ಅರಣ್ಯದ ಕಟ್ಟುಪಾಡು, ಭೀಕರ ಬರಕ್ಕೆ ಹನೂರಿನ ಕಾಲ್ನಡೆಗಳು ತತ್ತರ: ಕೃಷ್ಣ ಗೊಲ್ಲರಿಗೆ ನೆರವಾಗುವುದೇ ಸರ್ಕಾರ?

Date:

ಆಧುನಿಕತೆಯ ಹೆಸರಿನಲ್ಲಿ ಕಾಡನ್ನು ಬರೀ 'ಮರ-ಪ್ರಾಣಿಗಳ' ತಂಗುದಾಣವಾಗಿ ನೋಡುವುದು ಮತ್ತು ಅಲ್ಲಿ ಶತಮಾನಗಳಿಂದ ಕಾಡಿನೊಂದಿಗೆ ಸಹಬಾಳ್ವೆ ನಡೆಸಿದ ಪಶುಪಾಲಕರನ್ನು ಹೊರಹಾಕುವುದು ಪರಿಸರ ವಿಜ್ಞಾನಕ್ಕೂ ಮತ್ತು ಸಂಸ್ಕೃತಿಗೂ ಮಾರಕ. ಕೃಷ್ಣ ಗೊಲ್ಲರು ಕಾಡಿನ ಶತ್ರುಗಳಲ್ಲ; ಬದಲಿಗೆ ಕಾಡನ್ನು ಜೀವಂತವಾಗಿಟ್ಟಿರುವ 'ದೇಸಿ ಸಂರಕ್ಷಕರು'. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದ ಹೆಮ್ಮೆಯ ನಾಟಿದನಗಳ ಸಂತತಿ ಮತ್ತು ಒಂದು ಅಪರೂಪದ ಜೀವಸಂಸ್ಕೃತಿ ಇತಿಹಾಸದ ಪುಟ ಸೇರುವುದು ಖಚಿತ.

ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಹನೂರು ದಾಟಿದರೆ ದೊಡ್ಡಿ ಹೆಸರಿನ ಹಲವು ಹಳ್ಳಿಗಳು ಕಾಣಸಿಗುತ್ತವೆ. ಹಾಗೆಯೇ ನೂರಾರು ದನಕರುಗಳು, ಅರದಲ್ಲೂ ನಾಟಿದನಗಳು, ಮೂಗುದಾರವಿಲ್ಲದ ಅಪ್ಪಟ ದೇಸಿ ದನಗಳೂ ಕೂಡ ತಂಡೋಪತಂಡವಾಗಿ ಕಾಡಿಗೆ ಹೋಗುತ್ತಿರುವ ದೃಶ್ಯ ನೋಡಬಹುದು.

- Advertisement -

ಕೆಂಚಯ್ಯನ ದೊಡ್ಡಿ, ತಿಮ್ಮನಾಯಕನದೊಡ್ಡಿ, ಹೊಸದೊಡ್ಡಿ, ಮಲ್ಲಯ್ಯನಪುರ, ಪುದುನೂರು, ಎಲೆಮಾಳ, ಬಾಳಗುಣಿಸೆ, ಗುಂಜಾಪುರ ಹೀಗೆ ಹಲವು ದೊಡ್ಡಿಗಳಲ್ಲಿ ವಾಸಿಸುವ ಪಶುಪಾಲಕರು ಈಗಲೂ ಕನಿಷ್ಠ ಅಂದರೆ 50ರಿಂದ 100 ದನಕರುಗಳನ್ನು ಪಾಲನೆ ಮಾಡುತ್ತಿದ್ದಾರೆ. ದನಗಳನ್ನು ಇವರು ಕಾಲ್ನಡೆ ಎನ್ನುತ್ತಾರೆ. ಅದೂ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಕಾಡುಗಳಲ್ಲಿ ಸಾಕುತ್ತಿದ್ದಾರೆ. ಇವರೇ ಕೃಷ್ಣ ಗೊಲ್ಲರು !! ಈ ಸಮುದಾಯ ಕರ್ನಾಟಕದ ಅಲೆಮಾರಿ ಪಶುಪಾಲಕ ಸಮುದಾಯಗಳಲ್ಲಿ ಒಂದು. ಸರಿಸುಮಾರು 5000ಕ್ಕೂ ಹೆಚ್ಚು ನಾಟಿದನಗಳೂ, ನಾಲ್ಕಾರು ಸಾವಿರ ಆಡುಕುರಿಗಳೂ ಇವರ ಕಾಲ್ನಡೆಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ವಿಶ್ವಪ್ರಸಿದ್ಧ ಪರಿಸರ ವಿಜ್ಞಾನಿ ಅಲನ್ ಸ್ಯಾವರಿ(Allan Savory) ಹೇಳುವಂತೆ, ‘ನಿಯಂತ್ರಿತ ಮೇಯಿಸುವಿಕೆ'(Holistic Planned Grazing)ಯಿಂದ ಮಣ್ಣಿನ ಗುಣಮಟ್ಟ ಹೆಚ್ಚಿ, ಹವಾಮಾನ ವೈಪರೀತ್ಯವನ್ನು ತಡೆಯಬಹುದುʼ. ಆದರೆ ನಮ್ಮ ನೀತಿಗಳು ಪಶುಪಾಲಕರನ್ನೇ ಕಾಡಿನಿಂದ ಹೊರದಬ್ಬುತ್ತಿವೆ.

ಪ್ರಕೃತಿಯ ಮಡಿಲಲ್ಲಿ ಸಮೃದ್ಧವಾಗಿದ್ದುಕೊಂಡು ಕೃಷಿ-ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೃಷ್ಣಗೊಲ್ಲ ಪಶುಪಾಲಕ ಅಲೆಮಾರಿ ಸಮುದಾಯ ಈಗ ಹುಲಿ ಅಭಯಾರಣ್ಯದ ನಿರ್ಬಂಧಗಳು, ತೀವ್ರ ಕ್ಷಾಮ(ಬರ) ಮತ್ತು ಆಧುನಿಕ ಅಭಿವೃದ್ಧಿ ನೀತಿಗಳಿಂದ ತತ್ತರಿಸಿತ್ತು.

ಇದೀಗ ಬರದಿಂದಾಗಿಯೂ ತೊಂದೆರೆಗೀಡಾಗಿರುವ ಈ ಸಮುದಾಯದ ಮಲ್ಲಯ್ಯನಪುರ ಕನಕರಾಜು ಮಾತನಾಡಿ, “ಈ ಸಾರಿ ಸರ್ಕಾರ ನಮ್ಮ ನೆರವಿಗೆ “ಈ ಸಾರಿ ಸರ್ಕಾರ ನಮ್ಮ ನೆರವಿಗೆ ಬಾರದಿದ್ದರೆ ನಮ್ಮ ಕಾಲ್ನಡೆಗಳು ಉಳಿಯುವುದಿಲ್ಲʼವೆಂದು ಅಸಹಾಯಕ ದುಮ್ಮಾನ ವ್ಯಕ್ತಪಡಿಸಿದ್ದಾರೆ.

ಆಗಿರುವುದಾದರೂ ಏನು ? ಇದ್ದಕ್ಕಿದ್ದಂತೆ ಈ ಸ್ಥಿತಿ ಬಂತಾ?

ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇವರಿಗೆ ‘ ‘ಪರ್ಮೆಂಟ್’ ಕೊಟ್ಟಿದ್ದರು. ದೊಡ್ಡಸ್ವಾನೆ ನತ್ತ, ಜುಂಜಗೋಳ ನತ್ತ ಎಂಬ ಪ್ರದೇಶಗಳು ಈ ನತ್ತಗಳಲ್ಲಿ ಮುಖ್ಯವಾದವು. ಕೃಷ್ಢಗೊಲ್ಲರು ಕಾವೇರಿ ಹೊಳೆ ಪಕ್ಕದ ದಟ್ಟ ಕಾಡಿನಲ್ಲಿನ ‘ನತ್ತ’ಗಳಲ್ಲಿ ಸಾವಿರಾರು ದನಗಳನ್ನು ಬೀಡುಬಿಟ್ಟು ಅಲ್ಲಿಯೇ ನಾಲ್ಕೈದು ತಿಂಗಳು ದನಕರುಗಳನ್ನು ಮೇಯಿಸುತ್ತ ಬೇಸಿಗೆಯನ್ನು ಕಳೆಯುತ್ತಿದ್ದರು. ಮಳೆಗಾಲದಲ್ಲಿ ತಮ್ಮ ಊರಿನ ದೊಡ್ಡಿಗಳಿಗೆ ಹಿಂತಿರುಗುತ್ತಿದ್ದರು.

ಜವಾರಿ ದನಗಳು

ಆದರೆ ಈಗ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಹುಲಿ ಅಭಯಾರಣ್ಯ ಘೋಷಣೆಯಾದ ಮೇಲೆ ಕಾಡಿಗೆ ಕಾಲ್ನಡೆಗಳನ್ನ ನಡೆಸುವುದೇ ದುಸ್ಸಾಹಸವಾಗಿದೆ. ಆ ಊರುಗಳಿಂದ ಸರಿಸುಮಾರು ಹತ್ತು ಕಿಲೋಮೀಟರ್ ದೂರವಿರುವ ಕಾಡಿನಲ್ಲಿನ ಕಾವೇರಿ ಹೊಳೆ ಈಗ ಇವರಿಗೆ ದೂರವೇ ಆಗಿ ಉಳಿದಿದೆ. ಈಗ ನಿತ್ಯವೂ ದೊಡ್ಡಿಯಿಂದ ಐದಾರು ಮೈಲಿ ಹೋಗಿ ವಾಪಸ್ಸು ಬರುತ್ತಾರೆ. ಹೀಗೆ ಕಷ್ಟಸಾಧ್ಯವಾದ ಪಶುಪಾಲನೆಯಿಂದ ಇವರ ಕಾಲ್ನಡೆಗಳ ಸಂಖೈ ದಿನೇದಿನೆ ಕುಗ್ಗಿ ಈಗ ಕನಿಷ್ಠ ಸಂಖ್ಯೆಗೆ ಇಳಿದಿದೆ.

ಇತ್ತೀಚಿನ ಕ್ಷಾಮದಲ್ಲಿ ಅಂದರೆ 2016ರಲ್ಲಿ ರಾಮಚಂದ್ರಾಪುರ ಮಠ ಇವರ ಕಷ್ಟವನ್ನು ಆತುಗೊಂಡಿತ್ತು. ಆಗ ಪ್ರತಿ ನಾಲ್ಕೈದು ದೊಡ್ಡಿಗಳಿಗೆ ಒಂದರಂತೆ ಗೋಶಾಲೆ ತೆರೆದಿದ್ದರು. ಸುಮಾರು ಹದಿನೈದು ಗೋಶಾಲೆಗಳನ್ನು ಮಾಡಿ ಹಸಿದಂಟು, ನೀರು ಎಲ್ಲವನ್ನೂ ಪೂರೈಸಿದ್ದನ್ನು ಇವರು ಈಗಲೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಇಡೀ ಕರ್ನಾಟಕದಲ್ಲಿ ದನಗಳ ಸಂಖ್ಯೆ ಒಂದು ಕೋಟಿಗಿಂತಲೂ ಕಡಿಮೆಯಾಗುತ್ತಿದೆ. ಅದರಲ್ಲೂ ಹಾಲು ಕೊಡುವ ಮಿಶ್ರತಳಿ ಜರ್ಸಿ, ಹೆಚ್ಎಫ್ ಹಸುಗಳದ್ದೇ ಸಿಂಹಪಾಲು. ಇನ್ನು ನಾಟಿ ತಳಿಗಳ ದನಗಳು ಈಗ ಹಲವು ಲಕ್ಷಕ್ಕೆ ಕುಸಿದಿವೆ.

ಈ ಮಹದೇಶ್ವರ ಬೆಟ್ಟದ ಮೇಲಿರುವ ಬೇಡಕಂಪಣರು, ಬೆಟ್ಟದ ಕೆಳಗಿರುವ ಕೃಷ್ಣಗೊಲ್ಲರು, ಮಲೆನಾಡಿನ ಅಂಚಿನ ಜಿಲ್ಲೆಗಳಲ್ಲಿರುವ ಧನಗರ್ ಗೌಳಿಗಳು, ಮಧ್ಯಕರ್ನಾಟಕದಲ್ಲಿರುವ ಮ್ಯಾಸಬೇಡರು, ಕಾಡು ಗೊಲ್ಲರು, ಉತ್ತರ ಕರ್ನಾಟಕದ ಕೊಪ್ಪಳ ಹಿಂಡುದನಗಳ ಪಾಲಕರು ಇವರ ನಾಟಿ ದನಗಳ ಸಂಖ್ಯೆ ಇಡೀ ಕರ್ನಾಟಕದ ದೇಸಿದನಗಳ ಸಂಖ್ಯೆಯ ಅರ್ಧದಷ್ಟಾಗುತ್ತದೆ!

ಆದರೆ ಸರ್ಕಾರ ದೇಸಿ ತಳಿಗಳ ಅಭಿವೃದ್ಧಿಯನ್ನು ತನ್ನ ತಳಿನೀತಿಯಲ್ಲಿ ಆದ್ಯತೆಯಾಗಿ ಘೋಷಿಸಿಕೊಂಡಿದೆ. ಪಟ್ಟಣಗಳಲ್ಲಿ, ಸಿಟಿಗಳಲ್ಲಿ ನಾಟಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಅದರ ಉತ್ಪನ್ನಗಳಾದ ಬೆಣ್ಣೆ, ತುಪ್ಪಗಳ ಬೆಲೆ ಹಿಗ್ಗಿದ್ದರೂ ಈ ಸಮುದಾಯಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಹೇಗೆ?

ಕೃಷ್ಣಗೊಲ್ಲರು ತಮ್ಮ ಸಾವಯವ ಬದುಕಿನ ರೀತಿಯಿಂದ ಪ್ರಕೃತಿಗಾಗಿಯೇ ಕೊಡುಗೆ ನೀಡುತ್ತ ಪಶುಪಾಲನೆ ಮಾಡುತ್ತಿದ್ದರೆ; ಪಶುಪಾಲನಾ ಇಲಾಖೆ ಇವರ ವಿಷಯದಲ್ಲಿ ಅಸಡ್ಡೆ ತೋರುತ್ತಿಲ್ಲವೇ? ಈಗಿನ ಕ್ಷಾಮದ ದವಡೆಗೆ ಸಿಲುಕಿರುವ ಈ ಪಶುಪಾಲಕ ಸಮುದಾಯಗಳನ್ನು ರಕ್ಷಿಸುವ ಹೊಣೆ ಸರ್ಕಾರಕ್ಕೆ ಇಲ್ಲವೇ?

ಹೊಸ ಅಭಿವೃದ್ಧಿ ನೀತಿಗಳು ಈ ಕಾಡಿನಂಚಿನ ಪಶುಪಾಲಕ ಸಮುದಾಯಗಳನ್ನು ಕಬಳಿಸಿ ಕಾಡನ್ನು ಉಳಿಸಲು ಸಾಧ್ಯವೇ ?

ಈ ಸಮಸ್ಯೆಗೆ ಸರ್ಕಾರ, ಪಶುಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆ ತಕ್ಷಣವೇ ಕೈಗೊಳ್ಳಬಹುದಾದ ಸುದೀರ್ಘ ಪರಿಹಾರಗಳು ಮತ್ತು ಪ್ರಾಯೋಗಿಕ ಕ್ರಮಗಳು, 2016ರಲ್ಲಿ ರಾಮಚಂದ್ರಾಪುರ ಮಠ ಮಾಡಿದ್ದ ಮಾದರಿಯಲ್ಲಿ, ಪ್ರತಿ 3-4 ದೊಡ್ಡಿಗಳ ಗುಂಪಿಗೆ ಒಂದರಂತೆ ಉಚಿತ ‘ತಾತ್ಕಾಲಿಕ ಗೋಶಾಲೆಗಳನ್ನು’ ಸರ್ಕಾರ ತಕ್ಷಣ ಆರಂಭಿಸಬೇಕು. ತಾತ್ಕಾಲಿಕ ಗೋಶಾಲೆ ತೆರೆಯುವುದರಿಂದ ಅನುಕೂಲವಾಗುತ್ತದೆ. ಒಣಮೇವು(ಹಸಿರು ಮೇವಿನ ಕಟ್ಟುಗಳು) ಹಾಗೂ ಕಾವೇರಿ ನದಿ/ಕಾಡಿನಂಚಿನ ಭಾಗಗಳಲ್ಲಿ ಸೌರಶಕ್ತಿ ಚಾಲಿತ ಬೋರ್‌ವೆಲ್‌ಗಳ ಮೂಲಕ ಕಾಲ್ನಡೆಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು. ಪಶುವೈದ್ಯರ ತಂಡವನ್ನು ದೊಡ್ಡಿಗಳಿಗೆ ಕಳುಹಿಸಿ, ಸಾಂಕ್ರಾಮಿಕ ರೋಗಗಳು ಬಾರದಂತೆ ಉಚಿತ ಲಸಿಕೆ ಮತ್ತು ಪೌಷ್ಠಿಕ ಆಹಾರ/ಖನಿಜ ಮಿಶ್ರಣ (Mineral Mixture) ವಿತರಿಸಬೇಕು.

ಅರಣ್ಯ ನೀತಿ ಬದಲಾವಣೆ ಮತ್ತು ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆ

    ನಿಯಂತ್ರಿತ ಮೇಯಿಸುವಿಕೆಗೆ ‘ವಿಶೇಷ ಪಾಸು'(Traditional Grazing Rights): ಹುಲಿ ಅಭಯಾರಣ್ಯದ ‘ಕೋರ್ Zone’ ಹೊರತುಪಡಿಸಿ, ‘ಬಫರ್ Zone’ ಹಾಗೂ ಸಾಂಪ್ರದಾಯಿಕ ‘ನತ್ತ’ಗಳಲ್ಲಿ ಮೇಯಿಸಲು ಋತುಮಾನಕ್ಕೆ ತಕ್ಕಂತೆ(Seasonal Grazing Permit) ಕೃಷ್ಣ ಗೊಲ್ಲರಿಗೆ ಹಕ್ಕು ನೀಡಬೇಕು.

    ಸಮುದಾಯ ಅರಣ್ಯ ಹಕ್ಕು(Community Forest Rights – CFR): ಅರಣ್ಯ ಹಕ್ಕು ಕಾಯಿದೆ 2006ರ ಅಡಿಯಲ್ಲಿ ಕೃಷ್ಣ ಗೊಲ್ಲರು, ಮ್ಯಾಸಬೇಡರು, ಧನಗರ್ ಗೌಳಿಗಳಿಗೆ ಕಾಡಿನಂಚಿನಲ್ಲಿ ದನ ಮೇಯಿಸುವ ಸಾಂಪ್ರದಾಯಿಕ ಹಕ್ಕನ್ನು ಶಾಸನಬದ್ಧವಾಗಿ ನೀಡಬೇಕು.

    ದೇಸಿ ತಳಿಗಳ ಸಂರಕ್ಷಣೆ ಮತ್ತು ಆರ್ಥಿಕ ಉತ್ತೇಜನಕ್ಕಾಗಿ ದೇಸಿ ಹಾಲಿನ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್: ಕೃಷ್ಣ ಗೊಲ್ಲರ ನಾಟಿದನಗಳ ಹಾಲು ಅಪ್ಪಟ ‘A2 ಹಾಲು’. ಸರ್ಕಾರವು ಕೆಎಂಎಫ್(KMF/Nandini) ಮೂಲಕ ಈ ದೇಸಿ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ(Premium Price) ಸಿಟಿಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು.

    ಎ1 ಗಿರ್/ಜರ್ಸಿ ಹಾಲಿನ ಬದಲು, ಈ ನಾಟಿ ಹಸುವಿನ ಬೆಣ್ಣೆ, ತುಪ್ಪಗಳಿಗೆ ಬ್ರ್ಯಾಂಡಿಂಗ್ ಮಾಡಿ ‘ಮಹದೇಶ್ವರ ಬೆಟ್ಟದ ದೇಸಿ ತುಪ್ಪ’ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತರಬೇಕು. ಇದರ ಸಂಪೂರ್ಣ ಲಾಭ ದೊಡ್ಡಿಯ ರೈತರಿಗೆ ಸಿಗಬೇಕು.

    ಉಸ್ತುವಾರಿ ಪ್ರೋತ್ಸಾಹಧನ (Conservation Subsidy): ಒಂದು ನಾಟಿದನವನ್ನು ಉಳಿಸಿ ಬೆಳೆಸಲು ಸರ್ಕಾರ ಪ್ರತಿ ಹಸುವಿಗೆ ತಿಂಗಳಿಗೆ ನಿರ್ದಿಷ್ಟ ಮೊತ್ತದ ‘ಪರಿಪಾಲನಾ ಪ್ರೋತ್ಸಾಹಧನ’ (Maintenance Allowance) ನೀಡಬೇಕು.

    ವಿಜ್ಞಾನ ಮತ್ತು ಸಂಪ್ರದಾಯದ ಸಮ್ಮಿಲನ

    ಪರಿಸರ ಪ್ರವಾಸೋದ್ಯಮ ಮತ್ತು ಪಶುಪಾಲನೆ: ಕಾಡಿಗೆ ಹಾನಿಯಾಗದಂತೆ, ‘ಪರಿಸರ ಸ್ನೇಹಿ ಪಶುಪಾಲನೆ’ ಹೇಗೆ ಮಾಡಬೇಕು ಎಂಬುದಕ್ಕೆ ಅರಣ್ಯ ಇಲಾಖೆ ಹಾಗೂ ಪಶುಪಾಲಕರು ಜಂಟಿಯಾಗಿ ‘Grazing Management Plan’ ರೂಪಿಸಬೇಕು.

      ಸಾವಯವ ಗೊಬ್ಬರ ಬ್ಯಾಂಕ್: ಇವರ ಕಾಲ್ನಡೆಗಳಿಂದ ಸಿಗುವ ಅಪಾರ ಪ್ರಮಾಣದ ಸಗಣಿ ಮತ್ತು ಗಂಜಲವನ್ನು ಸಂಗ್ರಹಿಸಿ, ಸಾವಯವ ಗೊಬ್ಬರ/ಜೀವಾಮೃತ ತಯಾರಿಸಿ ರೈತರಿಗೆ ಮಾರಾಟ ಮಾಡಲು ‘ಪಶುಪಾಲಕ ಸಹಕಾರ ಸಂಘ’ಗಳನ್ನು ರಚಿಸಬೇಕು.

        ಸರ್ಕಾರಿ ಮಟ್ಟದ ನೀತಿ ನಿರ್ಧಾರ(Policy Level)

        ಅಲೆಮಾರಿ ಪಶುಪಾಲಕರ ಅಭಿವೃದ್ಧಿ ಪ್ರಾಧಿಕಾರ: ಮಲೆನಾಡು, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಪಶುಪಾಲಕರಾದ ಕೃಷ್ಣ ಗೊಲ್ಲ, ಧನಗರ್ ಗೌಳಿ, ಕಾಡು ಗೊಲ್ಲರ ಅಭಿವೃದ್ಧಿಗಾಗಿ ಪ್ರತ್ಯೇಕ ಕೋಶ ಅಥವಾ ಪ್ರಾಧಿಕಾರ ರಚಿಸಿ, ಪ್ರತಿ ಆಯವ್ಯಯದಲ್ಲಿ ಪ್ರತ್ಯೇಕ ಕೋಶ ಅಥವಾ ಪ್ರಾಧಿಕಾರ ರಚಿಸಿ, ಪ್ರತಿ ಆಯವ್ಯಯದಲ್ಲೂ(ಬಜೆಟ್‌ನಲ್ಲಿ) ಸೂಕ್ತ ಅನುದಾನ ಕಾಯ್ದಿರಿಸಬೇಕು.

          ಸಾಂಸ್ಕೃತಿಕ ಮತ್ತು ಸಾಮಾಜಿಕ ಭದ್ರತೆ

          ಪಾರಂಪರಿಕ ಜ್ಞಾನದ ಅಧಿಕೃತ ಮಾನ್ಯತೆ: ಕೃಷ್ಣ ಗೊಲ್ಲರು ಕಾಡಿನ ಮೂಲಿಕೆಗಳು, ತಳಿಗಳ ವೈವಿಧ್ಯತೆ ಮತ್ತು ಕಾಡಿನ ಜೀವವೈವಿಧ್ಯದ ಬಗ್ಗೆ ಅಪಾರ ಪಾರಂಪರಿಕ ಜ್ಞಾನ ಹೊಂದಿದ್ದಾರೆ. ಇದನ್ನು ವಿಶ್ವವಿದ್ಯಾಲಯಗಳು ಮತ್ತು ಪಶುಸಂಗೋಪನಾ ಇಲಾಖೆ ದಾಖಲಿಸಿ, ಅವರಿಗೆ ‘ಪಾರಂಪರಿಕ ಪರಿಸರ ಕಾವಲುಗಾರರು’ (Heritage Bio-guards) ಎಂಬ ಸ್ಥಾನಮಾನ ನೀಡಬೇಕು.

            ಸಾಮಾಜಿಕ ಭದ್ರತೆ ಮತ್ತು ವಿಮೆ: ಕಾಡುಪ್ರಾಣಿಗಳ ದಾಳಿಯಿಂದ ದನಕರುಗಳು ಸತ್ತರೆ ಕೊಡುವ ಪರಿಹಾರ ಧನವನ್ನು ತಕ್ಷಣವೇ ದ್ವಿಗುಣಗೊಳಿಸಿ, ವಿಳಂಬವಿಲ್ಲದೆ ನೀಡುವ ‘ಏಕಗವಾಕ್ಷಿ’ ವ್ಯವಸ್ಥೆ ಬರಬೇಕು. ನಾಟಿದನಗಳಿಗೆ ಸೂಕ್ತವಾದ, ಅಗ್ಗದ ದರದ ‘ದೇಸಿ ಪಶು ವಿಮಾ ಯೋಜನೆ’ ರೂಪಿಸಬೇಕು.

            ಪ್ರಸ್ತುತ ತುರ್ತಾಗಿ ಆಗಬೇಕಿರುವ ಕಾರ್ಯಯೋಜನೆ (Action Plan)
            ಸ್ಥಳೀಯ ಕಾರ್ಯಪಡೆ (Task Force) ರಚನೆ: ಜಿಲ್ಲಾಧಿಕಾರಿಗಳು, ಪಶುಸಂಗೋಪನಾ ಇಲಾಖಾಧಿಕಾರಿಗಳು, ಅರಣ್ಯಾಧಿಕಾರಿಗಳು ಮತ್ತು ಕೃಷ್ಣ ಗೊಲ್ಲ ಸಮುದಾಯದ ಮುಖಂಡರನ್ನು ಒಳಗೊಂಡ ತಕ್ಷಣದ ಕಾರ್ಯಪಡೆ ರಚನೆಯಾಗಬೇಕು.

            ಕ್ಷೇತ್ರ ಮಟ್ಟದ ಸಮೀಕ್ಷೆ: ಮಲ್ಲಯ್ಯನಪುರ, ಕೆಂಚಯ್ಯನ ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಎಲ್ಲ ದೊಡ್ಡಿಗಳಲ್ಲಿರುವ ಪ್ರಸ್ತುತ ಕಾಲ್ನಡೆಗಳ ನಿಖರ ಸಂಖ್ಯೆ ಮತ್ತು ಅಗತ್ಯವಿರುವ ಮೇವಿನ ಪ್ರಮಾಣವನ್ನು ತಕ್ಷಣವೇ ದಾಖಲಿಸಬೇಕು.

            ಇದನ್ನೂ ಓದಿದೀರಾ? ಈರುಳ್ಳಿ ದುಬಾರಿ: ಬೆಳೆ ಕಡಿಮೆಯಾದಾಗ ಗ್ರಾಹಕರಿಗೆ ಬರೆ, ಉತ್ತಮ ಬೆಳೆ ಬಂದಾಗ ರೈತರಿಗೆ ಹೊರೆ

            ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿ: ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಅನುದಾನದಲ್ಲಿ ತಕ್ಷಣವೇ ಈ ದೊಡ್ಡಿಗಳಿಗೆ ಮೇವಿನ ಮಿನಿ-ಟ್ರಕ್ ಹಾಗೂ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಬೇಕು.

            ಆಧುನಿಕತೆಯ ಹೆಸರಿನಲ್ಲಿ ಕಾಡನ್ನು ಬರೀ ‘ಮರ-ಪ್ರಾಣಿಗಳ’ ತಂಗುದಾಣವಾಗಿ ನೋಡುವುದು ಮತ್ತು ಅಲ್ಲಿ ಶತಮಾನಗಳಿಂದ ಕಾಡಿನೊಂದಿಗೆ ಸಹಬಾಳ್ವೆ ನಡೆಸಿದ ಪಶುಪಾಲಕರನ್ನು ಹೊರಹಾಕುವುದು ಪರಿಸರ ವಿಜ್ಞಾನಕ್ಕೂ ಮತ್ತು ಸಂಸ್ಕೃತಿಗೂ ಮಾರಕ. ಕೃಷ್ಣ ಗೊಲ್ಲರು ಕಾಡಿನ ಶತ್ರುಗಳಲ್ಲ; ಬದಲಿಗೆ ಕಾಡನ್ನು ಜೀವಂತವಾಗಿಟ್ಟಿರುವ ‘ದೇಸಿ ಸಂರಕ್ಷಕರು’. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದ ಹೆಮ್ಮೆಯ ನಾಟಿದನಗಳ ಸಂತತಿ ಮತ್ತು ಒಂದು ಅಪರೂಪದ ಜೀವಸಂಸ್ಕೃತಿ ಇತಿಹಾಸದ ಪುಟ ಸೇರುವುದು ಖಚಿತ.

            WhatsApp Image 2026 08 23 at 4.34.49 PM e1787483943519
            ಡಾ.ರಘುಪತಿ ಪಶುವೈದ್ಯರು.
            + posts

            ಡಾ ರಘುಪತಿ. ವೃತ್ತಿಯಲ್ಲಿ ಪಶು-ವೈದ್ಯ. ಊರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ
            ಇವರು ಪರ್ಯಾಯ ಸಾಧ್ಯತೆಗಳ ಚಿಂತಕ, ಬರಹಗಾರ ಹಾಗೂ ಅವಿರತ ಅಲೆಮಾರಿ ಸಂಗಾತಿ.
            ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ 'ಕುರಿಮಿತ್ರ' ಪತ್ರಿಕೆಗೆ ಸಂಪಾದಕರಾಗಿದ್ದರು.

            ಆದಿಯಿಂದಲೂ ಪಶುಪಾಲನೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಬರುತ್ತ ದೇಶದ ʼಜಿಡಿಪಿ'ಯಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಆಡು-ಕುರಿ ಸಾಕುವ ಎಲ್ಲ ಹಿಂದುಳಿದ ಜಾತಿ-ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 'ಪಶುಪಾಲಕ-ಕರ್ನಾಟಕ' ಹೆಸರಿನಲ್ಲಿ ದೊಡ್ಡಮಟ್ಟದ ಯೋಜನೆಯೊಂದನ್ನು ರೂಪಿಸಿ, ಅದರ ಸಾಕಾರದಲ್ಲಿ ಕಾರ್ಯನಿರತರಾಗಿದ್ದಾರೆ!

            ಪೋಸ್ಟ್ ಹಂಚಿಕೊಳ್ಳಿ:

            ಡಾ.ರಘುಪತಿ ಪಶುವೈದ್ಯರು.
            ಡಾ.ರಘುಪತಿ ಪಶುವೈದ್ಯರು.
            ಡಾ ರಘುಪತಿ. ವೃತ್ತಿಯಲ್ಲಿ ಪಶು-ವೈದ್ಯ. ಊರು ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ ಇವರು ಪರ್ಯಾಯ ಸಾಧ್ಯತೆಗಳ ಚಿಂತಕ, ಬರಹಗಾರ ಹಾಗೂ ಅವಿರತ ಅಲೆಮಾರಿ ಸಂಗಾತಿ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ 'ಕುರಿಮಿತ್ರ' ಪತ್ರಿಕೆಗೆ ಸಂಪಾದಕರಾಗಿದ್ದರು. ಆದಿಯಿಂದಲೂ ಪಶುಪಾಲನೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಬರುತ್ತ ದೇಶದ ʼಜಿಡಿಪಿ'ಯಲ್ಲಿ ದೊಡ್ಡಮಟ್ಟದ ಕೊಡುಗೆ ನೀಡುತ್ತಿರುವ ಆಡು-ಕುರಿ ಸಾಕುವ ಎಲ್ಲ ಹಿಂದುಳಿದ ಜಾತಿ-ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 'ಪಶುಪಾಲಕ-ಕರ್ನಾಟಕ' ಹೆಸರಿನಲ್ಲಿ ದೊಡ್ಡಮಟ್ಟದ ಯೋಜನೆಯೊಂದನ್ನು ರೂಪಿಸಿ, ಅದರ ಸಾಕಾರದಲ್ಲಿ ಕಾರ್ಯನಿರತರಾಗಿದ್ದಾರೆ!

            ಪೋಸ್ಟ್ ಹಂಚಿಕೊಳ್ಳಿ:

            ಈ ಹೊತ್ತಿನ ಪ್ರಮುಖ ಸುದ್ದಿ

            ವಿಡಿಯೋ

            ಇದೇ ರೀತಿಯ ಇನ್ನಷ್ಟು ಲೇಖನಗಳು
            Related

            ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

            ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

            ಪತ್ರಕರ್ತರ ಸಂಘದ ನೂತನ ಭವನಕ್ಕೆ ₹50 ಲಕ್ಷ ಅನುದಾನ: ಸಂಸದ ಯದುವೀರ ಘೋಷಣೆ

            ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ...

            ಗದಗ | ಮತದಾನದ ಹಕ್ಕನ್ನು‌ ಕಳೆದುಕೊಳ್ಳುವ ಆತಂಕದಲ್ಲಿ ಅನಿವಾಸಿ ಭಾರತೀಯರು: ಮುಖಂಡರು ಕಿಡಿ

            "ರೋಣ ಮತಕ್ಷೇತ್ರದಲ್ಲಿ ಅನಿವಾಸಿ ಭಾರತೀಯರು 999 ಜನರಿದ್ದಾರೆಂದು ಮತದಾರರ ಯಾದಿ ಪಟ್ಟಿಯಲ್ಲಿ...

            ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

            ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...