ರಾಹುಲ್‌ ನಿರ್ದೇಶನದಂತೆ ನಡೆಯಲು ಸಿದ್ದರಾಮಯ್ಯ ಸಿದ್ಧ : ರಾಜಣ್ಣ ಹೇಳಿದ್ದೇನು?  

Date:

ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಗಿದ್ದಾರೆ. ಹೈಕಮಾಂಡ್‌ ಸೂಚಿಸಿದರೇ ಪದತ್ಯಾಗಕ್ಕೂ ಸಿದ್ದರಿದ್ದಾರೆ. ಹೈಕಮಾಂಡ್‌ ಸೂಚಿನೆಗೆ ಬದ್ಧರಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್‌ ರಾಜಣ್ಣ ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರ ವಿಷಯದ ಚರ್ಚಗೆ ಪುಷ್ಠಿ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ನಾವೆಲ್ಲಾ ಹೈಕಮಾಂಡ್‌ ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಪಕ್ಷದ ಭವಿಷ್ಯವೂ ಮುಖ್ಯ. ಸೂಕ್ತ ನಿರ್ಧಾರವನ್ನು ಹೈಕಮಾಂಡ್‌ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಆದಷ್ಟು ಬೇಗ ಹೈಕಮಾಂಡ್‌ ಗೊಂದಲಗಳಿಗೆ ತೆರೆ ಎಳೆಯಬೇಕು. ಗೊಂದಲ ಮುಂದುವರಿಯುವುದಕ್ಕೆ ಹೈಕಮಾಂಡ್‌ ಅವಕಾಶ ಮಾಡಿಕೊಡಬಾರದು. ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ಮಾಡಿದಾಗಲೂ ಅವರು ಮುಕ್ತ ಮನಸ್ಸಿನಲ್ಲಿದ್ದಾರೆ. ರಾಹುಲ್‌ ಗಾಂಧಿ ಅವರ ಸೂಚನೆ ಪಾಲಿಸುವುದಾಗಿ ಹೇಳಿದ್ದಾರೆ. ಆಗ ನಿಮ್ಮೆಲ್ಲರ ಸಹಕಾರ ಬೇಕು ಎನ್ನುವುದು ಅವರ ಅಭಿಪ್ರಾಯ. ರಾಹುಲ್‌ ಗಾಂಧಿ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ನಡೆಯೋಣ ಎಂದಿದ್ದಾರೆ. ಅಧಿಕಾರ ಶಾಶ್ವತವಲ್ಲ. ರಾಹುಲ್‌ ನಿರ್ದೇಶನದಂತೆ ಮುನ್ನಡೆಯಬೇಕು ಎನ್ನುವುದು ಸಿದ್ದರಾಮಯ್ಯರ ಮನಸ್ಥಿತಿಯಾಗಿದೆ ಎಂದು ರಾಜಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ : ಪಂಚಮಸಾಲಿ ಪೀಠಗಳ ಗೊಂದಲ- ಭಾಗ 1 | ಪಂಚಮಸಾಲಿಗರೇ ಪಂಚಪೀಠಗಳ ಆರ್ಥಿಕ ಮೂಲವಾಗಿದ್ದರು

ದಲಿತ ಸಿಎಂ ಆಗಬೇಕು ಎನ್ನುವುದಕ್ಕೆ ನಾನು ಈಗಲೂ ಬದ್ಧ ಎಂದಿರುವ ರಾಜಣ್ಣ, 2013-2018ರ ಸಿದ್ದರಾಮಯ್ಯಗೂ, ಈ ಅವಧಿಯ ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸವಿದೆ. ಅಹಿಂದ ವರ್ಗ ನಿಜವಾಗಿಯೂ ಸಮಾಧಾನದಿಂದಿಲ್ಲ ಎಂದು ಅವರು ಹೇಳಿದ್ದಾರೆ.

ಬದಲಾವಣೆಗೆ ಸಿದ್ಧತೆ :

ಸದ್ಯದ ರಾಜಕೀಯ ಬೆಳವಣಿಗೆಗಳ ಪ್ರಕಾರ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆಗಳ ಗಾಳಿ ಬೀಸುತ್ತಿದೆ. ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ಸಂಪುಟ ಪುನಾರಚನೆಯ ಕುರಿತು ಹೈಕಮಾಂಡ್ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಬಹುದೆಂಬ ಮಾಹಿತಿ ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ಪ್ರಸ್ತುತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ನಿಯಮವನ್ನು ಜಾರಿಗೊಳಿಸಲು ಹೈಕಮಾಂಡ್ ಆಸಕ್ತಿ ತೋರುತ್ತಿದ್ದು, ಹೊಸಬರಿಗೆ ಅಧ್ಯಕ್ಷ ಪಟ್ಟ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸರ್ಕಾರದ ಆಡಳಿತಕ್ಕೆ ಹೊಸ ವೇಗ ನೀಡಲು ಮತ್ತು ಸಂಪುಟದಲ್ಲಿ ಪುನಾರಚನೆ ಮಾಡಲು ಹೈಕಮಾಂಡ್ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.  

ಮೇ.04ರ ನಂತರ ಅಂತಿಮ ತೀರ್ಮಾನ ?

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಫಲಿತಾಂಶದ ನಂತರ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು, ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

ಸರ್ಕಾರ ರಚನೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ‘ಅಧಿಕಾರ ಹಂಚಿಕೆ’ ಸೂತ್ರದ ಪ್ರಕಾರ, ಎರಡೂವರೆ ವರ್ಷಗಳ ನಂತರ ಬದಲಾವಣೆ ಆಗಬೇಕಿತ್ತು. ನವೆಂಬರ್ 2025ಕ್ಕೆ ಸರ್ಕಾರ ಅರ್ಧ ಅವಧಿ ಪೂರೈಸಿದ್ದು, ಶಿವಕುಮಾರ್ ಬೆಂಬಲಿಗರು ಮತ್ತು ಕೆಲವು ಮಠಾಧೀಶರು ಅವರಿಗೆ ಸಿಎಂ ಪಟ್ಟ ನೀಡಬೇಕೆಂದು ಬಹಿರಂಗವಾಗಿಯೇ ಒತ್ತಾಯಿಸುತ್ತಿದ್ದಾರೆ. ಈ ಎಲ್ಲಾ ವಿಷಯಗಳಿಗೆ ಹೈಕಮಾಂಡ್‌ ಶೀಘ್ರದಲ್ಲೇ ಅಂತಿಮ ನಿಷ್ಕರ್ಷೆಗೆ ಬರಲಿದೆ ಎಂದು ಹೇಳಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಹಸ್ತಪ್ರತಿ ಸಂರಕ್ಷಣೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ: ನಾ.ಗೀತಾಚಾರ್ಯ

ರಾಜ್ಯದ ಅಮೂಲ್ಯ ಜ್ಞಾನಸಂಪತ್ತಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸಮಗ್ರ ನೀತಿ...

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...

ಈಶಾನ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಶಶೀಲ್‌ ನಮೋಶಿ ಗೆಲುವು

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ ಭವಿಷ್ಯ

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ...