ಕದನ ವಿರಾಮ ಘೋಷಿಸಿದ್ದರೂ, ಹಾರ್ಮುಜ್ ‘ಸುಂಕ’ ಮುಂದುವರಿಯಲಿವೆ!

Date:

1429ರಲ್ಲಿ, ಪೊಮೆರೇನಿಯಾದ ರಾಜ ಎರಿಕ್ ಇಂದಿನ ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವಿನ ಕಿರಿದಾದ ‘ಓರಿಸುಂಡ್’ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಂದ ಸುಂಕ ವಸೂಲಿ ಮಾಡಲು ಆರಂಭಿಸಿದ್ದರು. ಬಾಲ್ಟಿಕ್ ಸಮುದ್ರದ ಕಡೆಗೆ ಹೋಗುವ ಪ್ರತಿಯೊಂದು ನೌಕೆಯು ಡೇನಿಷ್ ಬಂದರಿಗೆ ಹೋಗಲಿ ಅಥವಾ ಬಿಡಲಿ, ಹೆಲ್ಸಿಂಗರ್ ಕೋಟೆಯ ಬಳಿ ನಿಂತು ಹಣ ಪಾವತಿಸಬೇಕಾಗಿತ್ತು. ನಿರಾಕರಿಸಿದವರಿಗೆ ಎರಡೂ ತೀರಗಳಲ್ಲಿದ್ದ ಫಿರಂಗಿಗಳು ಉತ್ತರ ನೀಡುತ್ತಿದ್ದವು. 16 ಮತ್ತು 17ನೇ ಶತಮಾನದ ವೇಳೆಗೆ, ಈ ‘ಸೌಂಡ್ ಡ್ಯೂಸ್’ (ಓರಿಸುಂಡ್ ಬಳಕೆಯ ಸುಂಕ) ಡೇನಿಷ್ ಸಾಮ್ರಾಜ್ಯದ ಒಟ್ಟು ಆದಾಯದ ಮೂರನೇ ಎರಡರಷ್ಟು ಭಾಗವಾಗಿತ್ತು.

- Advertisement -

ಆನಂತರ, 1567ರಲ್ಲಿ ಇದನ್ನು ಸರಕು ಮೌಲ್ಯದ 1-2%ರಷ್ಟು ತೆರಿಗೆಯಾಗಿ ಮರುರೂಪಿಸಲಾಯಿತು. ಇದರಿಂದ, ಡೇನಿಷ್ ಸಾಮ್ರಾಜ್ಯದ ಆದಾಯ ಮೂರು ಪಟ್ಟು ಹೆಚ್ಚಾಯಿತು. ಸಣ್ಣಪುಟ್ಟ ಅಡೆತಡೆಗಳೊಂದಿಗೆ ಇದು 428 ವರ್ಷಗಳ ಕಾಲ ಮುಂದುವರೆಯಿತು. ಬ್ರಿಟನ್, ಫ್ರಾನ್ಸ್, ರಷ್ಯಾ ಸೇರಿದಂತೆ 13 ರಾಷ್ಟ್ರಗಳು ಒಗ್ಗೂಡಿ 1857ರ ಕೋಪನ್ ಹ್ಯಾಗನ್ ಒಪ್ಪಂದದ ಅಡಿಯಲ್ಲಿ ಸುಮಾರು 12 ವರ್ಷಗಳ ಸುಂಕದ ಆದಾಯವನ್ನು ಸರಿದೂಗಿಸುವ 3.35 ಕೋಟಿ ರಿಕ್ಸ್-ಡಾಲರ್ ಪಾವತಿಸಿ, ಸುಂಕ ವ್ಯವಸ್ಥೆಯನ್ನು ರದ್ದುಗೊಳಿಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಈಗ, 2026ರ ವಸಂತಕಾಲದಲ್ಲಿ, ಹಾರ್ಮುಜ್ ಜಲಸಂಧಿಯು ಈ ಇತಿಹಾಸವನ್ನು ಮರುಕಳಿಸುವಂತೆ ಮಾಡಿದೆ. ಫೆಬ್ರವರಿ 28ರಂದು, ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬಳಿಕ, ಇರಾನ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯನ್ನು ದಾಟುವ ಹಡಗುಗಳು ಸುಂಕ ತೆರಬೇಕೆಂದು ಸುಂಕ ಸಂಗ್ರಹ ಕಟ್ಟೆಯನ್ನು ನಿರ್ಮಿಸುತ್ತಿದೆ. ಈ ಹಾದಿಯಲ್ಲಿ ಸಾಗಬಯಸುವ ಹಡಗುಗಳು IRGCಗೆ ಸಂಬಂಧಿಸಿದ ಮಧ್ಯವರ್ತಿಗಳನ್ನು ಸಂಪರ್ಕಿಸಿ ಹಡಗಿನ ಐಎಂಒ ಸಂಖ್ಯೆ, ಸಿಬ್ಬಂದಿ ಪಟ್ಟಿ, ಸರಕು ವಿವರ ಹಾಗೂ ಗಮ್ಯಸ್ಥಾನದ ದಾಖಲೆಗಳನ್ನು ಸಲ್ಲಿಸಬೇಕು. ಸ್ನೇಹಪರತೆಯ ಆಧಾರದ ಮೇಲೆ ರಾಷ್ಟ್ರಗಳಿಗೆ ಒಂದರಿಂದ ಐದರವರೆಗೆ ಶ್ರೇಣಿ ನೀಡಲಾಗುತ್ತದೆ; ಭಾರತ, ಪಾಕಿಸ್ತಾನ, ಚೀನಾ ಮತ್ತು ಇರಾಕ್ ಸದ್ಯಕ್ಕೆ ಇರಾನ್‌ನ ‘ಸ್ನೇಹಪರತೆ’ಯ ಪಟ್ಟಿಯಲ್ಲಿ ಉಳಿದಿವೆ.

ಸೌರ್ ಅಬ್ಬಾಸ್ ಬಳಿಯ ಲಾರಾಕ್ ದ್ವೀಪದ ಉತ್ತರದಲ್ಲಿರುವ ಕಿರಿದಾದ ಕಾಲುವೆಯನ್ನು ಹಡಗು ಸಮೀಪಿಸುತ್ತಿದ್ದಂತೆ, ಅದು ತನ್ನ ಕ್ಲಿಯರೆನ್ಸ್ ಕೋಡ್ ಅನ್ನು ವಿಹೆಚ್‌ಎಫ್ ರೇಡಿಯೋ ಮೂಲಕ ಪ್ರಸಾರ ಮಾಡಬೇಕು. ನಂತರ IRGC ಗಸ್ತು ದೋಣಿಯು ಆ ಹಡಗನ್ನು ಬೆಂಗಾವಲಾಗಿ ಕರೆದೊಯ್ಯುತ್ತದೆ. ತೈಲ ಟ್ಯಾಂಕರ್‌ಗೆ ಪ್ರತಿ ಬ್ಯಾರೆಲ್ ಸರಕಿನ ಮೇಲೆ ಸುಮಾರು ಒಂದು ಡಾಲರ್ ಶುಲ್ಕ ವಿಧಿಸಲಾಗುತ್ತಿದೆ. ಅಂದರೆ, 20 ಲಕ್ಷ ಬ್ಯಾರೆಲ್ ಹೊತ್ತೊಯ್ಯುವ ದೊಡ್ಡ ಟ್ಯಾಂಕರ್ ಪ್ರತಿ ಬಾರಿ ಹಾದು ಹೋಗಲು 20 ಲಕ್ಷ ಡಾಲರ್ (18.5 ಕೋಟಿ ರೂ.) ಪಾವತಿಸಬೇಕು.

ಯುದ್ಧಕ್ಕೆ ಮೊದಲು ದಿನಕ್ಕೆ ಸುಮಾರು 135 ವಾಣಿಜ್ಯ ಹಡಗುಗಳು ಇಲ್ಲಿ ಸಂಚರಿಸುತ್ತಿದ್ದವು. ಮಾರ್ಚ್ 16ರವರೆಗೆ ದಿನಕ್ಕೆ 24 ಹಡಗುಗಳಷ್ಟೇ ಹಾರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದವು. ಮಾರ್ಚ್‌ 16ರಿಂದ ಏಪ್ರಿಲ್ 7ರವರೆಗೆ ಈ ಮಾರ್ಗದಲ್ಲಿ ಹಡಗು ಸಂಚಾರ ಶೂನ್ಯವಾಗಿತ್ತು ಎಂದು ಹೇಳಲಾಗಿದೆ.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮಾಡಿದ ಫೆಬ್ರವರಿ 28ಕ್ಕೂ ಮೊದಲು ದಿನನಿತ್ಯ ಸುಮಾರು 10 ದೊಡ್ಡ ತೈಲ ಟ್ಯಾಂಕರ್‌ಗಳು (VLCC) ಇಲ್ಲಿ ಸಂಚರಿಸುತ್ತಿದ್ದವು. ಈಗ, ಈ ಟ್ಯಾಂಕರ್‌ಗಳು ಸುಂಕ ಪಾವತಿ ಮಾಡಬೇಕಾಗಿದೆ. ಕೇವಲ ಈ 10 ತೈಲ ಟ್ಯಾಂಕರ್‌ಗಳಿಂದಲೇ ಇರಾನ್‌ಗೆ ದಿನಕ್ಕೆ 2 ಕೋಟಿ ಡಾಲರ್ ಆದಾಯ ಬರುತ್ತದೆ. ಎಲ್‌ಎನ್‌ಜಿ ಸಾಗಣೆಯನ್ನು ಸೇರಿಸಿದರೆ, ಇದು ತಿಂಗಳಿಗೆ 80 ಕೋಟಿ ಡಾಲರ್‌ಗಿಂತ ಹೆಚ್ಚಾಗುತ್ತದೆ. ಇದು ಈಜಿಪ್ಟ್‌ನ ಸುಯೆಜ್ ಕಾಲುವೆಯ ಆದಾಯಕ್ಕೆ ಸಮಾನವಾಗಿದೆ. ಒಂದು ಅಂದಾಜಿನ ಪ್ರಕಾರ, ಈ ಸುಂಕವು IRGCಗೆ ವರ್ಷಕ್ಕೆ ಸುಮಾರು 5,000 ಕೋಟಿ ಡಾಲರ್ ಆದಾಯ ತಂದುಕೊಡಬಹುದು, ಅಂದರೆ ಇರಾನ್‌ನ ತೈಲ ಮಾರಾಟದ ಆದಾಯಕ್ಕಿಂತಲೂ ಇದು ದುಪ್ಪಟ್ಟು.

ಆದಾಗ್ಯೂ, ಅಂತಾರಾಷ್ಟ್ರೀಯ ಸಮುದ್ರ ಕಾನೂನು ಒಪ್ಪಂದದ (UNCLOS) ಅಡಿಯಲ್ಲಿ ಅಂತರಾಷ್ಟ್ರೀಯ ಜಲಸಂಧಿಗಳ ಮೂಲಕ ಸಾಗುವ ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಆದರೆ, ಈ ಒಪ್ಪಂದಕ್ಕೆ ತಾವು ಸಹಿ ಹಾಕಿಲ್ಲ ಎಂದು ಇರಾನ್ ತಾಂತ್ರಿಕ ವಾದ ಮುಂದಿಡುತ್ತಿದೆ. (ಸುಯೆಜ್ ಮತ್ತು ಪನಾಮ ಕಾಲುವೆಗಳು ಮಾನವ ನಿರ್ಮಿತವಾದವು. ಆದ್ದರಿಂದ ಅಲ್ಲಿ ಶುಲ್ಕ ವಿಧಿಸಲಾಗುತ್ತದೆ. ಆದರೆ, ಹಾರ್ಮುಜ್ ನೈಸರ್ಗಿಕ ಜಲಮಾರ್ಗವಾಗಿದ್ದು, ಇಲ್ಲಿ ಶುಲ್ಕ ವಸೂಲಿ ಮಾಡಲು ಅವಕಾಶವಿಲ್ಲ ಎನ್ನುತ್ತದೆ ಅಂತರಾಷ್ಟ್ರೀಯ ಕಾನೂನು.)

ಇರಾನ್‌ ತನ್ನ ತಾಂತ್ರಿಕ ವಾದದೊಂದಿಗೆ ಬಲವಾಗಿ ನಿಂತಿದೆ. ಆದರೆ, ನೌಕಾಪಡೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಂತರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸಲು ಹಲವು ರಾಷ್ಟ್ರಗಳು ಪರದಾಡುತ್ತಿವೆ. ಅಮೆರಿಕ ತನ್ನ 130ಕ್ಕೂ ಹೆಚ್ಚು ನೌಕೆಗಳನ್ನು ಕಳೆದುಕೊಂಡಿರುವುದರಿಂದ ವಾಣಿಜ್ಯ ಹಡಗುಗಳಿಗೆ ಬೆಂಗಾವಲು ನೀಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಈ ಲೇಖನ ಓದಿದ್ದೀರಾ?: ಶಿಲಾಯುಗ’ದಿಂದ ‘ಸುವರ್ಣಯುಗ’; ಇರಾನ್ ಮೇಲಿನ ಯುದ್ಧದಲ್ಲಿ ಬದಲಾದ ಟ್ರಂಪ್ ವರಸೆ

ಇದೀಗ, ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, “ಇರಾನ್ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರ ಒದಗಿಸಲಾಗುತ್ತದೆ” ಎಂದು ಹೇಳಿದ್ದಾರೆ. ಇಲ್ಲಿ ‘ಸಮನ್ವಯ’ ಎಂಬ ಪದ ಬಳಕೆಯು, ಇರಾನ್‌ನ ನಿಯಂತ್ರಣದಲ್ಲಿಯೇ ಹಡಗುಗಳ ಸಂಚಾರಕ್ಕೆ ಅವಕಾಶ ಇರುತ್ತದೆ ಎಂಬುದನ್ನು ಸೂಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಅಚ್ಚರಿಯ ವಿಷಯವೆಂದರೆ, ಏಪ್ರಿಲ್ 6ರಂದು ಟ್ರಂಪ್, “ನಾವೇಕೆ ಸುಂಕ ವಸೂಲಿ ಮಾಡಬಾರದು? ನಾವೇ ಗೆದ್ದವರು” ಎಂದಿದ್ದರು. ಈಗ ಅವರ ಆಡಳಿತವು ಇರಾನ್ ಸಶಸ್ತ್ರ ಪಡೆಗಳೇ ಸಂಚಾರದ ‘ಸಮನ್ವಯಕಾರರು’ ಎಂಬುದನ್ನು ಒಪ್ಪಿಕೊಂಡಿದೆ. ಅಂದರೆ, ಹಾರ್ಮುಜ್ ಜಲಸಂಧಿಯಲ್ಲಿ ಹಗಡುಗಳ ಸಂಚಾರಕ್ಕೆ ಬೆದರಿಕೆ ಇರುವುದಿಲ್ಲ. ಆದರೆ, ಸುಂಕ ವಸೂಲಿ ವಿಚಾರ ಇರಾನ್‌ನ ನಿರ್ಧಾರಕ್ಕೆ ಬಿಟ್ಟಿದ್ದು ಎಂದರ್ಥ.

ಆದ್ದರಿಂದ, ಇರಾನ್‌ನ ಈ ಯಶಸ್ಸು, ಜಾಗತಿಕ ವಾಣಿಜ್ಯ ವ್ಯಾಪಾರಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ವಿಶ್ವದ ವ್ಯಾಪಾರದ ಸುಮಾರು 75%ರಷ್ಟು ವಹಿವಾಟು 13 ಜಲಸಂಧಿಗಳ ಮೂಲಕ ನಡೆಯುತ್ತಿದೆ. ಅದರಲ್ಲಿ, 20% ವಹಿವಾಟು ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಹಾರ್ಮುಜ್‌ಅನ್ನು ನಿರ್ಬಂಧಿಸುವ ಮತ್ತು ಸುಂಕ ಹೇರುವ ಮೂಲಕ, ನೈಸರ್ಗಿಕ ಜಲಸಂಧಿಯನ್ನು ಶಾಶ್ವತ ಸುಂಕದ ಕಟ್ಟೆಯನ್ನಾಗಿ ಬದಲಾಯಿಸಲು ಸಾಧ್ಯವೆಂಬುದನ್ನು ತೂರಿಸಿಕೊಟ್ಟಿದ್ದಾರೆ.

1857ರಲ್ಲಿ ಇಡೀ ಜಗತ್ತು ಒಗ್ಗೂಡಿ ನೈಸರ್ಗಿಕ ಜಲಸಂಧಿ ಎಲ್ಲರಿಗೂ ಸೇರಿದ್ದು ಎಂದು ತೀರ್ಮಾನಿಸಿತ್ತು. ಆದರೆ, ಶುಕ್ರವಾರದಿಂದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಲಿರುವ ಮಾತುಕತೆಗಳು ನೈಸರ್ಗಿಕ ಜಲಸಂಧಿ ಎಲ್ಲರಿಗೂ ಮುಕ್ತವೆಂಬ ತತ್ವವು ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ತೋರುವುದೇ? ಅಥವಾ ಹಳೆಯ ಸುಂಕದ ಪದ್ಧತಿ ಮತ್ತೆ ಜಾರಿಗೆ ಬಂದಿದೆ ಎಂಬುದನ್ನು ಸೂಚಿಸುವುದೇ? ಇನ್ನೊಂದು ವಾರದಲ್ಲಿ ಸ್ಪಷ್ಟವಾಗಲಿದೆ.

ಮೂಲ: ಎನ್‌ಡಿಟಿವಿ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...