ಹಾಸನ ಮಣ್ಣಿನ ಹೆಣ್ಣು ದನಿಗಳು | ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

‘ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಯ್ಯ ಬಡವನಯ್ಯ’- ಎಂಬಂತೆ ಎಲ್ಲಾ ಅನುಕೂಲಗಳಿದ್ದವರು ಈ ಸಮಾಜದಲ್ಲಿ ಏನಾದರೂ ಸಾಧನೆ ಮಾಡಿದರೆ ಅದೇನು ಅತಿಶಯೋಕ್ತಿಯಲ್ಲ. ಏನೂ ಇಲ್ಲದ ಬಡವರ ಮಕ್ಕಳು ಏನಾದರು ಸಾಧಿಸಿದರೆ ಅದು ಅವರಿಗೆ ಮಾತ್ರವಲ್ಲ, ಈ ಸಮಾಜಕ್ಕೇ ಒಂದು ಮಾದರಿಯ ಮಹತ್ಕಾರ್ಯವಾಗುತ್ತದೆ. ಮನೆಯಲ್ಲಿ ಕಸಮುಸುರೆ ಎಂದು ತಿಕ್ಕಿಕೊಂಡು ಉಳಿದ ಸಮಯವನ್ನು ಕಾಡು ಹರಟೆಯಲ್ಲಿ ಕಳೆಯುತ್ತಿರುವ ಸಾವಿರಾರು ಹೆಣ್ಣುಮಕ್ಕಳ ನಡುವೆ, ಈ ಕಾನನ ಕುಸುಮ ಕೆ.ವಿಜಯಕುಮಾರಿಯವರ ಸಾಧನೆಯನ್ನು ನೋಡಿದರೆ ತುಂಬಾ ಹೆಮ್ಮೆ ಎನಿಸುತ್ತದೆ

- Advertisement -

ಕೆ.ಗೋವಿಂದಪ್ಪ ಮತ್ತು ಈಶ್ವರಮ್ಮ ದಂಪತಿಗಳ ಐದು ಮಕ್ಕಳಲ್ಲಿ ಎರಡನೆಯ ಮಗಳಾಗಿ 20 ಮೇ 1965ರಲ್ಲಿ ಹುಟ್ಟಿದವರು ವಿಜಯಕುಮಾರಿ. ಬಾಲ್ಯದಿಂದಲೂ ತುಂಬಾ ಚುರುಕು ಬುದ್ಧಿಯ ಸ್ವಾಭಿಮಾನಿ ಹೆಣ್ಣುಮಗಳಾಗಿದ್ದರು. ಗಂಡು ಮಕ್ಕಳಿಗೆ ನೀಡುವ ವಿಶೇಷ ಆದ್ಯತೆಯ ನಡುವೆ ಇವರ ಬೆಳವಣಿಗೆಗೆ, ಸಾಧನೆಗೆ ಪ್ರಾಶಸ್ತ್ಯ ಸಿಗದೆ, ಇನ್ನೂ ಹತ್ತನೇ ತರಗತಿ ಓದುವ ವಯಸ್ಸಿಗೆ ಆಂಧ್ರ ಮೂಲದವರಾಗಿದ್ದು ಹೊಳೆನರಸೀಪುರದಲ್ಲೇ ನೆಲೆಸಿದ್ದ ತಿರುಮಲಯ್ಯ ಅವರೊಂದಿಗೆ ಮದುವೆ ಮಾಡಿ ಮುಗಿಸಿದರು ಹಿರಿಯರು. ಪತಿಯ ಮನೆ ಸೇರಿದ ನಂತರ, ನಿಗದಿತ ಆದಾಯ ಮೂಲವಿರದಿದ್ದ ಪತಿಯ ಮನೆ ಮತ್ತು ಅಪ್ಪನ ಮನೆ ಎರಡೂ ಜವಾಬ್ದಾರಿ ಹೊತ್ತು, ಗಂಡು ಮಗನಂತೆ ಸಕಲವನ್ನೂ ನಿಭಾಯಿಸುತ್ತಿದ್ದರು. ಮುಂದೆ ವಿಜಯಕುಮಾರಿಯವರು ನಾಗೇಂದ್ರಪ್ಪ ಮತ್ತು ಪುರುಷೋತ್ತಮ್ ಎಂಬ ಅಧಿಕಾರಿಗಳ ಸಹಕಾರದಿಂದ ಕ್ರೀಡಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಮಾಡಿದ ಸಾಧನೆ ದಾಖಲಾರ್ಹವಾದುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ವಿಜಯಕುಮಾರಿಯವರು 2007ರಲ್ಲಿ ತಮ್ಮ 41ನೆಯ ವಯಸ್ಸಿನಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಇವರು ತಮ್ಮ ಕೆಲಸದ ಜೊತೆಗೆ ಬಾಲ್ಯದ ಕನಸಾಗಿದ್ದ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿ, ಉದ್ದ ಜಿಗಿತ ಮತ್ತು ಎತ್ತರ ಜಿಗಿತದಂತಹ ಆಟಗಳನ್ನು ಆರಿಸಿಕೊಂಡು ಕಠಿಣ ಪರಿಶ್ರಮದಿಂದ ದಿನನಿತ್ಯ ಅಭ್ಯಾಸ ಮಾಡಲಾರಂಭಿಸಿದರು. ನಂತರ ನಿಧಾನವಾಗಿ ಮುಂದಡಿಯಿಟ್ಟ ಇವರು- ಕೇರಳ, ಪುಣೆ, ಲಕ್ನೋ, ಮಣಿಪುರ, ಜೈಪುರ, ದೆಹಲಿ, ಕ್ಯಾಲಿಕಟ್‌ಗಳಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಸುಮಾರು 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿದ್ದಾರೆ! ಆದರೆ ಇವರ ಮನಸ್ಸಿನ ನೋವೆಂದರೆ ಹಲವಾರು ರಾಜಕೀಯ ಧುರೀಣರುಗಳನ್ನು ಹೊಂದಿರುವ ಹೊಳೆನರಸೀಪುರದಲ್ಲಿ ಕ್ರೀಡೆಗೆ ಪೂರಕ ವಾತಾವರಣ ಇಲ್ಲದಿರುವುದು. ಅಂದರೆ ಒಳ್ಳೆಯ ಕ್ರೀಡಾಂಗಣ ಮತ್ತು ಸರಿಯಾದ ತರಬೇತುದಾರರಿಲ್ಲದೆ ಇರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಆದರೆ ಇವರು ತಮ್ಮ ಊರಿನ ಸಣ್ಣ ಉದ್ಯಾನವನದಲ್ಲೇ ನಿತ್ಯ ಅಭ್ಯಾಸ ಮಾಡುತ್ತಾರೆ. ಮೊದಲು ಸಣ್ಣ ಸಣ್ಣ ಹೂವಿನ ಗಿಡಗಳನ್ನು ಹಾರುತ್ತಾರೆ. ನಂತರ ಸ್ವಲ್ಪ ಎತ್ತರದ ಗಿಡಗಳನ್ನು ಹಾರುತ್ತಾ ಹಾರುತ್ತಾ ಎತ್ತರ ಜಿಗಿತ ಅಭ್ಯಾಸ ಮಾಡುತ್ತಾರೆ. ಯಾರಾದರೂ ಹೊಸಮನೆ ನಿರ್ಮಾಣಕ್ಕೆ ಮರಳು ರಾಶಿಯನ್ನು ಹಾಕಿದ್ದರೆ, ಅಲ್ಲಿಗೆ ರಾತ್ರಿ ಹೊತ್ತು ಇವರು ಹೋಗಿ ಉದ್ದ ಜಿಗಿತವನ್ನು ಅಭ್ಯಾಸ ಮಾಡುತಿದ್ದುದನ್ನು ಕೇಳಿದರೆ ಆಶ್ಚರ್ಯದ ಜೊತೆಗೆ ಅವರ ಬಗ್ಗೆ ಮರುಕ ಉಂಟಾಗುತ್ತದೆ. ಅವರ ಛಲವನ್ನು ಕಂಡು ಸಂತೋಷವೂ ಆಗುತ್ತದೆ. ವ್ಯವಸ್ಥೆಯ ಲೋಪವನ್ನು, ಕೊರತೆಯನ್ನು ಕಂಡು ಸಿಟ್ಟೂ ಬರುತ್ತದೆ.

ಇಷ್ಟೆಲ್ಲಾ ಸಮಸ್ಯೆ, ಕೊರತೆಗಳ ನಡುವೆ ಕೂಡ, ತಾನು ಏನಾದರು ಸಾಧನೆ ಮಾಡಲೇಬೇಕೆಂಬ ದೃಢಸಂಕಲ್ಪ ವಿಜಯಕುಮಾರಿ ಅವರನ್ನು ಇಷ್ಟೆಲ್ಲಾ ಸಾಧಿಸುವಂತೆ ಮಾಡಿದೆ. ಜೊತೆಗೆ ತಾವು ಕ್ರೀಡೆಗೆ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ತಮ್ಮ ಛಾಪು ಮೂಡಿಸಿ ಬರುವ ಚಾಣಾಕ್ಷೆ. ಏನಾದರೂ ಮಹಿಳೆಯರಿಗೆ ಕೊಠಡಿ ಸಮಸ್ಯೆಗಳಾದರೆ ನಿಭಾಯಿಸಿ ಕೊಡುವುದು, ಊಟ ಬಡಿಸುವುದು, ತಟ್ಟೆ, ಲೋಟ ತೊಳೆಯುವುದು, ಈ ರೀತಿ ಒಂದು ನಿಮಿಷವೂ ಕೂರದೆ ಸರಸರನೆ ಕೆಲಸ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಿ ಬಿಡುತ್ತಾರೆ. ನಂತರ ತಾವು ಕೂಡ ಎಲ್ಲರಂತೆ ಕ್ರೀಡಾಂಗಣಕ್ಕೆ ಹೋಗಿ ಆಟಗಳನ್ನು ಆಡಿ ಗೆದ್ದು ಬರುವ ಈ ವೀರವನಿತೆಗೆ ಎಲ್ಲಾ ಸೌಕರ್ಯಗಳು ಸಮರ್ಪಕವಾಗಿ ದೊರೆತರೆ ನಮ್ಮ ಜಿಲ್ಲೆಯಷ್ಟೇ ಅಲ್ಲದೆ ನಮ್ಮ ರಾಜ್ಯವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ತಂದೆ ತರುತ್ತಾರೆ ಎಂಬ ವಿಶ್ವಾಸ ಅವರನ್ನು ಹತ್ತಿರದಿಂದ ಬಲ್ಲ ಕ್ರೀಡಾಭಿಮಾನಿಗಳದು.

ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಇಷ್ಟೇ ಅಲ್ಲದೆ ಇವರು 2024ರಲ್ಲಿ ತಮ್ಮ ಜೂಪಿಟರ್ ಟಿವಿಎಸ್ ಬೈಕಿನಲ್ಲಿ ಏಕಾಂಗಿಯಾಗಿ ಅಯೋಧ್ಯೆ ಸಂಕಲ್ಪ ಯಾತ್ರೆ ಕೈಗೊಂಡು- ಪ್ರಯಾಗರಾಜ್, ಕಾಶಿ, ಸರಸ್ವತಿ ಮಂದಿರ, ಜೋಗುಲಾಯ, ಕೃಷ್ಣ ಜನ್ಮಭೂಮಿ, ಕುರುಕ್ಷೇತ್ರ ಮತ್ತು ಪಂಜಾಬ್ ರಾಜ್ಯವನ್ನು ಪರ್ಯಟನೆ ಮಾಡಿ ಬಂದಿದ್ದಾರೆ. ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಇವರು ಉದ್ಯಾನವನಗಳಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸವನ್ನೂ ಮಾಡುತ್ತಾರೆ. ಅದೇ ರೀತಿ ಕ್ರೀಡೆಯಲ್ಲಿ ಆಸಕ್ತಿ ಇರುವ ಹೆಣ್ಣುಮಕ್ಕಳನ್ನು ಹುರಿದುಂಬಿಸಿ ಸತತ ಅಭ್ಯಾಸ ಮಾಡಿಸಿ, ಪದಕಗಳನ್ನು ತರುವತ್ತ ಚಿತ್ತ ಹರಿಸುವಂತೆ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಗ್ರಾಮೀಣಪ್ರದೇಶದ ಹೆಣ್ಣುಮಕ್ಕಳಿಗೆ ಇವರು ಉಚಿತ ಕೋಚ್ ಇದ್ದಂತೆ! ಆರು ತಿಂಗಳ ಹಿಂದಷ್ಟೇ ಕೆಲಸದಿಂದ ನಿವೃತ್ತರಾಗಿರುವ ವಿಜಯಕುಮಾರಿಯವರಿಗೆ ಇಬ್ಬರು ಗಂಡುಮಕ್ಕಳು, ಒಬ್ಬಳು ಮಗಳು ಇದ್ದಾರೆ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಈ ರೀತಿಯಲ್ಲಿ ಕ್ರೀಡೆಯಲ್ಲಿ ತೊಡಗಿ, ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ವಿಜಯಕುಮಾರಿಯವರಿಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಅವುಗಳಲ್ಲಿ ಪ್ರಮುಖವಾದವು- ಕರ್ನಾಟಕ ರಾಜ್ಯ ಸರ್ಕಾರ ಪ್ರತಿವರ್ಷ ಹೆಣ್ಣುಮಕ್ಕಳಿಗಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸಿಯಿಂದ 2016-17ರಲ್ಲಿ ಪುರಸ್ಕೃತರಾಗಿದ್ದಾರೆ. ಹೊಳೆನರಸೀಪುರ ರೋಟರಿ ಸಂಸ್ಥೆಯವರು ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ನೀಡಿದ್ದಾರೆ. ಪೆಂಡಾಲ್ ಗಣಪತಿ ಸಮಿತಿಯವರಿಂದ ಸನ್ಮಾನ ಕೂಡ ದೊರೆತಿದೆ. ಹಾಗೆಯೇ ಇನ್ನು ಅನೇಕ ಸಂಘ, ಸಂಸ್ಥೆಗಳವರು ಕರೆದು ಇವರನ್ನು ಅಭಿನಂದಿಸಿದ್ದಾರೆ. ಏನೇನೂ ಅನುಕೂಲತೆಗಳಿಲ್ಲದಿರುವ ಪ್ರದೇಶದಲ್ಲಿ, ಸಮಸ್ಯೆ, ಕೊರತೆಗಳ ನಡುವೆಯೂ ಇಷ್ಟೆಲ್ಲಾ ಸಾಧನೆ ಮಾಡಿರುವ ಕೆ.ವಿಜಯಕುಮಾರಿಯವರ ಮುಂದಿನ ಕ್ರೀಡಾ ಸಾಧನೆಯ ಕನಸುಗಳೆಲ್ಲ ಈಡೇರಲಿ.

-ನಿರ್ಮಲಾ ವಿ.ದೇವ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಬಾಗಲಕೋಟೆ | ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್‌ನಿಂದ ಸ್ವಚ್ಛತಾ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...