‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಗೆ ಸುವರ್ಣ ಸಂಭ್ರಮ: ಈಗಲಾದರೂ ಇಲಾಖೆ ಎಚ್ಚೆತ್ತುಕೊಳ್ಳಬಹುದೇ?

Date:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಮಸ್ಯೆಗಳು ಉದ್ಭವಿಸಲು ಕಾರಣಗಳನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ. ಒಮ್ಮೆ ಇಲಾಖೆಯ ವೆಬ್‌ಸೈಟ್‌ನತ್ತ ಕಣ್ಣಾಡಿಸಿದರೆ, ಎಲ್ಲವೂ ಅಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತವೆ. 

ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಲವು ಸಮಸ್ಯೆಗಳ ಕೂಪವಾಗಿದೆ. ಭ್ರಷ್ಟಾಚಾರ ಎಂಬ ‘ನ್ಯೂ ನಾರ್ಮಲ್’ ಸ್ಟೇಟಸ್‌ಗಷ್ಟೇ ಈ ಇಲಾಖೆ ನಿಲ್ಲುವುದಿಲ್ಲ, ಬದಲಿಗೆ ಸರ್ಕಾರದ ನೀತಿ ನಿಯಮಗಳನ್ನೇ ಗಾಳಿಗೆ ತೂರಿದೆ. ಕ್ಯಾಬಿನೆಟ್ ಡಿಸಿಷನ್‌ಗಳಿಗೂ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅಷ್ಟೇಕೆ ಕೋರ್ಟ್ ಆದೇಶಗಳನ್ನೂ ಪಾಲಿಸದೆ ತಾನು ನಡೆದದ್ದೇ ದಾರಿ ಎಂಬ ದಾರ್ಷ್ಟ್ಯದಲ್ಲಿ ಈ ಇಲಾಖೆ ಮೆರೆಯುತ್ತಿದೆ.

- Advertisement -

ಇದೆಲ್ಲ ಅಹೋರಾತ್ರಿ ಅಥವಾ ಈಗಿನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಲದಲ್ಲಿ ಆಗಿರುವುದಲ್ಲ. ಹಿಂದಿನಿಂದಲೂ, ಎಲ್ಲ ಸರ್ಕಾರಗಳಲ್ಲೂ ಈ ಇಲಾಖೆ ನಡೆದುಕೊಂಡು ಬಂದಿರುವುದೇ ಹೀಗೆ. ಅದಕ್ಕೆ ಬೇಕಾದ ಸಾಕ್ಷ್ಯಗಳು ಸಾವಿರ ಪುಟಗಳಿಗೂ ಮೀರಿ ಇವೆ (ಬೇಕೆಂದರೆ ದಾಖಲೆಗಳನ್ನು ಸರ್ಕಾರಕ್ಕೋ ಕೋರ್ಟಿಗೋ ನೀಡಲು ಹೆಸರು ಹೇಳಲಿಚ್ಛಿಸದ ಇಲಾಖೆ ಅಧಿಕಾರಿಗಳೂ ಇದ್ದಾರೆ ಮತ್ತು ಸಾರ್ವಜನಿಕರೂ ಇದ್ದಾರೆ). ಪ್ರಸ್ತುತ ಇಲಾಖೆಯನ್ನು ಮತ್ತೆ ಸರಿದಾರಿಗೆ ತಂದು ನಿಲ್ಲಿಸಬೇಕಿರುವ ಜವಾಬ್ಧಾರಿ ಲಕ್ಷ್ಮಿ ಅವರ ಮೇಲಿದೆ. ಆದರೆ, ಅವರಿಂದ ಅದು ಸಾಧ್ಯವಾಗಿಲ್ಲ ಎಂಬುದು ದುರಂತ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಇನ್ನು ಈ ಇಲಾಖೆಯ ಸಮಸ್ಯೆಗಳ ಬಗ್ಗೆ ಅಧಿಕಾರಿ ವರ್ಗ, ಸಚಿವ ಮಹೋದಯರು ಅಷ್ಟೇಕೆ ಮುಖ್ಯಮಂತ್ರಿಗಳಿಗೂ ತಿಳಿದಿದೆ. ಆದಾಗ್ಯೂ ಹಾದಿ ತಪ್ಪಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮತ್ತೆ ಸರಿದಾರಿಗೆ ತಂದು ನಿಲ್ಲಿಸಲು ಯಾರಿಗೂ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಅಂದ ಮೇಲೆ ಇಡೀ ಸರ್ಕಾರದ ಮೇಲೆ ಅದೆಂಥಾ ಒತ್ತಡ ಇರಬಹುದು ಎಂದು ಯಾರಾದರೂ ಊಹಿಸಬಹುದಾಗಿದೆ!?

ಬಡ ಮಕ್ಕಳ ಅನ್ನದ ಮೇಲೆ ಅದೆಷ್ಟು ಮಹಲುಗಳು ಎದ್ದಿರಬಹುದು! ಛೇ!

ಇಂದು ಬೆಳಿಗ್ಗೆಯಷ್ಟೇ ಈದಿನ ಡಾಟ್ ಕಾಂನ ವರದಿಯೊಂದರಲ್ಲಿ ಉತ್ತರ ಪ್ರದೇಶದಲ್ಲಿ ಅಂಗನವಾಡಿಗೆ ಕೊಂಡ ವಸ್ತುಗಳ ಬೆಲೆಯನ್ನು ನೋಡಿ ಅವಾಕ್ಕಾಗಿ ನಮ್ಮ ರಾಜ್ಯದ ಸ್ಥಿತಿಯನ್ನೂ ಯೋಚಿಸಿ ಒಂದೆರಡು ಸಾಲುಗಳನ್ನು ಬರೆಯಬೇಕೆನ್ನಿಸಿತು. ಅದಕ್ಕೆ ಕಾರಣವೂ ಇದೆ. ಕರ್ನಾಟಕ ರಾಜ್ಯದಲ್ಲಿ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ ಆರಂಭವಾಗಿ ಇದೇ ವರ್ಷ ಅಕ್ಟೋಬರ್ 2ಕ್ಕೆ 50 ವರ್ಷ ತುಂಬಲಿದೆ. ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಮಹಿಳೆಯರ, ವಿಶೇಷವಾಗಿ ಗರ್ಭಿಣಿಯರ, ಬಾಣಂತಿಯರ, ಕಿಶೋರಿಯರ, ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಅವರ ಜೀವನ ಮಟ್ಟವು ಈ ಯೋಜನೆಯಿಂದ ಎಷ್ಟರಮಟ್ಟಿಗೆ ಸುಧಾರಿಸಿದೆ ಎಂಬ ವರದಿಯೊಂದನ್ನು ಬಿಡುಗಡೆ ಮಾಡಬಹುದು.

ಐವತ್ತು ವರ್ಷಗಳ ಹಿಂದೆ ಇನ್ಫ್ಯಾಂಟ್ ಮಾರ್ಟಾಲಿಟಿ ರೇಟ್ ಎಷ್ಟಿತ್ತು, ಈಗ ಎಷ್ಟಿದೆ? ಮೆಟರ್ನಲ್ ಮಾರ್ಟಾಲಿಟಿ ಎಷ್ಟಿತ್ತು, ಈಗ ಎಷ್ಟಿದೆ? ಎಳವೆಯ ಮಕ್ಕಳು ಅಕಾಲಿಕವಾಗಿ ಸಾಯುತ್ತಿದ್ದವರೆಷ್ಟು, ಈಗ ಎಷ್ಟಿದೆ? 15 ರಿಂದ 45 ವಯೋಮಾನದ ಕಿಶೋರಿಯರು/ಮಹಿಳೆಯರ ಆರೋಗ್ಯ, ಪೌಷ್ಟಿಕತೆ ಮತ್ತು ಅವರ ಜೀವನಮಟ್ಟ ಸುಧಾರಿಸಿರುವ ಕಥೆಗಳನ್ನು ಹೇಳಬಹುದು.

ಈಗಲೂ ಕಾಲ ಮಿಂಚಿಲ್ಲ. ಸಮಸ್ಯೆಗಳು ಕಣ್ಣೆದುರಿಗೇ ಬಿದ್ದಿವೆ. ಅವುಗಳನ್ನು ಪರಿಹರಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಬರಬೇಕಿದೆ. ಅಂದಹಾಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕುರಿತು ಒಂದಿಷ್ಟು ಮಾಹಿತಿ ಓದುಗರಿಗೆ ಇರಲಿ ಎಂದು ಇಲ್ಲಿ ನೀಡುತ್ತಿದ್ದೇನೆ…

ಸಮಗ್ರ ಶಿಶು ಅಭಿವೃದ್ಧಿ ಯೋಜನೆ

ನಾವು ಶಾಲೆ ಕಲಿಯುವಾಗ ಮಾಸ್ತರುಗಳು ಅನೇಕ ಸ್ಲೋಗನ್‌ಗಳನ್ನು ಹೇಳಿಕೊಡುತ್ತಿದ್ದರು. ಅದರಲ್ಲಿ ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂಬುದೂ ಒಂದು. ಅರ್ಥಾತ್ ಮಕ್ಕಳ ಉತ್ತಮ ಭವಿಷ್ಯವೇ ದೇಶದ ಭವಿಷ್ಯ ಎಂದರ್ಥ.

ಈ ನಿಟ್ಟಿನಲ್ಲಿ 1975 ಅಕೋಬರ್ 2ರ ಗಾಂಧಿ ಜಯಂತಿಯಂದು ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ 100 ಅಂಗನವಾಡಿಗಳಲ್ಲಿ ಜಾರಿಗೊಳಿಸಲಾಯಿತು. ಅದೀಗ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಜಾರಿಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಗುರಿ ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಕಲ್ಯಾಣ. ಅಂದರೆ ಅವರ ಆರೋಗ್ಯ, ಪೌಷ್ಟಿಕತೆ ಮತ್ತು ಉತ್ತಮ ಗುಣಮಟ್ಟದ ಜೀವನ. ಅದಕ್ಕಾಗಿ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಆ ಮೂಲಕ ಮಕ್ಕಳ ಆರೋಗ್ಯ ವೃದ್ಧಿಗೆ ನೆರವಾಗುವುದಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಬದ್ಧತೆಯಾಗಿದೆ. ಇದರಿಂದ ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿದಂತಾಗುತ್ತದೆ. ಜೊತೆಗೆ ಎಳವೆಯಲ್ಲಿ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡಿದಂತಾಗುತ್ತದೆ. ಮಕ್ಕಳು ಶಾಲೆಗೆ ಬರುವುದನ್ನು ಪ್ರೇರೇಪಿಸಿದಂತೆಯೂ ಆಗುತ್ತದೆ.

ಇದನ್ನು ಓದಿದ್ದೀರಾ?: ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?

ಇಷ್ಟಲ್ಲದೆ ತಾಯಂದಿರಿಗೆ ತಮ್ಮ ದೈಹಿಕ ಆರೋಗ್ಯದ ಜೊತೆಗೆ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಮಾಹಿತಿ ಶಿಕ್ಷಣ ಒದಗಿಸುವುದು ಕೂಡ ಈ ಯೋಜನೆಯ ಧ್ಯೇಯಗಳಲ್ಲೊಂದು. ಇದೆಲ್ಲವನ್ನೂ ಆಗುಮಾಡಲು ಸ್ಥಳೀಯ ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶ್ರಮಿಸುತ್ತಿವೆ. ಉದಾಹರಣೆಗೆ:

  • ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು 6 ವರ್ಷದ ಒಳಗಿನ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಪೂರಕ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ.
  • ಗರ್ಭಿಣಿಯರು ಮತ್ತು 6 ವರ್ಷದ ಒಳಗಿನ ಮಕ್ಕಳಿಗೆ ಕಿರಿಯ ಆರೋಗ್ಯ ಸಹಾಯಕಿಯರಿಂದ ಚುಚ್ಚುಮದ್ದು ನೀಡಲಾಗುತ್ತಿದೆ. (ಇಮ್ಯುನೈಜೇಶನ್)
  • 6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ವೈದ್ಯಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಆರೋಗ್ಯ ತಪಾಸಣೆ ಸೇವಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
  • 6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿ, ಬಾಣಂತಿ ಹಾಗೂ ಕಿಶೋರಿಯರಿಗೆ ಸ್ಥಳೀಯ ವೈದ್ಯಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಅಗತ್ಯ ಮಾಹಿತಿ ಸಂವಹನ ಶಿಕ್ಷಣ ಒದಗಿಸಲಾಗುತ್ತಿದೆ.
  • ಇನ್ನು ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿ ಕಾರ್ಯಕರ್ತೆಯರು ಒದಗಿಸುತ್ತಿದ್ದಾರೆ.
  • 15 ರಿಂದ 45 ವಯಸ್ಸಿನ ಮಹಿಳೆಯರಿಗೆ ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣವನ್ನು ಅಂಗನವಾಡಿ ಕಾರ್ಯಕರ್ತೆ, ಕಿರಿಯ ಆರೋಗ್ಯ ಸಹಾಯಕಿ, ಎ.ಎನ್.ಎಂ, ಆಹಾರ ಮತ್ತು ಪೌಷ್ಟಿಕತೆ ಮಂಡಳಿಯ ಸಿಬ್ಬಂದಿ ನೀಡುತ್ತಲಿದ್ದಾರೆ.

ಒಟ್ಟಾರೆ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲ 225 ತಾಲೂಕುಗಳಲ್ಲೂ ಒಟ್ಟು 69,919 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಈ ಇಲಾಖೆಯಲ್ಲಿ ಸಮಸ್ಯೆಗಳು ಉದ್ಭವಿಸಲು ಕಾರಣಗಳನ್ನು ಹುಡುಕಿಕೊಂಡು ನೀವು ಎಲ್ಲಿಗೂ ಹೋಗಬೇಕಿಲ್ಲ. ಒಮ್ಮೆ ಇಲಾಖೆಯ ವೆಬ್‌ಸೈಟ್‌ನತ್ತ ಕಣ್ಣಾಡಿಸಿ. ಸಮಸ್ಯೆಯ ಮೂಲ ಇರುವುದೇ ಇಲಾಖೆಗೆ ಅಗತ್ಯ ಸಾಮಗ್ರಿಗಳು ಹಾಗೂ ಆಹಾರ ಸರಬರಾಜು ಮಾಡುವ ಸಪ್ಲೈಯರ್ಸ್ ಮತ್ತು ಇಲಾಖೆಯ ಅಧಿಕಾರಿ ವರ್ಗ ಹಾಗೂ ಬಂದು ಹೋಗಿರುವ ಸಚಿವರ ಕಚೇರಿಗಳಲ್ಲಿ…

ಇಲಾಖೆಯ ವೆಬ್‌ಸೈಟ್‌ ಹೇಳುವಂತೆ 

ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಸಮವಸ್ತ್ರ: ಕೇಂದ್ರ ಸರ್ಕಾರದ ಪತ್ರದ ಸಂ: 11-36/2016 ಸಿಡಿ-1 ದಿನಾಂಕ: 23-11-2017ರಂತೆ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ 800 ರೂ. ಮೊತ್ತದ ಒಂದು ವರ್ಷಕ್ಕೆ 2 ಸೀರೆಗಳನ್ನು ಒದಗಿಸಬೇಕಾಗಿರುತ್ತದೆ.

ಶಾಲಾ ಪೂರ್ವ ಶಿಕ್ಷಣ ಕಿಟ್: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಡಳಿತ ವೆಚ್ಚದಡಿ ಪ್ರತಿ ಅಂಗನವಾಡಿ ಕೇಂದ್ರ ಹಾಗು ಮಿನಿ ಅಂಗನವಾಡಿ ಕೇಂದ್ರಕ್ಕೆ ವಾರ್ಷಿಕ 5000 ರೂ.ಗಳ ಅನುದಾನವನ್ನು ತರಬೇತಿ ಸೇರಿದಂತೆ ಶಾಲಾ ಪೂರ್ವ ಶಿಕ್ಷಣ ಕಿಟ್‍ಗಾಗಿ ನಿಗದಿಪಡಿಸಲಾಗಿದೆ. ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟ ಹಾಗೂ ಏಕರೂಪತೆ ತರುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ, ನುರಿತ ಶಿಕ್ಷಣ ತಜ್ಞರ ಹಾಗೂ ವಿವಿಧ ಆಯ್ದ ಐಸಿಡಿಎಸ್ ಕರ್ಮಚಾರಿಗಳ ಕಾರ್ಯಾಗಾರ ನಡೆಸಿ, ಮಾದರಿ ಕಿಟ್ ಅಭಿವೃದ್ಧಿಪಡಿಸಲಾಗಿದೆ.

ಮೆಡಿಸಿನ್ ಕಿಟ್: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಡಳಿತ ವೆಚ್ಚದಡಿ 62,580 ಅಂಗನವಾಡಿ ಕೇಂದ್ರಗಳಿಗೆ ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಅಂಗನವಾಡಿ ಕೇಂದ್ರಕ್ಕೆ 1,500 ರೂ.ಗಳಂತೆ ಹಾಗೂ ಪ್ರತಿ ಮಿನಿ ಅಂಗನವಾಡಿ ಕೇಂದ್ರಕ್ಕೆ 750 ರೂ.ನಂತೆ ಮೆಡಿಸಿನ್ ಕಿಟ್‍ಗಳನ್ನು ಒದಗಿಸಲಾಗುತ್ತಿದೆ.

ಪೂರಕ ಪೌಷ್ಟಿಕ ಆಹಾರ: ಪೂರಕ ಪೌಷ್ಟಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ 50% ಕೇಂದ್ರ ಸರ್ಕಾರವು ಮರುಪಾವತಿಸುತ್ತದೆ. ಫಲಾನುಭವಿಗಳು ಪ್ರತಿದಿನ ಮನೆಯಲ್ಲಿ ಸೇವಿಸುವ ಆಹಾರಕ್ಕೆ ಪೂರಕವಾಗಿ ಪರಿಷ್ಕೃತ ಮಾರ್ಗಸೂಚಿಯಂತೆ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ 500 ಕ್ಯಾಲೊರಿಗಳನ್ನು, 12-15 ಗ್ರಾಂ ಪ್ರೋಟಿನ್, ಗರ್ಭಿಣಿ/ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ 600 ಕ್ಯಾಲೊರಿಗಳನ್ನು ಮತ್ತು 18-20 ಗ್ರಾಂ ಪ್ರೋಟಿನ್, ಅಲ್ಲದೆ ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೊರಿಗಳನ್ನು ಮತ್ತು 20-25 ಗ್ರಾಂ ಪ್ರೋಟಿನ್ ನೀಡುವ ಉದ್ದೇಶದಿಂದ ಯೋಜನೆಯಡಿ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಯೋಜನೆಯ ಮಾರ್ಗಸೂಚಿಯಂತೆ ವರ್ಷದಲ್ಲಿ 300 ದಿನಗಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ದಿನಾಂಕ: 23-11-2017ರ ಮಾರ್ಗಸೂಚಿಯಲ್ಲಿ ಸಾಮಾನ್ಯ ಮಕ್ಕಳಿಗೆ ಪ್ರತಿದಿನ 8 ರೂ.ನಂತೆ , ಗರ್ಭಿಣಿ/ಬಾಣಂತಿ/ಪ್ರಾಯಪೂರ್ವ ಬಾಲಕಿಯರಿಗೆ ಘಟಕ ವೆಚ್ಚ 9.50 ರೂ.ನಂತೆ ಮತ್ತು ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ 12 ರೂ. ಘಟಕ ವೆಚ್ಚವನ್ನು ಪರಿಷ್ಕರಿಸಲಾಗಿದೆ. ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ಇಲಾಖೆಯ ಸಹಾಯದೊಂದಿಗೆ ಕಾರ್ಯನಿರತವಾಗಿದ್ದು, ಇದರಲ್ಲಿ 22-32 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರುಗಳು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು ವಿಧವೆಯರು, ವಿಕಲಚೇತನರು, ಪರಿತ್ಯಕ್ತ ಮಹಿಳೆಯರು, ಫಲಾನುಭವಿಗಳ ತಾಯಂದಿರು, ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಆಗಿರುತ್ತಾರೆ. ಈ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನ ಹಾಗೂ ತರಬೇತಿ ಕೇಂದ್ರಗಳು ತಿನ್ನಲು ಸಿದ್ಧಪಡಿಸಿದ ಆಹಾರ/ಬೇಯಿಸಲು ಸಿದ್ಧವಿರುವ ಆಹಾರ ಪದಾರ್ಥಗಳನ್ನು ವಾರದ 6 ದಿನಗಳು ತಾಲೂಕು ಮಟ್ಟದಲ್ಲಿ ಕಾರ್ಯನಿರತ MSPTC ಮಹಿಳಾ ಪೂರಕ ಪೌಷ್ಟಿಕ ಕೇಂದ್ರಗಳ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಮಕ್ಕಳು 3

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಮೆನು ನಿಗದಿಪಡಿಸಲಾಗುವುದು, ಉದಾ:

  • 6 ತಿಂಗಳಿನಿಂದ 3 ವರ್ಷ- ಗೋಧಿ ರವೆ, ಅಕ್ಕಿ, ಹೆಸರುಕಾಳು, ನ್ಯೂಟ್ರಿಮಿಕ್ಸ್ ಪುಡಿ
  • 3-6 ವರ್ಷ- ಚಿತ್ರನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಅನ್ನ ಸಾಂಬರ್
  • ಪ್ರಾಯಪೂರ್ವ ಬಾಲಕಿಯರು- ಅಕ್ಕಿ, ಹೆಸರುಕಾಳು, ಗೋಧಿ
  • ಕ್ಷೀರ ಭಾಗ್ಯ ಯೋಜನೆಯಡಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ವಾರದಲ್ಲಿ 5 ದಿನ 150 ಮಿ.ಲಿ ಹಾಲು ನೀಡಲಾಗುತ್ತಿದೆ (15ಗ್ರಾಂ ಹಾಲಿನಪುಡಿ, 10 ಗ್ರಾಂ ಸಕ್ಕರೆ)
  • 3-6 ವರ್ಷದ ಎಲ್ಲ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.
  • 6 ತಿಂಗಳಿಂದ 3 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ, 3-6 ವರ್ಷದ ತೀವ್ರ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ.
  • ಐದು ಹಿಂದುಳಿದ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 6 ತಿಂಗಳಿಂದ 3 ವರ್ಷದ ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 3-6 ವರ್ಷದ ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ವಾರದ 6 ದಿನ ಹಾಲು ನೀಡಲಾಗುತ್ತಿದೆ.

ಇಷ್ಟೆಲ್ಲ ವಹಿವಾಟಿರುವ ಈ ಇಲಾಖೆಯಲ್ಲಿ ಅದೆಷ್ಟು ಸಾವಿರ ಕೋಟಿ ರೂ.ಗಳ ವಹಿವಾಟು ನಡೆಯಬಹುದು ಊಹಿಸಿಕೊಳ್ಳಿ. ಆ ವಹಿವಾಟಿನ ಲಾಭಕ್ಕಾಗಿ ಸೆಣಸುವ ವ್ಯಾಪಾರಸ್ಥರು, ದಲ್ಲಾಳಿಗಳು ಮುಂತಾಗಿ ಎಲ್ಲರ ಕೈಗಳು ಉದ್ದವಿರುವುದರಿಂದಲೇ ಸಮಸ್ಯೆ ಕಗ್ಗಂಟಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವದ ಈ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಕೆ. ಎನ್ ನಾಗೇಶ್
ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;ಸತ್ಯಶುದ್ಧವಿಲ್ಲದುದು ಕಾಯಕವಲ್ಲ;ಆಸೆಯೆಂಬುದು ಭವದ ಬೀಜ;ನಿರಾಸೆಯೆಂಬುದು ನಿತ್ಯಮುಕ್ತಿ.ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ ವಚನ...

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...

ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?...

ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ...