ಮೋದಿಯ ಕೈಬಿಟ್ಟ ಶ್ರೀರಾಮ-ಹನುಮ; ಕೈ ಹಿಡಿದದ್ದು ಸಂವಿಧಾನ

Date:

ಇಂದು ಸಂಸತ್ತು ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಎನ್‌ಡಿಎ ಸಂಸದರ ಸಭೆ ನಡೆಸಿದ ಪ್ರಧಾನಿ ಮೋದಿ, ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಅಂತೂ, ತಾವು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಮೋದಿ ಒಪ್ಪಿಕೊಂಡಂತಾಗಿದೆ.

- Advertisement -

ಮೋದಿ ಅವರ ಇಂದಿನ ನಡೆ ತಮ್ಮನ್ನು ಶ್ರೀರಾಮ, ಹನುಮಂತ ಕೊನೆವರೆಗೂ ಕೈಹಿಡಿಯುವುದಿಲ್ಲ. ಈ ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಅಂತಿಮ ಎಂಬುದನ್ನು ಅವರು ಅರಿತಂತೆ ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

2014ರಲ್ಲಿ ರಾಮಮಂದಿರ, ಶ್ರೀರಾಮನ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ, 10 ವರ್ಷಗಳ ಕಾಲ ಸರ್ವಾಧಿಕಾರಿಯ ಶೈಲಿಯಲ್ಲಿ ಆಡಳಿತ ನಡೆಸಿದರು. ಅವರ ಆಡಳಿತದಲ್ಲಿ ದೇಶಾದ್ಯಂತ ಹನುಮಂತನ ಹೆಸರಿನಲ್ಲಿ ನಾನಾ ಗಲಾಟೆ, ಗಲಭೆ, ಹಿಂಸಾಚಾರಗಳು ನಡೆದವು. ರಾಮ ರಾಜ್ಯ ಕಟ್ಟುತ್ತೇವೆಂದು ಮುಸ್ಲಿಂ ವಿರೋಧಿ ದ್ವೇಷ ಹರಡಿ, ಭಾರತವನ್ನು ಧರ್ಮದ ಆಧಾರದ ವಿಭಜಿಸಲು ಯತ್ನಿಸಿದರು. ಅಸಹಿಷ್ಣುತೆಯನ್ನು ಬಿತ್ತಿದರು.

ಅವರ ರಾಮ, ಧರ್ಮ, ಭಜರಂಗಿ ಮಾತಿಗೆ ದೇಶದ ಕೆಲ ಯುವಜನರು ಬಲಿಯಾದರು. ಕೇಸರಿ ಧ್ವಜ ಹಿಡಿದು ದಾಂಧಲೆ ನಡೆಸಿದರು. ಮೋದಿಯೇ ವಿಶ್ವಗುರು – ಮೋದಿಯಿಂದ ಎಲ್ಲವೂ ಸಾಧ್ಯ ಎಂಬ ಭ್ರಮೆಯನ್ನು ಸಂಘಪರಿವಾರ ಯುವಜನರ ತಲೆಯಲ್ಲಿ ತುಂಬಿತು. ಈಗಲೂ, ಕೆಲ ಯುವಜನರು ಅದೇ ಗುಂಗಿನಲ್ಲಿದ್ದಾರೆ.

ಆದರೆ, ಆ ಭ್ರಮೆ ಮೋದಿಗೆ ಮತ್ತೆ ಪೂರ್ಣ ಪ್ರಮಾಣದ ಅಧಿಕಾರ ತಂದುಕೊಡಲಿಲ್ಲ. ಶ್ರೀರಾಮ, ಹನುಮಂತ, ಮಂದಿರ ಇದ್ಯಾವುದೂ ಮೋದಿ ಹಾಗೂ ಬಿಜೆಪಿಯ ಕೈಹಿಡಿಯಲಿಲ್ಲ. ಶ್ರೀರಾಮನ ರಾಮಮಂದಿರ ಇರುವ ಉತ್ತರ ಪ್ರದೇಶದ ಅಯೋಧ್ಯೆ(ಫೈಝಾಬಾದ್ ಲೋಕಸಭಾ ಕ್ಷೇತ್ರ) ಹಾಗೂ ಹನುಮಂತನ ಜನ್ಮಸ್ಥಳ, ಹಿಂದಿನ ಕಿಷ್ಕಿಂಧೆ ಎನ್ನಲಾದ ಕರ್ನಾಟಕದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಉತ್ತರದಲ್ಲಿ ರಾಮ, ದಕ್ಷಿಣದಲ್ಲಿ ಹನುಮ ಬಿಜೆಪಿಯ ಕೈಬಿಟ್ಟಿದ್ದಾರೆ.

ರಾಮ-ಹನುಮಂತನದ್ದೂ ಎನ್ನಲಾದ ಕ್ಷೇತ್ರಗಳಲ್ಲಿ ಪ್ರೀತಿ-ಸೌಹಾರ್ದತೆಗೆ ಜನರು ಮತ ಹಾಕಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವವು ದೇಶದಲ್ಲಿ ಉಳಿಯಬೇಕು. ಸಮಾನತೆ, ಸಮಾಜವಾದದ ತತ್ವದೊಂದಿಗೆ ಭಾರತವು ಮುನ್ನಡೆಯಬೇಕು ಎಂಬುದನ್ನು ಸಾರಿದ್ದಾರೆ.

ಮತದಾರರು ದ್ವೇಷ, ವಿಭಜನೆಯ ವಿರುದ್ಧ ಮತ ಚಲಾಯಿಸಿದರೆ, ಮತ್ತೊಂದೆಡೆ, ಮೋದಿಯ ಸರ್ವಾಧಿಕಾರ ಅಡಗಿಹೋಗಿದೆ. ಮೋದಿ ಮತ್ತೆ ತನ್ನ ಸರ್ವಾಧಿಕಾರಿ ಧೋರಣೆಯನ್ನು ತೊಡೆದು, ಪ್ರಜಾಪ್ರಭುತ್ವದ ರಾಜಕಾರಣಕ್ಕೆ ಮರಳುತ್ತಿದ್ದಾರೆ. ಹೀಗಾಗಿಯೇ, ಸಂಸತ್‌ನಲ್ಲಿ ಸಂವಿಧಾನಕ್ಕೆ ನಮಿಸಿದ್ದಾರೆ. ಸಂವಿಧಾನವನ್ನು ತನ್ನ ಹಣೆಗೆ ಒತ್ತಿಕೊಂಡಿದ್ದಾರೆ.

ಚುನಾವಣೆಗೂ ಮುನ್ನ, ಬಿಜೆಪಿಯ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು. ಈ ಬಾರಿ ಬಿಜೆಪಿಗೆ 400 ಸ್ಥಾನಗಳನ್ನು ಕೊಟ್ಟರೆ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಅಲ್ಲದೆ, ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲುಸಿಂಗ್, ರಾಜಸ್ಥಾನದ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಸೇರಿದಂತೆ ಹಲವು ಬಿಜೆಪಿಗರು ಕೂಡ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರು. ಆದರೆ, ಅವರೆಲ್ಲರನ್ನೂ ಸಂವಿಧಾನವೇ ಬದಲಿಸಿದೆ. ಎಲ್ಲರೂ ಸೋತು ಸುಣ್ಣವಾಗಿದ್ದಾರೆ. ಈ ದೇಶದ ಪರಮಶ್ರೇಷ್ಠ ಗ್ರಂಥವಾದ ಸಂವಿಧಾನವು ಬಿಜೆಪಿ ಅಹಂಕಾರದ ಬುಡಕ್ಕೆ ಕೊಡಲಿ ಏಟು ಕೊಟ್ಟಿದೆ.

ಅದಾಗ್ಯೂ, ಶ್ರೀರಾಮ-ಹನುಮಂತ ಕೈಬಿಟ್ಟ ಮೋದಿಯನ್ನು ಸಂವಿಧಾನವೇ ಮತ್ತೊಮ್ಮೆ ಪ್ರಧಾನಿಯಾಗಿ ಮಾಡುತ್ತಿದೆ. ಸಂವಿಧಾನ ಮೋದಿಯ ಕೈಹಿಡಿದಿದೆ. ಇನ್ನಾದರೂ, ಮೋದಿ-ಶಾ ತಮ್ಮ ಅಹಂಕಾರ, ಸರ್ವಾಧಿಕಾರ, ಏಕ ವ್ಯಕ್ತಿ ಆಡಳಿತವೆಂಬ ಹುಂಬತನವನ್ನು ಬಿಟ್ಟು, ಪ್ರಜಾಪ್ರಭುತ್ವದ ಆಶಯಕ್ಕೆ ತಲೆ ಬಾಗಿ ಆಡಳಿತ ನಡೆಸಲಿ. ಸಂವಿಧಾನದ ಆಶಯಗಳನ್ನು ಹೊತ್ತುಕೊಂಡು ನಡೆಯಲಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಕೀರನಂತೆ ‘ಜೋಳಿಗೆ’ ಎತ್ತಿಕೊಂಡು ಹೋಗುವ ಸಮಯ ಬಂತು, ಹೊರಡಿ ಮೋದಿಜಿ: ಕಾಂಗ್ರೆಸ್ ಲೇವಡಿ

ದೇಶಾದ್ಯಂತ ಔಷಧಿಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ಭುಗಿಲೆದ್ದ ಆಕ್ರೋಶ; ತೀವ್ರಗೊಂಡ ಮೋಶಾ ದಮನ ಕ್ರಮಗಳು

ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌...

ಸಿಇಸಿ ಗ್ಯಾನೇಶ್ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಚುನಾವಣಾ...