ಗ್ರೌಂಡ್‌ ರಿಪೋರ್ಟ್‌ | ಡಿಜೆಹಳ್ಳಿಯಲ್ಲಿ ಹಲ್ಲೆ ಘಟನೆ; ಸಮಸ್ಯೆಯ ಮೂಲವೇ ಚುನಾವಣಾ ಆಯೋಗ!

Date:

ಡಿಜೆಹಳ್ಳಿಯಲ್ಲಿ ಬಿಎಲ್‌ಒ ಮೇಲ್ವಿಚಾರಕನ ಮೇಲೆ ಮೂವರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಸಮಸ್ಯೆಯ ಮೂಲವನ್ನು ಹುಡುಕುತ್ತಾ ಹೋದರೆ, ಚುನಾವಣಾ ಆಯೋಗ ಸೃಷ್ಟಿಸಿರುವ ಗೊಂದಲಗಳೇ ಕಾರಣವೆಂದು ಸ್ಪಷ್ಟವಾಗುತ್ತದೆ.

ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲ್ವಿಚಾರಕರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬೆಂಗಳೂರು ನಗರದ ದೇವಜೀವನಹಳ್ಳಿ (ಡಿಜೆ ಹಳ್ಳಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ಆದರೆ ಘಟನೆಯ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೋದಾಗ, ಎಸ್‌ಐಆರ್ ಹೇಗೆಲ್ಲ ಮತದಾರರನ್ನು ಬೆದರಿಸುತ್ತಿದೆ ಎಂಬ ಚಿತ್ರಣವೂ ಸಿಗುತ್ತದೆ.

- Advertisement -

ಸ್ಥಳ ಬದಲಾವಣೆ (ಶಿಫ್ಟಿಂಗ್) ಮಾಡಿದವರು ಎದುರಿಸುತ್ತಿರುವ ಆತಂಕಗಳೇನು? ಒತ್ತಡಗಳಿಗೆ ಸಿಲುಕಿರುವ ಬಿಎಲ್‌ಒಗಳು ಮಾಡಿರುವ ತಪ್ಪುಗಳೇನು? ಎಂಬುದನ್ನೂ ಈ ಪ್ರಕರಣ ಬೆಳಕಿಗೆ ತರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಸ್ಥಳ:- ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ ಸಂ. 159, ಬೂತ್ ಸಂಖ್ಯೆ 129, ಡಿಜೆ ಹಳ್ಳಿ ವಾರ್ಡ್ ನಂ. 47, ರೋಶನ್ ನಗರದ ಅಂಗನವಾಡಿ ಕೇಂದ್ರ.  ದಿನಾಂಕ: ಜುಲೈ 29, ಸಮಯ: ಮಧ್ಯಾಹ್ನ ಸುಮಾರು 1.30. “ನನ್ನ ವಿಳಾಸ ಬೇರೆ ಕಡೆ ಶಿಫ್ಟ್ ಆಗಿದೆ ಎಂದು ಹೇಗೆ ನಮೂದಿಸಿದಿರಿ?” ಎಂದು ಸಿಟ್ಟಾಗಿರುವ ದಸ್ತಗೀರ್ ಪಾಷಾ ಎಂಬ ವ್ಯಕ್ತಿ ಮತ್ತು ಆತನ ಜೊತೆಗೆ ಸೇರಿಕೊಂಡ ಯರಬ್, ಇಕ್ಬಾಲ್ ಎಂಬವರು ಗಲಾಟೆ ಮಾಡಿದ್ದಾರೆ.

ಬಿಎಲ್‌ಒಗಳ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಸ್ಲಮ್ ಬೋರ್ಡ್ ಸೂಪರಿಂಟೆಂಡೆಂಟ್ ಫಕೀರಪ್ಪ ಅವರಿಗೂ ದಸ್ತಗೀರ್‌ ಮತ್ತು ಆತನ ಜೊತೆಗಿದ್ದ ಯರಬ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆ ವೇಳೆ ಫಕೀರಪ್ಪನವರ ಮೇಲೆ ಹಲ್ಲೆನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ದಸ್ತಗೀರ್ ಮತ್ತು ಯರಬ್ ಎಂಬರನ್ನೂ ಅರೆಸ್ಟ್ ಮಾಡಲಾಗಿದೆ.

dj halli2

ಘಟನೆಯ ಖಚಿತ ಮಾಹಿತಿ ಪಡೆಯಲು ಶುಕ್ರವಾರ ‘ಈದಿನ ಡಾಟ್ ಕಾಮ್’ ಸ್ಥಳಕ್ಕೆ  ಭೇಟಿ ನೀಡಿದಾಗ, ಇಲ್ಲಿನ ಬಿಎಲ್‌ಒ (ಅಂಗನವಾಡಿ ಟೀಚರ್) ನಾಗಮಣಿ ಸಿಕ್ಕರು. ಘಟನೆಯ ಕುರಿತು ವಿವರಿಸಿದ ಅವರು, “ಇಲ್ಲಿನ ಬೂತ್‌ನಲ್ಲಿ ದಸ್ತಗೀರ್ ಪಾಷಾ ಅವರು ಮತದಾರರಾಗಿರುವುದು ನಿಜ. ಸ್ವಲ್ಪ ತಾಳ್ಮೆ ವಹಿಸಿದ್ದರೆ ಈ ಗಲಾಟೆಯೇ ಆಗುತ್ತಿರಲಿಲ್ಲ. ದಸ್ತಗೀರ್ ಅವರ ಮನೆ ಸಿಗದ ಕಾರಣ, ಅವರು ಶಿಫ್ಟ್ ಆಗಿದ್ದಾರೆಂದು ತೋರಿಸಲಾಗಿತ್ತು. ಮತದಾರರು ಫಾರ್ಮ್‌ ಪಡೆಯಲು ಸಿಗದೆ ಹೋದರೆ, ಶಿಫ್ಟ್ ಆಗಿದ್ದಾರೆಂದೋ, ನಿಧನರಾಗಿದ್ದಾರೆಂದೋ ತೋರಿಸಲೇಬೇಕು. ಆದರೆ ಕೊನೆಕ್ಷಣದಲ್ಲಿ ದಸ್ತಗೀರ್ ಹುಡುಕಿಕೊಂಡು ಬಂದರು. ನಿಮ್ಮದು ಶಿಫ್ಟ್ ಎಂದು ತೋರಿಸಲಾಗಿದೆ, ನಾಳೆ ಬನ್ನಿರಿ, ರೋಲ್ ಬ್ಯಾಕ್ ಮಾಡಿಕೊಡುತ್ತೇವೆ ಎಂದು ತಿಳಿಸಿದೆವು. ಅದೇ ಸಮಯದಲ್ಲಿ ಎಸ್‌ಐಆರ್ ಕೆಲಸಗಳ ಪರಿಶೀಲನೆಗೆ ಬಂದಿದ್ದ ಮೇಲ್ವಿಚಾರಕ ಫಕೀರಪ್ಪ ಸ್ಥಳದಲ್ಲಿದ್ದರು. ದಸ್ತಗೀರ್‌ ಅವರು ಫಕೀರಪ್ಪನವರೊಂದಿಗೆ ವಾಗ್ವಾದಕ್ಕೆ ಇಳಿದರು. ಇನ್ನಿಬ್ಬರನ್ನು ಸ್ಥಳಕ್ಕೆ ಕರೆಸಿಕೊಂಡರು. ಜಗಳವಾದಾಗ ಫಕೀರಪ್ಪನವರಿಗೆ ಹಲ್ಲೆ ಮಾಡಲಾಯಿತು” ಎಂದರು.

ಇದನ್ನೂ ಓದಿರಿ: ವಿಜಯಪುರ | ಮನೆಗೂ ಬಾರದ, ಕರೆಗೂ ಸಿಗದ ಬಿಎಲ್‌ಒ; ಪಟ್ಟಿಯಿಂದ ಹೊರಗುಳಿವ ಆತಂಕದಲ್ಲಿ…

“ಜಯನಗರದಲ್ಲಿದ್ದೇವೆ, ನಾವು ಕೆಲಸಕ್ಕೆ ಹೋಗುತ್ತೇವೆ, ನಮಗೆ ಇವತ್ತೇ ಸರಿಮಾಡಿಕೊಡಿ ಎಂದು ಪಟ್ಟುಹಿಡಿದರು. ನಮಗೆ ನೀಡಿರುವ ಸೂಚನೆ ಪ್ರಕಾರ, ವಿಳಾಸ ಬದಲಿಸಿದವರನ್ನು ಶಿಫ್ಟ್ ಎಂದೇ ತೋರಿಸಬೇಕು. ಆದರೆ ನಾವು ಹಾಗೆ ಮಾಡುವುದಿಲ್ಲ. ಎನ್ಯುಮರೇಷನ್ ಫಾರ್ಮ್ ಹುಡುಕಿಕೊಂಡು ಬಂದವರಿಗೆ ಫಾರ್ಮ್‌ ಕೊಡಲೇಬೇಕು, ಶಿಫ್ಟ್ ಎಂದು ಈಗಾಗಲೇ ತೋರಿಸಿದ್ದರೆ ರೋಲ್ ಬ್ಯಾಕ್ ಮಾಡಿಕೊಡಬೇಕು” ಎಂದು ತಿಳಿಸಿದರು.

Nagveni
ಬಿಎಲ್‌ಒ ನಾಗಮಣಿ

ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಸ್ಲಮ್ ಬೋರ್ಡ್‌ನ ಫಕೀರಪ್ಪ ಹೇಳಿದ್ದು ಹೀಗೆ: “ಯಾವುದೇ ಮತದಾರರನ್ನು ಶಿಫ್ಟ್ ಆಗಿದ್ದಾರೆಂದು ನಮೂದಿಸುವ ಮುನ್ನ ಸ್ಥಳೀಯರಲ್ಲಿ ಮಾಹಿತಿ ಪಡೆದಿರುತ್ತಾರೆ. ಆನಂತರವಷ್ಟೇ ಆಪ್‌ನಲ್ಲಿ Shifted ಎಂದು ಮಾರ್ಕ್‌ ಮಾಡಲಾಗುತ್ತದೆ. ಒಮ್ಮೆ Shifted ಎಂದು ತೋರಿಸಿದ ಮೇಲೆ ಅದನ್ನು ಬದಲಿಸುವುದಕ್ಕೆ ಬಿಎಲ್‌ಒಗಳಿಗೆ ಅವಕಾಶ ಇರುವುದಿಲ್ಲ. ಈ ವಿಚಾರವನ್ನು ದಸ್ತಗೀರ್ ಅವರಿಗೆ ವಿವರಿಸಲು ಪ್ರಯತ್ನಿಸಿದ್ದೇವೆ. ನಿಮ್ಮನ್ನು ಬಿಎಲ್‌ಒ ಹುಡುಕಿಕೊಂಡು ಬಂದಾಗ, ನೀವು ಸಿಗದೆ ಇರುವ ಕಾರಣಕ್ಕೆ ವಿಳಾಸ ಬದಲಿಸಿರುವುದಾಗಿ ನಮೂದಿಸಲಾಗಿದೆ ಎಂದು ಹೇಳಿದ್ದೇವೆ. ಸಮಸ್ಯೆಯನ್ನು  ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಕಡೆಯಿಂದ ರಿವರ್ಸ್ ಮಾಡಿಸಬಹುದು, ನಾಳೆ ಬನ್ನಿ ಎಂದು ಹೇಳಿದೆನು. ನನಗೆ ಈಗಲೇಬೇಕು ಎಂದು ದಸ್ತಗೀರ್ ಗಲಾಟೆ ಮಾಡಲು ಶುರು ಮಾಡಿದರು. ಹೊರಗಡೆಯಿಂದ ತಮ್ಮ ಕಡೆಯವರನ್ನು ಕರೆಸಿಕೊಂಡು ಹಲ್ಲೆ ಮಾಡಿದರು” ಎಂದು ಮಾಹಿತಿ ನೀಡಿದರು.

ಪೊಲೀಸ್ ಕೇಸ್ ಎದುರಿಸುತ್ತಿರುವ ದಸ್ತಗೀರ್ ಕುಟುಂಬವನ್ನು ಸಂಪರ್ಕಿಸಲು ಯತ್ನಿಸಿದೆವು. ಅವರು ಲಭ್ಯವಾಗಲಿಲ್ಲ. ಆದರೆ ಪೊಲೀಸ್ ಮೂಲಗಳು ಮತ್ತೊಂದು ವಿವರಣೆಯನ್ನು ನೀಡಿದವು. “ದಸ್ತಗೀರ್ ಫ್ಯಾಮಿಲಿ ದಶಕಗಳಿಂದಲೂ ಡಿಜೆ ಹಳ್ಳಿ ವ್ಯಾಪ್ತಿಯಲ್ಲೇ ವಾಸವಿದೆ. ವರ್ಷದ ಹಿಂದೆ ಅವರು ಪಕ್ಕದ ಶಾಂಪುರಕ್ಕೆ ಶಿಫ್ಟ್ ಆಗಿದ್ದಾರೆ. ಜಯನಗರದಲ್ಲಿ ವಾಸವಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದು ತಪ್ಪು. ಜಯನಗರದ ಆಸ್ಪತ್ರೆಯಲ್ಲಿ ದಸ್ತಗೀರ್ ಕಡೆಯವರೊಬ್ಬರು ಅಡ್ಮಿಟ್ ಆಗಿದ್ದರು. ಆಸ್ಪತ್ರೆಗೆ ಹೋಗಿ ಬರುತ್ತಿದ್ದರಿಂದ, ನಾನು ಜಯನಗರದಿಂದ ಬರಬೇಕಾಗಿದೆ ಎಂದು ದಸ್ತಗೀರ್ ಆವೇಶದಲ್ಲಿ ಹೇಳಿದ್ದಾರೆ. ವಾಸ್ತವದಲ್ಲಿ ದಸ್ತಗೀರ್ ಅವರ ಅಜ್ಜ- ಅಜ್ಜಿ ತಾತಂದಿರೆಲ್ಲ ಇಲ್ಲಿಯೇ ಹುಟ್ಟಿ ಬೆಳೆದವರು. ಸ್ವಲ್ಪ ತಾಳ್ಮೆ ವಹಿಸಿದ್ದರೆ ಈ ಘಟನೆಯಾಗುತ್ತಿರಲಿಲ್ಲ” ಎಂದು ಪೊಲೀಸ್‌ ಮೂಲಗಳು ತಿಳಿಸಿದವು.

ದಸ್ತಗೀರ್ ಮತ್ತು ಅವರ ಜೊತೆಗಿದ್ದವರು ಆತುರದಿಂದ ವರ್ತಿಸಿದ್ದಾರೆಂಬುದು ಘಟನೆಯ ವಿವರಗಳಿಂದ ಸದ್ಯಕ್ಕೆ ಗೊತ್ತಾಗುತ್ತದೆ. ಆದರೆ ಎಸ್‌ಐಆರ್ ನಡೆಯುತ್ತಿರುವ ರೀತಿಯೇ ಈ ಸಮಸ್ಯೆಯ ಮೂಲ ಎನ್ನುತ್ತಾರೆ ಸ್ಥಳೀಯ ನಿವಾಸಿ, ಸಾಮಾಜಿಕ ಕಾರ್ಯಕರ್ತ ಸೈಯದ್ ಅನ್ಸರ್ ಪಾಷ. ‘ಈದಿನ ಡಾಟ್ ಕಾಮ್‌’ ಜೊತೆ ಮಾತನಾಡಿದ ಅವರು, “ಇಲ್ಲಿ ಬಿಎಲ್‌ಒಗಳದ್ದು ತಪ್ಪಿದೆ. ಮನೆಮನೆಗೆ ಹೋಗಿ ಫಾರ್ಮ್ ಕೊಡದೆ, ಅಂಗನವಾಡಿಯಲ್ಲಿ ಕೂತು ಫಾರ್ಮ್ ತುಂಬುವುದು ನಡೆದಿದೆ. ಹಲವು ಮತದಾರರಿಗೆ ಫಾರ್ಮ್ ತಲುಪದೆ ಇದ್ದಾಗ, ನಾನೇ ಮುಂದೆ ನಿಂತು ಹುಡುಕಿ ಕೊಟ್ಟಿದ್ದೂ ಉಂಟು” ಎಂದು ಆರೋಪಿಸಿದರು.

sayad phasha
ಸೈಯದ್ ಅನ್ಸರ್ ಪಾಷ

ವಾಸ್ತವದಲ್ಲಿ ಈ ಘಟನೆಯ ಮೂಲ ಬಿಂದುವೇ ‘ಶಿಫ್ಟಿಂಗ್’. ಮತದಾರ ಬೇರೊಂದು ಕಡೆ ವರ್ಗಾವಣೆಯಾದ ಮಾತ್ರಕ್ಕೆ, ಅವನನ್ನು ಶಿಫ್ಟ್ (ಸ್ಥಳಾಂತರ) ಎಂದು ತೋರಿಸಿದ ಕೂಡಲೇ, ಆತನ ವೋಟಿಂಗ್ ಹಕ್ಕು ಅತಂತ್ರಕ್ಕೆ ಸಿಲುಕುವುದು ಹೇಗೆ? ಈ ಸಮಸ್ಯೆಗೆ ಕಾರಣ ಯಾರು?- ಈ ಪ್ರಶ್ನೆ ಕೇಳಿಕೊಂಡರೆ ಕೊನೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರತ್ತ ಹೊರಳಬೇಕಾಗುತ್ತದೆ.

ಶಿಫ್ಟ್ ಆದವರ ವೋಟಿಂಗ್ ರೈಟ್‌ ಇಕ್ಕಟ್ಟಿಗೆ ಸಿಲುಕಿರುವುದಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ ಎನ್ನುತ್ತಾರೆ ‘ಜಾಗೃತ ಕರ್ನಾಟಕ’ದ ಕಾರ್ಯಕರ್ತ ಮುತ್ತುರಾಜ್. ಎಸ್‌ಐಆರ್‌ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿರುವ ಅವರು, ‘ಶಿಫ್ಟಿಂಗ್‌’ ಉಂಟು ಮಾಡಿರುವ ಅವಾಂತರವನ್ನು ಎಳೆಎಳೆಯಾಗಿ ವಿವರಿಸಿದರು.

“‘ಶಿಫ್ಟಿಂಗ್’ ಎಂದು ತೋರಿಸಲ್ಪಟ್ಟವರ ಹೆಸರು ವೋಟರ್ ಲಿಸ್ಟ್‌ ನಿಂದ ಗೋತಾ ಹೊಡೆಯುವ ಸಾಧ್ಯತೆ ದಟ್ಟವಾಗಿದೆ. ಹಾಗೆ ನೋಡಿದರೆ ಬೆಂಗಳೂರಿನ ಲಕ್ಷಾಂತರ ಮತದಾರರು ತಮ್ಮ ವೋಟಿಂಗ್ ಪವರ್ ಕಳೆದುಕೊಳ್ಳಬೇಕಾಗುತ್ತದೆ. ಶಿಫ್ಟಿಂಗ್ ಎಂದು ತೋರಿಸುವಂತೆ ಬಿಎಲ್‌ಒಗಳ ಮೇಲೆ ಒತ್ತಡ ಸೃಷ್ಟಿಸಲಾಗಿದೆ. ಮತದಾರರು ವಿಳಾಸವನ್ನು ಬದಲಿಸಿದ್ದು, ಅವರು ಮತದಾರರ ಚೀಟಿಯನ್ನು ಹೊಸ ವಿಳಾಸಕ್ಕೆ ಬದಲಿಸದೆ ಇದ್ದರೆ, ಈಗ ಇರುವ ಸ್ಥಳದಲ್ಲೇ ಎನ್ಯುಮರೇಷನ್ ಫಾರ್ಮ್ ಕೊಡುವುದಾಗಿ ಅನ್ಬುಕುಮಾರ್ ಹೇಳಿದ್ದರು. ಜೊತೆಗೆ, ಸ್ಥಳಾಂತರ ಎಂದು ನಮೂದಿಸಲ್ಪಟ್ಟ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಾಗಿ ತಿಳಿಸಿದ್ದರು. ಇನ್ನೊಂದೆಡೆ ಎಸ್‌ಐಆರ್‌ ಕೆಲಸದಲ್ಲಿ ಪ್ರಗತಿ ತೋರಿಸದಿದ್ದರೆ ಬಿಎಲ್‌ಒಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಎಚ್ಚರಿಕೆಯನ್ನು ಆಯೋಗ ನೀಡಿತ್ತು. ಇದು ‘ಮತದಾರ ಶಿಫ್ಟ್ ಆಗಿದ್ದಾನೆ ಎಂದು ತೋರಿಸಲು ಕಾರಣವಾಯಿತು” ಎನ್ನುತ್ತಾರೆ ಮುತ್ತುರಾಜ್.

ಇದನ್ನೂ ಓದಿರಿ: ಉತ್ತರ ಕನ್ನಡ | ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತ: 95,264 ಹೆಸರುಗಳು ಪಟ್ಟಿಯಿಂದ…

ಮುಂದುವರಿದು, “ಮಾರ್ಗಸೂಚಿ ಪ್ರಕಾರ ಬಿಎಲ್‌ಒಗಳು ಮೂರು ಬಾರಿ ಮನೆಯ ಬಳಿ ಹೋಗಬೇಕಾಗುತ್ತದೆ. ಆದರೆ ಬಿಎಲ್‌ಒಗಳು ತಮ್ಮ ಮೇಲಿನ ಒತ್ತಡಗಳ ಕಾರಣಕ್ಕೆ ಒಮ್ಮೆ ಹೋದರೆ ಹೆಚ್ಚು. ಮೊದಲ ಸಲ ಹೋದಾಗ ಯಾರೂ ಸಿಗದೆ ಇದ್ದರೆ, ಮತ್ತೊಮ್ಮೆ ವಿಳಾಸ ಪರಿಶೀಲನೆ ಮಾಡದೆ ಶಿಫ್ಟಿಂಗ್ ಆಗಿದ್ದಾರೆಂದು ನಮೂದಿಸುತ್ತಿರುವುದು ಕಂಡು ಬಂದಿದೆ. ಡಿಜೆ ಹಳ್ಳಿಯಂತಹ ಸ್ಲಮ್‌ ಗಳಲ್ಲಿ ವಾಸಿಸುವ ಬಡವರು ಬೆಳಿಗ್ಗೆ ದುಡಿಮೆಗೆ ಹೋದರೆ, ಕತ್ತಲಾದ ಬಳಿಕವೇ ಮನೆ ಸೇರುತ್ತಾರೆ. ಇವರು ಮನೆಯಲ್ಲಿಲ್ಲದಿದ್ದಾಗ ಬಿಎಲ್‌ಒಗಳು ಭೇಟಿ ನೀಡಿ, ನಂತರ ‘ವಿಳಾಸ ಬದಲಾಗಿದೆ’ ಎಂದು ಬರೆಯುತ್ತಾರೆ. ವಿಳಾಸ ಬದಲಿಸದೆ ಇರುವವರನ್ನೂ ಶಿಫ್ಟಿಂಗ್ ಎಂದು ತೋರಿಸಿರುವ ವರದಿಗಳು ಬಂದಿವೆ. ಏಕೆ ಹೀಗೆ ಆಗುತ್ತಿದೆ? ಇದಕ್ಕೆ ಆಯೋಗದ ಬೆದರಿಕೆಯೂ ಕಾರಣವಾಗಿದೆ. ಪ್ರಗತಿ ತೋರಿಸದಿದ್ದರೆ ಎಫ್‌ಐಆರ್ ಮಾಡಲಾಗುತ್ತದೆ. ಡಿಜೆಹಳ್ಳಿಯಲ್ಲಿ ಬಿಎಲ್‌ಒ ಮೇಲ್ವಿಚಾರಕನ ಮೇಲೆ ಹಲ್ಲೆಯಾಗುವುದಕ್ಕೆ ಆಯೋಗವೇ ನೇರ ಹೊಣೆ. ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗುತ್ತದೆ ಎಂದಾಗ ಮತದಾರ ಸಹಜವಾಗಿ ಸಿಟ್ಟಾಗುತ್ತಾನೆ” ಎಂದು ಬೇಸರ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಎಸ್‌ಐಆರ್ ಮಾಡಿರುವುದು, ಮನೆ ಬದಲಿಸಿದವರು ತಮ್ಮ ವಿಳಾಸವನ್ನು ವರ್ಗಾಯಿಸಿಕೊಳ್ಳಲು ಅವಕಾಶ ನೀಡದಿರುವುದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಬೆಂಗಳೂರು ಮಹಾನಗರದಲ್ಲಿ ದೊಡ್ಡಸಂಖ್ಯೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗುವ ಮುನ್ಸೂಚನೆ ಕಾಣುತ್ತಿದೆ.

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...