ʼರೆಸಾರ್ಟ್ ಲಾಬಿʼಗೆ ಮಣಿದ ಸರ್ಕಾರದಿಂದ ಬಂಡೀಪುರ-ನಾಗರಹೊಳೆ ಸಫಾರಿ ಪುನರಾರಂಭ: ರೈತರ ಆರೋಪ

Date:

ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಗ್ರಾಮಗಳ ಅಂಚಿನಲ್ಲಿ ಬಲವಾದ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸುವುದು ಅತ್ಯಂತ ಪರಿಣಾಮಕಾರಿಯಾಗಿರುವುದರಿಂದ ಎಲ್ಲ ಕಡೆ ಈ ವ್ಯವಸ್ಥೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಪುನರಾರಂಭವಾಗಿದ್ದು, ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಮೈಸೂರು ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ, ʼರೆಸಾರ್ಟ್ ಲಾಬಿʼಗೆ ಮಣಿದ ಸರ್ಕಾರ ಸ್ಥಳೀಯರ ಹಿತವನ್ನು ಲೆಕ್ಕಿಸದೆ ಸಫಾರಿ ನಡೆಸಲು ನಿರ್ಧಾರ ಕೈಗೊಂಡಿದೆ ಎಂಬ ಆರೋಪ ವ್ಯಕ್ತವಾಗಿದೆ.

- Advertisement -

ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ 2025ರ ನವೆಂಬರ್ 7ರಿಂದ ವಿಶ್ವಪ್ರಸಿದ್ಧ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸಫಾರಿಯನ್ನು ನಿಷೇಧಿಸಲಾಗಿತ್ತು. ಪ್ರವಾಸಿಗರ ಹಿತದೃಷ್ಟಿಯಿಂದ ಮತ್ತು ಇಲಾಖೆಯ ಆದಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಇದೀಗ ಫೆಬ್ರವರಿ 21ರಿಂದ ಸಫಾರಿ ಪುನರಾರಂಭವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ಕಾಡಂಚಿನ ಗ್ರಾಮದಲ್ಲಿನ ಜನರು ಕೆಲವು ತಿಂಗಳ ಹಿಂದೆ ಮನೆಯಿಂದ ಆಚೆ ಬರಲು ಹೆದರುತ್ತಿದ್ದರು. ಕಾರಣ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿಗೆ ಲಗ್ಗೆ ಇಟ್ಟಿದ್ದವು. ಅಷ್ಟೇ ಅಲ್ಲದೆ ಹುಲಿಗಳು ಗ್ರಾಮದ ಸುತ್ತ ಓಡಾಡುತ್ತಿದ್ದವು, ಜನ ಜಾನುವಾರುಗಳ ಮೇಲೆ ದಾಳಿ ಮಾಡಿ ದೊಡ್ಡ ಅನಾಹುತ ಉಂಟುಮಾಡಿದ್ದವು. ಇದೆಲ್ಲಕ್ಕೂ ಕಾರಣವಾಗಿದ್ದು, ಅಕ್ರಮವಾಗಿ ನಡೆಸುತ್ತಿದ್ದ ರೆಸಾರ್ಟ್‌ಗಳು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಸಫಾರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಸರ್ಕಾರ ಈಗ ಮತ್ತೆ ಆರಂಭ ಮಾಡಿರುವುದಕ್ಕೆ ಸಾಮಾನ್ಯ ಜನ, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸಫಾರಿ ನಡೆದರೆ, ಕಾಡಿನಲ್ಲಿ ಜೆಸಿಬಿ ಹಾಗೂ ಇನ್ನಿತರೆ ವಾಹನ ಸಂಚಾರ ಮಾಡುವುದರಿಂದಾಗಿ ಹೆಚ್ಚುವ ಶಬ್ದದಿಂದ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ. ಸಾಕು ಪ್ರಾಣಿಗಳು ಮತ್ತು ಜನಸಾಮಾನ್ಯರ ಮೇಲೆ ದಾಳಿ ಮಾಡುತ್ತವೆ. ಸಫಾರಿ ನಿಷೇಧಕ್ಕೆ ಮೊದಲು ಇಂತಹ ದಾಳಿಗಳು ನಡೆದು ಹಲವು ಜನರು ಬಲಿಯಾಗಿದ್ದರು, ಸಾಕು ಪ್ರಾಣಿಗಳೂ ಕೂಡ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗಿದ್ದವು. ಇದಾದ ನಂತರ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳನ್ನು ಸೆರೆಹಿಡಿಯುವ ಕೆಲಸಕ್ಕೆ ಕೈ ಹಾಕಿದ್ದರು. ಸದ್ಯಕ್ಕೆ ಈಗ ಹುಲಿಗಳ ಸಮಸ್ಯೆ ಇರಲಿಲ್ಲ. ಆದರೆ ಈಗ ಮತ್ತೆ ಸಫಾರಿ ಆರಂಭವಾಗಿರುವುದರಿಂದ ಮತ್ತೆ ಅದೇ ಸಮಸ್ಯೆ ಕಾಡಬಹುದು” ಎಂಬುದು ಆತಂಕವಾಗಿದೆ.

ಸರ್ಕಾರ ಕೆಲವು ದಿನಗಳ ಹಿಂದೆ ಹಂತ ಹಂತವಾಗಿ ಸಫಾರಿ ಆರಂಭ ಮಾಡಲು ಸೂಚನೆ (Instructions to start the safari) ನೀಡಿದ್ದು, ಇದರಿಂದ ಬಂಡೀಪುರ ಹಾಗೂ ನಾಗರಹೊಳೆಯ(Bandipur and Nagarhole) ಸ್ಥಳೀಯ ನಿವಾಸಿಗಳು ದೊಡ್ಡ ಮಟ್ಟದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸಫಾರಿ ಆರಂಭ ಮಾಡಬಾರದು ಹಾಗೂ ಇಲ್ಲಿರುವ ಸಾಕಷ್ಟು ರೆಸಾರ್ಟ್‌ಗಳು ಅಕ್ರಮ ಎಂದು ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಆಗ್ರಹ ಮಾಡುತ್ತಿದ್ದರೆ, ಅತ್ತ ರೆಸಾರ್ಟ್‌ ನಂಬಿಕೊಂಡು ಜೀವನ ಮಾಡುತ್ತಿದ್ದ ಆದಿವಾಸಿಗಳು, ರೆಸಾರ್ಟ್‌ ಮಾಲೀಕರು ಹಾಗೂ ಇನ್ನಿತರರು ಇದನ್ನು ಸ್ವಾಗತ ಮಾಡಿದ್ದಾರೆ. ಇದೇ ಕಾರಣಕ್ಕೆ ಕೆಲವು ದಿನಗಳಿಂದ ಈ ಭಾಗದಲ್ಲಿ ದೊಡ್ಡ ನಾಟಕೀಯ ಬೆಳವಣಿಗೆ ನಡೆಯುತ್ತಿದೆ.

ಸಫಾರಿಯನ್ನು ಪುನಃ ತೆರೆಯುವುದನ್ನು ವಿರೋಧಿಸಿ ರೈತರು ಪ್ರತಿಭಟನೆಗೆ ಮುಂದಾದಾಗ ರೆಸಾರ್ಟ್ ಮಾಲೀಕರ ಬೆಂಬಲಿಗರು ಸಫಾರಿಯನ್ನು ಮತ್ತೆ ತೆರೆಯುವಂತೆ ಒತ್ತಾಯಿಸುವ ಫಲಕಗಳನ್ನು ಹಿಡಿದುಕೊಂಡು, ರೆಸಾರ್ಟ್ ಲಾಬಿ ರೈತರ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಿ ಅವಾಂತರ ಸೃಷ್ಟಿಸಿತ್ತು. ಇದರಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಮಟ್ಟದ ವಾಗ್ವಾದ, ತಳ್ಳಾಟ ಮತ್ತು ಜಗಳಗಳಿಗೆ ಕಾರಣವಾಯಿತು.

ಉದ್ವಿಗ್ನತೆ ಹೆಚ್ಚುತ್ತಿದ್ದುದ್ದನ್ನು ಅರಿತ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ 20 ಕ್ಕೂ ಹೆಚ್ಚು ರೆಸಾರ್ಟ್ ಬೆಂಬಲಿಗರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಅವರನ್ನು ತೆರಕಣಾಂಬಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅದೇ ಸಮಯದಲ್ಲಿ, ಪೊಲೀಸರು ಪ್ರತಿಭಟನಾನಿರತ ರೈತರನ್ನು ಸ್ಥಳದಿಂದ ತೆರವುಗೊಳಿಸಲು ಪ್ರಯತ್ನಿಸಿದರು. ಇದರ ಪರಿಣಾಮವಾಗಿ ರೈತರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಹಾಗೂ ಸಣ್ಣಪುಟ್ಟ ದೈಹಿಕ ಘರ್ಷಣೆಗಳು ನಡೆದವು. ಹಾಗಾಗಿ ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಂಧಿಸಿ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಬೇಗೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಬಂಡೀಪುರ ಪ್ರದೇಶದ ಮೇಲುಕಮನಹಳ್ಳಿ ಬಳಿ ಇಡೀ ಕಾರ್ಯಾಚರಣೆ ನಡೆಯಿತು.

ರೈತ ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಂಡೀಪುರ-ನಾಗರಹೊಳೆ ಬೆಲ್ಟ್‌ನಲ್ಲಿ ಕಳೆದ 2025ರ ಅಕ್ಟೋಬರ್–ನವೆಂಬರ್ ವೇಳೆ ಹುಲಿ ದಾಳಿಯಿಂದ 3 ಸಾವುಗಳು ಸಂಭವಿಸಿವೆ. ಅದೂ ಕೂಡ ಒಂದು ತಿಂಗಳೊಳಗೆ ಪ್ರತ್ಯೇಕ ಘಟನೆಗಳಲ್ಲಿ ಮೂವರು ರೈತರು ಸಾವನ್ನಪ್ಪಿದ್ದರು. ಈ ಭೀಕರ ದಾಳಿ ಜನರನ್ನು ಮನೆಯಿಂದ ಆಚೆ ಬಾರದಂತೆ ಮಾಡಿತ್ತು. ಬಂಡೀಪುರ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ 56 ವರ್ಷದ ಅರಣ್ಯ ವೀಕ್ಷಕರೊಬ್ಬರು ಕರ್ತವ್ಯದಲ್ಲಿದ್ದಾಗಲೇ ದಾಳಿಗೆ ಒಳಗಾಗಿದ್ದರು. ಇಷ್ಟು ಮಾತ್ರವಲ್ಲದೆ ಸಾಕಷ್ಟು ಜಾನುವಾರುಗಳು ಬಲಿಯಾಗಿವೆ” ಎಂದು ಹೇಳಿದರು.

ಸಫಾರಿ ವಿರೋಧಿಸಿ ಪ್ರತಿಭಟನೆ

“ಈ ಸರ್ಕಾರಕ್ಕೆ ʼನಮ್ಮ ಜೀವಕ್ಕಿಂತ ಆದಾಯವೇ ಮುಖ್ಯವಾಯಿತೇ? ಸಫಾರಿ ವಾಹನಗಳ ಸದ್ದು ಕೇಳುತ್ತಿದ್ದಂತೆಯೇ ಆನೆ, ಚಿರತೆ, ಕಾಡುಹಂದಿಯಂತಹ ಪ್ರಾಣಿಗಳು ಗಾಬರಿಗೊಂಡು ಗಡಿ ಗ್ರಾಮಗಳತ್ತ ಧಾವಿಸುತ್ತವೆ. ತಮ್ಮ ಆಹಾರಕ್ಕಾಗಿ ಅಲ್ಲಿಯ ಸಾಕು ಪ್ರಾಣಿಗಳು ಮತ್ತು ಜನರ ಮೇಲೆ ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತವೆ. ಆದರೆ, ಸಫಾರಿ ಬಂದ್ ಆದ ನಂತರ ಇಂತಹ ಸಂಘರ್ಷ ತಗ್ಗಿತ್ತು. ಈಗ ಲಾಭ, ನಷ್ಟಗಳ ಲೆಕ್ಕಾಚಾರದಿಂದ ಸರ್ಕಾರ ಸಫಾರಿ ನಡೆಸುತ್ತಿರುವುದರಿಂದ ಸ್ಥಳೀಯ ರೈತರಿಗೆ ಸಫಾರಿಯಿಂದ ಒಂದು ಪೈಸೆ ಲಾಭವಿಲ್ಲ. ಕೇವಲ ಬೆಂಗಳೂರು-ಮೈಸೂರು ರೆಸಾರ್ಟ್ ಮಾಲೀಕರಿಗೆ ಲಾಭ. ಸರ್ಕಾರ ರೆಸಾರ್ಟ್ ಲಾಬಿಗೆ ಮಣಿದಿದೆ. ರೈತರ ಜೀವಕ್ಕಿಂತ ಬಂಡವಾಳಶಾಹಿಗಳಿಗೆ ಪ್ರಾಮುಖ್ಯತೆ ನೀಡಿದೆ” ಎಂದು ದೂರಿದರು.

ಮಂಜು ಕಿರಣ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪ್ರಾಣಿಗಳ ದಾಳಿಗೆ ಮೃತಪಟ್ಟಿರುವವರ ಕುಟುಂಕ್ಕೆ ₹20 ಲಕ್ಷ ಪರಿಹಾರ ಕೊಡುವುದಾಗಿ ಸರ್ಕಾರ ಹೇಳಿದೆ. ಆದರೆ, ಕನಿಷ್ಠ ₹1 ಕೋಟಿ + ಕುಟುಂಬಕ್ಕೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಇಷ್ಟಾದರೂ ಮತ್ತೆ ಸಫಾರಿ ಆರಂಭಿಸಿದ್ದಾರೆ. ಇದರ ವಿರುದ್ಧ ಫೆಬ್ರವರಿ 19-20ರಂದು ಮೈಸೂರು ಅರಣ್ಯ ಭವನ, ಬಂಡೀಪುರ ಅರಣ್ಯ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮುತ್ತಿಗಗೆ ಯತ್ನಿಸಿದಾಗ 20ಕ್ಕೂ ಅಧಿಕ ಮಂದಿ ರೈತರನ್ನು ಪೊಲೀಸರು ವಶಕ್ಕೆ ಪಡೆದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೆಸಾರ್ಟ್‌ ಮಾಲೀಕರ ಬೆಂಬಲಿಗರು

ಮತ್ತೊಂದೆಡೆ, ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಸಫಾರಿಯನ್ನು ಮತ್ತೆ ತೆರೆಯುವುದು ಅತ್ಯಗತ್ಯವೆಂದು ರೆಸಾರ್ಟ್ ಮಾಲೀಕರು ವಾದಿಸಿದ್ದು, ಲಾಬಿ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಫಾರಿ ಆರಂಭ ಮಾಡಲು ಸೂಚನೆ

ಈ ನಡುವೆ ಸರ್ಕಾರ ಇದೀಗ ಸಫಾರಿಯಮನ್ನು ಪುನರಾರಂಭಗೊಳಿಸಿದ್ದು, “ಮೊದಲು ಬಳಕೆಯಲ್ಲಿದ್ದ ಸಫಾರಿ ವಾಹನಗಳು ಮತ್ತು ಸಿಬ್ಬಂದಿಗಳ ಪೈಕಿ ಶೇ.50 ರಷ್ಟು ಮಾತ್ರ ನಿಯೋಜಿಸಬೇಕು. ಮುಖ್ಯವಾಗಿ ಬಸ್‌ಗಳ ಮೂಲಕ ಕಾರ್ಯಾಚರಣೆ ನಡೆಸಬೇಕು. ತಾಂತ್ರಿಕ ಸಮಿತಿ ವರದಿ ಮತ್ತು ಆರ್ಥಿಕ ನಷ್ಟವನ್ನು ಗಮನಿಸಿ ಕ್ಯಾಂಪರ್‌ಗಳು ಮತ್ತು ಜೀಪ್‌ಗಳ ಕನಿಷ್ಠ ಬಳಕೆಯೊಂದಿಗೆ ಸಫಾರಿ ನಡೆಸಲು ವಿವರವಾದ ಸೂಚನೆಗಳನ್ನು ನೀಡಲಾಗುವುದು. ಜತೆಗೆ ನಿಗದಿತ ಷರತ್ತುಗಳ ಯಾವುದೇ ಉಲ್ಲಂಘನೆಯಾದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಷರತ್ತುಬದ್ಧ ಅನುಮತಿ

ಸಫಾರಿ ಆರಂಭವಾದರೂ ಪ್ರವಾಸಿಗರಿಗೆ ಮತ್ತು ಸಫಾರಿ ಆಯೋಜಕರಿಗೆ ಅರಣ್ಯ ಇಲಾಖೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಕಾಡಿನ ಒಳಭಾಗದಲ್ಲಿ ಪ್ರಾಣಿಗಳ ಚಲನವಲನಕ್ಕೆ ತೊಂದರೆಯಾಗದಂತೆ ಸಫಾರಿ ವಾಹನಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಅಲ್ಲದೆ, ಪ್ರಾಣಿಗಳು ಕಾಣಿಸಿಕೊಂಡಾಗ ವಾಹನಗಳನ್ನು ದೀರ್ಘಕಾಲ ನಿಲ್ಲಿಸುವಂತಿಲ್ಲ ಮತ್ತು ಅತಿ ಹೆಚ್ಚು ಶಬ್ದ ಮಾಡುವಂತಿಲ್ಲ ಎಂಬ ಸೂಚನೆ ನೀಡಲಾಗಿದೆ.

ಇದನ್ನೂ ಓದಿದ್ದೀರಾ? ಗೆಲುವಿನ ಘಾಟು ಎಬ್ಬಿಸಿದ ʼಕೆಂಪು ಬೆಡಗಿʼ: ದಾಖಲೆಯ ಧಾರಣೆ ಕಂಡ ಬ್ಯಾಡಗಿ ಮೆಣಸಿನಕಾಯಿ

ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ಸೇವೆಗಳನ್ನು ಮತ್ತೆ ತೆರೆದಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು ಸುರಕ್ಷತೆ, ಕೃಷಿ ಮತ್ತು ಸ್ಥಳೀಯ ಜೀವನೋಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮತ್ತೆ ಆರಂಭಿಸಿರುವ ಸಫಾರಿಯನ್ನು ನಿಷೇಧಿಸುವಂತೆ ಮತ್ತಷ್ಟು ಸಭೆಗಳನ್ನು ಸಡೆಸಿ ತೀವ್ರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಮುಂದಿರುವ ಸವಾಲುಗಳೇನು?

ಬಂಡೀಪುರ-ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಸಾಮರ್ಥ್ಯಕ್ಕಿಂತ ಹೆಚ್ಚಾಗುತ್ತಿದೆ. ಕಾಡಿನ ಒಳಗೆ ಲಂಟಾನ ಮತ್ತು ಸೆನ್ನಾ ಸ್ಪೆಕ್ಟಾಬಿಲಿಸ್‌ನಂತಹ ಆಕ್ರಮಣಕಾರಿ ಸಸ್ಯಗಳು ಬೆಳೆದಿರುವುದರಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆಯಾಗಿದೆ. ಆಹಾರವಿಲ್ಲದೆ ಜಿಂಕೆ, ಕಾಡುಹಂದಿಗಳು ಹೊಲಗಳಿಗೆ ನುಗ್ಗುತ್ತಿವೆ, ಅವುಗಳನ್ನು ಬೆನ್ನಟ್ಟುತ್ತ ಬರುವ ಹುಲಿಗಳೂ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಸಫಾರಿಯನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಿದರೆ ಆರ್ಥಿಕ ನಷ್ಟವಾಗುತ್ತದೆಂದು ಸರ್ಕಾರ ಯೋಚಿಸಿದರೆ, ಇದರಿಂದ ಪ್ರವಾಸಿಗರ ಸುರಕ್ಷತೆ ಮತ್ತು ಸ್ಥಳೀಯರ ಸಂರಕ್ಷಣೆ ಹೇಗೆ ಎಂಬ ಭೀತಿ ಎದುರಾಗಿದೆ.

ಪರಿಹಾರಗಳು ಏನು?

ಅತಿಹೆಚ್ಚು ಹುಲಿಗಳಿರುವ ಈ ಕಾಡುಗಳಿಂದ ಕೆಲವು ಹುಲಿಗಳನ್ನು ಹುಲಿಗಳ ಸಂಖ್ಯೆ ಕಡಿಮೆ ಇರುವ ಬೇರೆ ಕಾಡುಗಳಿಗೆ(ಉದಾಹರಣೆಗೆ ಮಲೆಮಹದೇಶ್ವರ ಬೆಟ್ಟ ಅಥವಾ ಭದ್ರಾ) ಸ್ಥಳಾಂತರಿಸುವುದು ಉತ್ತಮವೆಂದು ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ.

ಕಾಡುಗಳ ನಡುವೆ ಇರುವ ಅಡೆತಡೆಗಳನ್ನು ನಿವಾರಿಸಿ, ಪ್ರಾಣಿಗಳು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಹೋಗಲು ಮುಕ್ತ ಅವಕಾಶ ಕಲ್ಪಿಸಿದರೆ ಇದರಿಂದ ಹುಲಿಗಳು ಒಂದೇ ಕಡೆ ಕೇಂದ್ರೀಕೃತವಾಗುವುದು ತಪ್ಪುತ್ತದೆ. ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಗ್ರಾಮಗಳ ಅಂಚಿನಲ್ಲಿ ಬಲವಾದ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸುವುದು ಅತ್ಯಂತ ಪರಿಣಾಮಕಾರಿಯಾಗಿರುವುದರಿಂದ ಎಲ್ಲ ಕಡೆ ಈ ವ್ಯವಸ್ಥೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ಟೋಬರ್ 10ರ ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ಧರಣಿಯಲ್ಲಿ ಮಮತಾ ಬ್ಯಾನರ್ಜಿ ಭಾಗಿ ಸಾಧ್ಯತೆ

ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಸಮಸ್ತ’ ಆ್ಯಪ್ ಸಮಸ್ಯೆ ಪರಿಹರಿಸಿ, ಗೃಹಲಕ್ಷ್ಮಿ ಹೆಚ್ಚುವರಿ ಕೆಲಸ ಕೈಬಿಡಿ: ಆಶಾ ಕಾರ್ಯಕರ್ತೆಯರ ಆಗ್ರಹ

‘ಸಮಸ್ತ’ ಆ್ಯಪ್‌ನಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು, ಗೃಹಲಕ್ಷ್ಮಿ ಯೋಜನೆಯ...