ಕೇರಳದ ಎಂಟು ಸಾಧಕರಿಗೆ ಪದ್ಮ ಪ್ರಶಸ್ತಿ ಎಂಬ ಮೋದಿ ತಂತ್ರ: ಮತ ಬ್ಯಾಂಕ್‌ಗಾಗಿ ಬಿಜೆಪಿ ಅಸ್ತ್ರ!

Date:

ಯುಡಿಎಫ್ ಕ್ರೈಸ್ತ ಮತ್ತು ಮುಸ್ಲಿಮರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಚಾರದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಿರುವಾಗ ಎಲ್‌ಡಿಎಫ್‌ನ ನಾಯರ್ ಮತದಾರರನ್ನು ತನ್ನತ್ತ ಸೆಳೆಯುವ ಯೋಜನೆ ಬಿಜೆಪಿಯದ್ದು. ಇದೀಗ ಮೋದಿಯ ಪದ್ಮ ಪ್ರಶಸ್ತಿ ತಂತ್ರವೇ ಮತ ಬ್ಯಾಂಕ್‌ನ ಅಸ್ತ್ರವಾಗಿದೆ.

ಈ ಬಾರಿ ಪದ್ಮ ಪ್ರಶಸ್ತಿ ಬರೀ ಸಾಧಕರಿಗೆ ನೀಡುವ ಗೌರವವಾಗಿ ಉಳಿದಿಲ್ಲ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈ ಪ್ರಶಸ್ತಿಯಲ್ಲೂ ರಾಜಕೀಯದಾಟ ಶುರು ಮಾಡಿದೆ. ಕಳೆದ ಬಜೆಟ್ ಸಂದರ್ಭದಲ್ಲಿ ತಮ್ಮ ಮಿತ್ರಪಕ್ಷಗಳು ಇರುವ ರಾಜ್ಯಗಳು ಮತ್ತು ಚುನಾವಣೆ ಎದುರಿಸಲಿರುವ ರಾಜ್ಯಗಳೇ ಹೇಗೆ ಗುರಿಯಾಗಿದ್ದವೋ, ಹಾಗೆಯೇ ಇದೀಗ ಪದ್ಮ ಪ್ರಶಸ್ತಿ. ಯಾವ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆಯೋ ಆ ರಾಜ್ಯಗಳ ಸಾಧಕರು ಮೋದಿ ಸರ್ಕಾರಕ್ಕೆ ಈ ವರ್ಷ ಕಾಣಿಸಿಕೊಂಡಿದ್ದಾರೆ. ಮೋದಿಯ ಪದ್ಮ ಪ್ರಶಸ್ತಿ ತಂತ್ರವೇ ಮತ ಬ್ಯಾಂಕ್‌ನ ಅಸ್ತ್ರವಾಗಿದೆ.

- Advertisement -

ಮೋದಿ ಸರ್ಕಾರ ಘೋಷಿಸಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕೇರಳದ ಎಂಟು ಮಂದಿ ಹೆಸರು ಸೇರಿಕೊಂಡಿದೆ. ಇದರಲ್ಲಿ ಮೂರು ಪದ್ಮವಿಭೂಷಣ ಪ್ರಶಸ್ತಿಗಳೂ ಸೇರಿವೆ. ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ), ಬರಹಗಾರ/ಪತ್ರಕರ್ತ ಪಿ. ನಾರಾಯಣನ್ ಮತ್ತು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ಟಿ. ಥಾಮಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಎಡಪಂಥೀಯ ಬೆಂಬಲಿಗ ನಟ ಮಮ್ಮುಟ್ಟಿ ಮತ್ತು ಎಸ್‌ಎನ್‌ಡಿಪಿ ಯೋಗಂ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನೃತ್ಯ ಪ್ರತಿಭಾನ್ವಿತ ಕಲಾಮಂಡಲಂ ವಿಮಲಾ ಮೆನನ್, ಅರಣ್ಯ ಸಂರಕ್ಷಣಾವಾದಿ ಕೊಲ್ಲಕಯಿಲ್ ದೇವಕಿ ಅಮ್ಮ ಮತ್ತು ಇಸ್ರೋ ವಿಜ್ಞಾನಿ ಎ.ಇ. ಮುತ್ತುನಾಯಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಇದನ್ನು ಓದಿದ್ದೀರಾ? ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ: ಪ್ರತಿಭೆಗಾಗಿಯೇ, ಇಲ್ಲ ಕೇರಳ ಚುನಾವಣೆಗಾಗಿಯೇ?

ಪ್ರಮುಖವಾಗಿ ತಮ್ಮ ರಾಜಕೀಯ ವಿರೋಧಿಗಳು, ಎಡಪಂಥೀಯ ನಾಯಕ, ಸಂಘ ಪರಿವಾರದ ಕಟು ಟೀಕಾಕಾರ ಅಚ್ಯುತಾನಂದನ್ ಅವರಿಗೆ ಈ ಪ್ರಶಸ್ತಿ ನೀಡಿರುವುದು ಹೆಚ್ಚು ಚರ್ಚೆಗೆ ಒಳಗಾಗಿರುವುದು. ಈ ಹಿಂದೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ನಾಯಕ ಬುದ್ಧದೇವ್ ಭಟ್ಟಾಚಾರ್ಯ 2022ರಲ್ಲಿ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಆದರೆ ಕೇರಳ ಸಿಪಿಐಎಂ ಮತ್ತು ಅಚ್ಯುತಾನಂದನ್ ಕುಟುಂಬವು ಪ್ರಶಸ್ತಿಯನ್ನು ಸ್ವಾಗತಿಸಿದೆ. ಇದರಿಂದಾಗಿ ಹೆಚ್ಚು ಚರ್ಚೆ ನಡೆಯುತ್ತಿದೆ. ಇವೆಲ್ಲವುದರ ನಡುವೆ ಬಿಜೆಪಿ ಸರ್ಕಾರ ಈ ಪ್ರಶಸ್ತಿ ನೀಡುವುದರ ಹಿಂದೆ 25%ಕ್ಕಿಂತ ಹೆಚ್ಚು ಮತ ಬ್ಯಾಂಕ್‌ ಅನ್ನು ದೋಚುವ ತಂತ್ರವಿದೆ ಎಂಬುದು ಸ್ಪಷ್ಟ.

ಬಿಜೆಪಿ ಜಾತಿ ಲೆಕ್ಕಾಚಾರ

ಪದ್ಮ ಪ್ರಶಸ್ತಿಗೆ ಮೋದಿ ಸರ್ಕಾರ ಕೇರಳದಲ್ಲಿ ಮಾಡಿರುವ ಆಯ್ಕೆಗಳು ಜಾತಿ ಲೆಕ್ಕಾಚಾರ ಹೊಂದಿದೆ. ಕೇರಳದ ಅತಿದೊಡ್ಡ ಒಬಿಸಿ ಗುಂಪು ಮತ್ತು ಸಾಂಪ್ರದಾಯಿಕ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಭದ್ರಕೋಟೆಯಾದ ಈಳವ ಸಮುದಾಯವನ್ನು ಮೋದಿ ಸರ್ಕಾರ ಪದ್ಮ ಪ್ರಶಸ್ತಿ ಮೂಲಕ ಸೆಳೆಯುವ ಗುರಿ ಹೊಂದಿದೆ. ಅಚ್ಯುತಾನಂದನ್ ಅವರು ಈಳವ ಸಮುದಾಯಕ್ಕೆ ಸೇರಿರುವ ಕಾರಣ ಈ ಸಮುದಾಯದ ಬೆಂಬಲಗಿಟ್ಟಿಸಿಕೊಳ್ಳುವ ಉದ್ದೇಶದೊಂದಿಗೆ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ ಬಿಜೆಪಿ ಮಿತ್ರಪಕ್ಷವಾದ ಭಾರತ ಧರ್ಮ ಜನಸೇನಾ (BDJS) ನಾಯಕ ವೆಲ್ಲಪ್ಪಳ್ಳಿ ನಟೇಶನ್ ಅವರಿಗೆ ಪ್ರಶಸ್ತಿ ನೀಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

ವಿರೋಧ ಕುಗ್ಗಿಸಲು ವಿರೋಧಿಗಳಿಗೆ ಸಮ್ಮಾನ!

ತಮ್ಮ ಸೈದ್ಧಾಂತಿಕ ನಿಲುವಿಗೆ ವಿರೋಧವನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ವಿರೋಧಿಗಳನ್ನು ಸಮ್ಮಾನಿಸುವುದು ಹೊಸತೇನಲ್ಲ. ಹಾಗೆಯೇ ಬರೀ ತಮ್ಮವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿದರೆ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ. ಇದೇ ಕಾರಣದಿಂದಾಗಿ ಆರ್‌ಎಸ್‌ಎಸ್‌ ಬೆಂಬಲಿಗರ ಜತೆಗೆ ವಿರೋಧಿಗಳಿಗೂ ಪ್ರಶಸ್ತಿ ನೀಡಿದೆ. ಅಚ್ಯುತಾನಂದನ್ ತಮ್ಮ ಜೀವನದುದ್ದಕ್ಕೂ ಬಿಜೆಪಿ/ಆರ್‌ಎಸ್‌ಎಸ್ ಅನ್ನು ಕಟುವಾಗಿ ಟೀಕಿಸುತ್ತಿದ್ದವರು. ಆದರೆ ಇದೀಗ ಜಾತಿ ಲೆಕ್ಕಾಚಾರದ ಜತೆಗೆ ವಿರೋಧ ಕುಗ್ಗಿಸುವ ತಂತ್ರವನ್ನು ಬಿಜೆಪಿ ಆಯ್ದುಕೊಂಡಿದೆ. ಇನ್ನೊಂದೆಡೆ ಆರ್‌ಎಸ್‌ಎಸ್‌ ನಾಯಕ ಪಿ. ನಾರಾಯಣನ್ ಅವರಿಗೂ ಗೌರವ ನೀಡಿದೆ.

ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಎಲ್‌ಡಿಎಫ್, ಯುಡಿಎಫ್‌ ಜತೆ ಸ್ಪರ್ಧೆಗೆ ಬಿಜೆಪಿಯೂ ಸಜ್ಜಾಗುತ್ತಿದೆ: ಯಾರ ತಂತ್ರ ಫಲಿಸುತ್ತೆ?

ಮತದಾರರನ್ನು ಆಕರ್ಷಿಸುವ ತಂತ್ರವೇ?

ಕೇರಳದಲ್ಲಿ ಮತದಾರರ ಲೆಕ್ಕಾಚಾರವೇ ಬೇರೆ. ಪ್ರತಿ ಬಾರಿ ಚುನಾವಣೆ ನಡೆಯುವಾಗಲೂ ಆಡಳಿತರೂಢ ಪಕ್ಷದಿಂದ ವಿರೋಧ ಪಕ್ಷದ ಕೈಗೆ ಅಧಿಕಾರ ನೀಡುವವರು ಕೇರಳಿಗರು. ಕಳೆದ ಬಾರಿ ಮಾತ್ರ ಸತತವಾಗಿ ಎರಡನೇ ಬಾರಿಗೆ ಎಲ್‌ಡಿಎಫ್‌ ಅನ್ನು ಕೇರಳದ ಜನರು ಗೆಲ್ಲಿಸಿದ್ದಾರೆ. ಈ ಮೂಲಕ ಎಲ್‌ಡಿಎಫ್ 40 ವರ್ಷಗಳ ದಾಖಲೆಯನ್ನು ಮುರಿದಿದೆ. ಇದೀಗ ಮೂರನೇ ಬಾರಿಗೆ ಎಲ್‌ಡಿಎಫ್ ಗೆಲ್ಲಲಿದೆಯೇ ಎಂಬ ಕುತೂಹಲ ಎಲ್ಲರದ್ದು. ಎಲ್‌ಡಿಎಫ್‌ನ ಜನಪರ ಯೋಜನೆಗಳು ಜನರನ್ನು ಆಕರ್ಷಿಸಿದ್ದರೂ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಅಚ್ಯುತಾನಂದನ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆಯನ್ನು ಹಲವು ಯುವಕರು ಹೊಂದಿದ್ದಾರೆ. ಈ ಯುವಕರನ್ನು ತನ್ನತ್ತ ಸೆಳೆಯುವ ತಂತ್ರ ಇದೀಗ ಬಿಜೆಪಿಯದ್ದು.

ಯುಡಿಎಫ್ ಕ್ರೈಸ್ತ ಮತ್ತು ಮುಸ್ಲಿಮರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಚಾರದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಿರುವಾಗ ಎಲ್‌ಡಿಎಫ್‌ನ ನಾಯರ್ ಮತದಾರರನ್ನು ತನ್ನತ್ತ ಸೆಳೆಯುವ ಯೋಜನೆ ಬಿಜೆಪಿಯದ್ದು. ಅದಕ್ಕೆ ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವೂ ಬಲ ನೀಡಿದಂತಿದೆ. ಇದರೊಂದಿಗೆ ಬಿಜೆಪಿ ತನ್ನ ಎಂದಿನ ಕೋಮುದ್ವೇಷದ ಹೇಳಿಕೆಗಳನ್ನು ಅಸ್ತ್ರವನ್ನಾಗಿಯೇ ಇರಿಸಿಕೊಂಡಿದೆ. ಅದಕ್ಕಾಗಿಯೇ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ವೆಲ್ಲಪ್ಪಳ್ಳಿ ನಟೇಶನ್ ಅವರನ್ನು ಸಾಧಕರಾಗಿ ಗುರುತಿಸಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾವು ‘ಇಂಡಿಯಾ’ ಒಕ್ಕೂಟದ ಭಾಗವಲ್ಲ, ಸಭೆಗೆ ಹಾಜರಾಗಲ್ಲ: ಎಎಪಿ ನಾಯಕ ಸಂಜಯ್ ಸಿಂಗ್

ವಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಸಭೆಯಿಂದ ಆಮ್ ಆದ್ಮಿ ಪಾರ್ಟಿ (ಎಎಪಿ)...

ಐಐಟಿಗಳ ಹೊಳೆಯುವ ಕ್ಯಾಂಪಸ್‌ನೊಳಗೆ ಮಡುಗಟ್ಟಿರುವ ಜಾತಿ ತಾರತಮ್ಯದ ಅಂಧಕಾರ

ದೇಶದ ಅತ್ಯುನ್ನತ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳು (IIT) ಕೇವಲ...

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ...