ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ | ಹಂಚಿ ಹೋದ ಮುಸ್ಲಿಂ ಮತಗಳಿಂದ ಬಿಜೆಪಿ ಜಯಭೇರಿ

Date:

ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಐದು ಪಕ್ಷಗಳ ನಡುವೆ ಹಂಚಿ ಹೋದ ವಿರೋಧಿ ಮತಗಳ ಲಾಭ ಪಡೆದು ಬಿಜೆಪಿ ಜಯಭೇರಿ ಸಾಧಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಅಬ್ಬರದ ನಡುವೆ ಫಲಿತಾಂಶ ಪ್ರಕಟವಾದ ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜಯಭೇರಿ ಸಾಧಿಸಿದೆ. ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷಗಳು (ಬಿಎಸ್‌ಪಿ) ಹೆಚ್ಚು ಸ್ಥಾನ ಗಳಿಸಲು ವಿಫಲವಾಗಿವೆ. ಮುಖ್ಯವಾಗಿ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಎಸ್‌ಪಿ ಮತ್ತು ಬಿಎಸ್‌ಪಿ ಹೊರತಾದ ಸಣ್ಣ ಪಕ್ಷಗಳಿಗೆ ಮತ ಹಾಕಿರುವ ಟ್ರೆಂಡ್ ಕಂಡುಬಂದಿದೆ.

ಆಮ್ ಆದ್ಮಿ ಪಕ್ಷ (ಆಪ್‌) ಮತ್ತು ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಡುವೆ ವಿಭಜನೆಯಾದ ಮುಸ್ಲಿಂ ಸಮುದಾಯದ ಮತಗಳ ಲಾಭ ಬಿಜೆಪಿಗೆ ಆಗುತ್ತಿದೆ ಎನ್ನಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಟ್ರೆಂಡ್ ಗಮನಿಸಿದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧದ ಜನತೆಯ ಆಕ್ರೋಶ, ಡಿಫಾಲ್ಟ್ ಆಯ್ಕೆಯಾಗಿ ಎಸ್‌ಪಿ ಮತ್ತು ಬಿಎಸ್‌ಪಿ ಕಡೆಗೆ ತಿರುಗಿಲ್ಲ. ಬಿಜೆಪಿ ವಿರೋಧಿ ಭಾವನೆಯಿಂದ ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ಎಸ್‌ಪಿ ಅಥವಾ ಬಿಎಸ್‌ಪಿಯನ್ನು ಪರ್ಯಾಯವಾಗಿ ನೆಚ್ಚಿಕೊಂಡಿದ್ದತ್ತು. ಇದೀಗ ಉತ್ತರ ಪ್ರದೇಶದಲ್ಲಿ ಸಮುದಾಯದ ಬಹುತೇಕ ಮತಗಳು ಐದು ಭಾಗವಾಗಿ ವಿಭಜನೆಯಾಗುತ್ತಿವೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಹಾಗೂ ಆಪ್ ನಡುವೆ ಬಿಜೆಪಿ ವಿರೋಧಿ ಮತಗಳು ಹಂಚಿಕೆಯಾದ ಕಾರಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ.

ಮೇಯರ್ ಚುನಾವಣೆಯಲ್ಲಿ ಎಐಎಂಐಎಂನ ಅನಸ್ ಮೀರತ್‌ನಲ್ಲಿ 1.28 ಲಕ್ಷ ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಒಂದು ಹಂತದಲ್ಲಿ ಮುನ್ನಡೆಯಲ್ಲೂ ಇದ್ದ ಅನಸ್, ಅಂತಿಮವಾಗಿ ಒಂದು ಲಕ್ಷ ಮತಗಳಿಂದ ಬಿಜೆಪಿಗೆ ಸೋತರು. ಎಸ್‌ಪಿಯ ಸೀಮಾ ಪ್ರಧಾನ್ 1.20 ಲಕ್ಷ ಮತಗಳನ್ನು ಪಡೆದರೆ ಬಿಎಸ್‌ಪಿಯ ಹಸ್ಮತ್ 54,076 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಕಾಂಗ್ರೆಸ್‌ನ ನಸೀಮ್ ಖುರೇಶಿ 15,473 ಮತಗಳನ್ನು ಗಳಿಸಿದ್ದರು.

“ಎಐಎಂಐಎಂ ಅನ್ನು ಬಿಜೆಪಿಯ ಬಿ ತಂಡ ಎಂದೇ ಮುಂದಿಡುತ್ತಿದ್ದ ಎಸ್‌ಪಿಯಿಂದಾಗಿಯೇ ನಾನು ಸೋತೆ. ಎಸ್‌ಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಪಡೆದು ಬಿಜೆಪಿ ಗೆಲ್ಲಲು ಕಾರಣರಾದರು” ಎಂದು ಅನಸ್ ಮಾಧ್ಯಮಗಳಿಗೆ ಅಭಿಪ್ರಾಯಪಟ್ಟಿದ್ದಾರೆ.

ಮೊರದಾಬಾದ್‌ನಲ್ಲಿ ಬಿಜೆಪಿಯ ವಿನೋದ್ ಅಗರ್‌ವಾಲ್ ಅವರು ಕಾಂಗ್ರೆಸ್‌ನ ಮೊಹಮ್ಮದ್ ರಿಜ್ವಾನ್‌ರನ್ನು ಕೇವಲ 4000 ಮತಗಳಿಂದ ಸೋಲಿಸಿದ್ದರು. ಬಿಜೆಪಿ ವಿರೋಧಿ ಮತ್ತು ಮುಖ್ಯವಾಗಿ ಮುಸ್ಲಿಂ ಮತಗಳು ಇಲ್ಲಿ ಎಐಎಂಐಎಂ, ಬಿಎಸ್‌ಪಿ ಮತ್ತು ಎಸ್‌ಪಿ ನಡುವೆ ಹಂಚಿ ಹೋಗಿದ್ದು ಕಾಂಗ್ರೆಸ್‌ಗೆ ಮಳುವಾಗಿತ್ತು.

ಮುಸ್ಲಿಂ ಸಮುದಾಯವೇ ಹೆಚ್ಚಿರುವ ಸಹಾರನ್‌ಪುರದಲ್ಲೂ ಬಿಜೆಪಿಯ ಅಜಯ್ ಕುಮಾರ್‌ ಮೇಯರ್ ಆಗಿದ್ದಾರೆ. ಖದೀಜಾ ಮಸೂದ್ ಇಲ್ಲಿ ಸುಮಾರು 8000 ಮತಗಳಿಂದ ಸೋತಿದ್ದರು. ಖದೀಜಾ ಇಲ್ಲಿ 1.46 ಲಕ್ಷ ಮತಗಳನ್ನು ಗಳಿಸಿದ್ದರು. ಆದರೆ ಎಸ್‌ಪಿಯ ಅಭ್ಯರ್ಥಿ 22,038 ಮತಗಳನ್ನು ಬಾಚಿದ್ದರು. ಬರೇಲಿಯಲ್ಲಿ ಬಿಜೆಪಿ ಗೆದ್ದ ಸ್ಥಾನದಲ್ಲೂ ಸ್ವತಂತ್ರ ಅಭ್ಯರ್ಥಿ ಐಎಸ್‌ ತೋಮರ್‌ ಸೋಲಲು ಬಿಎಸ್‌ಪಿ ಗಳಿಸಿದ 16,846 ಮತಗಳು ಮತ್ತು ಎಐಎಂಐಎಂ ಗಳಿಸಿದ 10,356 ಮತಗಳ ವಿಭಜನೆ ಕಾರಣ.

ಒಬಿಸಿ ಮಹಿಳಾ ಮೀಸಲು ಕ್ಷೇತ್ರವಾಗಿದ್ದ ಫಿರೋಜಾಬಾದ್‌ನಲ್ಲೂ ಬಿಜೆಪಿಯ ಕಾಮಿನಿ ರಾಥೋರ್ ಎಸ್‌ಪಿಯನ್ನು 27,000 ಮತಗಳಿಂದ ಸೋಲಿಸಿದ್ದರು. ಇಲ್ಲಿ ಬಿಎಸ್‌ಪಿಗೆ 52,695 ಮತಗಳು ಬಿದ್ದಿದ್ದವು.

ಪ್ರಯಾಗ್‌ರಾಜ್‌ನಲ್ಲಿ ಮುಸ್ಲಿಂ ಸಮುದಾಯದ ಮತಗಳು ಎಐಎಂಐಎಂ (24,023) ಮತ್ತು ಆಪ್‌ (14,253) ನಡುವೆ ಹಂಚಿ ಹೋಗಿದ್ದವು.

ಬಿಜೆಪಿ ಗೆದ್ದ ಮತ್ತೊಂದು ಮಹಿಳಾ ಮೀಸಲು ಕ್ಷೇತ್ರವಾದ ಗಾಜಿಯಾಬಾದ್‌ನಲ್ಲಿ ಬಿಎಸ್‌ಪಿ 63,249 ಮತಗಳನ್ನು ಗಳಿಸಿದರೆ, ಎಐಎಂಐಎಂ 26,045 ಮತಗಳನ್ನು ಗಳಿಸಿತ್ತು. ಎಸ್‌ಪಿ ಅಭ್ಯರ್ಥಿಯೂ 57,608 ಮತಗಳನ್ನು ಪಡೆದಿದ್ದರು.

ಬಿಜೆಪಿ ಪಾಲಾದ ಕಾನ್ಪುರ ನಗರ ಮಹಿಳಾ ಮೀಸಲು ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ ಎಸ್‌ಪಿ ಮತ್ತು ಕಾಂಗ್ರೆಸ್‌ ವಿರುದ್ಧ ಗೆದ್ದಿದ್ದಾರೆ. ಇಲ್ಲಿ ಎಐಎಂಐಎಂ 16,372 ಮತಗಳನ್ನು ಗಳಿಸಿದೆ. ಆಪ್‌ನ ಇಸ್ಮಾ ಜಹೀರ್ 9,839 ಮತಗಳು, ಎಸ್‌ಪಿ 35,638 ಮತಗಳು, ಎಐಎಂಐಎಂ 15,107 ಮತಗಳು ಹಾಗೂ ಬಿಎಸ್‌ಪಿ 12,852 ಮತಗಳನ್ನು ಗಳಿಸಿವೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಅಲಿಗಢದಲ್ಲೂ ಮುಸ್ಲಿಂ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಿತ್ತು. ಬಿಜೆಪಿ ಈ ಕ್ಷೇತ್ರದಲ್ಲಿ 61,000 ಮತಗಳ ಅಂತರದಿಂದ ಗೆದ್ದಿತ್ತು. ಎಸ್‌ಪಿಯ ಜಮೀರುಲ್ಲಾ ಖಾನ್ 1.32 ಲಕ್ಷ ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದೆದ್ದರು. ಇಲ್ಲಿ ಬಿಎಸ್‌ಪಿ 49,762 ಮತ್ತು ಎಐಎಂಐಎಂ 7,712 ಮತಗಳನ್ನು ಪಡೆದಿವೆ.

ಲಖನೌನಲ್ಲೂ ಬಿಎಸ್‌ಪಿಯ ಶಾಹೀನ್ ಬಾನೊ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿ 75,997 ಮತಗಳನ್ನು ಗಳಿಸಿದ್ದರು. ಆದರೆ ಮುಸ್ಲಿಂ ಮತಗಳು ಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ಹಂಚಿ ಹೋದವು. ಕಾಂಗ್ರೆಸ್ ಇಲ್ಲಿ 50,484 ಮತಗಳನ್ನು ಗಳಿಸಿತ್ತು. ಬಿಎಸ್‌ಪಿ 5545 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನ ಪಡೆದಿತ್ತು. ಬಿಜೆಪಿ ಈ ಸ್ಥಾನವನ್ನು 30,278 ಮತಗಳಿಂದ ಗೆದ್ದಿದೆ.

ನಗರ್ ಪಾಲಿಕಾ ಪರಿಷದ್ ಮತ್ತು ನಗರ್ ಪಂಚಾಯತ್ ಅಧ್ಯಕ್ಷ ಸ್ಥಾನಗಳಿಗೆ ಎಐಎಂಐಎಂನ ಮುಸ್ಲಿಂ ಅಭ್ಯರ್ಥಿಗಳು ಮತ್ತು ಆಪ್ ಅಭ್ಯರ್ಥಿಗಳಿಗೆ ಎಸ್‌ಪಿ ಮತ್ತು ಬಿಎಸ್‌ಪಿ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳು ಬಿದ್ದಿದ್ದವು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1800 ಕೋಟಿ ರೂ. ಪಾವತಿಸಿ ಎಂದು ಐಟಿ ಇಲಾಖೆಯಿಂದ ಕಾಂಗ್ರೆಸ್‌ಗೆ ಡಿಮ್ಯಾಂಡ್ ನೋಟಿಸ್

ಲೋಕಸಭಾ ಚುನಾವಣೇ ಕೆಲವೇ ದಿನಗಳು ಇರುವ ಮುನ್ನವೇ ಆದಾಯ ತೆರಿಗೆ ಇಲಾಖೆಯು...

ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಒಡೆದ ಮನೆಯಾದ ಬಿಜೆಪಿ; ಕಾಂಗ್ರೆಸ್‌ಗೆ ಅಚ್ಚರಿಯ ಲಾಭ?

ಕಳೆದ ವರ್ಷ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ...