VB-G RAM G ಮಸೂದೆ ಅಂಗೀಕಾರ: ವಿಪಕ್ಷಗಳ ವಿರೋಧ – ರಾತ್ರಿಯಿಡೀ ಧರಣಿ

Date:

20 ವರ್ಷ ಹಳೆಯ ಮನರೇಗಾ (MGNREGA) ಯೋಜನೆಯನ್ನು ರದ್ದುಗೊಳಿಸಿ, ಹೊಸದಾಗಿ ರೂಪಿಸಲಾಗಿರುವ VB-G RAM G ಮಸೂದೆಯನ್ನು ವಿಪಕ್ಷಗಳ ವಿರೋಧದ ನಡೆವೆಯೂ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ ಮಸೂದೆ ಅಂಗೀಕಾರವನ್ನು ವಿರೋಧಿಸಿ, ಮಸೂದೆಯಲ್ಲಿ ನ್ಯೂನತೆಗಳನ್ನು ತಿದ್ದಲು ಮಸೂದೆಯನ್ನು ಸಂಸದೀಯ ಸಮಿತಿಗೆ ವರ್ಗಾಯಿಸಲು ಆಗ್ರಹಿಸಿ ವಿಪಕ್ಷಗಳ ಸಂಸದರು ರಾತ್ರಿಯಿಡೀ ಧರಣಿ ನಡೆಸಿದ್ದಾರೆ.

- Advertisement -

ಅಸ್ತಿತ್ವದಲ್ಲಿರುವ ಮನರೇಗಾದಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದು, ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರಿರುವುದು, ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿರುವುದನ್ನು ವಿಪಕ್ಷಗಳು ಬಲವಾಗಿ ಟೀಕಿಸಿವೆ. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಸಂಸದರು ಸೇರಿದಂತೆ ವಿಪಕ್ಷಗಳ ಹಲವು ಸಂಸದರು ಸಂಸತ್ತಿನ ಆವರಣದಲ್ಲಿರುವ ಸಂವಿಧಾನ್ ಸದನದ ಹೊರಗೆ 12 ಗಂಟೆಗಳ ಕಾಲ ರಾತ್ರಿಯಿಡೀ ಧರಣಿ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ರಾಜ್ಯಸಭೆಯಲ್ಲಿ ಮಸೂದೆ ಕುರಿತು ಐದು ಗಂಟೆಗಳ ಚರ್ಚೆ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, “ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಹಲವಾರು ಬಾರಿ ಕೊಂದಿದೆ. ಅವರ ಹೆಸರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ವಿಬಿ- ಜಿ ರಾಮ್‌ ಜಿ | ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಹೊಸ ಕಾಯಿದೆ

ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಭಾಗದ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಮನರೇಗಾ ಯೋಜನೆಯನ್ನು ಯುಪಿಎ ಸರ್ಕಾರ ರೂಪಿಸಿತ್ತು. ಪ್ರತಿ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತರಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು. ಯೋಜನೆಯಲ್ಲಿ ಕಾರ್ಮಿಕರಿಗೆ ಪಾವತಿ ಮಾಡಲಾಗುವ ವೇತನದ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಪ್ರದೇಶಕ್ಕೆ ಅನುಗುಣವಾಗಿ ಉದ್ಯೋಗದ ಬೇಡಿಕೆಯನ್ನು ರೂಪಿಸುವ ಅಧಿಕಾರ ಗ್ರಾಮ ಪಂಚಾಯತಿಗಳ ಗ್ರಾಮ ಸಭೆಗಳಿಗೆ ಇತ್ತು.

ಆದರೆ, ಈ ಯೋಜನೆಯನ್ನು ಬುಡಮೇಲು ಮಾಡಿರುವ ಕೇಂದ್ರ ಸರ್ಕಾರ, VB-G RAM G ಮಸೂದೆಯನ್ನು ರೂಪಿಸಿದೆ. ಈ ಮಸೂದೆಯ ಅಡಿಯಲ್ಲಿ ಕಾರ್ಮಿಕರಿಗೆ 125 ದಿನಗಳ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ, ಮೋದಿ ಸರ್ಕಾರದ ಆಡಳಿತದಲ್ಲಿ 100 ದಿನಗಳ ಉದ್ಯೋಗವನ್ನೇ ಒದಗಿಸಲಾಗಿಲ್ಲ. 125 ದಿನಗಳ ಉದ್ಯೋಗದ ಭರವಸೆಯು ಮನರೇಗಾವನ್ನು ರದ್ದುಗೊಳಿಸುವ ಬಳಸಲಾಗಿರುವ ಅಸ್ತ್ರವೆಂದು ಆರೋಪಿಸಲಾಗಿದೆ. ಅಲ್ಲದೆ, ಯೋಜನೆಯಲ್ಲಿ ಕಾರ್ಮಿಕರಿಗೆ ನೀಡಲಾಗುವ ವೇತನದ ಮೊತ್ತದಲ್ಲಿ 60% ಕೇಂದ್ರವೂ – 40% ರಾಜ್ಯವೂ ಭರಿಸಬೇಕಾಗುತ್ತದೆ. ತೆರಿಗೆ ಸಂಗ್ರಹವೆಲ್ಲವೂ ಕೇಂದ್ರದ ಕೈಯಲ್ಲಿರುವಾಗ ಇದು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ, ಉದ್ಯೋಗ ಬೇಡಿಕೆಗಳ ವಿಚಾರದಲ್ಲಿ ಗ್ರಾಮಸಭೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ರ‍್ಯಾಲಿಗೆ ತೆರಳುತ್ತಿದ್ದ TMC ಶಾಸಕನ ಕಾರಿಗೆ ಮೊಟ್ಟೆ, ಕಲ್ಲು ತೂರಾಟ

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸಾರ್ವಜನಿಕ ಸಭೆಯಲ್ಲಿ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಪದ್ಮಭೂಷಣ ಸಣ್ಣ ವಿಷಯ, ಅವರನ್ನೇ ಪಿಎಂ ಮಾಡಿ: ಗ್ಯಾನೇಶ್‌ರನ್ನು ಹೊಗಳಿಸಿ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ...

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಹಾವಳಿ; 19 ಮಂದಿ ಬಲಿ, 3 ಸಾವಿರ ಬಾಟಲಿ ವಶ

ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ...