’20 ರೂಪಾಯಿಯ ಆ್ಯಸಿಡ್‌ನಿಂದ ಹೆಣ್ಣುಮಕ್ಕಳ ಬದುಕೇ ಬರ್ಬಾದು’; ವಿಚಾರಣೆ ವಿಳಂಬ, ನ್ಯಾಯ ಬಿಸಿಲು ಕುದುರೆ

Date:

ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯ ವಿಳಂಬವನ್ನು 'ಕಾನೂನು ವ್ಯವಸ್ಥೆಯ ಅಪಹಾಸ್ಯ' ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಅದಾದ ಬಳಿಕ "ಆರೋಪಿಗಳ ಆಸ್ತಿ ಮಾರಿ ಸಂತ್ರಸ್ತರಿಗೆ ಪರಿಹಾರ ನೀಡಬಾರದೇಕೆ?" ಎಂದೂ ಹೇಳಿದೆ. ಈ ಬೆಳವಣಿಗೆ ಸಂತ್ರಸ್ತರಲ್ಲಿ ನ್ಯಾಯದ ಭರವಸೆ ಮೂಡಿಸಿದೆ. ಆದರೆ ಇನ್ನಷ್ಟೂ ವಿಳಂಬ ಸಲ್ಲ. ವಿಚಾರಣೆ ವಿಳಂಬವಾದಷ್ಟೂ ನ್ಯಾಯ ಬಿಸಿಲು ಕುದುರೆ.

ಆ್ಯಸಿಡ್‌ ದಾಳಿ – ನೋಡುಗರಿಗೆ ಈ ದಾಳಿಯಲ್ಲಾದ ದೇಹದ ಗಾಯಗಳಷ್ಟೇ ಕಾಣುತ್ತದೆ. ಆದರೆ ಮನಸ್ಸಿಗಾದ ಗಾಯವನ್ನು ಗುಣಪಡಿಸಲಾಗದೆ ಒದ್ದಾಡುವುದು ಈ ದಾಳಿಗೆ ಒಳಗಾದ ಹೆಣ್ಣುಮಕ್ಕಳು ಮಾತ್ರ. ಇದು ಬರೀ ದೇಹದ ಮೇಲೆ ಮಾಡುವ ದಾಳಿಯಲ್ಲ, ಆತ್ಮಗೌರವ ಮತ್ತು ಬದುಕುವ ಹಕ್ಕಿನ ಮೇಲಿನ ದಾಳಿ. ಈ ದಾಳಿಗೆ ಒಳಗಾದವರು ಕಣ್ಣು ಕಳೆದುಕೊಳ್ಳುವುದಿದೆ, ಶಾಶ್ವತವಾಗಿ ಉಸಿರಾಟದ ಸಮಸ್ಯೆಯನ್ನು ಅನುಭವಿಸುವುದೂ ಇದೆ. ದಾಳಿಗೆ ಒಳಗಾದವರನ್ನೇ ತುಚ್ಛವಾಗಿ ಕಾಣುವ ಸಮಾಜವೂ ನಮ್ಮದು. ಇವೆಲ್ಲವುದರ ನಡುವೆಯೂ ನ್ಯಾಯಕ್ಕಾಗಿ ಸಂತ್ರಸ್ತೆ ಕೋರ್ಟ್‌ ಅಲೆದಾಡುವುದರಲ್ಲೇ ತಮ್ಮ ಜೀವನ ಸವೆಸುತ್ತಾರೆ.

- Advertisement -

ದೇಶದಲ್ಲಿ ಆ್ಯಸಿಡ್‌ ದಾಳಿ ಪ್ರಕರಣಗಳ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಯ ಪ್ರಕಾರ, 2021ರಿಂದ 2023ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. 2021ರಲ್ಲಿ 176 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 202 ಹಾಗೂ 2023ರಲ್ಲಿ 207 ಪ್ರಕರಣಗಳು ದಾಖಲಾಗಿವೆ. ಆದರೆ ಪ್ರಕರಣಗಳ ವಿಚಾರಣೆ ಮಾತ್ರ ತಡವಾಗುತ್ತಲೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ

Advertisements

2009ರಲ್ಲಿ 26 ವರ್ಷ ವಯಸ್ಸಿನ ಶಾಹೀನ್ ಮಲಿಕ್ ಅವರ ಮೇಲೆ ಹರಿಯಾಣದ ಪಾಣಿಪತ್‌ನಲ್ಲಿರುವ ಅವರ ಕಚೇರಿಯ ಹೊರಗೆ ಆ್ಯಸಿಡ್ ದಾಳಿಯಾಗಿದ್ದು, ಈವರೆಗೂ ನ್ಯಾಯ ಮಾತ್ರ ಸಿಕ್ಕಿಲ್ಲ. ಸಂತ್ರಸ್ತೆ ಶಾಹೀನ್ ಹೇಳುವಂತೆ “ಬರೀ 20 ರೂಪಾಯಿಯ ಆ್ಯಸಿಡ್‌ನಿಂದ ಹೆಣ್ಣುಮಕ್ಕಳ ಬದುಕೇ ಬರ್ಬಾದು ಆಗುತ್ತದೆ” ಇತ್ತ, ವಿಚಾರಣೆಯೂ ವಿಳಂಬ ಅತ್ತ ನ್ಯಾಯವೂ ಬಿಸಿಲು ಕುದುರೆ.

ಅಷ್ಟಕ್ಕೂ ಬಹುತೇಕ ಈ ದಾಳಿಗಳು ನಡೆದಿರುವುದು ದ್ವೇಷ, ಅಸೂಯೆ, ಪ್ರೇಮ ನಿರಾಕರಿಸಿದ ಕಾರಣಕ್ಕೆ. ಶಾಹೀನ್‌ಗೆ ಮೇಲೆ ದಾಳಿ ನಡೆದಿದ್ದು ಇದೇ ಕಾರಣಗಳಿಗೆ. ದಾಳಿ ನಡೆದು 16 ವರ್ಷಗಳಾಗಿವೆ. ಆದರೆ ಆರೋಪಿ ಇಂದಿಗೂ ಆರಾಮವಾಗಿ ಓಡಾಡಿಕೊಂಡಿದ್ದಾನೆ, ಇತ್ತ ಶಾಹೀನ್ ಮಾತ್ರ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಜತೆಗೆ ಇತರ ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ತಮ್ಮ ‘ಬ್ರೇವ್ ಸೋಲ್ಸ್ ಫೌಂಡೇಶನ್’ ಎಂಬ ಎನ್‌ಜಿಒ ಮೂಲಕ ಸಹಾಯ ಮಾಡುತ್ತಿದ್ದಾರೆ.

ಶಾಹೀನ್ ಕೋರ್ಟ್‌ಗೆ ಅರ್ಜಿಯ ಮೇಲೆ ಅರ್ಜಿ ಹಾಕಿದ ಕಾರಣದಿಂದಾಗಿ ಇದೀಗ ಸುಪ್ರೀಂ ಕೋರ್ಟ್ ಆ್ಯಸಿಡ್‌ ದಾಳಿ ಸಂತ್ರಸ್ತರತ್ತ, ವಿಚಾರಣೆಯಾಗದೆ ಬಾಕಿ ಉಳಿದಿರುವ ಪ್ರಕರಣಗಳತ್ತ ಕಣ್ಣಾಯಿಸಿದೆ. ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯ ವಿಳಂಬವನ್ನು ‘ಕಾನೂನು ವ್ಯವಸ್ಥೆಯ ಅಪಹಾಸ್ಯ’ ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಅದಾದ ಬಳಿಕ “ಆರೋಪಿಗಳ ಆಸ್ತಿ ಮಾರಿ ಸಂತ್ರಸ್ತರಿಗೆ ಪರಿಹಾರ ನೀಡಬಾರದೇಕೆ?” ಎಂದೂ ಹೇಳಿದೆ. ಈ ಬೆಳವಣಿಗೆ ಸಂತ್ರಸ್ತರಲ್ಲಿ ನ್ಯಾಯದ ಭರವಸೆ ಮೂಡಿಸಿದೆ. ಆದರೆ ಇನ್ನಷ್ಟೂ ವಿಳಂಬ ಸಲ್ಲ. ವಿಚಾರಣೆ ವಿಳಂಬವಾದಷ್ಟೂ ನ್ಯಾಯ ಬಿಸಿಲು ಕುದುರೆ.

ಇದನ್ನು ಓದಿದ್ದೀರಾ? ಆರೋಪಿಗಳ ಆಸ್ತಿ ಮಾರಿ ಪರಿಹಾರ ನೀಡಬಾರದೇಕೆ? – ಆ್ಯಸಿಡ್ ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಚಿಂತನೆ

ಶಾಹೀನ್ ಮಲಿಕ್ ಪ್ರಕರಣ ಮಾತ್ರವಲ್ಲ ದೇಶದಲ್ಲಿ ಹಲವು ಆ್ಯಸಿಡ್‌ ದಾಳಿ ಪ್ರಕರಣಗಳು ವಿಚಾರಣೆಗೆ ಒಳಗಾಗದೆ ಬಾಕಿಯಾಗಿದೆ. ಒಟ್ಟು ಪ್ರಕರಣಗಳಲ್ಲಿ ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. 2023ರ ಎನ್‌ಸಿಆರ್‌ಬಿ ವರದಿಯ ಪ್ರಕಾರ ದೇಶದಲ್ಲೇ ಅಧಿಕ ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಿರುವುದು ಪಶ್ಚಿಮ ಬಂಗಾಳದಲ್ಲಿ. ಶೇ.27.5ರಷ್ಟು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ದಾಖಲಾಗಿದೆ. 2018ರಿಂದಲೂ ಪಶ್ಚಿಮ ಬಂಗಾಳದಲ್ಲಿ ಅಧಿಕ ಆ್ಯಸಿಡ್‌ ದಾಳಿಗಳು ಸಂಭವಿಸುತ್ತಿದೆ. ಜನವರಿ 2026ರ ವರದಿಯಂತೆ, ಪಶ್ಚಿಮ ಬಂಗಾಳದ ವಿವಿಧ ನ್ಯಾಯಾಲಯಗಳಲ್ಲಿ 160 ಆಸಿಡ್ ದಾಳಿ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿದೆ.

ಕಳೆದ 23 ವರ್ಷಗಳಿಂದ ಬಾಕಿ ಇರುವ ಪ್ರಕರಣಗಳೂ ಇವೆ! ಬಹುತೇಕ ಪ್ರಕರಣಗಳು ಎಫ್‌ಐಆರ್ ದಾಖಲಾಗುವಾಗ ವಿಳಂಬವಾದ ಕಾರಣ, ವಿಧಿವಿಜ್ಞಾನ ಪುರಾವೆಗಳ ಸಂಗ್ರಹಣೆಯಲ್ಲಿ ವೈಫಲ್ಯವಾದ ಕಾರಣ, ದೋಷಾರೋಪ ಪಟ್ಟಿ ಸಲ್ಲಿಕೆಯಲ್ಲಿ ವಿಳಂಬವಾದ ಕಾರಣದಿಂದಾಗಿ ನಡೆದಿದೆ. ಇನ್ನು 2021ರಲ್ಲಿ ಕೇವಲ 20% ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2023ರಲ್ಲಿ ಬಾಕಿ ಇದ್ದ 703 ಪ್ರಕರಣಗಳಲ್ಲಿ ಕೇವಲ 16 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ.

ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ. ಅದರೊಂದಿಗೆ ಸಂತ್ರಸ್ತರನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ. ಇಂದಿಗೂ ಅದೆಷ್ಟೋ ಕಡೆಗಳಲ್ಲಿ ಸಂತ್ರಸ್ತರನ್ನೇ ಇಡೀ ಪ್ರಕರಣದ ಹೊಣೆಗಾರರನ್ನಾಗಿ ನೋಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಕನಿಷ್ಠ ₹3 ಲಕ್ಷ ಪರಿಹಾರ ನೀಡಬೇಕು. ಆದರೆ ಅದರನ್ನು ಪಡೆಯಲೂ ಸಂತ್ರಸ್ತರು ಅಲೆದಾಡಬೇಕಾದ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ನಾವೂ ಸಂತ್ರಸ್ತರೊಂದಿಗೆ ಕೈಜೋಡಿಸುವುದು ಮುಖ್ಯ. ಅವರ ಜತೆಯಾಗಿ ನ್ಯಾಯಕ್ಕಾಗಿ ಹೋರಾಡುವುದು ಅತ್ಯಗತ್ಯ. ಅಷ್ಟಕ್ಕೂ ಆ್ಯಸಿಡ್‌ ದಾಳಿ ಸಂತ್ರಸ್ತರ ಮುಖ ವಿರೂಪವಲ್ಲ, ಅದು ಕೃತ್ಯ ಎಸಗಿದ ದುರುಳರ ನೀಚ ಮನಸ್ಥಿತಿಯ ಪ್ರತಿಬಿಂಬ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...