ವಿದ್ಯುನ್ಮಾನ ಮತಯಂತ್ರದಲ್ಲಿ ಅಣಕು ಮತದಾನ ನಡೆಸುವ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚು ಮತ ಲಭಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ಆರೋಪ ಪರಿಶೀಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಇವಿಎಂ-ವಿವಿಪ್ಯಾಟ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತ ಅವರ ಪೀಠ ಮೌಖಿಕ ನಿರ್ದೇಶನ ನೀಡಿತು.
Breaking: Supreme Court asks EC to look into allegations that during a mock drill in Kasargod in Kerala, 4 EVMs recorded one extra vote for BJP. ‘Sanctity of electoral process is key..’ says Apex court. Court is hearing plea that cross verification of all votes be done through…
— Rajdeep Sardesai (@sardesairajdeep) April 18, 2024
ಸ್ವಯಂಸೇವಾ ಸಂಸ್ಥೆ ಎಡಿಆರ್ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್, ಕೇರಳದ ಕಾಸರಗೋಡು ಕ್ಷೇತ್ರದಲ್ಲಿಇವಿಎಂ ಮೂಲಕ ಅಣಕು ಮತದಾನ ಮಾಡುವ ಸಂದರ್ಭದಲ್ಲಿ ಬಿಜೆಪಿಗೆ ಒಂದು ಹೆಚ್ಚು ಮತ ದಾಖಲಾಗಿದ್ದನ್ನು ಮಾಧ್ಯಮವೊಂದು ಪ್ರಕಟಿಸಿದ್ದ ವರದಿಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ
ಇದನ್ನು ಗಮನಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರಿಗೆ ಪರಿಶೀಲನೆಗೊಳಪಡಿಸುವಂತೆ ನಿರ್ದೇಶನ ನೀಡಿದರು.
Supreme Court asks Election Commission to look into allegation of EVM malfunctioning in Kerala
report by @DebayonRoy #SupremeCourt #EVM #EVM_VVPAT #LokSabhaElection2024 @ECISVEEP https://t.co/INEIZmLFLu
— Bar and Bench (@barandbench) April 18, 2024
ಬಿಜೆಪಿಗೆ ಹೆಚ್ಚುವರಿ ಮತ ದಾಖಲಾದ ಈ ವರದಿಯನ್ನು ಆಧರಿಸಿ ಕೇರಳದ ಆಡಳಿತ ಪಕ್ಷ ಎಲ್‌ಡಿಎಫ್ ಹಾಗೂ ವಿಪಕ್ಷ ಯುಡಿಎಫ್ 4 ಇವಿಎಂಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.
ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ನಡೆಸಲು ಚುನಾವಣೆ ಪ್ರಕ್ರಿಯೆ ಪಾವಿತ್ರತೆ ಹೊಂದಿರಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
“ಇದೊಂದು ಚುನಾವಣಾ ಪ್ರಕ್ರಿಯೆ. ಇಲ್ಲಿ ಪಾವಿತ್ರ್ಯತೆ ಇರಬೇಕು. ಇಲ್ಲಿ ಏನೋ ನಡೆಯುತ್ತಿದೆ ಎಂಬ ಆತಂಕ ಯಾರೊಬ್ಬರಿಗೂ ಅನಿಸಬಾರದು” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ನೇತೃತ್ವದ ಪೀಠ ಚುನಾವಣಾ ಆಯೋಗಕ್ಕೆ ತಿಳಿಸಿತು.