ಹಸು ದೇವರಲ್ಲ, ಉಪಯುಕ್ತ ಪ್ರಾಣಿಯಷ್ಟೆ ಎಂದಿದ್ದರು ಸಾವರ್ಕರ್‌: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸಾತ್ಯಕಿ

Date:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣವೊಂದರ ವಿಚಾರಣೆ ವೇಳೆ ವಿನಾಯಕ ದಾಮೋದರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್, “ಸಾವರ್ಕರ್ ಹಸುವನ್ನು ದೇವರಾಗಿ ಪೂಜಿಸುವುದನ್ನು ವಿರೋಧಿಸುತ್ತಿದ್ದರು. ಅವರು ಹಸುವನ್ನು ಕೇವಲ ಮಾನವನಿಗೆ ಉಪಯುಕ್ತವಾದ ಪ್ರಾಣಿ ಎಂದು ಪರಿಗಣಿಸಿದ್ದರು” ಎಂದು ಪುಣೆಯ ವಿಶೇಷ ಸಂಸದ-ಶಾಸಕರ ನ್ಯಾಯಾಲಯದಲ್ಲಿ ಹೇಳಿದ್ದಾರೆ.

- Advertisement -

2023ರಲ್ಲಿ ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಾವರ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಂಗಳವಾರ ನಡೆದ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ನಡೆಸಿದ ಪ್ರತಿಪ್ರಶ್ನೆಯ ವೇಳೆ ಈ ವಿಷಯಗಳು ಹೊರಬಿದ್ದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು ಸಾವರ್ಕರ್ ಬರೆದ ‘ವಿಜ್ಞಾನ-ನಿಷ್ಠ ನಿಬಂಧ’ (Vigyan-Nishtha Nibandha) ಪುಸ್ತಕವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಪುಸ್ತಕವನ್ನು ತಮ್ಮ ತಾತ ವಿ ಡಿ ಸಾವರ್ಕರ್ ಬರೆದಿರುವುದನ್ನು ಸಾತ್ಯಕಿ ಸಾವರ್ಕರ್ ಒಪ್ಪಿಕೊಂಡರು. ಅದರಲ್ಲಿರುವ ವಿಚಾರಗಳನ್ನೂ ಅವರು ಅಂಗೀಕರಿಸಿದರು.

ಪುಸ್ತಕದಲ್ಲಿ ಹಸುವನ್ನು ಮಾನವ ಸಮಾಜಕ್ಕೆ ಉಪಯುಕ್ತವಾದ ಪ್ರಾಣಿ ಎಂದು ಕಾಪಾಡಬೇಕು. ಆದರೆ ಅದನ್ನು ದೇವತೆಯಾಗಿ ಪೂಜಿಸುವುದು ಸರಿಯಲ್ಲ ಎಂದು ಸಾವರ್ಕರ್ ಬರೆದಿದ್ದಾರೆ.

“ಹಸು ಒಂದು ಪ್ರಾಣಿ ಮಾತ್ರ. ಒಂದು ಪ್ರಾಣಿಯನ್ನು ದೇವರೆಂದು ಪರಿಗಣಿಸುವುದು ಮಾನವೀಯತೆಗೆ ಮಾತ್ರವಲ್ಲ, ದೈವತ್ವದ ಪರಿಕಲ್ಪನೆಗೂ ಅವಮಾನ” ಎಂದು ಸಾವರ್ಕರ್ ಬರೆದಿರುವುದಾಗಿ ನ್ಯಾಯಾಲಯದಲ್ಲಿ ಉಲ್ಲೇಖಿಸಲಾಯಿತು.

ಸಾವರ್ಕರ್ ತಮ್ಮ ಪುಸ್ತಕದಲ್ಲಿ ಹಸುವಿನ ಉಪಯುಕ್ತತೆಯನ್ನು ನಾಯಿ, ಕುದುರೆ ಹಾಗೂ ಕತ್ತೆಗಳೊಂದಿಗೆ ಹೋಲಿಕೆ ಮಾಡಿದ್ದಾರೆ. ಈ ಎಲ್ಲ ಪ್ರಾಣಿಗಳೂ ಮಾನವನಿಗೆ ಉಪಯುಕ್ತವಾಗಿರುವುದರಿಂದ ಅವುಗಳನ್ನು ರಕ್ಷಿಸಬೇಕು. ಆದರೆ ಪೂಜಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ ಎಂಬುದನ್ನೂ ಸಾತ್ಯಕಿ ಒಪ್ಪಿಕೊಂಡರು.

ಪುಸ್ತಕದಲ್ಲಿ ಗೋಮೂತ್ರ ಹಾಗೂ ಸಗಣಿಯನ್ನು ಪವಿತ್ರವೆಂದು ಪರಿಗಣಿಸುವ ಪದ್ಧತಿಯನ್ನೂ ಸಾವರ್ಕರ್ ಟೀಕಿಸಿದ್ದಾರೆ. ಔಷಧೀಯ ಅಥವಾ ಕೃಷಿ ಉದ್ದೇಶಗಳಿಗೆ ಅವುಗಳನ್ನು ಬಳಸಬಹುದು. ಆದರೆ ಅವುಗಳನ್ನು ಸೇವಿಸುವುದನ್ನಾಗಲಿ ಅಥವಾ ಧಾರ್ಮಿಕ ಪುಣ್ಯದ ಕಾರ್ಯವೆಂದು ಪರಿಗಣಿಸುವುದನ್ನಾಗಲಿ ಅವರು ಒಪ್ಪಿರಲಿಲ್ಲ ಎಂದು ನ್ಯಾಯಾಲಯದಲ್ಲಿ ತಿಳಿಸಲಾಯಿತು.

ಇದನ್ನೂ ಓದಿ: ಧಾಟಿ ಬದಲಿಸಿದ ಸುಪ್ರೀಂ | ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮಾತು ಆಲಿಸಲು ಅಧಿಕಾರಿಗಳಿಗೆ ಸಲಹೆ

“ಗೋಮಾತೆ” ಎಂಬ ಪದವನ್ನು ಸಾಂಕೇತಿಕವಾಗಿ ಬಳಸಬಹುದು. ಆದರೆ ಅದನ್ನು ಅಕ್ಷರಶಃ ಅರ್ಥೈಸಬಾರದು ಎಂದು ಸಾವರ್ಕರ್ ಅಭಿಪ್ರಾಯಪಟ್ಟಿದ್ದರು. ಹಸುವಿನ ದೇಹದಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ಜನಪ್ರಿಯ ನಂಬಿಕೆಯನ್ನು ಸಹ ಸಾವರ್ಕರ್ ಅವೈಜ್ಞಾನಿಕ ಹಾಗೂ ಧರ್ಮಕ್ಕೆ ಹಾನಿಕಾರಕ ಎಂದು ಟೀಕಿಸಿದ್ದರೆಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಹಸುಗಳ ರಕ್ಷಣೆಯನ್ನು ಧಾರ್ಮಿಕ ಭಾವನೆಗಿಂತ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು ಎಂದು ಸಾವರ್ಕರ್ ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ್ದಾರೆ. ಉತ್ತಮ ತಳಿಯ ಜಾನುವಾರುಗಳನ್ನು ಬೆಳೆಸುವುದು, ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ಆಧುನಿಕ ವಿಧಾನಗಳಿಂದ ಪಶುಸಂಗೋಪನೆ ಅಭಿವೃದ್ಧಿಪಡಿಸುವುದರತ್ತ ಸಂಘಟನೆಗಳು ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದ್ದರು.

ಅಮೆರಿಕದಲ್ಲಿ ಹಸುಗಳನ್ನು ಪೂಜಿಸದಿದ್ದರೂ ಉತ್ತಮ ಪಶು ನಿರ್ವಹಣೆ ಇದೆ ಎಂದು ಉದಾಹರಿಸಿರುವ ಸಾವರ್ಕರ್, ಕೆಲವು ಸಂದರ್ಭಗಳಲ್ಲಿ ಹಸು ಉಪಯುಕ್ತತೆಯನ್ನು ಕಳೆದುಕೊಂಡರೆ ಅದರ ವಧೆಯೂ ಅಗತ್ಯವಾಗಬಹುದು ಎಂದು ಬರೆದಿದ್ದಾರೆ. ಧಾರ್ಮಿಕ ಭಾವನೆಗಿಂತ ಪ್ರಾಯೋಗಿಕತೆ ಆಧಾರಿತ ನೀತಿಗಳನ್ನು ಅನುಸರಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.

2023ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ, ಸಾವರ್ಕರ್ ತಮ್ಮ ಪುಸ್ತಕವೊಂದರಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ ಬಗ್ಗೆ ಬರೆದಿದ್ದಾರೆ ಎಂದು ಹೇಳಿದ್ದರು ಎಂಬ ಆರೋಪ ಇದೆ. ಆದರೆ ಸಾವರ್ಕರ್ ಅವರ ಯಾವುದೇ ಪುಸ್ತಕದಲ್ಲಿ ಅಂತಹ ಘಟನೆ ಅಥವಾ ಉಲ್ಲೇಖ ಇಲ್ಲ ಎಂದು ಸತ್ಯಕಿ ಸಾವರ್ಕರ್ ವಾದಿಸಿ, ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಹಾಗೂ ಸಾತ್ಯಕಿ ಸಾವರ್ಕರ್ ಅವರ ಪ್ರತಿಪ್ರಶ್ನೆ ಮುಂದುವರಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದ ಖಜಾನೆ ಖಾಲಿ, ಆದರೂ ಪ್ರಧಾನಿ ಹುಟ್ಟುಹಬ್ಬಕ್ಕೆ ಕೋಟಿ ಕೋಟಿ ಪೋಲು: ತೇಜಸ್ವಿ ಯಾದವ್ ಆರೋಪ

ಬಿಹಾರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ತೊಂದರೆಯಲ್ಲಿರುವಾಗ ಮತ್ತು ರಾಜ್ಯ...

ಹಿರಿಯ ಪತ್ರಕರ್ತೆ ಪಾಯಲ್ ಮೆಹ್ತಾ ಅಕಾಲಿಕ ನಿಧನ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರ ಸಂತಾಪ

ಸಿಎನ್‌ಎನ್-ನ್ಯೂಸ್18 ವಾಹಿನಿಯ ಹಿರಿಯ ರಾಜಕೀಯ ಪತ್ರಕರ್ತೆ ಪಾಯಲ್ ಮೆಹ್ತಾ (46) ಅವರು...

ಬಿಹಾರ MLC ಚುನಾವಣೆ: 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಪ್ರಶಾಂತ್ ಕಿಶೋರ್ ಜನ ಸುರಾಜ್ ಪಾರ್ಟಿ

ಬಿಹಾರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ...

ಹವಾಮಾನ ವರದಿ: ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ...