2019-2023ರ ಟಿಕೆಟ್ ರದ್ದತಿಯಿಂದಲೇ 6,112 ಕೋಟಿ ರೂ. ಸಂಗ್ರಹಿಸಿದೆ ರೈಲ್ವೆ: ಆರ್‌ಟಿಐ!

Date:

ಟಿಕೆಟ್‌ಗಳ ರದ್ದತಿಯಿಂದ ಭಾರತೀಯ ರೈಲ್ವೆ ಭಾರೀ ಆದಾಯವನ್ನು ಸಂಗ್ರಹಿಸಿದೆ. 2019ರಿಂದ 2023ರ ನಡುವೆ ಟಿಕೆಟ್ ರದ್ದತಿಯಿಂದಲೇ ರೈಲ್ವೆ 6112 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂಬುವುದು ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯಿಂದಾಗಿ ತಿಳಿದು ಬಂದಿದೆ.

- Advertisement -

ರಾಯಪುರ ಮೂಲದ ಸಾಮಾಜಿಕ ಕಾರ್ಯಕರ್ತ ಕುನಾಲ್ ಶುಕ್ಲಾ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಮನವಿಗೆ ಪ್ರತಿಕ್ರಿಯೆ ನೀಡಿದ ರೈಲ್ವೆ ಸಚಿವಾಲಯವು ರದ್ದತಿಯಿಂದ ಕಡಿತಗೊಳಿಸಲಾದ ವರ್ಷವಾರು ಮೊತ್ತವನ್ನು ಬಹಿರಂಗಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಆರ್‌ಟಿಐ ಮಾಹಿತಿ ಪ್ರಕಾರ 2019-20ನೇ ಸಾಲಿನಲ್ಲಿ ಟಿಕೆಟ್ ರದ್ಧತಿ 1,724.44 ಕೋಟಿ ರೂ, 2020-21ನೇ ಸಾಲಿನಲ್ಲಿ 710.54 ಕೋಟಿ ರೂ, 2021-22ನೇ ಸಾಲಿನಲ್ಲಿ 1,569 ಕೋಟಿ ರೂ, 2022-23ನೇ ಸಾಲಿನಲ್ಲಿ ಟಿಕೆಟ್ ರದ್ದತಿಯಿಂದ 2109.74 ಕೋಟಿ ರೂ (ತಾತ್ಕಾಲಿಕ) ಸಂಗ್ರಹ ಮಾಡಲಾಗಿದೆ.

ಇದನ್ನು ಓದಿದ್ದೀರಾ?  ರೈಲು ಅಪಘಾತದ ನಂತರ ಸಾವಿರಾರು ಟಿಕೆಟ್ ರದ್ದು; ಐಆರ್‌ಸಿಟಿಸಿ ನಿರಾಕರಣೆ

ಈ ನಾಲ್ಕು ವರ್ಷದ ಅವಧಿಯಲ್ಲಿಯೇ ಒಟ್ಟಾಗಿ ಭಾರತೀಯ ರೈಲ್ವೆಯು ಕೇವಲ ಟಿಕೆಟ್ ರದ್ದತಿಯಿಂದ 6,112 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು “ಕಳೆದ ಹತ್ತು ವರ್ಷಗಳಲ್ಲಿ ಪ್ರಯಾಣಿಕರ ದರ ಶೇಕಡ 85ರಷ್ಟು ಏರಿಸಲಾಗಿದೆ” ಎಂದು ಕುನಾಲ್ ಶುಕ್ಲಾ ಹೇಳಿದ್ದಾರೆ.

ವೇಟಿಂಗ್‌ ಲಿಸ್ಟ್‌ಗಾಗಿ ರೈಲ್ವೆ ಟಿಕೆಟ್‌ಗಳನ್ನು ರೈಲ್ವೇ ಕೌಂಟರ್ ಟಿಕೆಟ್ ಅಥವಾ ಆನ್‌ಲೈನ್ ಇ-ಟಿಕೆಟ್ ಮೂಲಕ ಪಡೆಯಬಹುದು. ಆದರೆ ಟಿಕೆಟ್ ರದ್ದು ಮಾಡಿದ ಕಾರಣಕ್ಕೆ ಶುಲ್ಕವಾಗಿ ಟಿಕೆಟ್‌ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಆದರೆ ಇದು ರೈಲ್ವೆಗೆ ಸೇರುವುದಿಲ್ಲ ಎಂದು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಸ್‌ನ (ಎಸ್‌ಇಸಿಆರ್‌) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಕಾಸ್ ಕಶ್ಯಪ್ ಹೇಳಿದ್ದಾರೆ.

ಇದನ್ನು ಓದಿದ್ದೀರಾ?  ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು

“ಟಿಕೆಟ್ ರದ್ದತಿಯ ಸಂಪೂರ್ಣ ಮೊತ್ತವು ಸ್ವತಂತ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ರೈಲ್ವೆಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್‌ಗೆ (ಐಆರ್‌ಸಿಟಿಸಿ) ಹೋಗುತ್ತದೆ. ಭಾರತದಾದ್ಯಂತ ಪ್ರತಿದಿನ ಸುಮಾರು 70-80 ಲಕ್ಷದಷ್ಟು ಟಿಕೆಟ್‌ಗಳನ್ನು ನೀಡಲಾಗುತ್ತದೆ. ರದ್ದತಿಯಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಲ್ಲ” ಎಂದು ಕಶ್ಯಪ್ ಹೇಳಿದ್ದರು.

ಇನ್ನು ಇನ್ನೊಂದು ಆರ್‌ಟಿಐ ಅರ್ಜಿಯಿಂದ 2020ರಿಂದ ಏಪ್ರಿಲ್ 2023 ರವರೆಗೆ 67,600 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಎಸ್‌ಇಸಿಎಆರ್‌ ಒಪ್ಪಿಕೊಂಡಿದೆ. ನಿರಂತರವಾಗಿ ರೈಲು ರದ್ದುಗೊಳಿಸುವುದರಿಂದಾಗಿ ಪ್ರಯಾಣಿಕರಿಗೆ ಕಷ್ಟವಾಗುತ್ತದೆ ಎಂದು ಹೇಳಿ ಕಮಲ್ ದುಬೆ ಎಂಬವರು ಬಿಲಾಸ್‌ಪುರದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...