ಹೆಲಿಕಾಪ್ಟರ್, ವಿಮಾನಕ್ಕಾಗಿ 58 ಕೋಟಿ ರೂ. ಖರ್ಚು ಮಾಡಿದ ಗುಜರಾತ್ ಸರ್ಕಾರ

Date:

ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ನಿರ್ವಹಣೆ, ಗುತ್ತಿಗೆ, ಇಂಧನ ಮತ್ತು ಸಿಬ್ಬಂದಿಗಾಗಿ ಗುಜರಾತ್‌ ಸರ್ಕಾರ 58 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಸರ್ಕಾರವೇ ಹೇಳಿಕೊಂಡಿದೆ.

ಗುಜರಾತ್ ವಿಧಾನಸಭೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗಾಗಿ ಗುಜರಾತ್ ಸರ್ಕಾರವು ನಿರ್ವಹಣೆ, ಗುತ್ತಿಗೆ, ಇಂಧನ, ಪೈಲಟ್‌ಗಳು ಮತ್ತು ಇತರ ಸಿಬ್ಬಂದಿಗೆ ಮಾಡಿದ ವೆಚ್ಚದ ಬಗ್ಗೆ ಕಾಂಗ್ರೆಸ್ ಶಾಸಕ ಅರವಿಂದ್ ಲಡಾನಿ ಪ್ರಶ್ನೆ ಕೇಳಿದ್ದರು.

ಅವರ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, “2021ರ ಜನವರಿ 1ರಿಂದ 2022ರ ಡಿಸೆಂಬರ್ 31ರವರೆಗೆ ನಿರ್ವಹಣೆ, ಗುತ್ತಿಗೆ, ಇಂಧನ, ಪೈಲಟ್‌ಗಳು ಮತ್ತು ಇತರ ಸಿಬ್ಬಂದಿಗಳಿಗಾಗಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ 34,26,65,295 ರೂ. ವೆಚ್ಚ ಮಾಡಲಾಗಿದೆ. ಹೆಚ್ಚುವರಿಯಾಗಿ, 2022ರ ಜನವರಿ 1ರಿಂದ 2023ರ ಡಿಸೆಂಬರ್ 31ರವರೆಗೆ 24,24,55,209 ರೂ. ವ್ಯಯಿಸಲಾಗಿದೆ. ಕೇವಲ ಎರಡು ವರ್ಷಗಳಲ್ಲಿ ಒಟ್ಟು 58,51,20,504 ರೂ. ಖರ್ಚು ಮಾಡಲಾಗಿದೆ” ಎಂದು ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದಾಗ್ಯೂ, ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ನಿರ್ವಹಣೆಗೆ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರ ಕಂಪನಿಯ ಗುರುತನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸಿದೆ. ಕಂಪನಿಯ ಗುರುತಿನ ಮಾಹಿತಿಯು ಉನ್ನತ ಮಟ್ಟದ ರಾಜ್ಯ ಭದ್ರತೆಗೆ ಸಂಬಂಧಿಸಿದೆ ಎಂದು ಉಲ್ಲೇಖಿಸಿದೆ.

ಸರ್ಕಾರಿ ವಿಮಾನಗಳಲ್ಲಿ ಗಮನಾರ್ಹ ಹೂಡಿಕೆಯ ಹೊರತಾಗಿಯೂ, ಸಾರ್ವಜನಿಕರಿಗಾಗಿ ಪ್ರಾರಂಭವಾದ ಭಾರತದ ಮೊದಲ ಸೀಪ್ಲೇನ್ ಸೇವೆಯ ಭವಿಷ್ಯವು ಅತಂತ್ರವಾಗಿಯೇ ಉಳಿದಿದೆ.

2024ರ ಫೆಬ್ರವರಿ 13ರಂದು, ಗುಜರಾತ್ ಸರ್ಕಾರವು ಅಹಮದಾಬಾದ್‌ನ ಸಬರಮತಿ ಮತ್ತು ನರ್ಮದಾ ಜಿಲ್ಲೆಯ ಏಕತಾ ಪ್ರತಿಮೆ ನಡುವಿನ ಸೀಪ್ಲೇನ್ ಸೇವೆಯನ್ನು ಪುನರಾರಂಭಿಸಲು ಕಳೆದ ವರ್ಷ ಮೇನಲ್ಲಿ ಟೆಂಟರ್‌ ಕರೆದಿತ್ತು. ಆದರೆ, ಯಾವುದೇ ಸಂಸ್ಥೆ ಸೇವೆ ಒದಗಿಸಲು ಆಸಕ್ತಿ ತೋರಿಸಿಲ್ಲ ಎಂದು ಹೇಳಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2020ರ ಅಕ್ಟೋಬರ್‌ನಲ್ಲಿ ಸೀಪ್ಲೇನ್ ಸೇವೆಯನ್ನು ಉದ್ವಾಟಿಸಿದ್ದರು. ಆದರೆ, 2021ರ ಏಪ್ರಿಲ್‌ನಲ್ಲಿ ಸೇವೆ ಸ್ಥಗಿತಗೊಂಡಿತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ; ರಕ್ತದಾನದ ಮೂಲಕವೂ ಜೀವ ಉಳಿಸಬಹುದು: ಸಚಿವ ಗುಂಡೂರಾವ್

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಇಂದು ವಿಧಾನ ಸೌಧದಿಂದ ಕಂಠೀರವ...

ದುರಹಂಕಾರಿಗಳಿಗೆ ಉತ್ತರ ಕೊಡಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

ಎನ್​ಡಿಎ ಸರ್ಕಾರದ ಪ್ರಧಾನಿ ಮೋದಿ ಸಂಪುಟದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕೆ...

ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ...

ಪೋಕ್ಸೋ ಪ್ರಕರಣ | ಬಿಎಸ್‌ವೈ ಬಂಧಿಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು...