ತಮಿಳುನಾಡು ಚುನಾವಣೆ | ಡಿಎಂಕೆ, ಎಐಎಡಿಎಂಕೆ ಮೈತ್ರಿಗಳಿಗೆ ಗೆಲುವು ಸುಲಭದ ತುತ್ತಲ್ಲ

Date:

ಈ ಬಾರಿಯ ತಮಿಳುನಾಡು ಚುನಾವಣೆ ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬಹುಕೋನದ ಸ್ಪರ್ಧೆ ಕಣದಲ್ಲಿದ್ದು, ಆಡಳಿತರೂಢ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಅಧಿಕಾರ ಉಳಿಸಿಕೊಳ್ಳಬೇಕು ಎನ್ನುವ ಹಠವಾದರೇ, ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಅಧಿಕಾರಕ್ಕೆ ಏರಲೇಬೇಕು ಎನ್ನುವ ಪಟ್ಟು ಹಿಡಿದಿದೆ. ಈ ಎರಡು ಮೈತ್ರಿಕೂಟಗಳ ನಡುವೆ ನಟ, ರಾಜಕಾರಣಿ, ದಳಪತಿ ವಿಜಯ್‌ ಅವರ ಟಿವಿಕೆ ಮತ್ತು ಸೀಮನ್‌ ಅವರ ಎನ್‌ಟಿಕೆ ಕೂಡ ಕಣದಲ್ಲಿದ್ದು, ತಮಿಳು ಮತದಾರರಿಗೆ ಪರ್ಯಾಯ ರಾಜಕೀಯ ನೀಡುವುದಾಗಿ ಭರವಸೆ ನೀಡುತ್ತಿರುವುದು ತಮಿಳುನಾಡು ಚುನಾವಣೆಯ ಬಗ್ಗೆ ಆಸಕ್ತಿ ಹೆಚ್ಚಿಸಿದೆ.  

ಏಪ್ರಿಲ್‌ 23ರಂದು ತಮುಳುನಾಡಿನಲ್ಲಿ ಒಂದೇ ಹಂತದಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ.04ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ರಾಜಕೀಯ ತಂತ್ರಗಾರಿಕೆ ಜೋರಾಗಿದೆ. ಹೊಸ ಸಮೀಕ್ಷೆಯೊಂದು ಆಡಳಿತರೂಢ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡೆಬೇಕಿದೆ ಎಂದು ಹೇಳಿದೆ. ಆಡಳಿತ ವಿರೋಧಿ ಅಲೆ ಇಲ್ಲ ಎಂದು ತನ್ನ ಆಡಳಿತವನ್ನು ಸಮರ್ಥಿಸಿಕೊಳ್ಳುತ್ತಿದ್ದ ಡಿಎಂಕೆ ಪಕ್ಷಕ್ಕೆ ಇದು ಅಚ್ಚರಿ ಮೂಡಿಸಿದರೆ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಗೆ ಚುನಾವಣೆಯಲ್ಲಿ ಮತದಾರರು ಸಹಕರಿಸುವುದು ಬಹಳ ಕಷ್ಟ ಎಂದು ಹೇಳಿದೆ.

ವೋಟ್‌ ವೈಬ್‌ ಎನ್ನುವ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದು, ಆಡಳಿತರೂಢ ಡಿಎಂಕೆ ಮತ್ತು ವಿಪಕ್ಷ ಸ್ಥಾನದಲ್ಲಿರುವ ಎಐಎಡಿಎಂಕೆ ಮೈತ್ರಿಕೂಟಗಳಿಗೆ ಈ ಬಾರಿ ಗೆಲುವು ಸುಲಭದ ಗ್ರಾಸವಲ್ಲ ಎಂದು ಹೇಳಿದೆ. ಮಾತ್ರವಲ್ಲದೆ, ಡಿಎಂಕೆ ಅಥವಾ ಎಐಎಡಿಎಂಕೆ ಬಹುಮತಕ್ಕೆ ಬೇಕಾಗಿರುವ 118 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಕಷ್ಟವಿದೆ ಎಂದಿದೆ. ಉಭಯ ಮೈತ್ರಿಕೂಟಗಳಲ್ಲಿ ಯಾವುದೇ ಮೈತ್ರಿ ಸರ್ಕಾರ ರಚನೆ ಮಾಡಬೇಕಾದರೆ, ಟಿವಿಕೆ ಅಥವಾ ಎನ್‌ಟಿಕೆ ಪಕ್ಷಗಳನ್ನು ಸೇರಿಸಿಕೊಳ್ಳಬಹುದಾದ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.  

ಇದನ್ನೂ ಓದಿ : ಬಂಗಾಳ ಚುನಾವಣೆ | ಬಂಗಾಳದ ನೆಲದಲ್ಲಿ BJPಗೆ ನೆಲೆ ಕೊಟ್ಟಿದ್ದೇ TMC!

ಈ ಬಾರಿಯ ಚುನಾವಣೆಯಲ್ಲಿ ಟಿವಿಕೆ ಮತ್ತು ಎನ್‌ಟಿಕೆ ಕೆಲವು ಕ್ಷೇತ್ರಗಳಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆಯಬಹುದು ಎಂದಿದ್ದಲ್ಲದೇ, ಈ ಸಣ್ಣ ಸಣ್ಣ ಪಕ್ಷಗಳೇ ಅಥವಾ ಹೊಸ ಪಕ್ಷಗಳು ಕಿಂಗ್‌ ಮೇಕರ್‌ಗಳಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಯಾವುದೇ ಮೈತ್ರಿ ಸರ್ಕಾರ ರಚನೆ ಮಾಡಬೇಕು ಎಂದರೇ, ಈ ಸಣ್ಣ ಸಣ್ಣ ಪಕ್ಷಗಳ ಕಾಲು ಹಿಡಿಯಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಕೂಡ ಸಮೀಕ್ಷಾ ವರದಿ ಅಂದಾಜಿಸಿದೆ. ಆದರೇ, ವಿಜಯ್‌ ನೇತೃತ್ವದ ಟಿವಿಕೆ ಮತ್ತು ಸೀಮನ್‌ ನೇತೃತ್ವದ ಎನ್‌ಟಿಕೆ ಎಷ್ಟರ ಮಟ್ಟಿಗೆ ಮತ ಹಂಚಿಕೆಯನ್ನು ಪಡೆದುಕೊಳ್ಳುತ್ತದೆ ಮತ್ತು ಎಷ್ಟು ಕ್ಷೇತ್ರಗಳನ್ನು ಗೆಲ್ಲಲಿವೆ ಎನ್ನುವುದು ಬಹಳ ಮುಖ್ಯ ಪಾತ್ರವಾಗಲಿದೆ.

ಸಮೀಕ್ಷೆಯಲ್ಲಿ, ʼಯಾರನ್ನು ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವುದಕ್ಕೆ ಬಯಸುತ್ತೀರಿ ?ʼ ಎಂದು ಕೇಳಿದ ಪ್ರಶ್ನೆಗೆ, ಹಾಲಿ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌ ಪರವಾಗಿ ಶೇ.40 ರಷ್ಟು ಮಂದಿ ಪ್ರತಿಕ್ರಿಯಿಸಿದ್ದರೆ, ಎಡಪ್ಪಾಡಿ ಪಳನಿಸ್ವಾಮಿ ಪರವಾಗಿ ಶೇ.38ರಷ್ಟು, ದಳಪತಿ ವಿಜಯ್‌ ಪರವಾಗಿ ಶೇ.15ರಷ್ಟು ಮತ್ತು ಇತರೆ ಕೆಲವು ನಾಯಕರ ಪರವಾಗಿ ಒಟ್ಟು ಶೇ.8ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.   

ಸಮೀಕ್ಷೆ ಹೇಳುವ ಪ್ರಕಾರ, ಹೊಸದಾಗಿ ರಾಜಕೀಯಕ್ಕೆ ಪ್ರವೇಶಿಸಿದ ದಳಪತಿ ವಿಜಯ್‌ ಮೊದಲ ಬಾರಿಯ ಚುನಾವಣೆಯಲ್ಲಿಯೇ ಈ ಮಟ್ಟಿಗೆ ವಿಶ್ವಾಸ ಗಳಿಸಿರುವುದು ಒಳ್ಳೆಯ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ 118 ಕ್ಷೇತ್ರಗಳು ಬೇಕಾಗಿದ್ದು, ಡಿಎಂಕೆ ನೇತೃತ್ವದ ಒಕ್ಕೂಟ 113-123 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಿದರೆ, ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟ 106-116 ಕ್ಷೇತ್ರಗಳಲ್ಲಿ ಜಯ ಸಾಧಿಸಬಹುದು, ಇನ್ನು, ಪರ್ಯಾಯ ರಾಜಕೀಯದ ಭರವಸೆ ನೀಡಿರುವ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ 02-08 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಈ ಬಾರಿ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟ  ಶೇ. 40.1ರಷ್ಟು ಮತ ಹಂಚಿಕೆಯನ್ನು ಪಡೆಯಬಹುದೆಂದು ಹೇಳಿದ್ದಲ್ಲದೆ, ಎಐಎಡಿಎಂಕೆ ಮೈತ್ರಿಕೂಟ  ಶೇ. 38.1ರಷ್ಟು, ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ ಶೇ.14.8ರಷ್ಟು, ಸೀಮನ್‌ ನೇತೃತ್ವದ ಎನ್‌ಟಿಕೆ ಶೇ.2.7ರಷ್ಟು ಮತ್ತು ಇತರೆ ಸಣ್ಣ ಪುಟ್ಟ ಪಕ್ಷಗಳಿಗೆ ಶೇ.1.6ರಷ್ಟು ಮತ ಹಂಚಿಕೆಯಾಗಬಹುದು ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.3.1ರಷ್ಟು ಮಂದಿ ಯಾರಿಗೆ ಮತ ಹಾಕಬೇಕು ಎಂದು ಇನ್ನೂ ಕೂಡ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

ಒಟ್ಟಿನಲ್ಲಿ, ಈ ಬಾರಿಯ ತಮಿಳುನಾಡಿನ ಚುನಾವಣಾ ಕಣದಲ್ಲಿ ತೀವ್ರ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದೆಂದು ಈ ಸಮೀಕ್ಷೆ ಹೇಳಿದೆ. ಉಭಯ ಮೈತ್ರಿಕೂಟಗಳನ್ನು ಒಳಗೊಂಡು, ಸಣ್ಣ ಪುಟ್ಟ ಪಕ್ಷಗಳೂ ಕೂಡ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಅಂತಿಮವಾಗಿ ಮತದಾರ ಯಾರಿಗೆ ಒಲಿಯುತ್ತಾನೆ ಎನ್ನುವುದನ್ನು ಕಾದುನೋಡಬೇಕಿದೆ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...