ಚುನಾವಣಾ ಅಕ್ರಮ: ಬಂಧನಕ್ಕೊಳಗಾಗಿ 20 ನಿಮಿಷದ ಬಳಿಕ ಡೊನಾಲ್ಡ್ ಟ್ರಂಪ್ ಬಿಡುಗಡೆ

Date:

  • ‘ಮಗ್ ಶಾಟ್’ ಫೋಟೋ ಬಿಡುಗಡೆ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
  • ಮಾಜಿ ಅಧ್ಯಕ್ಷರ ಬಂಧನ; ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣ

2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಕ್ರಮ ಎಸಗಿದ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಜಾರ್ಜಿಯಾ ಜೈಲಿನಲ್ಲಿ ಬಂಧಿಸಿ, ಕೂಡಲೇ ಬಿಡುಗಡೆ ಮಾಡಲಾಗಿದೆ.

ಇದು ಅಮೆರಿಕದ ಇತಿಹಾಸದಲ್ಲೇ ಮೊದಲ ಪ್ರಕರಣವಾಗಿದ್ದು, ಬಂಧನದ ಅರ್ಧ ಗಂಟೆಯ ಬಳಿಕ 200,000 ಡಾಲರ್ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಅಮೆರಿಕದ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಲೆಕೆಳಗಾಗಿಸಲು ಇತರೆ 18 ಮಂದಿ ಜತೆ ಸೇರಿಕೊಂಡು ಪಿತೂರಿ ನಡೆಸಿದ್ದರು ಎಂಬ ಆರೋಪ ಟ್ರಂಪ್ ಮೇಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಟ್ರಂಪ್ ಅವರು ಬಂಧನದ ಬಳಿಕ ಅಟ್ಲಾಂಟಾದ ಫುಲ್ಟೋನ್ ಕೌಂಟಿ ಜೈಲಿನಲ್ಲಿ ಸರಿಸುಮಾರು 20 ನಿಮಿಷ ಕಳೆದರು. ಬಳಿಕ ಬಿಡುಗಡೆಯಾಗಿ ಬೆಂಗಾವಲು ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳಂತೆಯೇ ಶರಣಾಗತರಾದ 77 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಂಧನ ಪ್ರಕ್ರಿಯೆ ವೇಳೆ ‘ಮಗ್ ಶಾಟ್’ (ಭುಜದ ಮೇಲಿನ ಮುಖದ ಚಿತ್ರ) ಫೋಟೋ ತೆಗೆಸಿಕೊಳ್ಳುವಂತಾಗಿದೆ. ಅಮೆರಿಕದ ಇತಿಹಾಸದಲ್ಲಿ ಹಾಲಿ ಅಥವಾ ಯಾವುದೇ ಮಾಜಿ ಅಧ್ಯಕ್ಷರು ಈ ರೀತಿ ಜೈಲಿಗೆ ಹೋಗಿದ್ದು ಹಾಗೂ ಮಗ್ ಶಾಟ್ ಫೋಟೋ ತೆಗೆದಿರುವುದು ಮೊದಲ ಪ್ರಕರಣವಾಗಿದೆ.

‘ಮಗ್ ಶಾಟ್’ ಫೋಟೋವನ್ನು ನಿಯಮಾನುಸಾರ ಪೊಲೀಸರು ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಅಲ್ಲದೇ, ಸುದೀರ್ಘ ಸಮಯದ ಬಳಿಕ ತನ್ನದೇ ಟ್ವಿಟರ್‌ ಖಾತೆಯಲ್ಲಿ ಮೊದಲ ಟ್ವೀಟ್ ಮಾಡಿರುವ ಟ್ರಂಪ್ ‘ಮಗ್ ಶಾಟ್’ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಚುನಾವಣಾ ಹಸ್ತಕ್ಷೇಪ! ಎಂದಿಗೂ ಶರಣಾಗಬೇಡಿ!’ ಎಂದು ಒಕ್ಕಣೆ ಕೂಡ ಹಾಕಿದ್ದಾರೆ.

‘ಮಗ್ ಶಾಟ್’ ಫೋಟೋದಲ್ಲಿ ಟ್ರಂಪ್ ಅವರು, ಕಡು ನೀಲಿ ಸೂಟ್, ಬಿಳಿ ಅಂಗಿ ಮತ್ತು ಕೆಂಪು ಟೈ ತೊಟ್ಟಿದ್ದು, ಕ್ಯಾಮೆರಾ ಕಡೆ ಮುಖ ಗಂಟಿಕ್ಕಿಕೊಂಡು ನೋಡುತ್ತಿರುವುದು ಸೆರೆಯಾಗಿದೆ.

ಫುಲ್ಟೋನ್ ಕೌಂಟಿ ಜೈಲಿನಲ್ಲಿ ಟ್ರಂಪ್ ಅವರಿಗೆ ಕೈದಿ ಸಂಖ್ಯೆ ‘PO1135809’ ನೀಡಲಾಗಿತ್ತು. ಅವರ ಎತ್ತರ 6.3 ಅಡಿ, ತೂಕ 97 ಕೆಜಿ ಎಂದು ನಮೂದಿಸಲಾಗಿದ್ದು, ಅವರ ಕೂದಲಿನ ಬಣ್ಣವನ್ನು ಹೊಂಬಣ್ಣ ಅಥವಾ ‘ಸ್ಟ್ರಾಬೆರ್ರಿ’ ಎಂದು ಪೊಲೀಸರು ಉಲ್ಲೇಖಿಸಿದ್ದರು.

ಬಂಧನಗೊಂಡು ಬಿಡುಗಡೆಯಾದ ಬಳಿಕ ಮಾತನಾಡಿದ ಡೊನಾಲ್ಡ್ ಟ್ರಂಪ್, ‘ಇದು ಅಮೆರಿಕಕ್ಕೆ ದುಃಖದ ದಿನ. ಇಲ್ಲಿ ನಡೆದಿರುವುದು ನ್ಯಾಯದ ಅಣಕ. ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ವಂಚನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಫುಲ್ಟೋನ್ ಕೌಂಟಿ ಜಿಲ್ಲಾ ಅಟಾರ್ನಿ ಫಾನಿ ವಿಲ್ಲಿಸ್ ಅವರು ಕೋರ್ಟ್‌ಗೆ ಶರಣಾಗಲು ಟ್ರಂಪ್ ಹಾಗೂ ಇತರೆ 18 ಮಂದಿಗೆ ಶುಕ್ರವಾರ ಮಧ್ಯಾಹ್ನದ ಗಡುವು ನೀಡಿದ್ದರು. ಈವರೆಗೆ ಟ್ರಂಪ್ ಮತ್ತು ಇತರ 11 ಮಂದಿ ಶರಣಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಸರ್ಕಾರ ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ: ರಾಹುಲ್‌ ಗಾಂಧಿ ವಾಗ್ದಾಳಿ

"ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಉದ್ಯಮಿಗಳ...

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ರಾಮನವಮಿ | ‘ಎಎಪಿ ಕಾ ರಾಮ್‌ರಾಜ್ಯ’ ವೆಬ್‌ಸೈಟ್ ಪ್ರಾರಂಭಿಸಿದ ಎಎಪಿ

ಆಮ್ ಆದ್ಮಿ ಪಕ್ಷ (ಎಎಪಿ) ಬುಧವಾರ ರಾಮನವಮಿ ದಿನದಂದು 'ಎಎಪಿ ಕಾ...