ಖ್ಯಾತ ಗಾಯಕಿ ಟೀನಾ ಟರ್ನರ್‌ ನಿಧನ | ಒಬಾಮಾ, ಜೋ ಬೈಡನ್‌ ಸಂತಾಪ

Date:

  • ಸ್ವಿಡ್ಜರ್‌ಲೆಂಡಿನ ಜ್ಯೂರಿಕ್‌ ಬಳಿಯ ನಿವಾಸದಲ್ಲಿ ಟೀನಾ ಸಾವು
  • ಹೂಗುಚ್ಛ, ಪತ್ರದ ಮೂಲಕ ಟೀನಾ ಅಭಿಮಾನಿಗಳು ಸಂತಾಪ

ಅಮೆರಿಕದ ಖ್ಯಾತ ಗಾಯಕಿ ಟೀನಾ ಟರ್ನರ್‌ (83) ಅವರು ಸ್ವಿಡ್ಜರ್‌ಲೆಂಡಿನ ಜ್ಯೂರಿಕ್‌ ಬಳಿಯ ತಮ್ಮ ನಿವಾಸದಲ್ಲಿ ಬುಧವಾರ (ಮೇ 24) ನಿಧನರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಟೀನಾ ಅವರು ಕ್ಯಾನ್ಸರ್‌ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಸಂಗೀತ ಕ್ಷೇತ್ರದ ದಿಗ್ಗಜರು, ನಟರು, ಕ್ರೀಡಾಪಟುಗಳು ಸೇರಿ ಹಲವು ಗಣ್ಯರು ಟೀನಾ ಟರ್ನರ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದುಃಖವನ್ನು ಹಂಚಿಕೊಂಡಿದ್ದಾರೆ.

“ನನ್ನ ಅದ್ಭುತ ಸ್ನೇಹಿತೆಯಾಗಿದ್ದ ಟೀನಾ ಅವರ ನಿಧನದಿಂದ ತೀರಾ ದುಃಖವಾಗಿದೆ. ಅವರು ಅಪಾರ ಪ್ರತಿಭೆ ಹೊಂದಿದ್ದ ಸಂಗೀತಗಾರ್ತಿ. ಅವರು ಮಾಡಿರುವ ಸಹಾಯವನ್ನು ಮರೆಯಲಾಗುವುದಿಲ್ಲ” ಎಂದು ಮಿಕ್‌ ಜಾಗ್ಗರ್‌ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟೀನಾ ಟರ್ನರ್‌ ಅವರ ನಿಧನಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಹಾಲಿ ಅಧ್ಯಕ್ಷ ಜೋ ಬೈಡನ್‌ ಸಂತಾಪ ಸೂಚಿಸಿದ್ದಾರೆ.

“ಟೀನಾ ಅವರು ಸದಾ ಮುನ್ನುಗ್ಗುವ ಛಲ ಹೊಂದಿದ್ದ, ತನ್ನತನವನ್ನು ಕಾಪಾಡಿಕೊಂಡ ಕಲಾವಿದೆ. ಜಗತ್ತಿನಲ್ಲಿ ಟೀನಾ ಅವರ ಅಭಿಮಾನಿಗಳ ಜೊತೆ ನಾನು ಸೇರಿ ಅವರಿಗೆ ಗೌರವ ಸೂಚಿಸುತ್ತಿದ್ದೇನೆ” ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹೇಳಿದ್ದಾರೆ.

“ಟೀನಾ ಅವರಂತಹ ಪ್ರತಿಭಾವಂತರು ತಲೆಮಾರಿಗೆ ಒಬ್ಬರು ಮಾತ್ರ ಜನಿಸುತ್ತಾರೆ. ಟೀನಾ ಸಂಗೀತ ಕ್ಷೇತ್ರದ ದಿಕ್ಕನ್ನೇ ಬದಲಿಸಿದರು. ಅವರ ವೈಯಕ್ತಿಕ ಸಾಮರ್ಥ್ಯ ಅಸಾಧಾರಣವಾದುದು. ಸಂಕಷ್ಟ ಮತ್ತು ನಿಂದನೆಗಳ ಮೀರಿ ವೃತ್ತಿ ಮತ್ತು ಜೀವನವನ್ನು ತಾವೇ ಕಟ್ಟಿಕೊಂಡರು” ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪಶ್ಚಿಮ ಆಫ್ರಿಕಾದಲ್ಲಿ ಹಣದುಬ್ಬರ; ಸಾಮಾನ್ಯರ ಜೋಲೋಫ್‌ ಅನ್ನ ಈಗ ದುಬಾರಿ ಅಡುಗೆ

ಟೀನಾ ಟರ್ನರ್‌ ಅವರ ಅಂತ್ಯಸಂಸ್ಕಾರವನ್ನು ಜ್ಯೂರಿಕ್‌ನ ಹೊರವಲಯದ ಅವರ ನಿವಾಸದ ಬಳಿ ನೆರವೇರಿಸಲಾಯಿತು. ಟೀನಾ ಅವರು ಅಲ್ಲಿ ಮೂರು ದಶಕಗಳಿಂದ ನೆಲೆಸಿದ್ದರು.

ಟೀನಾ ಅವರ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಪ್ರಮುಖ ದ್ವಾರದ ಬಳಿ ಹೂಗುಚ್ಛ ಹಾಗೂ ಸಂದೇಶದ ಪತ್ರಗಳನ್ನು ಇರಿಸಿ ಗೌರವ ಸಲ್ಲಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ | ಆರು ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ತಂದೆ

ಆರು ವರ್ಷದ ಬಾಲಕಿಯನ್ನು ಸ್ವತಃ ತಂದೆಯೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ...

ಉತ್ತರ ಪ್ರದೇಶ | ದೇವಸ್ಥಾನದ ವಿಗ್ರಹಗಳನ್ನು ಧ್ವಂಸ ಮಾಡಿದ್ದ ನಾಲ್ವರ ಬಂಧನ

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಬರಾಲ್ ಗ್ರಾಮದಲ್ಲಿ ದೇವಸ್ಥಾನಗಳಿಗೆ ನುಗ್ಗಿ ವಿಗ್ರಹಗಳನ್ನು...

ಕೆನಡಾದಲ್ಲಿ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ; ವಿದೇಶಾಂಗ ಸಚಿವ ಜೈಶಂಕರ್‌ ಆಕ್ರೋಶ

ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಖಲಿಸ್ತಾನ ಸಂಘಟನೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ...

ಇಲ್ಲಿ ಕ್ರಿಮಿನಲ್‌ಗಳು, ಅಲ್ಲಿ ಉದ್ಯಮಿಗಳು: ಗುಜರಾತ್‌ನ ಸಂದೇಸರ ಸಹೋದರರ ಕಥೆ

ಸಂದೇಸರ ಸಹೋದರರನ್ನು 5,383 ಕೋಟಿ ರೂಪಾಯಿಗಳ ಆಂಧ್ರ ಬ್ಯಾಂಕ್ ವಂಚನೆಯ ಪ್ರಕರಣದ...