ಕದನ ವಿರಾಮಕ್ಕೆ ಇರಾನ್ ಸಂಭ್ರಮ; ಅಮೆರಿಕ-ಇಸ್ರೇಲ್ ಮೇಲಿನ ಅಪನಂಬಿಕೆಯೂ ಇದೆ!

Date:

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಹಲವಾರು ರಾಷ್ಟ್ರಗಳು ಅದರಲ್ಲೂ, ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಇಂಧನ ಬಿಕ್ಕಟ್ಟಿಗೆ ಗುರಿಯಾಗಿದ್ದ ದೇಶಗಳು ಕದನ ವಿರಾಮವನ್ನು ಸ್ವಾಗತಿಸಿವೆ. ಇರಾನ್‌ ಕೂಡ, ಟ್ರಂಪ್ ಅವರೇ ತಲೆಬಾಗಿ ಘೋಷಿಸಲಾದ ಕದನ ವಿರಾಮದಲ್ಲಿ ತಮ್ಮ ಗೆಲುವಿದೆ ಎಂದು ಸಂಭ್ರಮಿಸುತ್ತಿವೆ. ಆದರೂ, ಟ್ರಂಪ್ ಇತ್ತೀಚೆಗೆ ಬಳಸಿದ ಆಕ್ರಮಣಕಾರಿ ‘ಕ್ರೇಜಿ ಬಾ****ಸ್’ ಮತ್ತು ‘ಇಂದು ರಾತ್ರಿ ಇಡೀ ನಾಗರಿಕತೆಯೇ ನಾಶವಾಗಲಿದೆ’ ಎಂಬ ಹೇಳಿಕೆಗಳು ಹಾಗೂ ಹಲವು ಸಂಗತಿಗಳು ಅಮೆರಿಕ-ಇಸ್ರೇಲ್‌ನ ಮೇಲಿನ ಅಪನಂಬಿಕೆಯನ್ನು ಮುಂದುವರೆಯುವಂತೆ ಮಾಡಿವೆ.

- Advertisement -

ಪಾಕಿಸ್ತಾನದ ನೆರವಿನೊಂದಿಗೆ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಶಾಂತಿ ಒಪ್ಪಂದದ ನಿಯಮಗಳ ವಿವರಗಳು ಇನ್ನೂ ಸಾರ್ವಜನಿಕವಾಗಿಲ್ಲ. ಆದರೂ, ಲಭ್ಯವಿರುವ ಮಾಹಿತಿಯಂತೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಯುದ್ಧಪೂರ್ವ ಪರಿಸ್ಥಿತಿಯಂತೆ ಸಂಚಾರ ಮುಕ್ತಗೊಳಿಸಲಿದೆ ಎನ್ನಲಾಗಿದೆ. ಆದಾಗ್ಯೂ, ಹಡಗುಗಳ ಮೇಲೆ ಸುಂಕ ವಿಧಿಸುವ ತನ್ನ ಕ್ರಮವನ್ನು ಇರಾನ್ ಮುಂದುವರೆಸಲಿದೆ ಎಂದೂ ಹೇಳಲಾಗಿದೆ. ಇನ್ನು, ಅಮೆರಿಕ ಕೂಡ ಕೊಲ್ಲಿ ಪ್ರದೇಶದಲ್ಲಿ ನಿಯೋಜಿಸಿರುವ ತನ್ನ 57,000ಕ್ಕೂ ಹೆಚ್ಚು ಸೈನಿಕರಲ್ಲಿ ಬಹುಸಂಖ್ಯಾತರನ್ನು ಹಿಂಪಡೆಯುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸದ್ಯ, ಈ ಕದನ ವಿರಾಮವನ್ನು ಎರಡೂ ರಾಷ್ಟ್ರಗಳು ತಮ್ಮ ಗೆಲುವು ಎಂದು ಹೇಳಿಕೊಂಡಿವೆ. ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇರಾನ್ ರಾಜಧಾನಿ ಟೆಹ್ರಾನ್‌ನ ರಸ್ತೆಗಳು ಜನರಿಂದ ತುಂಬಿ ತುಳುಕಿವೆ. ಎಂಕ್ವೆಲಾಬ್ ಚೌಕದಲ್ಲಿ ಸಾವಿರಾರು ಜನರು ಜಮಾಯಿಸಿ ಇರಾನ್ ಧ್ವಜ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರ ಪೋಸ್ಟರ್‌ಗಳನ್ನು ಪ್ರದರ್ಶಿಸಿ, ಸಂಭ್ರಮಿಸಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ಟಿಆರ್‌ಟಿ ವರ್ಲ್ಡ್, ಅಲ್ ಜಜೀರಾ ಹಾಗೂ ರಾಯಿಟರ್ಸ್ ವರದಿ ಮಾಡಿವೆ.

ಆದರೂ, ಇದೇ ಸಮಯದಲ್ಲಿ, ಅಮೆರಿಕ ಮತ್ತು ಇಸ್ರೇಲ್ ಶಾಂತಿಗೆ ಬದ್ಧವಾಗಿರುತ್ತವೆ ಎಂಬ ಬಗ್ಗೆ ಹಲವರು ಅನುಮಾನಗೊಂಡಿದ್ದಾರೆ. ಅವರೆಲ್ಲರೂ, ಅಮೆರಿಕ-ಇಸ್ರೇಲ್ ಧ್ವಜಗಳನ್ನು ಸುಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು, ಸಂಧಾನಕಾರರಿಗೆ ಸಾವು” ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

“ಅಮೆರಿಕ ತನ್ನ ಬುದ್ಧಿಯನ್ನು ನೂರು ಬಾರಿ ತೋರಿಸಿಕೊಟ್ಟಿದೆ… ನಾವು ಎರಡು ಬಾರಿ ಮಾತುಕತೆಯ ಮೇಜಿನ ಬಳಿ ಹೋದಾಗಲೂ ಅದು ನಮ್ಮ ಮೇಲೆ ದಾಳಿ ಮಾಡಿದೆ. ಈ ಕದನ ವಿರಾಮ ಕೂಡ ಅದು ಮರು-ಶಸ್ತ್ರಸಜ್ಜಿತಗೊಳ್ಳಲು ಮಾಡುತ್ತಿರುವ ನಾಟಕ… ಇದು ಅಮೆರಿಕದ ಗುಣ, ಅದು ಬದಲಾಗುತ್ತದೆಯೇ?” ಎಂದು ಟೆಹ್ರಾನ್‌ನ ಮಹಿಳೆಯೊಬ್ಬರು ಕಿಡಿಕಾರಿದ್ದಾರೆ.

ಈ ಲೇಖನ ಓದಿದ್ದೀರಾ?: ಶಿಲಾಯುಗ’ದಿಂದ ‘ಸುವರ್ಣಯುಗ’; ಇರಾನ್ ಮೇಲಿನ ಯುದ್ಧದಲ್ಲಿ ಬದಲಾದ ಟ್ರಂಪ್ ವರಸೆ

“ಇದು ಶಾಂತಿಯಲ್ಲ… ಶಾಂತಿಯ ಬಗ್ಗೆ ಮಾತನಾಡುತ್ತಲೇ ನಮ್ಮ ಆಡಳಿತ ಬದಲಾವಣೆಗೆ ಸಂಚು ರೂಪಿಸುವ ತಂತ್ರ. ಅವರನ್ನು ನಾವು ಹೇಗೆ ನಂಬಲು ಸಾಧ್ಯ?” ಎನ್ನುತ್ತಾರೆ ಟೆಹ್ರಾನ್‌ನ 41 ವರ್ಷದ ಇತಿಹಾಸ ಶಿಕ್ಷಕಿ ರಾಹಾ.

ಈ ಅಪನಂಬಿಕೆಗೆ ಬಲವಾದ ಕಾರಣಗಳೂ ಇವೆ. 2025ರ ಜೂನ್‌ ಮತ್ತು 2026ರ ಫೆಬ್ರವರಿಯಲ್ಲಿ ಹೊಸ ಪರಮಾಣು/ಕ್ಷಿಪಣಿ ಒಪ್ಪಂದದ ಕುರಿತು ಅಧಿಕೃತ ಮಾತುಕತೆಗಳು ನಡೆಯುತ್ತಿದ್ದಾಗಲೇ ಅಮೆರಿಕವು ಇರಾನ್‌ ಮೇಲೆ ವಾಯುದಾಳಿಗಳನ್ನು ನಡೆಸಿತ್ತು. ಇದು ಅಮೆರಿಕದ ‘ದುರುದ್ದೇಶದ ಮಾತುಕತೆ’ಗೆ ಸಾಕ್ಷಿ ಎಂದು ವಿಮರ್ಶಕರು ಬೆಟ್ಟು ಮಾಡಿದ್ದಾರೆ.

ಶುಕ್ರವಾರ ಪಾಕಿಸ್ತಾನದಲ್ಲಿ ನಡೆಯಲಿರುವ ಅಮೆರಿಕ-ಇರಾನ್ ಮಾತುಕತೆಯಲ್ಲಿ ಕದನ ವಿರಾಮವು ಶಾಶ್ವತ ಶಾಂತಿಯಾಗಿ ಬದಲಾಗಬೇಕೆಂದು ಇರಾನ್‌ ಜನರು ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...