ಕೊಲ್ಲಿ ಕಲಹ: ಇದು ನಮ್ಮ ಯುದ್ಧವಲ್ಲ ಎಂದ ಬ್ರಿಟನ್‌!

Date:

ಈ ಯುದ್ದ ತನ್ನದಲ್ಲ ಎಂದು ಬ್ರಿಟನ್‌ ಹೇಳಿಕೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಕೈಗೊಂಡ ಯುದ್ಧಕ್ಕೆ ಬಹುತೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಯುಕೆ ಈ ಯುದ್ದದಲ್ಲಿ ತಾನು ಪಾಲುಗೊಳ್ಳುವುದಿಲ್ಲ ಎಂದು ಅಮೆರಿಕಗೆ ಸ್ಪಷ್ಟ ಅಸಹಾಕಾರ ಸೂಚಿಸಿದೆ.

- Advertisement -

ಹಾರ್ಮುಜ್‌ ಜಲ ಮಾರ್ಗವನ್ನು ಮುಕ್ತವಾಗಿಸಲು ಅಮೆರಿಕ ಇತರ ರಾಷ್ಟ್ರಗಳ ಸಹಕಾರ ಬಯಸಿತ್ತು. ನಿಮಗೆ ಬೇಕಾದ ತೈಲವನ್ನು ನೀವೇ ಹಾರ್ಮುಜ್‌ನಿಂದ ತಂದುಕೊಳ್ಳಿ. ಇಲ್ಲವೇ ಅಮೆರಿಕದಿಂದ ಕೊಳ್ಳಿರಿ ಎಂದು ತನ್ನ ಮೈತ್ರಿ ರಾಷ್ಟ್ರಗಳಿಗೆ ಸಂದೇಶ ನೀಡಿದ್ದ ಟ್ರಂಪ್‌ ಪರೋಕ್ಷವಾಗಿ ಅಮೆರಿಕದ ಈ ಯುದ್ದಕ್ಕೆ ಅನ್ಯ ರಾಷ್ಟ್ರಗಳು ಧುಮುಕದ ಕುರಿತ ಅಸಮಾಧಾನ ಹೊರಹಾಕಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಯುನೈಟೆಡ್‌ ಕಿಂಗ್‌ಡಮ್‌ ಪ್ರಧಾನಿ ಕೈರ್‌ ಸ್ಟಾಮರ್‌ ಬ್ರಿಟನ್‌ ಮಧ್ಯಪ್ರಾಚ್ಯ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ, ಈ ಯುದ್ಧ ನಮ್ಮ ದೇಶದ ಹಿತಾಶಕ್ತಿಗೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ.

ಜಾಗತಿಕ ಇಂಧನ ಪೂರೈಕೆಯಲ್ಲಿ ಸಂಭವಿಸಿರುವ ವ್ಯತ್ಯಯದ ಕುರಿತು ಚರ್ಚಿಸಲು ಬ್ರಿಟನ್‌ 35 ದೇಶಗಳ ಸಭೆಯನ್ನು ಕರೆಯಲಿದೆ. ಹಾರ್ಮುಜ್‌ ಜಲಮಾರ್ಗದ ಮೂಲಕ ನಡೆಯುತ್ತಿದ್ದ ವಾಣಿಜ್ಯ ವಹಿವಾಟುಗಳು ಪುನರಾರಂಭದ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದಿದ್ದಾರೆ.

ಪ್ರಸ್ತುತ ಸಭೆಯಲ್ಲಿ ರಾಜತಾಂತ್ರಿಕ ಹಾಗೂ  ರಾಜಕೀಯ ತತ್ವಗಳ ಮೂಲಕ ಸಮುದ್ರಯಾನದ ಸುರಕ್ಷತೆ, ಹಾಗೂ ಸಮುದ್ರಯಾನಿಗಳ ರಕ್ಷಣೆ ಸೇರಿದಂತೆ, ವಶಪಡಿಸಲಾದ ವಾಣಿಜ್ಯ ಹಡಗುಗಳ ಹಿಂದಿರುಗುವಿಕೆಯ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದಿದ್ದಾರೆ.

ಯಾವ ಒತ್ತಯಾಗಳಿಗು ಮಣಿದು ಯುದ್ಧಕ್ಕೆ ಕೈ ಜೋಡಿಸುವುದಿಲ್ಲ, ರಾಷ್ಟ್ರದ ಹಿತಾಸಕ್ತಿಯ ವಿರುದ್ಧ ನಾನು ನಡೆಯುವುದಿಲ್ಲ ಎಂದಿರುವ ಸ್ಟಾಮರ್‌ ನಾನು ಬ್ರಿಟನ್ನಿನ ಆಸಕ್ತಿಗಳ ಮೇರೆಗೆ ಕಾರ್ಯ ನಿರ್ವಹಿಸುವ ಮಾತಿಗೆ ಬದ್ದನಾಗಿದ್ದೇನೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ರಾಜತಾಂತ್ರಿಕ ನೀತಿಗಳ ಮೂಲಕ ಜಾಗತಿಕ ವಲಯದ ವ್ಯಾಪಾರಕ್ಕೆ ಎದುರಾಗಿರುವ ಸಂದಿಗ್ಧವನ್ನು ಪರಿಹರಿಸುವ ಪ್ರಯತ್ನದಲ್ಲಿ ಬ್ರಿಟನ್‌ ನಿರತವಾಗಿದೆ ಎಂದಿದ್ದಾರೆ.

ನ್ಯಾಟೊ ಒಕ್ಕೂಟದ ಕುರಿತ ಅದೊಂದು ಕಾಗದದ ಹುಲಿ ಎಂಬ ಟ್ರಂಪ್‌ ಟೀಕೆಗೆ ಉತ್ತರಿಸಿದ ಬ್ರಿಟನ್‌ ಪ್ರಧಾನಿ, ನ್ಯಾಟೊ ಜಗತ್ತು ಕಂಡ ಶಕ್ತಿಶಾಲಿ ಹಾಗೂ ಬದ್ಧತೆಯ ಮಿಲಿಟರಿ ಒಕ್ಕೂಟ. ಬ್ರಿಟನ್‌ ನ್ಯಾಟೊದ ನಿಯಮಗಳನ್ನು ಅನುಸರಿಸಲಿದೆ ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಗೋವಾ, ಕೋಲ್ಕತ್ತದಲ್ಲಿ ಸಿಜೆಪಿ ‘ಮೋರ್ಚಾ’

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...