ಬಿಜೆಪಿ ಮತ್ತು ಮಿತ್ರ ಪಕ್ಷಗಳೊಂದಿಗೆ ಪ್ರಾಥಮಿಕ ಹಂತದ ಕ್ಷೇತ್ರಗಳ ಹಂಚಿಕೆ ಮಾಡಿಕೊಂಡ ಎಐಎಡಿಎಂಕೆ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 297 ಭರವಸೆಗಳನ್ನು ಘೋಷಣೆ ಮಾಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಇ.ಕೆ. ಪಳನಿಸ್ವಾಮಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಜಯಲಲಿತ ಮುಖ್ಯಮಂತ್ರಿಯಾಗಿದ್ದಾಗ ಹೊರಡಿಸುತ್ತಿದ್ದ ಜನಪ್ರಿಯ ಯೋಜನೆಗಳಂತೆಯೇ ಈ ಬಾರಿ ಹಲವು ಯೋಜನೆಗಳನ್ನು ಎಐಎಡಿಎಂಕೆ ಘೋಷಣೆ ಮಾಡಿದ್ದು, ಪಡಿತರ ಅಕ್ಕಿ ಕಾರ್ಡ್‌ದಾರರಿಗೆ ಉಚಿತ ಪ್ರಿಡ್ಜ್ ನೀಡುವುದಾಗಿ ಘೋಷಿಸಿದೆ.
ಮಾತ್ರವಲ್ಲದೇ, ಒಂದು ಕೆ.ಜಿ. ಬೇಳೆ ಮತ್ತು ಒಂದು ಲೀಟರ್ ಅಡುಗೆ ಎಣ್ಣೆ ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ಹೇಳಿದೆ.
ಮಹಿಳೆರಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಘೋಷಣೆ ಮಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ನಕಲಿಸಿದ್ದಲ್ಲದೇ, 25 ಸಾವಿರ ರೂ. ಸಹಾಯಧನದೊಂದಿಗೆ ಉದ್ಯೋಗಸ್ಥ ಮಹಿಳೆಯರಿಗೆ ‘ಅಮ್ಮಾ’ ದ್ವಿಚಕ್ರ ವಾಹನ ನೀಡುವುದು, ಶಿಕ್ಷಣಕ್ಕಾಗಿ ಬ್ಯಾಂಕ್‌ನಲ್ಲಿ ಮಾಡಿದ ಸಾಲ ಮನ್ನಾ ಒಳಗೊಂಡಂತೆ ಹಲವು ಭರವಸೆಗಳನ್ನು ಪಕ್ಷ ಘೋಷಣೆ ಮಾಡಿದೆ.




