ಚುನಾವಣೆ 2023 | ಮಂಡ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ: ಡಿ ಕೆ ಶಿವಕುಮಾರ್

Date:

  • ಜೆಡಿಎಸ್‌ ಶಾಸಕರು ರೈತರ ಪರ ಧ್ವನಿ ಎತ್ತಿಲ್ಲ
  • ಕಾಂಗ್ರೆಸ್‌ ಗ್ಯಾರಂಟಿಗಳನ್ನು ಉಲ್ಲೇಖಿಸಿದ ಡಿಕೆಶಿ

ಮುಂಬರುವ ಚುನಾವಣೆಯಲ್ಲಿ ಮಂಡ್ಯನ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀರಂಗಪಟ್ಟಣದ ಪ್ರಜಾಧ್ವನಿ ಕಾರ್ಯಕ್ರಮ ರೋಡ್ ಶೋ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, “ಈ ಹಿಂದೆ ಮಂಡ್ಯದಲ್ಲಿ ಕಾಂಗ್ರೆಸ್ 7ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಮತದಾರರು 7ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದರು. ಈ 7 ಶಾಸಕರನ್ನು ಗೆಲ್ಲಿಸಿ ಮಂಡ್ಯದಲ್ಲಿ ಯಾವ ಬದಲಾವಣೆ ಆಗಿದೆ?” ಎಂದು ಪ್ರಶ್ನಿಸಿದ್ದಾರೆ.

“ಈ ಭಾಗದಲ್ಲಿ ಅನೇಕ ವರ್ತಕರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆದ ನಂತರ ಈ ಭಾಗದ ವರ್ತಕರಿಗೆ ನಷ್ಟವಾಗಿದೆ. ಇದಕ್ಕಾಗಿ ಈ 7 ಶಾಸಕರು ನಮ್ಮ ಜನರಿಗೆ ಅನ್ಯಾಯ ಆಗಿದೆ ಎಂದು ಧ್ವನಿ ಎತ್ತಿದ್ದಾರಾ? ಇಲ್ಲ. ಇಂದು ಅವರ ವ್ಯಾಪಾರ ವಹಿವಾಟು ನಾಶವಾಗಿದೆ” ಎಂದು ಜೆಡಿಎಸ್‌ನ ಏಳು ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

ಜೆಡಿಎಸ್‌ ಶಾಸಕರು ರೈತರ ಪರವಾಗಿ ಧ್ವನಿ ಎತ್ತಲಿಲ್ಲ. ಇಂದು ಜನರ ಆದಾಯ ಪಾತಾಳಕ್ಕೆ ಕುಸಿದಿದ್ದು, ಖರ್ಚು ಮಾತ್ರ ಗಗನಕ್ಕೇರಿದೆ ಎಂದು ಡಿ ಕೆ ಶಿವಕುಮಾರ್ ಬೆಲೆ ಏರಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಜನರನ್ನು ಆರ್ಥಿಕವಾಗಿ ಸದೃಢ ಮಾಡಲು ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿರುವುದಾಗಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆಧಾರ್‌ – ಪ್ಯಾನ್‌ ಕಾರ್ಡ್‌ ಜೋಡಣೆ | ಇದು ಹಗಲು ದರೋಡೆ‌ ಅಲ್ಲದೆ ಮತ್ತೇನು: ಜೆಡಿಎಸ್ ಪ್ರಶ್ನೆ

“ 40 ಸಾವಿರ ಕೋಟಿಯಾಗಲಿ ಅಥವಾ 50 ಸಾವಿರ ಕೋಟಿಯಾಗಲಿ. ನಮಗೆ ಭ್ರಷ್ಟಾಚಾರ ತಡೆದು, ಹೇಗೆ ಹಣ ತಂದು ಅದನ್ನು ಪ್ರತಿ ಮನೆಗೆ ಹೇಗೆ ತಲುಪಿಸಬೇಕು ಎಂದು ಗೊತ್ತಿದೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಗ್ಯಾರಂಟಿ ಉಲ್ಲೇಖ

“ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆ ಮೂಲಕ ಹಳ್ಳಿ ಜನರು ಯಾರೂ ಕೂಡ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಇನ್ನು ಬೆಲೆ ಏರಿಕೆಯಿಂದ ಮಹಿಳೆಯರು ಮನೆ ವೆಚ್ಚ ಸರಿದೂಗಿಸಲು ಪರದಾಡುತ್ತಿದ್ದಾರೆ. ಇದಕ್ಕಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು” ಎಂದು ಡಿ ಕೆ ಶಿವಕುಮಾರ್ ಸ್ಥಳೀಯರ ಗಮನ ಸೆಳೆದರು.

“ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಲು ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ಹಾಗೂ ಡಿಪ್ಲೊಮಾ ಮಾಡಿರುವವರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಕುರಿತ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರತಿ ಮನೆಗೆ ತಲುಪಿಸಬೇಕು” ಎಂದು ಕರೆ ನೀಡಿದ್ದಾರೆ.

“ನಾನು ನಿಮ್ಮ ಮಗ. ನಾವು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಸ್‌ಗೆ ಬೆಂಬಲ ನೀಡಿ ಅಧಿಕಾರ ಕೊಟ್ಟೆವು. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಾನು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದೆ. ನೀವು ಅವಕಾಶ ಕೊಟ್ಟಿ ಆಗಿದೆ. ನನಗೂ ಒಂದು ಅವಕಾಶ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ನನ್ನ ಸಿದ್ದರಾಮಯ್ಯ ಮುಖ ನೋಡಿ ಮತ ಹಾಕಿ

“ಇಲ್ಲಿ ಯಾರೇ ಚುನಾವಣೆಗೆ ನಿಂತರೂ ನಾನು ಮತ್ತು ಸಿದ್ದರಾಮಯ್ಯ ಅವರು ಅಭ್ಯರ್ಥಿ ಎಂದು ಪಕ್ಷಕ್ಕೆ ಮತಹಾಕಿ. ಇಲ್ಲಿರುವ ನೀವುಗಳು ಜೆಡಿಎಸ್ ಮತದಾರರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಹೇಳಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ” ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಂಚಣಿದಾರರ ಮನೆ ಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣಪತ್ರ ಸಲ್ಲಿಸಲು ವ್ಯವಸ್ಥೆ

ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸುವ...

ತಹಶೀಲ್ದಾರ್ ಅಜಿತ್ ಕುಮಾರ್ ರೈ ಅನ್ನು ನ್ಯಾಯಾಲಯ ವಿಚಾರಣೆಗೆ ಒಳಪಡಿಸಲು ಆದೇಶ

ಅರಣ್ಯ ಜಮೀನನ್ನು ಕಂದಾಯ ಜಮೀನನ್ನಾಗಿ ಪರಿವರ್ತಿಸಿರುವ ಆರೋಪ ಅನುಕಂಪದಲ್ಲಿ ಸರ್ಕಾರಿ...

ಬೆಂಗಳೂರು ಟೆಕ್ ಸಮ್ಮಿಟ್ 2023 | ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡು ಬಿಡುಗಡೆ

ಬೆಂಗಳೂರು ಅರಮನೆಯಲ್ಲಿ 'ಬ್ರೇಕಿಂಗ್ ದಿ ಬೌಂಡರೀಸ್' ಘೋಷವಾಕ್ಯದ 26ನೇ ‘ಬೆಂಗಳೂರು ತಂತ್ರಜ್ಞಾನ...

ಕಾಗಿನೆಲೆ ಪೀಠ ಒಂದು ಜಾತಿಯ ನೆಲೆ ಅಲ್ಲ, ಎಲ್ಲ ಶೋಷಿತ ಜಾತಿ-ಸಮುದಾಯಗಳ ನೆಲೆ: ಸಿದ್ದರಾಮಯ್ಯ

ಕನಕದಾಸರು ಜಾತಿ‌, ಅನಕ್ಷರತೆಯ ಅಸಮಾನತೆ ಹೋಗಲಾಡಿಸಲು ಹೋರಾಡಿದರು ಯಾವ ಧರ್ಮವೂ...