‘ದೇವಭೂಮಿ’ಯಲ್ಲಿ ಹಿಂದುತ್ವವಾದಿಗಳ ದ್ವೇಷದ ದಳ್ಳುರಿ: ಕೋಮು ಉಪಟಳಕ್ಕೆ ತುತ್ತಾದ ಉತ್ತರಾಖಂಡ

Date:

ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೂ ಈ ಕೋಮು ಉದ್ವಿಗ್ನತೆ ದೊಡ್ಡ ಹೊಡೆತ ನೀಡುತ್ತಿದೆ ಎಂಬುದು ವಾಸ್ತವ. ದೇವಭೂಮಿ ಮತ್ತೆ ಶಾಂತಿ ಮತ್ತು ಸೌಹಾರ್ದತೆ ನೆಲೆಬೀಡಾಗಬೇಕಾದರೆ, ಹಿಂದುತ್ವವಾದಿಗಳಿಗೆ ಕಡಿವಾಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ದ್ವೇಷದ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕಿದೆ. ಸೌಹಾರ್ದತೆಯೇ ಬದುಕಿನ ದಾರಿಯಾಗಬೇಕಿದೆ.

ಹಿಮಾಲಯದ ಮಡಿಲಲ್ಲಿರುವ ಪ್ರಕೃತಿಯ ಸೌಂದರ್ಯ, ಶಾಂತಿ ಮತ್ತು ಆಧ್ಯಾತ್ಮಿಕತೆಯ ಪ್ರತೀಕವಾದ ಉತ್ತರಾಖಂಡವನ್ನು ‘ದೇವಭೂಮಿ’ ಎಂದು ಕರೆಯಲಾಗುತ್ತದೆ. ಶತಶತಮಾನಗಳಿಂದಲೂ ವಿವಿಧ ಸಮುದಾಯಗಳು ಉತ್ತರಾಖಂಡದ ಪ್ರಕೃತಿ ಸೊಬಗನ್ನು ಆರಾಧಿಸುತ್ತಾ ಬಂದಿದ್ದಾರೆ. ನಿಸರ್ಗದ ಎದುರು ಯಾವ ಧರ್ಮವೂ ಇಲ್ಲ. ಎಲ್ಲ ಸಮುದಾಯಗಳು ಅತ್ಯಂತ ಸೌಹಾರ್ದತೆಯಿಂದ ಬದುಕುತ್ತಾ ಬಂದಿರುವ ನಾಡು ಉತ್ತರಾಖಂಡ. ಆದರೆ ಇತ್ತೀಚೆಗೆ ಈ ಶಾಂತಿಯ ಕಣಿವೆಯಲ್ಲಿ ಕೋಮುದ್ವೇಷದ ಉಪಟಳ ನಿರಂತರವಾಗಿ ತಾರಕಕ್ಕೇರುತ್ತಿದೆ. ಸದಾ ಪ್ರಶಾಂತವಾಗಿದ್ದ ‘ದೇವಭೂಮಿ’ಯಲ್ಲಿ ಇಂದು ಹಿಂದುತ್ವವಾದಿಗಳ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ.

- Advertisement -

ಉತ್ತರಾಖಂಡದಲ್ಲಿ ಕಳೆದ 10 ವರ್ಷಗಳಿಂದ ಧಾರ್ಮಿಕ ಧ್ರುವೀಕರಣ ಹೆಚ್ಚುತ್ತಿದೆ. ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕೋಮು ಘರ್ಷಣೆಗಳು, ದ್ವೇಷ ಭಾಷಣಗಳು ಮತ್ತು ಆರ್ಥಿಕ ಬಹಿಷ್ಕಾರ ಮಾಡಲಾಗುತ್ತಿದೆ. ಇದು ಬರೀ ಸಾಂದರ್ಭಿಕ ಘರ್ಷಣೆಗಳಾಗಿ ಉಳಿದಿಲ್ಲ. ಬದಲಾಗಿ ಹಿಂದುತ್ವವಾದಿಗಳ ವ್ಯವಸ್ಥಿತ ಪ್ರಚೋದನೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮುಸ್ಲಿಮರನ್ನು ಇಡೀ ಸಮಾಜವೇ ತುಚ್ಛವಾಗಿ ಕಾಣುವಂತೆ ಮಾಡುವ ಷಡ್ಯಂತ್ರವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ಜನಸಾಮಾನ್ಯರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಈ ಕಾರ್ಯಕ್ಕೆ ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಸಾಥ್ ನೀಡುತ್ತಿದೆ. ಇವೆಲ್ಲವುದಕ್ಕೆ ಕಳೆದ 10 ವರ್ಷಗಳಲ್ಲಿ ಉತ್ತರಾಖಂಡದಲ್ಲಿ ನಡೆದ ಕೋಮುದ್ವೇಷದ ಪ್ರಕರಣಗಳೇ ಸಾಕ್ಷಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇದನ್ನು ಓದಿದ್ದೀರಾ? ‘ಮೊಹಮ್ಮದ್ ದೀಪಕ್ ಕುಮಾರ್’ -ಮುಸ್ಲಿಂ ವ್ಯಾಪಾರಿಯನ್ನು ಬೆಂಬಲಿಸಿದ್ದಕ್ಕೆ ಯುವಕನ ವಿರುದ್ಧ ಸಂಘಪರಿವಾರ ಪ್ರತಿಭಟನೆ!

2021ರ ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣ

2021ರ ಡಿಸೆಂಬರ್ 17–19ರವರೆಗೆ ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ ಕಾರ್ಯಕ್ರಮದಲ್ಲಿ ಹಲವು ಹಿಂದುತ್ವವಾದಿಗಳು ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗವಾಗಿ ಪ್ರಚೋದನಾಕಾರಿ ಮತ್ತು ಹಿಂಸಾತ್ಮಕ ದ್ವೇಷ ಭಾಷಣಗಳನ್ನು ಮಾಡಿದ್ದರು. ಈ ಹೇಳಿಕೆಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಜಿತೇಂದ್ರ ತ್ಯಾಗಿ (ವಸೀಮ್ ರಿಜ್ವಿ ಎಂಬವರು ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿಯಾಗಿ ಮತಾಂತರ ಹೊಂದಿರುವುದು) ಮತ್ತು ಯತಿ ನರಸಿಂಹಾನಂದ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಲಾಗಿತ್ತು.

2023ರ ಪುರೋಲಾ ಕೋಮು ಉದ್ವಿಗ್ನತೆ ಮತ್ತು ಮುಸ್ಲಿಮರ ಸ್ಥಳಾಂತರ

2023ರ ಮೇ 26ರಂದು ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಯತ್ನದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಇಬ್ಬರು ಆರೋಪಿಗಳಲ್ಲಿ ಒಬ್ಬ ಹಿಂದೂ, ಒಬ್ಬ ಮುಸ್ಲಿಂ ಆಗಿದ್ದ. ಆದರೆ ಸದಾ ಕೋಮುದ್ವೇಷ ಹರಡಲು ಕಾಯುತ್ತಿರುವ ಸಂಘಪರಿವಾರವು ‘ಲವ್ ಜಿಹಾದ್’ ಎಂಬ ಕಪೋಕಲ್ಪಿತ ಕತೆಯನ್ನು ಹೆಣೆದು ಜನರನ್ನು ಪ್ರಚೋದಿಸಿ ಮೇ 29ರಂದು ಬೃಹತ್ ಮೆರವಣಿಗೆ ನಡೆಸಿತ್ತು. ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಧ್ವಂಸಗೊಳಿಸಿತ್ತು. ಜೂನ್ 15ರ ಒಳಗಾಗಿ ಪಟ್ಟಣವನ್ನು ಖಾಲಿ ಮಾಡಬೇಕೆಂದು ಅಂಗಡಿಗಳ ಮುಂಭಾಗ ಪೋಸ್ಟರ್‌ಗಳನ್ನು ಅಂಟಿಸಿತ್ತು. ಇವೆಲ್ಲವುದರಿಂದಾಗಿ ಆತಂಕಗೊಂಡ ಸುಮಾರು 40ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ತಾತ್ಕಾಲಿಕವಾಗಿ ಪಟ್ಟಣ ತೊರೆದಿದ್ದರು.

2024ರಲ್ಲಿ ನಂದಾಘಾಟ್ ಆಸ್ತಿ ಧ್ವಂಸ ಮತ್ತು ಬಹಿಷ್ಕಾರ

2024ರ ಸೆಪ್ಟೆಂಬರ್‌ನಲ್ಲಿ ಮುಸ್ಲಿಂ ಸಮುದಾಯದ ಕ್ಷೌರಿಕರೊಬ್ಬರ ಮೇಲೆ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಚಮೋಲಿ ಜಿಲ್ಲೆಯ ನಂದಾಘಾಟ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಹಿಂದುತ್ವವಾದಿಗಳ ಗುಂಪು ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡಿದ್ದವು, ಧ್ವಂಸಗೊಳಿಸಿದ್ದವು. ವಾಹನಗಳನ್ನು ನದಿಗೆ ತಳ್ಳಿದ್ದವು. ಇದರಿಂದಾಗಿ ಆತಂಕಗೊಂಡ ಹಲವು ಮುಸ್ಲಿಂ ಕುಟುಂಬಗಳು ರಾತ್ರೋರಾತ್ರಿ ಮನೆ ಬಿಟ್ಟು ಬೇರೆಡೆ ಹೋಗಿದ್ದವು.

ಗೌಚರ್ ಪಾರ್ಕಿಂಗ್ ವಿವಾದಕ್ಕೆ ಕೋಮು ಬಣ್ಣ

2024ರ ಅಕ್ಟೋಬರ್ 15ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಗೌಚರ್‌ನಲ್ಲಿ ಪಾರ್ಕಿಂಗ್ ವಿಷಯಕ್ಕೆ ಇಬ್ಬರ ನಡುವೆ ಸಾಮಾನ್ಯ ಜಗಳ ನಡೆದಿತ್ತು. ಇಬ್ಬರಲ್ಲಿ ಒಬ್ಬ ಹಿಂದೂ, ಮತ್ತೋರ್ವ ಮುಸ್ಲಿಂ ಆಗಿದ್ದ. ಆದರೆ ಈ ಘಟನೆಯನ್ನು ಹಿಂದುತ್ವವಾದಿಗಳು ಕೋಮು ಸ್ವರೂಪಕ್ಕೆ ತಿರುಗಿಸಿ ಅಲ್ಲಲ್ಲಿ ಪ್ರತಿಭಟನೆ ನಡೆದಿದ್ದರು. ಸ್ಥಳೀಯವಾಗಿ ದಶಕಗಳಿಂದ ವ್ಯಾಪಾರ ಮಾಡುತ್ತಿದ್ದ ಕನಿಷ್ಠ 10 ಮುಸ್ಲಿಂ ಅಂಗಡಿ ಮಾಲೀಕರನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ್ದರು.

2024ರ ಉತ್ತರಕಾಶಿ ಮಸೀದಿ ಧ್ವಂಸಕ್ಕಾಗಿ ರ‍್ಯಾಲಿ ಮತ್ತು ಹಿಂಸಾಚಾರ

2024ರ ಅಕ್ಟೋಬರ್ 24ರಂದು ಉತ್ತರಕಾಶಿಯಲ್ಲಿರುವ ಹಳೆಯ ಮಸೀದಿಯೊಂದನ್ನು ಧ್ವಂಸಗೊಳಿಸಬೇಕೆಂದು ಒತ್ತಾಯಿಸಿ ಸ್ವಾಮಿ ದರ್ಶನ್ ಭಾರ್ತಿ ನೇತೃತ್ವದಲ್ಲಿ ಹಿಂದುತ್ವವಾದಿಗಳ ಸಂಘಟನೆಗಳು ಬೃಹತ್ ರ‍್ಯಾಲಿ ನಡೆಸಿತ್ತು. ಈ ರ‍್ಯಾಲಿ ವೇಳೆ ಹಿಂಸಾಚಾರ ನಡೆದಿತ್ತು. ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸಿ ಲೂಟಿ ಮಾಡಲಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ ಐವರು ಪೊಲೀಸರು ಸೇರಿದಂತೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಳಿಕ 2024ರ ಡಿಸೆಂಬರ್ 1ರಂದು ನಡೆದ ಮಹಾಪಂಚಾಯತ್‌ನಲ್ಲೂ ಪ್ರಚೋದನಾಕಾರಿ ಭಾಷಣಗಳು ಮುಂದುವರೆದವು. 2025ರಲ್ಲಿಯೂ ‘ದೇವಭೂಮಿ ವಿಚಾರ ಮಂಚ್’ ನೇತೃತ್ವದಲ್ಲಿ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಆರ್ಥಿಕ ಬಹಿಷ್ಕಾರದ ಕರೆಗಳನ್ನು ನೀಡಲಾಗಿತ್ತು.

2025ರ ರುದ್ರಾಪುರ ಮತ್ತು ತೇಹ್ರಿ ಗರ್ವಾಲ್ ಉದ್ವಿಗ್ನತೆ

2025ರ ಮೇ-ಜೂನ್ ನಡುವೆ ಹಿಂದೂ ಹುಡುಗಿಯೊಬ್ಬಳ ಅಪಹರಣ ಯತ್ನ ಅಥವಾ ಸ್ಥಳೀಯ ಸಣ್ಣಪುಟ್ಟ ಅಪರಾಧ ಪ್ರಕರಣಗಳಿಗೆಲ್ಲ ಕೋಮು ಬಣ್ಣ ಹಚ್ಚಿ ತೇಹ್ರಿ ಗರ್ವಾಲ್‌ನ ಕೆಲವು ಗ್ರಾಮಗಳಲ್ಲಿ ಉದ್ವಿಗ್ನತೆ ಸೃಷ್ಟಿಸಲಾಗಿತ್ತು. ಸಂಘಪರಿವಾರವು ಮುಸ್ಲಿಂ ವ್ಯಾಪಾರಿಗಳ ವಿರುದ್ಧ ಮೆರವಣಿಗೆ ನಡೆಸಿ, ಅವರ ಅಂಗಡಿಗಳ ಮುಂಭಾಗ ಪ್ರತಿಭಟನೆ ನಡೆಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿದ್ದರು.

ಇದನ್ನು ಓದಿದ್ದೀರಾ? ಗಡ್ಡ ಕತ್ತರಿಸುವಂತೆ ವೃದ್ಧ ಮುಸ್ಲಿಂ ಮೇಲೆ ಹಲ್ಲೆ ನಡೆಸಿ ‘ಇದು ಹಿಂದೂಗಳ ಆಡಳಿತ’ ಎಂದ ಕೋಮುವಾದಿಗಳು

2025ರಲ್ಲಿ ಹಿಂದುತ್ವವಾದಿಗಳ ದ್ವೇಷದ ಪೋಸ್ಟರ್ ಅಭಿಯಾನ

2025ರ ಅಕ್ಟೋಬರ್‌ನಿಂದ ಡಿಸೆಂಬರ್ ನಡುವೆ ಚಮೋಲಿ, ಉತ್ತರಕಾಶಿ ಮತ್ತು ರುದ್ರಪ್ರಯಾಗ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಹಿಂದುತ್ವವಾದಿಗಳು ಕೋಮುದ್ವೇಷದಿಂದ ಕೂಡಿದ ಪೋಸ್ಟರ್ ಅಭಿಯಾನವನ್ನು ನಡೆಸಿದ್ದರು. ‘ನುಸುಳುಕೋರರಿಗೆ ಪ್ರವೇಶವಿಲ್ಲ’, ‘ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ’ ಎಂಬ ಪೋಸ್ಟರ್‌ಗಳನ್ನು ಅಲ್ಲಲ್ಲಿ ಹಾಕಿದ್ದರು. ಹಿಂದುತ್ವವಾದಿಗಳು ಮುಸ್ಲಿಮರ ಮಾಲೀಕತ್ವದ ಅಂಗಡಿಗಳ ಜಾಗದ ಹಿಡುವಳಿದಾರರ ಮೇಲೆ ಒತ್ತಡ ಹೇರಿ, ಬೆದರಿಸಿ ಬಾಡಿಗೆ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಮಾಡಿದ್ದರು.

2026ರಲ್ಲಿ ವಲಸಿಗರ ಮೇಲೆ ಹಿಂದುತ್ವವಾದಿಗಳ ಕೋಮುದೃಷ್ಟಿ

2026ರ ಆರಂಭದಿಂದ ಈವರೆಗೂ ಉತ್ತರಾಖಂಡದ ಗಡಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪರ್ವತ ಪ್ರದೇಶಗಳಲ್ಲಿ ಹಿಂದುತ್ವವಾದಿಗಳು ಮುಸ್ಲಿಂ ದಿನಗೂಲಿ ನೌಕರರು ಹಾಗೂ ತರಕಾರಿ ಮಾರಾಟಗಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರ ಗುರುತಿನ ಚೀಟಿ ಪರಿಶೀಲಿಸುವ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡ ಘಟನೆಗಳೂ ನಡೆದಿವೆ. ಹರಿದ್ವಾರ ಮತ್ತು ರಿಷಿಕೇಶದ ವ್ಯಾಪ್ತಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಶಾಶ್ವತ ಪರವಾನಗಿ ನೀಡಬಾರದು ಎಂದು ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುವ ದುಷ್ಕೃತ್ಯಗಳೂ ನಡೆದಿವೆ, ಮುಂದುವರೆದಿವೆ.

ಹೀಗೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರವನ್ನೇ ಹಿಂದುತ್ವವಾದಿಗಳು ಅಸ್ತ್ರವಾಗಿ ಬಳಸುತ್ತಿದ್ದಾರೆ. ಮುಸ್ಲಿಮರನ್ನು ಬೆದರಿಸಿ ತಾವಾಗಿಯೇ ವಲಸೆ ಹೋಗುವಂತೆ ಮಾಡುವ ಒತ್ತಡದ ತಂತ್ರಗಳನ್ನು ಬಳಸುತ್ತಿದ್ದಾರೆ. ಹಿಂಸಾಚಾರದ ಘಟನೆಗಳು ತೀವ್ರಗೊಂಡಾಗಲೆಲ್ಲಾ ಸುಪ್ರೀಂ ಕೋರ್ಟ್ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸುತ್ತಿದೆ. ಆದರೆ ಸರ್ಕಾರ ಮಾತ್ರ ಕಣ್ಣು, ಕಿವಿ, ಬಾಯಿ ಮುಚ್ಚಿ ಕೂತಿದೆ. ದ್ವೇಷ ಹರಡುವ ದುಷ್ಟಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಪೊಲೀಸರು ಹಲವು ಬಾರಿ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಹಿಂದುತ್ವವಾದಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಇವೆಲ್ಲವೂ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿರುವ ಇಂತಹ ಗೂಂಡಾಗಳಿಗೆ ಬಿಜೆಪಿ ಸರ್ಕಾರ ಬ್ರೇಕ್ ಹಾಕುವ ಭರವಸೆ ಇಟ್ಟುಕೊಳ್ಳಲಾಗದು.

ಯಾವುದೇ ಸಮಾಜವು ಭಯ ಮತ್ತು ಆತಂಕದ ವಾತಾವರಣದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಉತ್ತರಾಖಂಡದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೂ ಈ ಕೋಮು ಉದ್ವಿಗ್ನತೆ ದೊಡ್ಡ ಹೊಡೆತ ನೀಡುತ್ತಿದೆ ಎಂಬುದು ವಾಸ್ತವ. ದೇವಭೂಮಿ ಮತ್ತೆ ಶಾಂತಿ ಮತ್ತು ಸೌಹಾರ್ದತೆ ನೆಲೆಬೀಡಾಗಬೇಕಾದರೆ, ಹಿಂದುತ್ವವಾದಿಗಳಿಗೆ ಕಡಿವಾಣ ಅತ್ಯಗತ್ಯ. ಅದಕ್ಕಾಗಿ ಪ್ರಜ್ಞಾವಂತ ನಾಗರಿಕರು ದ್ವೇಷದ ರಾಜಕಾರಣದ ವಿರುದ್ಧ ಧ್ವನಿ ಎತ್ತಬೇಕಿದೆ. ಸೌಹಾರ್ದತೆಯೇ ಬದುಕಿನ ದಾರಿಯಾಗಬೇಕಿದೆ. ಈ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಇಂದಿಗೂ ಜೀವಂತ ಎಂಬ ಆಶಾವಾದ ಮೂಡಿಸುವ, ಹಿಂದುತ್ವವಾದಿಗಳನ್ನು ಕೆಚ್ಚೆದೆಯಿಂದ ಎದುರಿಸಿ ಮುಸ್ಲಿಂ ವ್ಯಾಪಾರಿಯನ್ನು ಬೆಂಬಲಿಸಿದ ‘ಮೊಹಮ್ಮದ್ ದೀಪಕ್ ಕುಮಾರ್’ ಅನ್ನು ಮರೆಯುವಂತಿಲ್ಲ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...