ರಾಮ ಮಂದಿರ ಕಾರ್ಯಕ್ರಮ ಪ್ರಸಾರ ನಿಷೇಧ | ನಿರ್ಮಲಾ ಸೀತಾರಾಮನ್ ಆರೋಪ ಸುಳ್ಳು ಎಂದ ಸ್ಟಾಲಿನ್ ಸರ್ಕಾರ

Date:

ಜನವರಿ 22ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ತಮಿಳುನಾಡು ಡಿಎಕೆ ಸರ್ಕಾರ ಅಡ್ಡಿಪಡಿಸುತ್ತಿದೆ ಎನ್ನುವ ಗಂಭೀರ ಆರೋಪವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ. ಆದರೆ ಅವರ ಆರೋಪವನ್ನು ಅಲ್ಲಗಳೆದಿರುವ ತಮಿಳುನಾಡು ಸರ್ಕಾರ, ರಾಮ ಮಂದಿರ ಕಾರ್ಯಕ್ರಮ ನೇರ ಪ್ರಸಾರ ನಿಷೇಧಿಸಿಲ್ಲ, ಪೂಜೆ ನಡೆಸಿ ಪ್ರಸಾದ ವಿತರಣೆಗೂ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಹೇಳಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಹಿತ ನಾನಾ ಧಾರ್ಮಿಕ ಚಟುವಟಿಕೆಗಳ ನೇರ ವೀಕ್ಷಣೆಗೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಬಲ್‌ ಕಡಿತಗೊಳಿಸಿ ಕಾರ್ಯಕ್ರಮ ವೀಕ್ಷಿಸದಂತೆ ಮಾಡಲಾಗುತ್ತಿದೆ. ತಮಿಳುನಾಡಿನ 200ಕ್ಕೂ ದೇಗುಲಗಳಲ್ಲಿಯೂ ಭಜನೆ, ಇತರೆ ಧಾರ್ಮಿಕ ಚಟುವಟಿಕೆ ನಡೆಸದಂತೆ ಪೊಲೀಸರನ್ನು ಬಳಸಿ ನಿಗ್ರಹಿಸಲಾಗುತ್ತಿದೆ. ಇದು ನಿಜಕ್ಕೂ ಹಿಂದೂ ವಿರೋಧಿ ಹಾಗೂ ದ್ವೇಷದ ಪ್ರಕ್ರಿಯೆ ಎಂದು  ಆರೋಪಿಸಿದ್ದಾರೆ.

ಸಚಿವರ ಸ್ಪಷ್ಟನೆ

ನಿರ್ಮಲಾ ಸೀತಾರಾಮನ್‌ ಆರೋಪವನ್ನು ಅಲ್ಲಗಳೆದಿರುವ ತಮಿಳುನಾಡಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ ಬಾಬು, ಡಿಎಂಕೆ ಯುವ ಸಮಾವೇಶ ಆಯೋಜನೆಯನ್ನು ಸಹಿಸದೇ ಅದರ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗುತ್ತಿದೆ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆ ನಿಷೇಧಿಸಿಲ್ಲ. ಇಂತಹ ಯಾವುದೇ ಆದೇಶಗಳನ್ನು ನಾವು ಜಾರಿ ಮಾಡಿಲ್ಲ. ರಾಮಮಂದಿರಗಳಲ್ಲಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿ ಮಾಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ತಮಿಳುನಾಡಿನ ಸೇಲಂನಲ್ಲಿ ಆಯೋಜಿಸಿರುವ ಡಿಎಂಕೆ ಯುವ ಸಮಾವೇಶದ ಯಶಸ್ಸನ್ನು ದಿಕ್ಕುತಪ್ಪಿಸುವ ಉದ್ದೇಶದಿಂದಲೇ ರಾಮಮಂದಿರ ಕಾರ್ಯಕ್ರಮ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ಸಚಿವ ಸೇಕರ ಬಾಬು ಹೇಳಿದ್ದಾರೆ.

ಡಿಎಂಕೆ ಯುವ ಸಮಾವೇಶಕ್ಕೆ ಭರದ ಸಿದ್ದತೆ ನಡೆದಿದೆ. ಸಮಾವೇಶ ಯಶಸ್ವಿಯಾಗಲಿದೆ ಎನ್ನುವ ಭಯದಲ್ಲಿ ಇಂತ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಇಲಾಖೆಯು ಯಾವುದೇ ಚಟುವಟಿಕೆ ನಡೆಸದಂತೆ ಅಡ್ಡಿಪಡಿಸಿಲ್ಲ. ಅನುಮತಿಯನ್ನೂ ನಿರಾಕರಿಸಿಲ್ಲ. ರಾಮನ ದೇಗಲುಗಳಲ್ಲಿ ಪೂಜೆ, ಪ್ರಸಾದ ನಡೆಸಲು ಅಡ್ಡಿಯಿಲ್ಲ. ಆದರೆ ದೇಶದ ಉನ್ನತ ಹುದ್ದೆಯಲ್ಲಿರುವ ನಿರ್ಮಲಾ ಸೀತಾರಾಮನ್‌ ತರದವರು ದುರುದ್ದೇಶಪೂರ್ವಕವಾಗಿ ಇಂತಹ ತಪ್ಪು ಸಂದೇಶವನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 22...

ದೇಶದ ಇತಿಹಾಸದಲ್ಲಿ ಮೋದಿಯಷ್ಟು ತಮ್ಮ ಹುದ್ದೆಯ ಘನತೆಯನ್ನು ಯಾವ ಪ್ರಧಾನಿಯೂ ಇಳಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ

'ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ನ ಪ್ರಣಾಳಿಕೆ'...

ಬಿಜೆಪಿ ಒತ್ತಡದಿಂದ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ತಿರಸ್ಕಾರ; ಹೈಕೋರ್ಟ್‌ಗೆ ಹೋಗುತ್ತೇವೆಂದ ಕಾಂಗ್ರೆಸ್‌

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರವನ್ನು...

‘ನಾವು ಮತ ಹಾಕುತ್ತೇವೆ, ಆದರೆ ಬಿಜೆಪಿಗಲ್ಲ’; 1,200 ಕುಟುಂಬಗಳು ಹೀಗೆ ಹೇಳಿದ್ದೇಕೆ?

ನಾವು ಒಡೆದ ಮನೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮನೆಗಳನ್ನು ಒಡೆದುರುಳಿಸಿದೆ....