ಕೋಲಾರ | ಹಿಟ್ಲರ್‌, ಮುಸಲೋನಿ ನಾಯಕತ್ವ ಒಪ್ಪಿಕೊಂಡವರು ದೇಶ ನಡೆಸುತ್ತಿದ್ದಾರೆ: ಸಿದ್ದರಾಮಯ್ಯ

Date:

  • ಸತ್ಯಮೇವ ಜಯತೆ’ ಸಮಾವೇಶದ ಪೂರ್ವಸಿದ್ಧತಾ ಸಭೆಯಲ್ಲಿ ಹೇಳಿಕೆ
  • ಕೋಲಾರದಿಂದ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧನಿರುವೆ: ಸಿದ್ದರಾಮಯ್ಯ

ಕೋಲಾರದಲ್ಲಿ ಏಪ್ರಿಲ್ 9ರಂದು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆಯಲಿರುವ ‘ಸತ್ಯಮೇವ ಜಯತೆ’ ಸಮಾವೇಶದ ಪೂರ್ವಸಿದ್ಧತಾ ಸಭೆ ಶನಿವಾರ ಕೋಲಾರದಲ್ಲಿ ನಡೆಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ ಎಚ್‌ ಮುನಿಯಪ್ಪ, ಕೆ ಆರ್‌ ರಮೇಶ್‌ ಕುಮಾರ್‌ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು.

ಪೂರ್ವಸಿದ್ಧತಾ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, “ದೇಶದ ಜನರಲ್ಲಿ ಬೆದರಿಕೆ ಹುಟ್ಟಿಸಲು ರಾಹುಲ್‌ ಗಾಂಧಿ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ರಾಹುಲ್‌ ಅವರಿಗೆ ಈ ರೀತಿ ಮಾಡಿದ ಮೇಲೆ ಉಳಿದವರ ವಿಚಾರದಲ್ಲಿ ಸುಮ್ಮನಿರುತ್ತಾರಾ? ಬಿಜೆಪಿಗೆ ಯಾವತ್ತೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಒಂದು ದೇಶ, ಒಂದು ನಾಯಕತ್ವ, ಒಂದು ಭಾಷೆ ಮೇಲೆ ನಂಬಿಕೆ ಇಟ್ಟವರು‍” ಎಂದು ಟೀಕಿಸಿದರು.

“ದೇಶದಲ್ಲಿ ಹಿಟ್ಲರ್‌ ಮತ್ತು ಮುಸಲೋನಿ ವಂಶಸ್ಥರು ಇದ್ದರೆ ಅದು ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದವರು. ಜರ್ಮನಿಯ ಹಿಟ್ಲರ್‌ ಹಾಗೂ ಇಟಲಿಯ ಮುಸಲೋನಿ ಅವರ ನಾಯಕತ್ವ ಒಪ್ಪಿಕೊಂಡವರು ಈಗ ದೇಶ ನಡೆಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ರಾಹುಲ್ ಗಾಂಧಿ ಹೇಳಿರುವುದರಲ್ಲಿ ತಪ್ಪೇನಿದೆ? ಲಲಿತ್ ಮೋದಿ, ನೀರವ್‌ ಮೋದಿ ದೇಶದಿಂದ ಓಡಿ ಹೋಗಿಲ್ಲವೇ? ದೇಶದ ದುಡ್ಡನ್ನು ಲೂಟಿ ಮಾಡಿದವರಿಗೆ ಏನೆಂದು ಕರೆಯಬೇಕು? ಸಾಧು, ಸಂತರು, ರಾಷ್ಟ್ರಭಕ್ತ ಎಂದು ಕರೆಯಬೇಕೇ?” ಎಂದು ಅವರು ಕಿಡಿ ಕಾರಿದರು.

“ಈ ಎಲ್ಲ ಕಾರಣಕ್ಕಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಏ.9ರಂದು ‘ಸತ್ಯಮೇವ ಜಯತೆ’ ಸಮಾವೇಶ ಆಯೋಜಿಸುತ್ತಿದ್ದೇವೆ” ಎಂದರು. ಪೂರ್ವಸಿದ್ಧತಾ ಸಭೆ ಬಳಿಕ ಸಮಾವೇಶದ ಸ್ಥಳವನ್ನು ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ಸಿದ್ದರಾಮಯ್ಯ ಪರಿಶೀಲಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭ್ರಷ್ಟಾಚಾರದ ವಿರುದ್ಧ ಮೋದಿ ಯುದ್ಧ ಸಾರಿರುವುದು ನಿಜವೇ?!

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಕೋಲಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾನಸಿಕವಾಗಿ ಸ್ಪರ್ಧೆ ಮಾಡಲು ನಾನು ಸಿದ್ಧನಿರುವೆ. ಆದರೆ, ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಾಗಿ ನಡೆದುಕೊಳ್ಳುತ್ತೇನೆ” ಎಂದು ತಿಳಿಸಿದರು.

“ಏ.4ರಂದು ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ನಾನು ವರುಣಾದಲ್ಲೂ ಸ್ಪರ್ಧೆ ಮಾಡುವುದು ಈಗಾಗಲೇ ಘೋಷಣೆಯಾಗಿದೆ. ಇದು ನನ್ನ ಕೊನೆಯ ಚುನಾವಣೆಯಾಗಿದ್ದರಿಂದ ನನ್ನ ತವರೂರಿಂದ ಕಣಕ್ಕೆ ಇಳಿಯುತ್ತಿರುವೆ. ನನ್ನ ರಾಜಕೀಯ ಪ್ರಾರಂಭವಾಗಿದ್ದು ವರುಣಾದಿಂದ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ ಜಿಲ್ಲೆಯ ನೈತಿಕ ಪೊಲೀಸ್‌ ಗಿರಿಗೆ ಅಂತ್ಯ ಹಾಡುತ್ತೇವೆ: ಸಚಿವ ದಿನೇಶ್ ಗುಂಡೂರಾವ್

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಉಸ್ತುವಾರಿಯಾದ ಸಚಿವ ಡಿಜಿಆರ್ ಇಲ್ಲಿನ ಜನ...

ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ...

ದಲಿತರ ನ್ಯಾಯಯುತ ಬೇಡಿಕೆಗಳ ಅನುಷ್ಠಾನಕ್ಕೆ ‍ಸರ್ಕಾರ ಬದ್ಧ, ನಿಮ್ಮ ಋಣ ತೀರಿಸುತ್ತೇವೆ: ಡಿಕೆ ಶಿವಕುಮಾರ್

ಅಂಬೇಡ್ಕರ್ ಅಂದರೆ ಶಕ್ತಿ-ಸ್ವಾಭಿಮಾನ ಅವರು ನೀಡಿರುವ ಸಂವಿಧಾನ ಶಕ್ತಿಯನ್ನು ಉಳಿಸಿಕೊಂಡು ಹೋಗಬೇಕಿದೆ....

ನಮ್ಮಲ್ಲಿನ ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವಪಕ್ಷಿಯರ ವಿರುದ್ಧ ಸಿ ಟಿ ರವಿ ಕಿಡಿ

ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ ಪಕ್ಷದೊಳಗಿನ...