ಮಣಿಪುರ ಹಿಂಸಾಚಾರ | ಪರಿಸ್ಥಿತಿ ಉದ್ವಿಗ್ನ; ಕರ್ಫ್ಯೂ ಜಾರಿ, ಸೇನೆ ನಿಯೋಜನೆ

Date:

  • ಕುಕಿ ಬುಡಕಟ್ಟು ಮತ್ತು ಮೇಟಿ ಸಮುದಾಯದಿಂದ ಮಣಿಪುರದಲ್ಲಿ ಹಿಂಸಾಚಾರ
  • ಎರಡು ಸಮುದಾಯಗಳ ನಡುವಿನ ಘರ್ಷಣೆಯಿಂದ ಈವರೆಗೆ 174 ಮಂದಿ ಸಾವು

ಭಾರೀ ಗಲಭೆಯಿಂದ ಮಣಿಪುರ ಹಿಂಸಾಚಾರ ಸೋಮವಾರ (ಮೇ 22) ಮತ್ತೆ ಉದ್ವಿಗ್ನಗೊಂಡಿದೆ. ಇಂಫಾಲ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ.

ಮಣಿಪುರ ಹಿಂಸಾಚಾರ ಹೆಚ್ಚಾಗುತ್ತಿರುವ ವರದಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.

ಇದಕ್ಕೂ ಮುನ್ನ ನಿಷೇಧಾಜ್ಞೆಯನ್ನು ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಸಡಿಲಿಸಲಾಗಿತ್ತು.

ಇಂಫಾಲದ ನ್ಯೂ ಚೆಕಾನ್ ಬಜಾರ್ ಪ್ರದೇಶದಲ್ಲಿ ಮೇಟಿ ಮತ್ತು ಕುಕಿ ಸಮುದಾಯಗಳು ಮುಖಾಮುಖಿಯಾದ ನಂತರ ಮಣಿಪುರ ಹಿಂಸಾಚಾರ ಉಂಟಾಗಿದ್ದು, ಪ್ರದೇಶದಲ್ಲಿ ಮತ್ತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಈ ಹಿಂದಿನ ಮಣಿಪುರ ಹಿಂಸಾಚಾರದ ಘಟನೆಗಳು ವರದಿಯಾದ ನಂತರ ಜನರು ತೆರವುಗೊಳಿಸಿದ ಮನೆಗಳಲ್ಲಿ ವಿಧ್ವಂಸದ ಕೃತ್ಯಗಳು ವರದಿಯಾಗಿವೆ. ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯದಲ್ಲಿ ಮನೆಗಳಿಗೆ ಬೆಂಕಿ ಹಚ್ಚುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಾಲ ಸೇವೆ ಸ್ಥಗಿತವನ್ನು ಇನ್ನೂ ಐದು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರಗಳಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಪರಿಸ್ಥಿತಿ ಆಗಾಗ್ಗೆ ಉದ್ವಿಗ್ನಗೊಳ್ಳುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ಬಿಬಿಸಿ ವಾಹಿನಿಗೆ ದೆಹಲಿ ಹೈಕೋರ್ಟ್ ಸಮನ್ಸ್

ಮೇ 3ರಂದು ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡುವ ಮೇಟಿ ಸಮುದಾಯದ ಬೇಡಿಕೆ ಖಂಡಿಸಿ ಕುಕಿ ಬುಡಕಟ್ಟು ಏಕತಾ ಮೆರವಣಿಗೆ ನಡೆಸಿದ ನಂತರ ಘರ್ಷಣೆಗಳು ಆರಂಭವಾಗಿವೆ.

ಮೀಸಲು ಅರಣ್ಯ ಪ್ರದೇಶದಿಂದ ಕುಕಿ ಬುಡಕಟ್ಟು ಸಮುದಾಯವನ್ನು ಹೊರಹಾಕುವ ಸರ್ಕಾರದ ನಿರ್ಧಾರ ಬುಡಕಟ್ಟು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಹೇಳಲಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಜೀವನ ಸಂಗಾತಿಯನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ!

ವ್ಯಕ್ತಿಯೊಬ್ಬ ತನ್ನ ಸಹ ಜೀವನ ಸಂಗಾತಿ ಮಹಿಳೆಯನ್ನು ಕೊಂದು, ಮೃತದೇಹವನ್ನು ತುಂಡುತುಂಡಾಗಿ...

ಕೇಂದ್ರದ ಸುಗ್ರೀವಾಜ್ಞೆ | ಎಎಪಿಗೆ ಸಮಾಜವಾದಿ ಪಕ್ಷ ಬೆಂಬಲ

ಸಮಾಜವಾದಿ ಪಕ್ಷ ಏರ್ಪಡಿಸಿದ್ದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿ ದೆಹಲಿ ಅಧಿಕಾರಿಗಳ ನೇಮಕಾತಿ...

ಆರ್‌ಬಿಐ ಹಣಕಾಸು ನೀತಿ ಸಭೆ ಮುಕ್ತಾಯ; ರೆಪೊ ದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೊ ದರದಲ್ಲಿ ಯಥಾಸ್ಥಿತಿ...

ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನ

ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಗೀತಾಂಜಲಿ ಅಯ್ಯರ್ ಬುಧವಾರ...