ಎಸ್‌ಐಆರ್ ಪ್ರಕ್ರಿಯೆಯು ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಸಾರ್ವಜನಿಕ ಜಾಗೃತಿ, ಅಧಿಕೃತ ಮಾಹಿತಿಯ ಸುಲಭ ಲಭ್ಯತೆ ಹಾಗೂ ನ್ಯಾಯಯುತ ವಿಲೇವಾರಿ ಅತ್ಯಂತ ಮುಖ್ಯ. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳುವುದು ತಮ್ಮ ಮತದಾನದ ಹಕ್ಕನ್ನು ರಕ್ಷಿಸುವ ಏಕೈಕ ಮಾರ್ಗವಾಗಿದೆ.
ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(Special Intensive Revision-SIR) ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮತದಾರರ ಹೆಸರು, ದಾಖಲೆಗಳು ಹಾಗೂ ಅರ್ಹತೆಯ ಪರಿಶೀಲನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತು ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ, SIR ವಿರೋಧಿ-ಕರ್ನಾಟಕ ಸಂಘಟನೆ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದಿಂದ ಹೋರಾಟ ಮುಂದುವರೆದಿದೆ.
ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನೋಟಿಸ್‌ಗಳ ವಿತರಣೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್‌ವರೆಗೆ ಮುಂದುವರೆಯಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟಿಸುವ ವೇಳಾಪಟ್ಟಿ ಇದೆ.
ಕರ್ನಾಟಕದ ಕರಡು ಪಟ್ಟಿಯಲ್ಲಿ ಹಿಂದಿನ ಪಟ್ಟಿಯಲ್ಲಿದ್ದ ಒಂದು ಕೋಟಿಗೂ ಅಧಿಕ ಮತದಾರರ ಹೆಸರುಗಳು ವಿವಿಧ ಕಾರಣಗಳಿಂದ ಕರಡು ಪಟ್ಟಿಯಲ್ಲಿ ಕಾಣಿಸದಿರುವುದು ವರದಿಯಾಗಿದೆ. ಇಂತಹ ಮತದಾರರನ್ನು ‘Absent, Shifted, Dead, Duplicate or Others’ (ASDDO) ವಿಭಾಗದಲ್ಲಿ ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ಹೆಸರು ಕಾಣೆಯಾಗಿರುವ ಮತದಾರರು ತಮ್ಮ ಹೆಸರು ಯಾವ ಕಾರಣಕ್ಕೆ ಪಟ್ಟಿಯಲ್ಲಿಲ್ಲ ಎಂಬುದನ್ನು ಪರಿಶೀಲಿಸುವುದು ಹಾಗೂ ಅಗತ್ಯವಿದ್ದಲ್ಲಿ ನಿಗದಿತ ಪ್ರಕ್ರಿಯೆಯ ಮೂಲಕ ಹಕ್ಕು ಮಂಡಿಸುವುದು ಮಹತ್ವ ಪಡೆದಿದೆ.
“ಚುನಾವಣಾ ಆಯೋಗದ ಪ್ರಕ್ರಿಯೆಯ ಪ್ರಕಾರವೂ ಮತದಾರರ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು, ದಾಖಲೆಗಳನ್ನು ಪರಿಶೀಲಿಸುವುದು ಮತ್ತು ಹಕ್ಕು-ಆಕ್ಷೇಪಣೆಗಳಿಗೆ ಅವಕಾಶ ನೀಡುವ ವ್ಯವಸ್ಥೆ ರೂಪಿಸಲಾಗಿದೆ. ಹೀಗಾಗಿ, SIR ಕುರಿತು ಉಂಟಾಗಿರುವ ಗೊಂದಲ ಮತ್ತು ಆತಂಕ ನಿವಾರಿಸಲು ಅಧಿಕೃತ ಮಾಹಿತಿ ಜನರಿಗೆ ಸುಲಭವಾಗಿ ತಲುಪಿಸುವುದು, ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಲು ನೆರವು ನೀಡುವುದು ಮತ್ತು ಅರ್ಹ ಮತದಾರರ ಹಕ್ಕು ರಕ್ಷಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ” ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
“ವಯಸ್ಸಾದ ವೃದ್ಧರು ತಮ್ಮ ಪಿಂಚಿಣಿಗಾಗಿ ಎಷ್ಟೋ ಜನ ಅಂಬಾಲಿಸುತ್ತ ಇದ್ದಾರೆ. SIR ಬಗ್ಗೆ ಅರಿವಿಲ್ಲ ಅವರಿಗೆ. ಮತದಾರರ ಮತಗಳನ್ನು ತೆಗೆದು ಹಾಕಿರುವುದರಿಂದ ಬಡವರಿಗೆ ತುಂಬಾ ಸಮಸ್ಯೆಯಾಗಿದೆ. ಚುನಾವಣಾ ಆಯೋಗದಲ್ಲಿ ಮೂವರೂ ಆಯುಕ್ತರು ಸಮಾನರು. ಅದು ಸರ್ವಸಮ್ಮತಿಯ ಮೇಲೆ ಕಾರ್ಯನಿರ್ವಹಿಸಬೇಕು. ವಿಶೇಷ ಸಂದರ್ಭದಲ್ಲಿ ಮಾತ್ರ ಬಹುಸಂಖ್ಯಾತ ಅಭಿಪ್ರಾಯದ ಮೇಲೆ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಡೆದಿರುವುದು ಆಯೋಗದ ಒಳಗಡೆ ಸರ್ವಸಮ್ಮತಿ ಇಲ್ಲವೇ ಇಲ್ಲ. ಮಾತ್ರವಲ್ಲ ಬಹುಸಂಖ್ಯಾತರ ಅಭಿಪ್ರಾಯವನ್ನೂ ತಳ್ಳಿ ಹಾಕಿ, ಏಕವ್ಯಕ್ತಿ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಂಡಿದ್ದಾರೆ. ಜ್ಞಾನೇಶ್ ಕುಮಾರ್‌ಗೆ ಇಂತಹ ಧೈರ್ಯ ಎಲ್ಲಿಂದ ಬರಲು ಸಾಧ್ಯ? ತನ್ನನ್ನು ಆಯ್ಕೆ ಮಾಡಿರುವ ಮೋದಿ ಶಾ ನನ್ನ ಬೆನ್ನಿಗೆ ಇದ್ದಾರೆ ಮತ್ತು ನನ್ನ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲೂ ಅವಕಾಶ ಇಲ್ಲದಂತೆ ಕಾನೂನುಗಳನ್ನೇ ತಿದ್ದುಪಡಿ ಮಾಡಿದ್ದಾರೆಂಬ ಗರ್ವ ಅವರಿಗೆ” ಎಂಬುದು ಹೋರಾಟಗಾರ ಮಾತಾಗಿದೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ
SIRನಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ: ದಾಖಲೆಗಳ ವ್ಯತ್ಯಾಸ ಅಥವಾ ತಾಂತ್ರಿಕ ದೋಷಗಳಿಂದ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಅಪಾಯವಿದೆ. ಹಳೆಯ ಮತದಾರರ ಪಟ್ಟಿ, ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳ ಸಮಸ್ಯೆಯಾಗಿದೆ. ಬಡವರು, ವಲಸೆ ಕಾರ್ಮಿಕರು, ವೃದ್ಧರು ಹಾಗೂ ವಿಕಲಚೇತನರಿಗೆ ದಾಖಲೆ ಸಲ್ಲಿಸುವುದು ಮತ್ತು ವಿಚಾರಣೆಗೆ ಹಾಜರಾಗುವುದು ಕಷ್ಟವಾಗಬಹುದು. ಮಹಿಳೆಯರಿಗೆ ದಾಖಲೆಗಳ ಸಮಸ್ಯೆ ತಲೆದೂರಿದೆ. ಮದುವೆಯ ಬಳಿಕ ವಿಳಾಸ ಬದಲಾವಣೆ, ಹೆಸರು ಬದಲಾವಣೆ ಹಾಗೂ ಹಳೆಯ ದಾಖಲೆಗಳ ವ್ಯತ್ಯಾಸಗಳಿಂದ ಪರಿಶೀಲನೆಗೆ ತೊಂದರೆಯಾಗಬಹುದು. ಹೆಸರುಗಳಲ್ಲಿನ ತಪ್ಪು ಹೆಸರು, ವಯಸ್ಸು, ವಿಳಾಸ ಮತ್ತು ಕುಟುಂಬದ ವಿವರಗಳಲ್ಲಿನ ವ್ಯತ್ಯಾಸದಿಂದ ಸಾಮಾನ್ಯ ಜನರೂ ಸಂಕಷ್ಟ ಎದುರಿಸಬೇಕಾಗಿದೆ.
ಆಗಸ್ಟ್ 24ರಂದು ಕರಡು ಪಟ್ಟಿ ಪ್ರಕಟವಾದ ನಂತರ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗಿತ್ತು. ನೋಟಿಸ್‌ಗಳ ವಿತರಣೆ ಮತ್ತು ವಿಚಾರಣೆ ಪ್ರಕ್ರಿಯೆ ಅಕ್ಟೋಬರ್‌ವರೆಗೆ ಮುಂದುವರಿಯಲಿದ್ದು, ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು. ಈ ಅವಧಿಯಲ್ಲಿ ಹೆಸರು ಕಾಣೆಯಾಗಿರುವ ಅರ್ಹ ಮತದಾರರು Form-6 ಮೂಲಕ ಹಕ್ಕು ಮಂಡಿಸುವುದು, ನೋಟಿಸ್ ಪಡೆದವರು ಸಂಬಂಧಪಟ್ಟ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವುದು ಮತ್ತು ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ವೃದ್ಧರು, ಬಡವರು, ವಲಸೆ ಕಾರ್ಮಿಕರು, ಮಹಿಳೆಯರು ಮತ್ತು ವಿಕಲಚೇತನರಂತಹ ದುರ್ಬಲ ವರ್ಗಗಳಿಗೆ ದಾಖಲೆ ಸಲ್ಲಿಸುವುದು ಮತ್ತು ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸವಾಲಾಗಬಹುದು. ಹೆಸರು, ವಯಸ್ಸು, ವಿಳಾಸ ಅಥವಾ ಕುಟುಂಬ ವಿವರಗಳಲ್ಲಿನ ಸಣ್ಣ ವ್ಯತ್ಯಾಸಗಳು ಸಹ ತೊಂದರೆ ಉಂಟುಮಾಡಬಹುದು. ಆದ್ದರಿಂದ ಚುನಾವಣಾ ಆಯೋಗವು ಅಧಿಕೃತ ಮಾಹಿತಿಯನ್ನು ಸರಳವಾಗಿ ತಲುಪಿಸುವುದು, ಸಹಾಯ ಕೇಂದ್ರಗಳನ್ನು ಬಲಪಡಿಸುವುದು ಮತ್ತು ಅರ್ಹರ ಹಕ್ಕು ರಕ್ಷಣೆಗೆ ಪಾರದರ್ಶಕ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ.
SIR ವಿರೋಧಿ ಸಂಘಟನೆಗಳು ಮತ್ತು ಜಾತ್ಯತೀತ ಪಕ್ಷಗಳ ಒಕ್ಕೂಟದ ಹೋರಾಟವು ಈ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಆತಂಕವನ್ನು ಹೈಲೈಟ್ ಮಾಡುತ್ತಿದೆ. ಚುನಾವಣಾ ಆಯೋಗದೊಳಗಿನ ಸರ್ವಸಮ್ಮತಿ ಮತ್ತು ನಿರ್ಧಾರಗಳ ಪಾರದರ್ಶಕತೆಯ ಕುರಿತು ವ್ಯಕ್ತವಾಗುತ್ತಿರುವ ಪ್ರಶ್ನೆಗಳೂ ಸಹ ಗಂಭೀರವಾಗಿವೆ. ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿರುವುದರಿಂದ, ಅರ್ಹ ಮತದಾರರ ಯಾವುದೇ ಹೆಸರು ತಪ್ಪಾಗಿ ಕೈಬಿಡದಂತೆ ಎಲ್ಲರೂ ಜಾಗೃತರಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಮತ್ತು ಅಧಿಕಾರಿಗಳು ಸೂಕ್ತ ಸಹಾಯವನ್ನು ನೀಡುವುದು ಅನಿವಾರ್ಯವಾಗಿದೆ.
ಎಸ್‌ಐಆರ್ ಪ್ರಕ್ರಿಯೆಯು ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಸಾರ್ವಜನಿಕ ಜಾಗೃತಿ, ಅಧಿಕೃತ ಮಾಹಿತಿಯ ಸುಲಭ ಲಭ್ಯತೆ ಹಾಗೂ ನ್ಯಾಯಯುತ ವಿಲೇವಾರಿ ಅತ್ಯಂತ ಮುಖ್ಯ. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳುವುದು ತಮ್ಮ ಮತದಾನದ ಹಕ್ಕನ್ನು ರಕ್ಷಿಸುವ ಏಕೈಕ ಮಾರ್ಗವಾಗಿದೆ.




