ಮಂಡ್ಯ | ನಗರಕೆರೆಗೆ ಅನುದಾನ ನಿರಂತರ; ಅಭಿವೃದ್ಧಿ ಮಾತ್ರ ಶೂನ್ಯ; ಕಾಮಗಾರಿಗಳ ಮುಖವಾಡ ಬಿಚ್ಚಿಟ್ಟ ಮಳೆ!

Date:

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ನಗರಕೆರೆ ಕೂಡ ಒಂದು. ಇಲ್ಲಿ 21 ಸದಸ್ಯರು ಇರುವ ಗ್ರಾಮ ಪಂಚಾಯಿತಿ ಕೂಡ ಇದೆ. ತಾಲೂಕಿನ ರಾಜಕೀಯದಲ್ಲಿ ಹೆಸರು ಮಾಡಿದವರು ತುಂಬಾ ಜನ ಈ ಗ್ರಾಮದಲ್ಲಿ ಇದ್ದಾರೆ. ಆದರೂ ಊರಿನ ಅಭಿವೃದ್ಧಿ ಮರೀಚಿಕೆಯಾಗಿದೆ.

- Advertisement -

ಇಲ್ಲಿ ಪ್ರಸ್ತಾಪಿಸಲು ಹೊರಟ ವಿಚಾರಕ್ಕೆ ಮಾದರಿಯಾಗಿ ನಗರಕೆರೆ ಗ್ರಾಮದ ಹೆಸರು ತೆಗೆದುಕೊಳ್ಳಲಾಗಿದೆ ಅಷ್ಟೇ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಇದು ಅನ್ವಯಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಕಳೆದ ಒಂದು ವರ್ಷದಿಂದ ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಈ ಗ್ರಾಮದಲ್ಲಿ ನೀರು ಪ್ರತಿ ದಿನವೂ ಬರುತ್ತಿತ್ತು, ಏರ್ಪಾಡು ಕೂಡ ಚೆನ್ನಾಗಿಯೇ ಇತ್ತು. ಅವಶ್ಯಕತೆ ಇಲ್ಲದಿದ್ದರೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ, ಕೇಂದ್ರ ಸರ್ಕಾರದಿಂದ ಹಣ ಬಂದಿದೆ ಎಂಬ ಒಂದೇ ಕಾರಣಕ್ಕೆ ಕಾಮಗಾರಿ ನಡೆಯುತ್ತಿದೆ.

ನಗರಕೆರೆ ರಸ್ತೆ

ಊರಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ಬಗೆದು ಹಾಳು ಮಾಡಿದ್ದಾರೆ. ವರ್ಷದಿಂದ ನಡೆಯುತ್ತಿರುವ ಕೆಲಸ ಎಷ್ಟು ಉಪಯೋಗ ಆಯ್ತು ಅನ್ನುವುದು ಮಾತ್ರ ಪ್ರಶ್ನಾರ್ಹ. ಆದರೆ ಜನರಿಗೆ ಅಭಿವೃದ್ಧಿಯ ಹೆಸರಿನಲ್ಲಿ ರೋಸು ಹಿಡಿದಿದೆ. ಆದರೂ ಜನ ಪ್ರಶ್ನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಊರಿನಲ್ಲಿ ಅರ್ಧಕ್ಕೆ ಅರ್ಧ ರಸ್ತೆಗಳು ಮಣ್ಣಿನ ರಸ್ತೆಗಳು, ಸರಾಗವಾಗಿ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆ ಇಲ್ಲ. ಜನರಿಗೆ ಅವಶ್ಯಕತೆ ಇರುವ ಕೆಲಸಗಳು ಇಲ್ಲಿ ಪಂಚಾಯಿತಿಯ ಚುನಾಯಿತರಿಂದ ಹಿಡಿದು ಶಾಸಕ, ಸಂಸದರವರೆಗೂ ಬೇಡವಾಗಿದೆ.

ಕಳೆದ ಎರಡು ತಿಂಗಳುಗಳಿಂದ ಸಣ್ಣ ಮಳೆ ಬರುತ್ತಿದೆ, ಒಂದೇ ಒಂದು ದೊಡ್ಡ ಮಳೆ ಬಂದಿಲ್ಲ. ಗದ್ದೆಗಳಲ್ಲಿ ಭತ್ತದ ಹೊಟ್ಲು ಹಾಕಲು ಆಗಿಲ್ಲ. ಆದರೆ ಊರಿನಲ್ಲಿ ರಸ್ತೆಗಳಲ್ಲಿ ಭತ್ತದ ನಾಟಿ ಮಾಡಬಹುದು. ಅಷ್ಟು ಹಾಳಾಗಿ ಹೋಗಿವೆ. ಆದರೂ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ.

ನಗರಕೆರೆ ರಾಜಕೀಯವಾಗಿ ಪ್ರಭಾವ ಹೊಂದಿರುವ ಊರಾದ್ದರಿಂದ ವರ್ಷ ವರ್ಷವೂ ಲಕ್ಷ ಇಲ್ಲವೇ ಕೋಟಿಗಳ ಲೆಕ್ಕದಲ್ಲಿ ಅನುದಾನ ಬರುತ್ತದೆ. ಜನರ ಬದುಕು ಹಸನಾಗಿದೆಯಾ ಅಂತ ನೋಡಿದರೆ ಫಲಿತಾಂಶ ಶೂನ್ಯ ಎಂಬಂತಾಗಿದೆ.

ನಗರಕೆರೆ 3

ನಗರಕೆರೆಯ ನಿವಾಸಿ ರಾಮಕೃಷ್ಣ ಎಂಬುವವರು ಈ ದಿನ.ಕಾಮ್‌ ಜೊತೆಗೆ ಮಾತನಾಡಿ, “ಕಳೆದ ಎರಡು ತಿಂಗಳುಗಳಿಂದ ಸಣ್ಣ ಮಳೆ ಬರುತ್ತಿದೆ. ಒಂದೇ ಒಂದು ದೊಡ್ಡ ಮಳೆ ಬಂದಿಲ್ಲ. ಗದ್ದೆಗಳಲ್ಲಿ ಭತ್ತದ ಹೊಟ್ಲು ಹಾಕಲು ಆಗಿಲ್ಲ. ಆದರೆ ಊರಿನಲ್ಲಿ ರಸ್ತೆಗಳಲ್ಲಿ ಭತ್ತದ ನಾಟಿ ಮಾಡಬಹುದು. ಅಷ್ಟು ಹಾಳಾಗಿ ಹೋಗಿವೆ. ಆದರೂ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಊರಿನ ರಸ್ತೆ, ಚರಂಡಿಗಳು ತೀರ ಹದಗೆಟ್ಟಿವೆ. ಜನರು ಓಡಾಡದಂತಾಗಿದೆ. ಇಂತ ತುರ್ತು ಕಾಮಗಾರಿಗಳಿಗೆ ಹಣ ಬಳಸದೇ ಬೇಡದ ಜಲ ಜೀವನ್ ಮಿಷನ್ ಕಾಮಗಾರಿಗೆ ಬಳಸಿದ್ದಾರೆ” ಎಂದು ದೂರಿದರು.

“ನಗರಕೆರೆ ರಾಜಕೀಯವಾಗಿ ಪ್ರಭಾವ ಹೊಂದಿರುವ ಊರಾದ್ದರಿಂದ 2021-22 ನೇ ಸಾಲಿನಲ್ಲಿ 11,846,88 ರೂ , 2022-23 ನೇ ಸಾಲಿನಲ್ಲಿ 13,028,683 ರೂ ಹಾಗೂ 2023-24 ನೇ ಸಾಲಿನಲ್ಲಿ 93,58,700 ರೂಗಳು ಪಂಚಾಯಿತಿ ಖಾತೆಯಲ್ಲಿ ಇರುವುದನ್ನು ತೋರಿಸುತ್ತಿದೆ. ವರ್ಷ ವರ್ಷವೂ, ಲಕ್ಷ ಇಲ್ಲವೇ ಕೋಟಿಗಳ ಲೆಕ್ಕದಲ್ಲಿ ಅನುದಾನ ಬರುತ್ತದೆ. ಜನರ ಬದುಕು ಹಸನಾಗಿದೆಯಾ ಅಂತ ನೋಡಿದರೆ ಫಲಿತಾಂಶ ಶೂನ್ಯ” ಎಂದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಓ ಶೇಖ್ ತನ್ವೀರ್ ಆಸಿಫ್, ಮದ್ದೂರು ತಾಲೂಕು ಪ್ರಭಾರ ಇಓ ರವಿ ಹಾಗೂ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಜಯಲಿಂಗು ಅವರಿಗೆ ಕರೆ ಮಾಡಲಾಯಿತಾದರೂ, ಮಾತಿಗೆ ಸಿಗಲಿಲ್ಲ.

ನಗರಕೆರೆ 1

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಜಿತ ಜಿ.ಕೆ ಈ ದಿನ.ಕಾಮ್ ಜೊತೆಗೆ ಮಾತನಾಡಿ “ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ವಾಸ್ತವ ಸ್ಥಿತಿಯನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ನಿರ್ಣಯ ಮಾಡಿ ಅನುದಾನ ಕೋರಿ ಮದ್ದೂರು ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಸಂಸದರಿಗೆ ಪತ್ರ ಬರೆಯುತ್ತೇವೆ” ಎಂದರು.

ಕೋಟಿಗಳ ಲೆಕ್ಕದಲ್ಲಿ ಅನುದಾನ ಬಂದರು ಊರಿನ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ. ಊರಿನ ಶಾಲೆಯ ಅಡುಗೆ ಮನೆ ಸೋರುತ್ತಿದೆ, ಶೌಚಾಲಯದ ಗೋಡೆಗೆ ಊರೆ ಕೊಟ್ಟು ನಿಲ್ಲಿಸಿದ್ದಾರೆ. ವರ್ಷ ವರ್ಷ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ. ಇದರ ಕಡೆಗೆ ಗ್ರಾಮ ಸರಕಾರದ ಗಮನವಿಲ್ಲ. ಜನರ ಬದುಕು ಹಸನಾಗಲಿಲ್ಲ. ಹಾಗಾದರೆ, ಬಂದ ಅನುದಾನ ಯಾರ ಜೇಬನ್ನು ತುಂಬುತ್ತಿವೆ? ಸಣ್ಣ ಮಳೆಗಳು ಅಭಿವೃದ್ಧಿಯ ಗುಣಮಟ್ಟವನ್ನು ಸಾರ್ವಜನಿಕರ ಎದುರು ತೊಳೆದಿಡುತ್ತಿವೆ.

Untitled 24
ನಗರಕೆರೆ ಜಗದೀಶ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...