ನಮ್ಮ ಉಡುಗೆಗಳಲ್ಲ, ನಿಮ್ಮ ಆಲೋಚನೆ ಕೊಳಕು: ಬಿಜೆಪಿ ನಾಯಕನಿಗೆ ಮಹುವಾ ಮೊಯಿತ್ರಾ ತಿರುಗೇಟು

Date:

  • ಬಿಜೆಪಿ ನಾಯಕನ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಟಿಎಂಸಿ ಸಂಸದೆ ಮಹುವಾ
  • ಇಂದೋರ್‌ನಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ವರ್ಗೀಯ ಟೀಕೆ

ಮಹಿಳೆಯರು ಧರಿಸುವ ಉಡುಗೆಗಳ ಬಗ್ಗೆ ಟೀಕಿಸಿ ವ್ಯಂಗ್ಯವಾಗಿ ಮಾತನಾಡಿದ್ದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಶುಕ್ರವಾರ (ಏಪ್ರಿಲ್ 14) ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಅರೆಬರೆ ಬಟ್ಟೆಗಳ ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ವಿಜಯ ವರ್ಗೀಯ ಟೀಕಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಈ ಕುರಿತು ಮಹುವಾ ಮೊಯಿತ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. “ನಾವು ತೊಡುವ ಉಡುಗೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ” ಎಂದು ವರ್ಗೀಯ ಅವರಿಗೆ ತಿರುಗೇಟು ನೀಡಿದ್ದಾರೆ.

ತಮ್ಮ ಹೇಳಿಕೆಯ ವಿಡಿಯೊವನ್ನು ಮಹುವಾ ಅವರು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

“ಶುಕ್ರವಾರ ಬೆಳಿಗ್ಗೆ ಬಿಜೆಪಿ ನಾಯಕರು ಮತ್ತು ಭಕ್ತರಿಗೆ ಒಂದು ಸಂದೇಶ ನೀಡಿರುವೆ. ನಾವು ಬೆಂಗಾಲಿ ಮಹಿಳೆಯರು, ನಮಗೆ ಯಾವುದು ಬೇಕೋ ಅದನ್ನು ಹಾಕಿಕೊಳ್ಳುತ್ತೇವೆ, ನಮಗೆ ಏನು ಬೇಕೋ ಅದನ್ನು ತಿನ್ನುತ್ತೇವೆ. ನಮಗೆ ಯಾರನ್ನು ಪೂಜಿಸಬೇಕೆನಿಸುತ್ತದೋ ಅವರನ್ನು ಪೂಜಿಸುತ್ತೇವೆ. ನಮ್ಮ ಬಟ್ಟೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ” ಎಂದು ಕಟುವಾಗಿ ಉತ್ತರಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗವಹಿಸಿ ಕೈಲಾಶ್ ವಿಜಯ ವರ್ಗೀಯ ಯುವತಿಯರ ಉಡುಗೆ ಬಗ್ಗೆ ಟೀಕಿಸಿದ್ದರು.

ಈ ಸುದ್ದಿ ಓದಿದ್ದೀರಾ? ನಾಗಾಲ್ಯಾಂಡ್ ನಾಗರಿಕರ ಹತ್ಯೆ | 30 ಸೇನಾ ಸಿಬ್ಬಂದಿ ವಿಚಾರಣೆಗೆ ನಿರಾಕರಿಸಿದ ರಕ್ಷಣಾ ಸಚಿವಾಲಯ

“ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ– ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಅವರನ್ನು ನಿಲ್ಲಿಸಿ ಕೆನ್ನೆಗೆ ಬಾರಿಸಬೇಕೆಂದು ಎನ್ನಿಸುತ್ತದೆ. ಮಹಿಳೆಯರು ಮತ್ತು ಯುವತಿಯರನ್ನು ನಾವು ದೇವತೆಗಳೆಂದು ಕರೆಯುತ್ತೇವೆ. ಆದರೆ ಯುವತಿಯರು ಅರೆಬರೆ ಬಟ್ಟೆಗಳನ್ನು ಧರಿಸಿ ಓಡಾಡುತ್ತಾರೆ. ಈಗ ಅವರು ದೇವತೆಯ ಹಾಗೆ ಕಾಣುವುದಿಲ್ಲ. ರಾಕ್ಷಸಿ ಶೂರ್ಪನಖಿ ಹಾಗೆ ಕಾಣುತ್ತಾರೆ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಮಹುವಾ ಮಯಿತ್ರಾ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅನುಮತಿ ನಿರಾಕರಣೆ; ಜಂತರ್ ಮಂತರ್‌ನಲ್ಲಿ ಬಿಗಿ ಭದ್ರತೆ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಉತ್ತರ ಪ್ರದೇಶ: ಪ್ರಜಾಪ್ರಭುತ್ವ ಹೋರಾಟಗಾರರಿಗೆ ಅಖಿಲೇಶ್ ಮಾಸಿಕ ₹51,000 ಪಿಂಚಣಿ ಭರವಸೆ

ಉತ್ತರ ಪ್ರದೇಶದಲ್ಲಿ 2027ರಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಸರ್ಕಾರ ರಚಿಸಿದರೆ, 1975ರ...

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...