ವಿಪಕ್ಷಗಳ ದನಿ ಇಲ್ಲದ ಬಿಹಾರ ವಿಧಾನಸಭೆಗೆ ಪ್ರಶಾಂತ್ ಕಿಶೋರ್ ಪ್ರವೇಶ; ಪರ್ಯಾಯ ರಾಜಕೀಯದ ಆರಂಭವೇ?

Date:

ಬಿಹಾರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿ, ಬಾಕಿಂಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿದ್ದಾರೆ. ಸದ್ಯದ ಬಿಹಾರ ರಾಜಕೀಯದಲ್ಲಿ ಕಿಶೋರ್ ಅವರ ವಿಧಾನಸಭಾ ಪ್ರವೇಶವನ್ನು ಕೇವಲ ಒಂದು ಉಪಚುನಾವಣೆಯ ಗೆಲುವಾಗಿಯಲ್ಲದೆ, ರಾಜಕೀಯ ಬದಲಾವಣೆ ಮತ್ತು ಪರ್ಯಾಯವಾಗಿಯೂ ನೋಡಲಾಗುತ್ತಿದೆ. ಬಿಹಾರದ ಆಡಳಿತಾರೂಢ ಜೆಡಿಯು-ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಗಳ ನಡುವಿನ ಪೈಪೋಟಿಯ ನಡುವೆ ಈ ಇಬ್ಬರನ್ನೂ ಸೋಲಿಸಿ, ಪ್ರಶಾಂತ್ ಕಿಶೋರ್ ಗೆಲುವು ಸಾಧಿಸಿರುವುದು ಸಾಂಪ್ರದಾಯಿಕ ಪೈಪೋಟಿಯ ಹೊರತಾಗಿ ಪರ್ಯಾಯ ನಾಯಕತ್ವದ ಉದಯವಾಗಿ ಹಲವರು ನೋಡುತ್ತಿದ್ದಾರೆ.

- Advertisement -

ಭಾರತ ಚುನಾವಣಾ ರಾಜಕೀಯದ ಅತ್ಯಂತ ಯಶಸ್ವಿ ತಂತ್ರಜ್ಞರಲ್ಲಿ ಪ್ರಶಾಂತ್ ಕಿಶೋರ್ ಕೂಡ ಒಬ್ಬರು. ನರೇಂದ್ರ ಮೋದಿ, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ನಾಯಕರ ಚುನಾವಣಾ ತಂತ್ರ ರೂಪಿಸಿದ್ದ ಕಿಶೋರ್, ತಮ್ಮದೇ ‘ಜನ ಸುರಾಜ್ ಪಕ್ಷ’ ಸ್ಥಾಪಿಸಿ, ಚುನಾವಣಾ ರಾಜಕಾರಣಕ್ಕೆ ಖುದ್ದು ಇಳಿದಿದ್ದಾರೆ. ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮದಿಂದ ಗ್ರಾಮಕ್ಕೆ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ನಡೆಸಿ, ಬಿಹಾರದ ಸಾಮಾಜಿಕ-ಆರ್ಥಿಕ ವಾಸ್ತವಿಕತೆ ಹಾಗೂ ಜನರ ದನಿಯನ್ನು ಅರಿತಿದ್ದಾರೆ. ಇದೀಗ, ಅದೇ ದನಿಯನ್ನು ಹೊತ್ತು ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಸದ್ಯದ ಪರಿಸ್ಥಿತಿಯಲ್ಲಿ ಬಿಹಾರ ವಿಧಾನಸಭೆಯಲ್ಲಿ ಪ್ರಬಲವಾದ ವಿಪಕ್ಷಗಳ ದನಿ ಇಲ್ಲ. ವಿಧಾನಸಭೆಯಲ್ಲಿ ಆರ್‌ಜೆಡಿ ಪ್ರಮುಖ ವಿಪಕ್ಷವಾಗಿದೆ. ತೇಜಸ್ವಿ ಯಾದವ್ ವಿಪಕ್ಷ ನಾಯಕರಾಗಿದ್ದಾರೆ. ಆದರೆ, ಸದನದಲ್ಲಿ ತೇಜಸ್ವಿ ಯಾದವ್ ಅವರ ದನಿಯಾಗಲೀ ಅಥವಾ ಅವರ ಪಕ್ಷದ ಶಾಸಕರ ದನಿಯಾಗಲೀ, ಅದರಾಚೆಗೆ ಕಾಂಗ್ರೆಸ್‌ ಶಾಸಕರ ದನಿಯಾಗಲೀ ಕೇಳುತ್ತಿಲ್ಲ. ಸದನವು ಆಳುವ ಪಕ್ಷದ ಸದ್ದು-ಸಡಗರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ, ಗೌಣವಾಗಿದ್ದ ವಿಪಕ್ಷಗಳ ದನಿಗೆ ಕಿಶೋರ್ ಕಂಠ ನೀಡಲಿದ್ದಾರೆ. ವಿಧಾನಸಭೆಯಲ್ಲಿ ಸರ್ಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸಲು ಅಖಾಡಕ್ಕೆ ಬರಲಿದ್ದಾರೆ ಎಂಬ ನಿರೋಕ್ಷೆಗಳೂ ರಾಜಕೀಯ ವಿಶ್ಲೇಷಕರಲ್ಲಿವೆ.

ಕಳೆದ ಕೆಲವು ತಿಂಗಳುಗಳಿಂದ ಪ್ರಶಾಂತ್ ಕಿಶೋರ್ ಅವರು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುತ್ತಾ ಬಂದಿದ್ದರು. ಆಡಳಿತ, ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತ ಪ್ರಶ್ನೆಗಳ ಜೊತೆಗೆ ವೈಯಕ್ತಿಕ ಸ್ವರೂಪದ ಗಂಭೀರ ಆರೋಪಗಳನ್ನೂ ಕಿಶೋರ್ ಮುನ್ನೆಲೆ ತಂದಿದ್ದರು. ಅವರ ಆರೋಪಗಳ ಕುರಿತು ರಾಜಕೀಯ ವಾಗ್ವಾದ ಮುಂದುವರಿದಿದೆ. ಈಗ, ಸರ್ಕಾರದ ವಿರುದ್ಧದ ಕಿಶೋರ್ ಅವರ ವಾಗ್ದಾಳಿಗಳು ವಿಧಾನಸಭೆಯೊಳಗೆ ಪ್ರತಿಧ್ವನಿಸಲಿವೆ ಎಂದೇ ಹೇಳಲಾಗುತ್ತಿದೆ.

ಆದಾಗ್ಯೂ, ಪ್ರಶಾಂತ್ ಕಿಶೋರ್ ಅವರ ಮುಂದಿರುವ ದೊಡ್ಡ ಸವಾಲು ಕೂಡ ಅಷ್ಟೇ ಸ್ಪಷ್ಟವಾಗಿದೆ. ವಿಧಾನಸಭೆಯಲ್ಲಿ ಒಬ್ಬ ಶಾಸಕರಾಗಿ ಪರಿಣಾಮಕಾರಿ ಧ್ವನಿಯಾಗುವುದು ಒಂದೆಡೆಯಾದರೆ, ತನ್ನ ಧ್ವನಿಯನ್ನು ರಾಜ್ಯವ್ಯಾಪಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪಿಸುವುದು ಸವಾಲಿನ ವಿಷಯವಾಗಿದೆ. ಭಾರತದ ಚುನಾವಣಾ ಇತಿಹಾಸದಲ್ಲಿ ವ್ಯಕ್ತಿಯ ಜನಪ್ರಿಯತೆ ಮತ್ತು ಪಕ್ಷದ ವಿಸ್ತರಣೆ ಎರಡೂ ಒಂದೇ ಆಗಿರುವುದಿಲ್ಲ. ಅನೇಕ ನಾಯಕರು ವೈಯಕ್ತಿಕವಾಗಿ ಜನಬೆಂಬಲ ಗಳಿಸಿದರೂ, ಸಂಘಟನಾತ್ಮಕವಾಗಿ ರಾಜ್ಯದಾದ್ಯಂತ ಬಲಿಷ್ಠ ಪಕ್ಷ ಕಟ್ಟುವಲ್ಲಿ ವಿಫಲರಾಗಿದ್ದಾರೆ.

ಜನ ಸುರಾಜ್‌ ಪಕ್ಷಕ್ಕೆ ಈಗ ಎದುರಾಗಿರುವ ಪ್ರಶ್ನೆಯೂ ಇದೇ. ಈ ಗೆಲುವು ಪ್ರಶಾಂತ್ ಕಿಶೋರ್ ಅವರ ವೈಯಕ್ತಿಕ ವಿಶ್ವಾಸಾರ್ಹತೆಯ ಫಲವೇ? ಅಥವಾ ಜನ ಸುರಾಜ್ ಪಕ್ಷದ ಮೇಲಿನ ಜನರ ನಂಬಿಕೆಯ ಆರಂಭವೇ? ಎಂಬ ಪ್ರಶ್ನೆಗಳು ಈಗ ಬಿಹಾರ ರಾಜಕೀಯದಲ್ಲಿವೆ.

ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!

ಮುಖ್ಯವಾಗಿ, ಕಿಶೋರ್ ಗೆಲುವು ಪ್ರತಿಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನೂ ಬದಲಾಯಿಸಬಹುದು. ಕಾಂಗ್ರೆಸ್, ಆರ್‌ಜೆಡಿ ಮತ್ತು ಇತರೆ ಪಕ್ಷಗಳು ಪ್ರಶಾಂತ್ ಕಿಶೋರ್ ಅವರನ್ನು ಕೇವಲ ಎದುರಾಳಿಯಾಗಿ ನೋಡುವವೇ ಅಥವಾ ಭವಿಷ್ಯದ ರಾಜಕೀಯ ಸಮೀಕರಣಗಳಲ್ಲಿ ಪ್ರಮುಖ ಪಾತ್ರಧಾರಿಯೆಂದು ಪರಿಗಣಿಸುವೇ? ಅದೇ ರೀತಿ, ಜನ ಸುರಾಜ್ ತನ್ನ ಸ್ವತಂತ್ರ ರಾಜಕೀಯ ಗುರುತನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಚುನಾವಣಾ ಸಂದರ್ಭಗಳಲ್ಲಿ ಹೊಸ ಮೈತ್ರಿಗಳತ್ತ ಸಾಗುತ್ತದೆಯೇ ಎಂಬ ಪ್ರಶ್ನೆಯೂ ಇದೆ.

ಗಮನಾರ್ಹವಾಗಿ, ಬಿಹಾರ ರಾಜಕೀಯವು ದಶಕಗಳಿಂದ ಜಾತಿ ಸಮೀಕರಣಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪ್ರಶಾಂತ್ ಕಿಶೋರ್ ಮಾತ್ರವೇ ಶಿಕ್ಷಣ, ಆರೋಗ್ಯ, ಉದ್ಯೋಗ, ವಲಸೆ, ಸಾರ್ವಜನಿಕ ಸೇವೆಗಳ ಗುಣಮಟ್ಟ ಹಾಗೂ ಆಡಳಿತದ ಕಾರ್ಯಕ್ಷಮತೆಯ ವಿಷಯಗಳನ್ನು ರಾಜಕೀಯದ ಕೇಂದ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರಾಧಾರಿತ ರಾಜಕೀಯಕ್ಕೆ ಮತದಾರರು ದೀರ್ಘಾವಧಿಯಲ್ಲಿ ಸ್ಪಂದಿಸುತ್ತಾರೆಯೇ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆ ನಿರ್ಮಾಣಕ್ಕೆ ಸರ್ಕಾರ ಅಸ್ತು

"ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳ ಶಾಖೆಗಳ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ...