ಜೈಪುರ | ಹಿಂದೂ ಗುರುಗಳು ನೀಡಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚು: ಮೋಹನ್‌ ಭಾಗವತ್‌

Date:

  • ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಹೇಳಿಕೆ
  • ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಗುರುಗಳ ಉಲ್ಲೇಖ

ಜಗತ್ತಿನಾದ್ಯಂತ ಆಚರಿಸುವ ಗುಡ್‌ ಫ್ರೈಡೇ (ಶುಭ ಶುಕ್ರವಾರ) ದಿನವೇ ಕ್ರೈಸ್ತ್ರ ಮಿಷನರಿಗಳ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಗಂಭೀರ ಹೇಳಿಕೆ ನೀಡಿದ್ದಾರೆ. ಮಿಷನರಿಗಳಿಗಿಂತಲೂ ಹಿಂದೂ ಗುರುಗಳು ಹೆಚ್ಚಿನ ಸೇವೆ ನೀಡಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.

ಆರ್‌ಎಸ್‌ಎಸ್ ವತಿಯಿಂದ ಜೈಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದಾರೆ.

“ದೇಶದ ಬುದ್ಧಿಜೀವಿಗಳು ಮಿಷನರಿಗಳನ್ನು ಅವುಗಳ ಸೇವೆಗಾಗಿ ಗುರುತಿಸುತ್ತಾರೆ. ಆದರೆ, ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಹಿಂದೂ ಆಧ್ಯಾತ್ಮಿಕ ಗುರುಗಳು, ಮಿಷನರಿಗಳು ನೀಡಿರುವುದಕ್ಕಿಂತಲೂ ಹೆಚ್ಚಿನ ಸೇವೆ ನೀಡಿದ್ದಾರೆ” ಎಂದು ಮೋಹನ್‌ ಭಾಗವತ್ ಪ್ರತಿಪಾದಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಚೆನ್ನೈನಲ್ಲಿ ಹಿಂದೂ ಸೇವಾ ಮೇಳ ಆಯೋಜಿಸಿದ್ದ ವೇಳೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆ ಮಾತನಾಡುವ ಪ್ರಾಂತ್ಯಗಳ ಹಿಂದೂ ಮುನಿಗಳು, ಆಚಾರ್ಯರು, ಸನ್ಯಾಸಿಗಳ ಸಮಾಜ ಸೇವೆ ಮಿಷನರಿಗಳಿಂತ ಹಲವು ಪಟ್ಟು ಹೆಚ್ಚಿದೆ ಎಂಬುದು ತಿಳಿದು ಬಂದಿದೆ” ಎಂದಿದ್ದಾರೆ.

“ಆದರೆ, ಅವರು ಹೆಚ್ಚು, ಇವರು ಹೆಚ್ಚು ಎಂದು ನಾನು ಯಾವುದೇ ಸ್ಪರ್ಧೆಯ ಬಗ್ಗೆ ಮಾತನಾಡುತ್ತಿಲ್ಲ. ಇದು ಸೇವೆಯ ಅಳತೆಗೋಲಾಗದು. ಸೇವೆ ಎಂಬುದು ಸೇವೆ. ಸೇವೆ ಯಾವುದೇ ಸ್ಪರ್ಧೆಯ ವಿಷಯವಲ್ಲ. ಸೇವೆ ಎಂಬುದು ಮನುಷ್ಯನ ನೈಸರ್ಗಿಕ ಭಾವನೆಯಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ತೆಲಂಗಾಣದಲ್ಲಿ ಮೋದಿ : ಕಾರ್ಯಕ್ರಮದಿಂದ ದೂರ ಉಳಿದ ಕೆಸಿಆರ್‌

“ಸೇವೆಗಳ ಬಗ್ಗೆ ಮಾತನಾಡುವಾಗ, ಸಾಮಾನ್ಯ ಜನರು ಪ್ರಪಂಚದಾದ್ಯಂತ ಶಾಲೆಗಳು ಮತ್ತು ಅನೇಕ ಸಂಸ್ಥೆಗಳನ್ನು ನಡೆಸುವ ಮಿಷನರಿಗಳ ಹೆಸರನ್ನು ಉಲ್ಲೇಖಿಸುತ್ತಾರೆ. ಆದರೆ, ಹಿಂದೂ ಸಂತರು ಸಲ್ಲಿಸಿದ ಸೇವೆ ಕಡಿಮೆಯೇನಿಲ್ಲ” ಎಂದಿದ್ದಾರೆ.

“ಸೇವೆಗೆ ಯಾವುದೇ ಅಳತೆ ಇರಬಾರದು, ಇದು ಸ್ಪರ್ಧೆಯ ವಿಷಯವಲ್ಲ. ಇದು ಮನುಷ್ಯನ ಸಹಜ ಅಭಿವ್ಯಕ್ತಿಯಾಗಿದೆ. ಭಾರತವು ಬೆಳೆಯಬೇಕಾದರೆ ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ನಗುಮೊಗದಿಂದ ಸೇವೆ ಸಲ್ಲಿಸಲು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

ಕ್ರೈಸ್ತರನ್ನು ಗುರಿಯಾಗಿಸಿ ಅವರ ಮೇಲೆ ಪದೇಪದೆ ದಾಳಿ ಮಾಡುವ ಸಂಘ ಪರಿವಾರವು, ಈಗ ಅವರ ಮಿಷನರಿಗಳ ವಿಷಯದ ಕುರಿತು ಚರ್ಚೆ ಹುಟ್ಟುಹಾಕಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಜಗತ್ತಿನಾದ್ಯಂತ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾರ್ವಜನಿಕ ಸೇವೆ ನೀಡುತ್ತಿರುವ ಕ್ರೈಸ್ತ ಮಿಷನರಿಗಳ ಸೇವೆಯ ಕುರಿತು ಭಾಗವತ್ ಹೇಳಿಕೆ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಿಪ್ಯಾಟ್ ಪ್ರಕರಣ: ನಾವು ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಮತದಾನ ಯಂತ್ರದ ಮೂಲಕ ಮತ ಚಲಾಯಿಸಿದ ನಂತರ ವಿವಿಪ್ಯಾಟ್ ಮೂಲಕ ಮತದಾರರಿಗೆ...

ದೇಶದ ಶೇ.90 ರಷ್ಟಿರುವ ಬಡಜನತೆಗೆ ನ್ಯಾಯ ಒದಗಿಸುವುದೇ ನಮ್ಮ ಯೋಜನೆ: ರಾಹುಲ್ ಗಾಂಧಿ

ಬಡತನದ ಬೇಗೆಯಲ್ಲಿ ನಲುಗುತ್ತಿರುವ ದೇಶದ ಶೇ.90 ರಷ್ಟು ಬಡವರಿಗೆ ನ್ಯಾಯ ಒದಗಿಸುವ...

ಮೋದಿ ದ್ವೇಷ ಭಾಷಣ | ಪ್ರಧಾನಿಗೆ ಸಲಹೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

ಕಳೆದ ಏಪ್ರಿಲ್ 21ರಂದು ರಾಜಸ್ಥಾನದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮುಸಲ್ಮಾನರ...

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...