ಸಂಸತ್‌ನಲ್ಲಿ ನಿಂದನೆಗೊಳಗಾಗಿದ್ದ ಮುಸ್ಲಿಂ ಸಂಸದ ಡ್ಯಾನಿಶ್ ಅಲಿಯನ್ನೇ ಉಚ್ಚಾಟಿಸಿದ ಮಾಯಾವತಿ!

Date:

ಲೋಕಸಭಾ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿಧುರಿಯಿಂದ ನಿಂದನೆಗೊಳಗಾಗಿದ್ದ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿಯನ್ನೇ ಪಕ್ಷದಿಂದ ಮಾಯಾವತಿ ಉಚ್ಚಾಟಿಸಿದ್ದಾರೆ.

ಲೋಕಸಭೆಯಿಂದ ಪ್ರಶ್ನೆಗಾಗಿ ಲಂಚ ಆರೋಪ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

‘ಪಕ್ಷ ವಿರೋಧಿ ಚಟುವಟಿಕೆ’ ಎಂಬ ಕಾರಣ ನೀಡಿ ಡ್ಯಾನಿಶ್ ಅಲಿ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಿರುವುದಾಗಿ ತಿಳಿಸಲಾಗಿದೆ. ಡ್ಯಾನಿಶ್ ಅಲಿ ಅವರು ಅಮ್ರೋಹ ಕ್ಷೇತ್ರದ ಸಂಸದರಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.


ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆಗಳು ಅಥವಾ ಕ್ರಮಗಳ ವಿರುದ್ಧ ನಿಮಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅದರ ಹೊರತಾಗಿಯೂ ನೀವು ನಿರಂತರವಾಗಿ ಪಕ್ಷದ ವಿರುದ್ಧ ವರ್ತಿಸುತ್ತಿದ್ದೀರಿ ಎಂದು ಡ್ಯಾನಿಶ್ ಅಲಿಗೆ ಬಿಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.

ಮಳೆಗಾಲದ ಅಧಿವೇಶನದಲ್ಲಿ ಬಿಜೆಪಿಯ ಸಂಸದ ರಮೇಶ್ ಬಿಧುರಿ, ಡ್ಯಾನಿಶ್ ಅಲಿ ಅವರನ್ನು ‘ಉಗ್ರವಾದಿ, ಭಯೋತ್ಪಾದಕ’ ಎಂದು ನಿಂದನೆ ಮಾಡಿದ್ದರು. ಇದು ದೇಶಾದ್ಯಂತ ವಿವಾದಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಿಂದನೀಯ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ಸಂಸದ ರಮೇಶ್ ಬಿಧುರಿ ಕಳೆದ ಗುರುವಾರ ಲೋಕಸಭೆಯ ಹಕ್ಕು ಬಾಧ್ಯತಾ ಸಮಿತಿ ಮುಂದೆ ಕ್ಷಮೆ ಯಾಚಿಸಿದ್ದರು ಎಂದು ವರದಿಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಅಬಕಾರಿ ಪ್ರಕರಣ| ಏ. 23ರವರೆಗೆ ನ್ಯಾಯಾಂಗ ಬಂಧನ, ‘ಸಿಬಿಐ ಅಲ್ಲ ಬಿಜೆಪಿ ಕಸ್ಟಡಿ’ ಎಂದ ಕವಿತಾ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)...

ಕನ್ಹಯ್ಯ ಕುಮಾರ್‌ಗೆ ಲೋಕಸಭಾ ಟಿಕೆಟ್: ದೆಹಲಿಯಿಂದ ಸ್ಪರ್ಧೆ

ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಮತ್ತೊಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಯುವ...

ಗುಜರಾತ್| ಕೇಂದ್ರ ಸಚಿವರ ವಿರುದ್ಧ ಕ್ಷತ್ರಿಯರ ಬೃಹತ್ ಪ್ರತಿಭಟನೆ; ಬಿಜೆಪಿಗೆ ಮುಗಿಯದ ಸಂಕಷ್ಟ!

ಕ್ಷತ್ರಿಯ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಕೇಂದ್ರ ಸಚಿವರೂ ಆಗಿರುವ...

ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ: ಚುನಾವಣಾ ಆಯೋಗಕ್ಕೆ ಡಿ.ಕೆ. ಸುರೇಶ್ ಆಗ್ರಹ

"ಕುಮಾರಸ್ವಾಮಿ ಅವರ ಹೇಳಿಕೆ ಮಹಿಳಾ ಕುಲಕ್ಕೆ ಮಾಡಿದ ಅಪಮಾನವಾಗಿದ್ದು ಕುಮಾರಸ್ವಾಮಿ ವಿರುದ್ಧ...