ಎನ್‌ಸಿಇಆರ್‌ಟಿ | ಪಠ್ಯ ಪರಿಷ್ಕರಣೆಗೆ ಸಮ್ಮತಿಸದ ಕೇರಳ ಸರ್ಕಾರ

Date:

  • ಎಲ್ಲ ರಾಜ್ಯಗಳ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಪಠ್ಯ ಪರಿಷ್ಕರಣೆಗೆ ಒತ್ತಾಯ
  • ವಿದ್ಯಾರ್ಥಿಗಳಿಗೆ ಮೂಲ ಪಠ್ಯ ಬೋಧಿಸಲು ಕೇರಳ ಸರ್ಕಾರ ನಿರ್ಧಾರ ಎಂದ ಸಚಿವ

ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್‌ಸಿಇಆರ್‌ಟಿ) ಸೈದ್ಧಾಂತಿಕ ನೆಲೆಯಲ್ಲಿ ಪಠ್ಯ ಪರಿಷ್ಕರಣೆ ಮಾಡಿರುವುದನ್ನು ಕೇರಳ ಸರ್ಕಾರ ಅಸಮಧಾನ ವ್ಯಕ್ತಪಡಿಸಿದೆ.

ಈ ಕುರಿತು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಶನಿವಾರ (ಏಪ್ರಿಲ್‌ 8) ಹೇಳಿಕೆ ನೀಡಿದ್ದು, ಸೈದ್ಧಾಂತಿಕ ನೆಲೆಯಲ್ಲಿ ಪಠ್ಯದ ಅನೇಕ ಭಾಗಗಳನ್ನು ಅಳಿಸಿ ಹಾಕಿರುವ ಮಂಡಳಿ ನಿರ್ಧಾರವನ್ನು ಕೇರಳ ಸರ್ಕಾರ ಒಪ್ಪುವುದಿಲ್ಲ. ಮಂಡಳಿಯು ಮತ್ತೊಮ್ಮೆ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಜೊತೆ ಚರ್ಚಿಸಿ ಪಠ್ಯ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

“12ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ನಂತರದ ಅವಧಿಯ ಭಾಗಗಳನ್ನು ತೆಗೆದುಹಾಕಿರುವುದಕ್ಕೆ ಕೇರಳ ಸರ್ಕಾರದ ಅಸಮ್ಮತಿಯಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿರ್ಧಾರವನ್ನು ನಾವು ಒಪ್ಪುವುದಿಲ್ಲ” ಎಂದು ಶಿವನ್‌ಕುಟ್ಟಿ ತಿಳಿಸಿದರು.

ಕಳೆದ ವರ್ಷ ಪಠ್ಯಕ್ರಮದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದ ಸಂದರ್ಭದಲ್ಲಿ ಎನ್‌ಸಿಇಆರ್‌ಟಿ ಅಳಿಸಿ ಹಾಕಿದ ಕೆಲವು ಬಾಗಗಳು ವಿವಾದ ಸೃಷ್ಟಿಸಿದ್ದವು. ಮಂಡಳಿ ಸೂಚಿಸಿದ ವಿಜ್ಞಾನ ವಿಷಯದ ಭಾಗಗಳಿಗೆ ಕೇರಳ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಮಂಡಳಿ ಅಳಿಸಿ ಹಾಕಿದ ಮಾನವೀಯ ವಿಷಯದ ಭಾಗಗಳನ್ನು ಕೇರಳ ಶಿಕ್ಷಣ ಇಲಾಖೆ ಮತ್ತೆ ಸೇರಿಸಿತ್ತು.

ಕೇರಳ ಶೈಕ್ಷಣಿಕ ಮಂಡಳಿ ಮತ್ತು ಎನ್‌ಸಿಇಆರ್‌ಟಿ ಜತೆ ಮಾಡಿಕೊಂಡ ಒಪ್ಪಂದದ ಭಾಗವಾಗಿ ಪ್ರತಿವರ್ಷ ಪಠ್ಯ ಪುಸ್ತಕಗಳನ್ನು ಮರುಮುದ್ರಣ ಮಾಡಲಾಗುತ್ತದೆ. ಆದರೆ ಈ ಬಾರಿ ಮಂಡಳಿಯೇ ತಾನು ಕೈಬಿಟ್ಟ ಪಠ್ಯದ ಭಾಗಗಳನ್ನು ಹೊರತುಪಡಿಸಿ ಉಳಿದ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ಅಣ್ಣನ ಜೊತೆ ಜಗಳ; ಕೋಪದಲ್ಲಿ ಮೊಬೈಲ್‌ ನುಂಗಿದ 15 ವರ್ಷದ ಬಾಲಕಿ!

“ಕೇರಳ ಸರ್ಕಾರ ಎನ್‌ಸಿಇಆರ್‌ಟಿನಿಂದ ಅಳಿಸದ ಭಾಗಗಳಿರುವ ಪಠ್ಯವನ್ನು ಪಡೆಯಲಿದೆ. ಇದನ್ನೇ ಮಕ್ಕಳಿಗೆ ಕಲಿಸಲು ನೀಡಲಾಗುತ್ತದೆ” ಎಂದು ಕೇರಳ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಭಾಲ್ಕಿ ಕ್ಷೇತ್ರದ ಕಳೆದ 70 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಮೂರು ಅವಧಿ...

ಧಾರವಾಡ ಲೋಕಸಭಾ ಕ್ಷೇತ್ರ | ಪ್ರಲ್ಹಾದ್‌ ಜೋಶಿ ಬದಲು ಹೊಸ ಮುಖಕ್ಕೆ ಮನ್ನಣೆ ನೀಡಲು ಲಿಂಗಾಯತರ ಒತ್ತಾಯ

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್‌...

ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

ಯೋಜನೆಗಳ ಅನುಷ್ಠಾನ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ...

ಜೂನ್ 10ರಂದು ಕ್ಷೇತ್ರದ ಜನರಿಗೆ ಕೃತಜ್ಞತಾ ಸಭೆ ಆಯೋಜಿಸಿದ ಸಿಎಂ

ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾದ ಸಿದ್ದರಾಮಯ್ಯ ವರುಣ ಕ್ಷೇತ್ರ ವ್ಯಾಪ್ತಿಯ...