ಸೇರಿ ಒಟ್ಟು 8 ಹೈಟೆಕ್‌ ಟ್ಯಾಂಕ್‌ಗಳು ಬಳಕೆಯಿಲ್ಲದೆ ಪಾಳು ಬಿದ್ದಿವೆ ಎನ್ನುತ್ತಾರೆ ಗ್ರಾಮಸ್ಥರು.

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಶುದ್ಧ ಜೀವ ಜಲಕ್ಕೆ ಪರಿತಪಿಸುವಂತಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನಪ್ರತಿನಿಧಿಗಳ ಬಳಿ ಅಂಗಲಾಚುವುದು ಸಾಮಾನ್ಯವಾಗಿದೆ.

1000103537

ಈ ಸುದ್ದಿ ಓದಿದ್ದೀರಾ? ರಾಯಚೂರು |ಆಹಾರ ಸೇವನೆಯಲ್ಲಿ ಏರುಪೇರು ವಾಂತಿಬೇದಿ ಪ್ರಕರಣ; 10 ಜನ ಅಸ್ವಸ್ಥ

ಈ ಬಗ್ಗೆ ಸ್ಥಳೀಯ ನಿವಾಸಿ, ಹಿರಿಯ ಹೋರಾಟಗಾರ ಹಾಗೂ ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ಭೀಮರಾಯ ನಾಯ್ಕ ಈ ದಿನ ಡಾಟ್‌ ಕಾಮ್‌ನೊಂದಿಗೆ ಮಾತನಾಡಿ, “2014, 15 ಹಾಗೂ 16ನೇ ವರ್ಷಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹೈಟೆಕ್ ಕುಡಿಯುವ ನೀರಿನ ಟ್ಯಾಂಕ್ ಗಳು ಉದ್ಘಾಟನೆಯಾದವು. ಕೇವಲ ಮೂರುನಾಲ್ಕು ತಿಂಗಳು ನೀರು ಹರಿಸಿದ್ದು ನಂತರ ಬಳಕೆಯಿಲ್ಲದೆ ಹೆಸರಿಗಷ್ಟೆ ಟ್ಯಾಂಕ್ ಗಳಾಗಿವೆ. ಅಲ್ಲಿಂದ ಇಲ್ಲಿಯವರೆಗೂ ಕೂಡ ಯಾರೂ ನಿರ್ವಹಣೆ ಹೊಣೆ ಹೊತ್ತಿಲ್ಲ. ಹೀಗೆ ತುಕ್ಕು ಹಿಡಿದು ಪಾಳು ಬಿದ್ದಿವೆ” ಎಂದರು.

“ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಘಟಕಗಳ ಸ್ಥಾಪನೆಗೆ ಮುಂದಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಇಲ್ಲದೆ ಘಟಕಗಳು ಸ್ಥಗಿತಗೊಂಡು ಗ್ರಾಮಸ್ಥರಿಗೆ ನೀರಿಲ್ಲದೆ ಬೋರ್ ವೆಲ್‌ಗಳ ಮೊರೆ ಹೋಗಬೇಕಾಗಿದೆ. ಮಳೆ ಕೊರತೆಯಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ ಮತ್ತು ನಿರ್ವಹಣೆ ಸಮಸ್ಯೆಯಿಂದ ಬೇಸಿಗೆ ಆರಂಭದಲ್ಲಿಯೇ ಪಟ್ಟಣ ಸೇರಿದಂತೆ ವಿವಿಧೆಡೆ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

1000103543

ನೀರಿನ ಚಿಂತೆ ಹಾಗೂ ಬಿಸಿಲಿನ ತಾಪ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ನಿದ್ದೆಗೆಡಿಸಿದೆ. ಈ ಭಾಗದ ಜನರ ಸಮಸ್ಯೆ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ತಮಗೆ ಸಂಬಂಧವಿಲ್ಲದಂತೆ ಕಾಲ ಕಳೆಯುತ್ತಿದ್ದಾರೆ. ಅಧಿಕಾರಿಗಳಿಗೆ ಸಾರ್ವಜನಿಕರು ಕೇಳಿದರೆ ಉಡಾಫೆ ಉತ್ತರ ನೀಡುವುದು.. ಇಲ್ಲದಿದ್ದರೆ ನಮ್ಮ ಇಂಚಾರ್ಜ್ ಇಲ್ಲ, ಅದು ಟೆಂಡರ್ ಅವರೇ ಎಲ್ಲಾ ನಿರ್ವಹಿಸಬೇಕು ಎನ್ನುತ್ತಾರೆ. ಇಂತ ಅಧಿಕಾರಿಗಳು ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ? ಇಂತಹವರನ್ನು ನೋಡಿಕೊಂಡು ಸುಮ್ಮನೇ ಕೂತಿರುವ ಜನಪ್ರತಿನಿಧಿಗಳೂ ಇವರಂತೆಯೇ ಅಲ್ಲವೇ?.

ಹಲವೆಡೆ ಗ್ರಾಮದ ಕುಂದು ಕೊರತೆಗಳ ಸಭೆ ನಡೆಸಿ, ಸಣ್ಣ ಪುಟ್ಟ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಸಾವಿರಾರು ಹಣ ಖರ್ಚು ಮಾಡುವುದಕ್ಕಿಂತ ಇದ್ದಿದ್ದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

1000103546

ಮುಷ್ಟೂರು ಗ್ರಾಮದ ನಿವಾಸಿಯೊಬ್ಬರು ಮಾತನಾಡಿ, “ಹೈಟೆಕ್ ನೀರಿನ ಟ್ಯಾಂಕ್ ಕಟ್ಟಿ ಮನೆ ಮನೆಗೆ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿ ಹೋದವರು ಮತ್ತೆ ಅದನ್ನು ನೋಡೋಕೂ ಬಂದಿಲ್ಲ. ಮನೆಯಲ್ಲಿ ನೀರು ತರಲು ಹೋದರೆ ಬೇರೆ ಕೆಲಸ ಮಾಡಲು ಆಗುವುದಿಲ್ಲ. ಬೇರೆ ಕೆಲಸಕ್ಕೆ ಹೋದರೆ ನೀರು ಸಿಗುವುದಿಲ್ಲ. ಬೋರ್ ವೆಲ್ ಇದ್ದವರ ಮನೆಗೆ ಹೋಗಿ ನೀರು ತರುವ ಪರಿಸ್ಥಿತಿಯಿದೆ” ಎಂದರು.

ನೂರಾರು ಕೋಟಿ ಹಣ ಖರ್ಚು ಮಾಡಿ ಕಟ್ಟಿದ್ದರೂ ಉಪಯುಕ್ತವಾಗಿಲ್ಲ ಅಂದರೆ ಕಟ್ಟಲಾರದೆ ಇದ್ದರೆ ಸರಕಾರದ ಹಣವಾದರೂ ಉಳಿಯುತ್ತಿತ್ತು ಎಂದರು.

1000103540

ಸರ್ಕಾರಗಳೇನೋ ಕೋಟ್ಯಂತರ ಅನುದಾನ ನೀಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುತ್ತಾರೆ. ಅವುಗಳನ್ನು ಕಾರ್ಯರೂಪಕ್ಕೆ ತಂದರೂ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೆ ಹೀಗೇ ಆಗುತ್ತದೆ. ಅಭಿವೃದ್ಧಿಯಾಗಲೀ, ಆಗದೇ ಇರಲಿ.. ಅಭಿವೃದ್ಧಿ ಹೆಸರಲ್ಲಿ ಪೋಲಾಗುವುದು ಜನರ ದುಡ್ಡು. ಇನ್ನು ಮುಂದೆಯಾದರೂ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಎಚ್ಚೆತ್ತು ಟ್ಯಾಂಕ್‌ಗಳ ಸದ್ಬಳಕೆಗೆ ಹಾಗೂ ಜನರಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳುವರೇ ನೋಡಬೇಕಿದೆ.

mdrafi
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ, ನಾಲ್ವರಿಗೆ ಗಾಯ

ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿಯ ತಡೆಗೋಡೆ ಕುಸಿದು...

ಯಾದಗಿರಿ | ಯಕ್ಷಿಂತಿ ಗ್ರಾಮಕ್ಕೆ ಮೂಲಸೌಲಭ್ಯ ನೀಡಿ: ಪ್ರಜಾಸೇವಾ ಅಭಿಯಾನದಲ್ಲಿ ಗ್ರಾಮಸ್ಥರ ಮನವಿ

ವಡಗೇರಾ ತಾಲ್ಲೂಕಿನ ಹಯ್ಯಾಳ ಬಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ...

ಯಾದಗಿರಿ | ಜನಜಾಗೃತಿ ಸಮಾವೇಶ: ಮಲ್ಲಣ್ಣ ದಾಸನಕೇರಿ ಅಧ್ಯಕ್ಷರಾಗಿ ನೇಮಕ

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಿರುವ ಮಾದಿಗರ ಜನಜಾಗೃತಿ...

ಯಾದಗಿರಿ | ಪ್ರಜಾಸೇವಾ ಅಭಿಯಾನ: ದೂರುಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಖಡಕ್ ಸೂಚನೆ

ಶಹಾಪುರ ಹಾಗೂ ಗೋಗಿ ಹೋಬಳಿ ವ್ಯಾಪ್ತಿಯ ಪ್ರಜಾಸೇವಾ ಅಭಿಯಾನದಲ್ಲಿ ಸಲ್ಲಿಕೆಯಾದ ದೂರುಗಳ...