ಮಾಧ್ಯಮಗಳು ಸಮಾಜ-ಸರ್ಕಾರದ ನಡುವೆ ಸೌಹಾರ್ದದ ಸೇತುವೆಯಾಗಬೇಕು: ಸಿಎಂ ಸಿದ್ದರಾಮಯ್ಯ

Date:

  • ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದ ಸಿಎಂ ಸಿದ್ದರಾಮಯ್ಯ
  • ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿಯವರ ‘ಮೀಡಿಯಾ ಆಫ್ ದಿ ಮಿಲೇನಿಯಂ’ ಕೃತಿ ಬಿಡುಗಡೆ

ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು.
ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ.ಕೆ.ರವಿ ಅವರ ಸಂಪಾದಕತ್ವದ ‘ಮೀಡಿಯಾ ಆಫ್ ದಿ ಮಿಲೇನಿಯಂ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಬಿ.ಕೆ.ರವಿ ಅವರಿಗೆ ಬರೆಯುವ ಶಕ್ತಿ ಇದೆ. ಇದುವರೆಗೂ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಮಾಧ್ಯಮ ಸಾಕ್ಷರತೆ ಕುರಿತಾದ ಈ ಹೊಸ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವನ್ನು ವಿಸ್ತರಿಸಲಿ. ವೃತ್ತಿಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಮುಂದಾಗಬೇಕು. ಸಂವಿಧಾನ ಉಳಿದರೆ ಪತ್ರಿಕಾ ವೃತ್ತಿಯ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ತಿಳಿಸಿದರು.‌

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭಾರತೀಯ ಮಾಧ್ಯಮ ಮತ್ತು ಉದ್ಯಮ ಸೃಷ್ಟಿಸಿರುವ ಮತ್ತು ಎದುರಿಸುತ್ತಿರುವ ಇವತ್ತಿನ ಸಮಸ್ಯೆಗಳಿಗೆ ಮಾಧ್ಯಮ ಸಾಕ್ಷರತೆ ಪರಿಹಾರ ಆಗಬಲ್ಲದು. ಹೀಗಾಗಿ ಪದವಿ ಪೂರ್ವ ಹಂತದಿಂದಲೇ ಮಾಧ್ಯಮ ಸಾಕ್ಷರತೆಗೆ ಪೂರಕವಾದ ಪಠ್ಯಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಕೃತಿಯ ಸಂಪಾದಕರಾದ ಬಿ.ಕೆ.ರವಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮುನ್ನುಡಿ ಹಾಡಿರುವ ಕರ್ನಾಟಕ ಮಾದರಿ ಅಭಿವೃದ್ಧಿ ಕುರಿತಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಕಿರುಚಿತ್ರವನ್ಮು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡೇಂಜರ್ ಜಾಹೀರಾತು | ಅಕ್ಷರಶಃ ಇದು ಬಿಜೆಪಿಯ ಅಪಾಯಕಾರಿತನವನ್ನು ಪ್ರತಿನಿಧಿಸುತ್ತಿದೆ, ಎಚ್ಚರಿಕೆ!

ಕಾಂಗ್ರೆಸ್‌ಗೆ ವಿರುದ್ದವಾಗಿ ಇಂದು ಬಿಜೆಪಿ ಪ್ರಾಯೋಜಿಸಿರುವ ಜಾಹೀರಾತಿನಲ್ಲಿ ಯಾವುದೇ ಅಭಿವೃದ್ಧಿ ಮತ್ತು...

ನೇಹಾ ಕೊಲೆ ಪ್ರಕರಣ | ಸಿಐಡಿಗೆ ನೀಡಿ, ವಿಶೇಷ ನ್ಯಾಯಾಲಯ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ...

ಮುಸ್ಲಿಂ ಬಾಂಧವರು ದೇಶ ಬಿಟ್ಟು ಓಡಿ ಹೋಗಬೇಕು ಹಾಗೇ ಬಿಜೆಪಿಯವರು ಚಿತ್ರಹಿಂಸೆ ಕೊಡುತ್ತಿದ್ದಾರೆ: ಡಿ ಕೆ ಶಿವಕುಮಾರ್‌

ಬಿಜೆಪಿಯವರು ಮುಸ್ಲಿಂ ಬಾಂಧವರಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ದೇಶದಿಂದ ಓಡಿ ಹೋಗಬೇಕು...

ಚುನಾವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ್‌ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ...