ಪ್ರಣಬ್ ರಾಯ್‌ರಿಂದ ಪುರಕಾಯಸ್ಥವರೆಗೆ; ED, IT, CBI ದಾಳಿ ಹಿಂದಿನ ʼಚಿಲ್ಲಿಂಗ್ ಎಫೆಕ್ಟ್ʼ ದಾಳ!

Date:

ಸರ್ಕಾರದ ನೀತಿಗಳನ್ನು ನಿಷ್ಠುರವಾಗಿ ವಿಮರ್ಶಿಸುವ ಸ್ವತಂತ್ರ ಪತ್ರಿಕೋದ್ಯಮದ ಬೆನ್ನೆಲುಬು ಮುರಿಯಲು ED ಯ ‘ಪಿಎಂಎಲ್‌ಎ’ ಕಾಯ್ದೆ ಹೇಗೆ ಬ್ರಹ್ಮಾಸ್ತ್ರವಾಗುತ್ತಿದೆ ಹಾಗೂ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವ ಮಾಧ್ಯಮಗಳನ್ನು ಹತ್ತಿಕ್ಕಲು ಕಾನೂನಿನ ತಾಂತ್ರಿಕತೆಗಳನ್ನು ಮತ್ತು ತನಿಖಾ ಸಂಸ್ಥೆಗಳನ್ನು ಹೇಗೆ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಪ್ರಣಬ್ ರಾಯ್, ದೈನಿಕ್ ಭಾಸ್ಕರ್,  ಪ್ರಬೀರ್ ಪುರಕಾಯಸ್ಥ ಅವರ ಪ್ರಕರಣಗಳ ಆರ್ಥಿಕ ಹಾಗೂ ರಾಜಕೀಯ ಹಿನ್ನೆಲೆಗಳೇ ಸಾಕ್ಷಿ.

- Advertisement -

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ರಂಗ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನಡುವಿನ ಸಂಘರ್ಷ ಕಳೆದ ಕೆಲ ವರ್ಷಗಳಿಂದ ಅತ್ಯಂತ ಕೆಟ್ಟ ಹಂತಕ್ಕೆ ಬಂದು ನಿಂತಿದೆ. ಸ್ವತಂತ್ರ ಡಿಜಿಟಲ್ ಮಾಧ್ಯಮ ‘ನ್ಯೂಸ್‌ಕ್ಲಿಕ್’ ಮತ್ತು ಅದರ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದಾಖಲಾಗಿದ್ದ ಆಧಾರರಹಿತ ಪಿಎಂಎಲ್‌ಎ (PMLA) ಪ್ರಕರಣವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ.  ಮುಕ್ತ ಪತ್ರಿಕೋದ್ಯಮದ ಉಸಿರುಗಟ್ಟಿಸಲು ತನಿಖಾ ಸಂಸ್ಥೆಗಳು ತಮ್ಮ ಅಧಿಕಾರವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬುದಕ್ಕೆ ಸ್ವತಃ ನ್ಯಾಯಾಂಗವೇ ಕೊಟ್ಟ ಅಧಿಕೃತ ಸಾಕ್ಷಿಯಂತಿದೆ ಈ ತೀರ್ಪು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಏನಿದು ನ್ಯೂಸ್‌ಕ್ಲಿಕ್ ಪ್ರಕರಣ?

2021ರಿಂದ ನಿರಂತರವಾಗಿ ಇಡಿ (ED) ಮತ್ತು ದೆಹಲಿ ಪೊಲೀಸರ ತನಿಖೆಗೆ ಒಳಗಾಗಿದ್ದ ನ್ಯೂಸ್‌ಕ್ಲಿಕ್ ಸಂಸ್ಥೆಯ ಮೇಲಿನ ED ಕೇಸ್ ಅನ್ನು ಇತ್ತೀಚೆಗೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್ ತನಿಖಾ ಸಂಸ್ಥೆಗಳ ವಿರುದ್ಧ ಅತ್ಯಂತ ಕಠಿಣ ಪದಗಳನ್ನು ಬಳಸಿದೆ. “ಈ ಪ್ರಕ್ರಿಯೆಯು ಕೇವಲ ದುರುದ್ದೇಶಪೂರ್ವಕ ಮಾತ್ರವಲ್ಲ, ಮುಕ್ತ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೇಲಿನ ನಿರಂಕುಶ ದಾಳಿಯಾಗಿದೆ” ಎಂದು ಹೇಳಿದೆ. ಒಂದೂವರೆ ವರ್ಷಗಳ ಕಾಲ ED ನಿರಂತರವಾಗಿ ತನಿಖೆ ನಡೆಸಿ, ಉದ್ಯೋಗಿಗಳನ್ನು ಪದೇ ಪದೇ ಕರೆಸಿ ಕಿರುಕುಳ ನೀಡಿದ್ದರೂ ನ್ಯಾಯಾಲಯದ ಮುಂದೆ ಒಂದೇ ಒಂದು ಬಲವಾದ ಸಾಕ್ಷ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ. ತನಿಖಾ ಸಂಸ್ಥೆಗಳ ಈ ಕೆಲಸವನ್ನು ನ್ಯಾಯಾಲಯವು “ಯಾವುದೇ ಅಪರಾಧದ ಹಿನ್ನೆಲೆಯಿಲ್ಲದೆ, ಕೇವಲ ತಪ್ಪು ಹುಡುಕಲು ನಡೆಸಿದ ಗಾಳಹಾಕುವ ಜಾಲ (Fishing and Roving Exercise)” ಎಂದು ED ವಿರುದ್ಧ ಚಾಟಿ ಬೀಸಿದೆ.

WhatsApp Image 2026 06 11 at 7.03.42 PM

2018ರಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥೆಯು ಅಮೆರಿಕದ ಉದ್ಯಮಿ ನೆವಿಲ್ ರಾಯ್ ಸಿಂಘಮ್‌ಗೆ ಸೇರಿದ ಸಂಸ್ಥೆಯಿಂದ ₹9.5 ಕೋಟಿ ವಿದೇಶಿ ನೇರ ಹೂಡಿಕೆ (FDI) ಪಡೆದಿತ್ತು. ಆದರೆ, 2023ರಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ (The New York Times) ಪತ್ರಿಕೆಯು, ನೆವಿಲ್ ರಾಯ್ ಸಿಂಘಮ್ ಚೀನಾ ಸರ್ಕಾರದ ಪರವಾಗಿ ಜಾಗತಿಕವಾಗಿ ಪ್ರಚಾರ ಮಾಡಲು ಹಣ ಒದಗಿಸುತ್ತಿದ್ದಾರೆ ಮತ್ತು ಆ ಹಣ ಭಾರತದ ನ್ಯೂಸ್‌ಕ್ಲಿಕ್‌ಗೂ ತಲುಪಿದೆ ಎಂದು ವರದಿ ಮಾಡಿತ್ತು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ದೆಹಲಿ ಪೊಲೀಸರು ಯುಎಪಿಎ (UAPA) ಅಡಿಯಲ್ಲಿ ನ್ಯೂಸ್‌ಕ್ಲಿಕ್‌ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿದರು. ED ಸಂಸ್ಥೆಯು FDI ನಿಯಮ ಉಲ್ಲಂಘನೆ ಹಾಗೂ ಹಣದ ದುರುಪಯೋಗದ ಆರೋಪ ಹೊರಿಸಿತು. ಆದರೆ, ಡಿಜಿಟಲ್ ಮಾಧ್ಯಮಗಳಿಗೆ 2018ರಲ್ಲಿ ಯಾವುದೇ FDI ಮಿತಿ ಇರಲಿಲ್ಲ ಮತ್ತು ಸಿಬ್ಬಂದಿಗಳ ಸಂಬಳ, ಕಚೇರಿ ಬಾಡಿಗೆಯನ್ನು ‘ಹಣದ ದುರುಪಯೋಗ’ ಎನ್ನಲು ಸಾಧ್ಯವಿಲ್ಲ ಎಂದು ಹೈಕೋರ್ಟ್ EDಯ ವಾದವನ್ನು ತಳ್ಳಿಹಾಕಿದೆ. (ED ಕೇಸ್ ರದ್ದಾಗಿದ್ದರೂ, UAPA ಅಡಿಯ ತಾಂತ್ರಿಕ ತನಿಖೆ ಇನ್ನು ಮುಗಿದಿಲ್ಲ).

ಪ್ರಣಬ್ ರಾಯ್ (NDTV) ಪ್ರಕರಣ

ಕೇಂದ್ರ ತನಿಖಾ ಸಂಸ್ಥೆಗಳು ಮಾಧ್ಯಮಗಳ ಮಾಲೀಕತ್ವವನ್ನೇ ಬದಲಾಯಿಸುವ ಶಕ್ತಿ ಹೊಂದಿವೆ ಎಂಬುದಕ್ಕೆ NDTV ಸಂಸ್ಥಾಪಕರಾದ ಪ್ರಣಬ್ ರಾಯ್ ಮತ್ತು ರಾಧಿಕಾ ರಾಯ್ ಅವರ ಪ್ರಕರಣವೇ ಸಾಕ್ಷಿ. ಈ ಕೇಸ್ 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದ ಒಂದು ಸಾಲದ ವ್ಯವಹಾರದತ್ತ ಸಾಗುತ್ತದೆ. ಆಗ NDTV ಸಂಸ್ಥೆಯು ‘ICICI’ ಬ್ಯಾಂಕ್‌ನಿಂದ ಸುಮಾರು ₹375 ಕೋಟಿ ಸಾಲ ಪಡೆದಿತ್ತು. ಆ ಸಾಲದ ಮರುಪಾವತಿಯಲ್ಲಿ ಅಕ್ರಮ ನಡೆದಿದೆ ಮತ್ತು ಬ್ಯಾಂಕ್‌ಗೆ ₹48 ಕೋಟಿ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪದ ಮೇಲೆ CBI ಮತ್ತು ED ತನಿಖೆ ಆರಂಭಿಸಿದವು.

ಅಸಲಿ ಆಟ ನಡೆದಿದ್ದು ಇಲ್ಲೇ. ಈ ಸಾಲ ತೀರಿಸಲು ರಾಯ್ ದಂಪತಿ ‘ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್’ (VCPL) ಎಂಬ ಶೆಲ್ ಕಂಪನಿಯಿಂದ ₹403 ಕೋಟಿ ಬಡ್ಡಿರಹಿತ ಸಾಲ ಪಡೆದಿದ್ದರು. ಆ ಸಾಲದ ಒಪ್ಪಂದದಲ್ಲಿದ್ದ ತಾಂತ್ರಿಕ ನಿಯಮಗಳನ್ನೇ ಮುಂದಿಟ್ಟುಕೊಂಡು, ತನಿಖಾ ಸಂಸ್ಥೆಗಳ ನಿರಂತರ ದಾಳಿ ಮತ್ತು ಆರ್ಥಿಕ ದಿಗ್ಬಂಧನದಿಂದ ಕಂಗಾಲಾಗಿದ್ದ NDTVಯನ್ನು ಅಂತಿಮವಾಗಿ ಕಾರ್ಪೊರೇಟ್ ದೈತ್ಯ ಅದಾನಿ ಸಮೂಹ ತನ್ನ ವಶಕ್ಕೆ ತೆಗೆದುಕೊಂಡಿತು. ಮಾಧ್ಯಮವೊಂದನ್ನು ಹೆದರಿಸಲು ಮತ್ತು ಅದರ ಧ್ವನಿಯನ್ನು ಅಡಗಿಸಲು ಹಳೆಯ ಆರ್ಥಿಕ ಲೋಪಗಳನ್ನು ಹೇಗೆ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಇದು ಭಾರತೀಯ ಮಾಧ್ಯಮ ಇತಿಹಾಸದಲ್ಲೇ ಅತ್ಯಂತ ಸ್ಪಷ್ಟ ನಿದರ್ಶನ.

WhatsApp Image 2026 06 11 at 7.04.47 PM

ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್

ಕೋವಿಡ್-19 ಮಹಾಮಾರಿಯ 2ನೇ ಅಲೆಯ ಭೀಕರತೆಯನ್ನು, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿಯ ದಂಡೆಯ ಮೇಲೆ ನೂರಾರು ಹೆಣಗಳು ಹೂತುಹೋಗಿದ್ದ ಮತ್ತು ತೇಲುತ್ತಿದ್ದ ನೈಜ ಚಿತ್ರಣವನ್ನು ಜಗತ್ತಿನ ಕಣ್ಣೆದುರು ತಂದಿದ್ದು ‘ದೈನಿಕ್ ಭಾಸ್ಕರ್’ ಪತ್ರಿಕೆ. ಅದೇ ರೀತಿ, ಉತ್ತರ ಪ್ರದೇಶದ ‘ಭಾರತ್ ಸಮಾಚಾರ್’ ವಾಹಿನಿಯು ಆಕ್ಸಿಜನ್ ಸಿಗದೆ ಜನರು ಸಾಯುತ್ತಿದ್ದ ದೃಶ್ಯಗಳನ್ನು ನಿರಂತರವಾಗಿ ಲೈವ್ ಪ್ರಸಾರ ಮಾಡಿತ್ತು.

ಈ ವರದಿಗಳು ಪ್ರಕಟವಾಗಿ ಸರ್ಕಾರದ ವೈಫಲ್ಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾದ ಕೆಲವೇ ದಿನಗಳಲ್ಲಿ, ದೇಶಾದ್ಯಂತ ಇರುವ ದೈನಿಕ್ ಭಾಸ್ಕರ್ ಸಮೂಹದ 30ಕ್ಕೂ ಹೆಚ್ಚು ಕಚೇರಿಗಳ ಮೇಲೆ ಮತ್ತು ಭಾರತ್ ಸಮಾಚಾರ್‌ನ ಪ್ರಮುಖರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಮತ್ತು ED ಏಕಕಾಲಕ್ಕೆ ದಾಳಿ ನಡೆಸಿತು. ಈ ಪ್ರಕರಣಗಳ ಹಿಂದೆ ಯಾವುದೇ ದೀರ್ಘಕಾಲದ ಹಳೆಯ ಹಗರಣಗಳ ಹಿನ್ನೆಲೆ ಇರಲಿಲ್ಲ, ಬದಲಿಗೆ ಸರ್ಕಾರದ ವಿರುದ್ಧದ ವರದಿಗಾರಿಕೆ ಇತ್ತಷ್ಟೆ.

ದಿ ಕ್ವಿಂಟ್ ಮತ್ತು ನ್ಯೂಸ್‌ಲಾಂಡ್ರಿ

ಮುಖ್ಯವಾಹಿನಿ ಮಾಧ್ಯಮಗಳು ಸರ್ಕಾರದ ಪರವಾಗಿ ಧನಿ ಎತ್ತುತ್ತಿದ್ದ ಕಾಲದಲ್ಲಿ, ತನಿಖಾ ಪತ್ರಿಕೋದ್ಯಮದ ಮೂಲಕ ಸ್ವತಂತ್ರವಾಗಿ ಮುನ್ನಡೆದ ಡಿಜಿಟಲ್ ಮಾಧ್ಯಮಗಳಾದ ‘ದಿ ಕ್ವಿಂಟ್’ (The Quint) ಮತ್ತು ‘ನ್ಯೂಸ್‌ಲಾಂಡ್ರಿ’ (Newslaundry) ಸಂಸ್ಥೆಗಳನ್ನೂ ಗುರಿಯಾಗಿಸಲಾಯಿತು. ದಿ ಕ್ವಿಂಟ್ ಸಂಸ್ಥಾಪಕ ರಾಘವ್ ಬಹ್ಲ್ ಅವರು ಈ ಹಿಂದೆ ನೆಟ್‌ವರ್ಕ್ 18 ಸಂಸ್ಥೆಯನ್ನು ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡಿ ಹೊರಬರುವಾಗ ನಡೆದ ಶೇರು ವ್ಯವಹಾರಗಳು ಮತ್ತು ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದೆ ಎಂಬ ಆರೋಪವನ್ನಿಟ್ಟುಕೊಂಡು ED ತನಿಖೆ ಆರಂಭಿಸಿತು.

ಅದೇ ರೀತಿ, ಮುಖ್ಯವಾಹಿನಿ ಮಾಧ್ಯಮಗಳು ಹೇಗೆ ಸರ್ಕಾರದ ಪರವಾಗಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತವೆ ಮತ್ತು ಅದಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಹೇಗೆ ಹಣ ನೀಡುತ್ತವೆ ಎಂಬುದನ್ನು ಬಯಲು ಮಾಡುತ್ತಿದ್ದ ‘ನ್ಯೂಸ್‌ಲಾಂಡ್ರಿ’ ಕಚೇರಿಯ ಮೇಲೆ ಪದೇ ಪದೇ ‘ಸರ್ವೆ’ ಹೆಸರಿನಲ್ಲಿ ದಾಳಿ ನಡೆಸಲಾಯಿತು. ಅವರ ಆರ್ಥಿಕ ಮೂಲಗಳು ಮತ್ತು ಚಂದಾದಾರರ ವಿವರಗಳನ್ನು ವಶಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಮಾಧ್ಯಮಗಳ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಮತ್ತು ಜಾಹೀರಾತುದಾರರು ಅವರೊಂದಿಗೆ ವ್ಯವಹರಿಸದಂತೆ ಹೆದರಿಸುವ ತಂತ್ರಗಾರಿಕೆ ಇದರ ಹಿಂದಿತ್ತು ಎನ್ನುವುದು ತಿಳಿಯದ ವಿಷಯವೇನಲ್ಲ.

ಪಿಎಂಎಲ್‌ಎ (PMLA) ಕಾಯ್ದೆಯೆಂಬ ‘ಕಾನೂನಾತ್ಮಕ ಬ್ರಹ್ಮಾಸ್ತ್ರ’

ಜಾರಿ ನಿರ್ದೇಶನಾಲಯಕ್ಕೆ (ED) ಇರುವ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ (PMLA) ಅಡಿಯಲ್ಲಿನ ಅಧಿಕಾರಗಳು ಸಾಮಾನ್ಯ ಕ್ರಿಮಿನಲ್ ಕಾಯ್ದೆಗಳಿಗಿಂತ ಭಿನ್ನ ಮತ್ತು ಅತ್ಯಂತ ಕಠಿಣವಾಗಿವೆ. ಈ ಕಾಯ್ದೆಯ ಅಡಿಯಲ್ಲಿ, ಸಾಮಾನ್ಯ ಕಾನೂನಿಗೆ ವಿರುದ್ಧವಾಗಿ “ಆರೋಪಿಯೇ ತಾನು ನಿರಪರಾಧಿ ಎಂದು ಸಾಬೀತುಪಡಿಸಬೇಕು” ಮತ್ತು ಇದರ ಕಠಿಣ ನಿಯಮಗಳಿಂದಾಗಿ ಸುಲಭವಾಗಿ ಜಾಮೀನು ಸಿಗುವುದಿಲ್ಲ.

ತನಿಖಾ ಸಂಸ್ಥೆಗಳು ಇದನ್ನೇ ಬಂಡವಾಳ ಮಾಡಿಕೊಳ್ಳುತ್ತವೆ. ಯಾವುದೇ ಒಂದು ಸ್ವತಂತ್ರ ಮಾಧ್ಯಮ ಸಂಸ್ಥೆಯನ್ನು ಹೆದರಿಸಲು ಸರ್ಕಾರಗಳು ನೇರವಾಗಿ “ಬರೆಯಬೇಡಿ” ಎಂದು ಹೇಳುವುದಿಲ್ಲ. ಬದಲಿಗೆ, ಆ ಸಂಸ್ಥೆಯ ಹಳೆಯ ಬ್ಯಾಂಕ್ ವ್ಯವಹಾರಗಳು ಅಥವಾ ಎಫ್‌ಡಿಐ ಶೇರು ಮೌಲ್ಯಗಳ ತಾಂತ್ರಿಕ ದಾಖಲೆಗಳನ್ನು ಹುಡುಕಿ, ಎಲ್ಲೋ ಒಂದು ಸಣ್ಣ ತಾಂತ್ರಿಕ ಲೋಪ ಸಿಕ್ಕರೂ ಅದನ್ನು ‘ಪಿಎಂಎಲ್‌ಎ’ ಅಡಿ ದೊಡ್ಡದಾಗಿ ಬಿಂಬಿಸಿ ದಾಳಿ ನಡೆಸುತ್ತವೆ. ತನಿಖೆಯ ಅಂತ್ಯದಲ್ಲಿ ಕೋರ್ಟಿನಲ್ಲಿ ಅಪರಾಧ ಸಾಬೀತಾಗುತ್ತದೆಯೋ ಇಲ್ಲವೋ, ಆದರೆ ತಕ್ಷಣಕ್ಕೆ ಆ ಮಾಧ್ಯಮದ ಆರ್ಥಿಕ ಮೂಲಗಳನ್ನು ಮುಚ್ಚಿ ಮುಖ್ಯಸ್ಥರನ್ನು ಜೈಲಿಗಟ್ಟಲಾಗುತ್ತದೆ. ಅಂದರೆ, “ತನಿಖೆಯ ಪ್ರಕ್ರಿಯೆಯನ್ನೇ ಒಂದು ಕಠಿಣ ಶಿಕ್ಷೆಯನ್ನಾಗಿ ಮಾರ್ಪಡಿಸಲಾಗುತ್ತದೆ.

ಪ್ರಣಬ್ ರಾಯ್ ಅವರಿಂದ ಹಿಡಿದು ಪ್ರಬೀರ್ ಪುರಕಾಯಸ್ಥ ಅವರವರೆಗಿನ ಪ್ರಕರಣಗಳು ದೇಶದ ಇತರೆ ಸಣ್ಣ ಮತ್ತು ಸ್ವತಂತ್ರ ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಸಂದೇಶವನ್ನ ಪತ್ರಿಕೋದ್ಯಮದ ಭಾಷೆಯಲ್ಲಿ ‘ಚಿಲ್ಲಿಂಗ್ ಎಫೆಕ್ಟ್’ ಎನ್ನಲಾಗುತ್ತದೆ.

ಇದನ್ನೂ ಓದಿ: ಕಾಡುಕೂಸುಗಳ ಅಸ್ಮಿತೆಯ ಸಂಕೇತ ‘ಧರ್ತಿ ಆಬಾ’ ಬಿರ್ಸಾ ಮುಂಡಾ…

WhatsApp Image 2026 06 11 at 7.06.00 PM

ಒಂದು ಮಾಧ್ಯಮದ ಮೇಲೆ ED ದಾಳಿ ನಡೆಸಿ ಮಾಲೀಕನನ್ನು ಜೈಲಿಗೆ ಹಾಕಿದರೆ ಅಥವಾ ಆರ್ಥಿಕವಾಗಿ ನಾಶ ಮಾಡಿದರೆ, ಅದನ್ನು ನೋಡಿ ಇನ್ನುಳಿದ ಹತ್ತು ಮಾಧ್ಯಮಗಳು ತಾವಾಗಿಯೇ ಹೆದರಿ ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸುತ್ತವೆ ಮತ್ತು ಸ್ವಯಂ-ಸೆನ್ಸಾರ್‌ಶಿಪ್ ಮಾಡಿಕೊಳ್ಳುತ್ತವೆ. ಈ ವ್ಯವಸ್ಥಿತ ಭಯದ ವಾತಾವರಣದಿಂದಾಗಿ ಇವತ್ತು ದೇಶದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಸರ್ಕಾರದ ತಪ್ಪು ನೀತಿಗಳನ್ನು ಪ್ರಶ್ನಿಸುವ ಬದಲು, ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡುವ ಸಂಸ್ಕೃತಿಗೆ ಶರಣಾಗಿವೆ. ಇದರಿಂದಾಗಿಯೇ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಭಾರತದ ಸ್ಥಾನ ನಿರಂತರವಾಗಿ ಕುಸಿಯುತ್ತಿರುವುದು.

ಯಾರೇ ಆದರೂ ಕಾನೂನಿಗಿಂತ ಮಿಗಿಲಲ್ಲ ಮತ್ತು ಮಾಧ್ಯಮ ಸಂಸ್ಥೆಗಳಾಗಿದ್ದರೂ ವಿದೇಶಿ ಹೂಡಿಕೆ ಹಾಗೂ ತೆರಿಗೆ ನಿಯಮಗಳನ್ನು ಪಾಲಿಸಬೇಕಾದುದು ಕಡ್ಡಾಯ ಎಂಬ ವಾದ ನಿಜವೇ ಆದರೂ, ತನಿಖೆಯು ಆಯ್ದ ಮಾಧ್ಯಮಗಳನ್ನೇ ಗುರಿಯಾಗಿಸಿಕೊಂಡು ನಡೆದಾಗ ಅದರ ನಿಷ್ಪಕ್ಷಪಾತತೆ ಪ್ರಶ್ನೆ ಹುಟ್ಟಿಸುತ್ತದೆ. “ಸರ್ಕಾರದ ಮೇಲಿನ ಟೀಕೆ ಎಂದರೆ ಅದು ದೇಶದ್ರೋಹವಲ್ಲ.” ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಮಾಧ್ಯಮಗಳು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ‘ಕಾವಲು ನಾಯಿ’ಯಂತೆ (Watchdog) ಕೆಲಸ ಮಾಡಬೇಕೇ ಹೊರತು ಮಡಿಲಲ್ಲಿ ಆಡುವ ಪೆಟ್‌ ಆಗಬಾರದು. ತನಿಖಾ ಸಂಸ್ಥೆಗಳ ಈ ರಾಜಕೀಯ ಹಾಗೂ ತಾಂತ್ರಿಕ ದುರ್ಬಳಕೆಗೆ ನ್ಯಾಯಾಲಯಗಳು ಕಾನೂನಿನ ಚಾಟಿ ಬೀಸುತ್ತಿರುವುದು ಪ್ರಜಾಪ್ರಭುತ್ವದ ಉಳಿವಿಗಾಗಿ ಸದ್ಯಕ್ಕಿರುವ ಭರವಸೆ.

WhatsApp Image 2025 05 16 at 6.54.26 PM
Sub Editor at Eedina.com | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಣ್ಣೆಕಾಳು ಉತ್ಪಾದನೆ ಸ್ವಾವಲಂಬನೆ ಅಗತ್ಯ : ಡಿಸಿ ಶಿಲ್ಪಾ ಶರ್ಮಾ

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ,...

ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಟ: ಇಲಾಖೆಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ ರೈಲ್ವೆ...

ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ...