17 ವರ್ಷಗಳ ತನಿಖೆ, ಅಚಲ ನಿಲುವು: ಬಾಬರಿ ಮಸೀದಿ ಧ್ವಂಸ ಸುಸಂಘಟಿತ ಸಂಚು ಎಂದಿದ್ದ ಜಸ್ಟಿಸ್ ಲಿಬರ್ಹಾನ್

Date:

ಸ್ವತಂತ್ರ ಭಾರತದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲೊಂದರ ತನಿಖೆಯ ನೇತೃತ್ವ ವಹಿಸಿದವರು ಲಿಬರ್ಹಾನ್. 2020ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರವೂ ಜಸ್ಟಿಸ್ ಲಿಬರ್ಹಾನ್ ತಮ್ಮ ನಿಲುವಿಗೆ ಬದ್ಧರಾಗಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಮನ್‌ರಾಜ್ ಗ್ರೆವಾಲ್ ಶರ್ಮಾ ಬರೆದಿರುವ ಲೇಖನದಲ್ಲಿ ತಿಳಿಸಲಾಗಿದೆ.

2009ರ ಜೂನ್ 30. ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ, ಜಸ್ಟಿಸ್ ಲಿಬರ್ಹಾನ್ ತನಿಖಾ ಆಯೋಗವು 1992ರ ಬಾಬರಿ ಮಸೀದಿ ಧ್ವಂಸವು “ಸ್ವಯಂಪ್ರೇರಿತವೂ ಅಲ್ಲ, ಅಯೋಜಿತವೂ ಅಲ್ಲ”, ಬದಲಾಗಿ ಸುಸಂಘಟಿತವಾಗಿ ಹೆಣೆದ ಸಂಚಿನ ಪರಿಣಾಮ ಎಂದು ತೀರ್ಮಾನಿಸಿತ್ತು. ಸ್ವತಂತ್ರ ಭಾರತದ ಅತ್ಯಂತ ದೀರ್ಘಕಾಲ ನಡೆದ ತನಿಖಾ ಆಯೋಗಗಳಲ್ಲಿ ಒಂದರ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಮನ್‌ಮೋಹನ್ ಸಿಂಗ್ ಲಿಬರ್ಹಾನ್ ಅವರು ತಮ್ಮ ಕೊನೆಯುಸಿರಿನವರೆಗೂ ಬದಲಾಗದೆ ಉಳಿಸಿಕೊಂಡ ತೀರ್ಮಾನಗಳಲ್ಲಿ ಇದೂ ಒಂದು.

- Advertisement -

1938ರ ನವೆಂಬರ್ 11ರಂದು ಚಂಡೀಗಢದ ಭಾಗವಾದ ಗ್ರಾಮವೊಂದರಲ್ಲಿ ಜನಿಸಿದ ಲಿಬರ್ಹಾನ್, ಪ್ರಖ್ಯಾತ ವಕೀಲ ಚೌಧರಿ ಭಕ್ತಾವರ್ ಸಿಂಗ್ ಅವರ ಪುತ್ರ. 1962ರಲ್ಲಿ ಕೀಲರಾಗಿ ನೋಂದಾಯಿಸಿಕೊಂಡ ಲಿಬರ್ಹಾನ್, ಅಂಬಾಲಾದ ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಅದಾದ ಬಳಿಕ 1964ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅಭ್ಯಾಸ ಆರಂಭಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಸಮರ್ಥನೆ; ಮಹಾ ವಿಕಾಸ್ ಅಘಾಡಿಯಿಂದ ಹೊರನಡೆದ ಎಸ್‌ಪಿ

ವರ್ಷಗಳಲ್ಲೇ ಬಾರ್ ಕೌನ್ಸಿಲ್‌ನ ಸದಸ್ಯರಾಗಿ ಮತ್ತು ನಂತರ ಕಾರ್ಯದರ್ಶಿಯಾಗಿ, ಹರಿಯಾಣದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದರು. 1987ರ ಫೆಬ್ರವರಿ 11ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 1997ರ ಜುಲೈನಲ್ಲಿ, ಅವರು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. 1998ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು, ಅಲ್ಲಿರುವಾಗಲೇ ನಿವೃತ್ತರಾದರು.

ಆದರೆ ಜನರ ನೆನಪಿನಲ್ಲಿ ಲಿಬರ್ಹಾನ್ ಹೆಸರು ಉಳಿದಿದ್ದು ಅವರ ಹೆಸರಿನಲ್ಲಿದ್ದ ತನಿಖೆಯಿಂದಾಗಿಯೇ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡ ಹತ್ತು ದಿನಗಳ ನಂತರ, ಪಿ ವಿ ನರಸಿಂಹ ರಾವ್ ಸರ್ಕಾರವು ಏಕಸದಸ್ಯ ತನಿಖಾ ಆಯೋಗದ ನೇತೃತ್ವ ವಹಿಸಲು ಈ ಹಾಲಿ ನ್ಯಾಯಮೂರ್ತಿಯನ್ನು ನೇಮಿಸಿತ್ತು. ಮೂರು ತಿಂಗಳೊಳಗೆ ಮುಕ್ತಾಯಗೊಳ್ಳಬೇಕಿದ್ದ ತನಿಖಾ ಕಾರ್ಯವು 17 ವರ್ಷಗಳ ಕಾಲ ಸುದೀರ್ಘವಾಗಿ ಎಳೆಯಲ್ಪಟ್ಟಿತು. 48 ಬಾರಿ ಮುಂದೂಡಲ್ಪಟ್ಟಿತು, ನೂರಾರು ಸಭೆಗಳು ನಡೆಯಿತು.

ಅಂತಿಮವಾಗಿ 2009ರ ಜೂನ್ 30ರಂದು ಸಲ್ಲಿಸಿದ ತನ್ನ ವರದಿಯಲ್ಲಿ, ಆರ್‌ಎಸ್‌ಎಸ್‌, ವಿಎಚ್‌ಪಿ, ಭಜರಂಗದಳ, ಬಿಜೆಪಿ ಮತ್ತು ಶಿವಸೇನೆಯ ಕೆಡರ್ ಹಾಗೂ ನಾಯಕರು ಧ್ವಂಸವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದು ಲಿಬರ್ಹಾನ್ ಅವರ ತನಿಖಾ ಆಯೋಗವು ಆರೋಪಿಸಿತ್ತು.

ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಹಿರಿಯ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಹಾಗೂ ಅಂದಿನ ಉತ್ತರ ಪ್ರದೇಶ ಸರ್ಕಾರದ ಪಾತ್ರವೂ ಇದೆ ಎಂದು ಆಯೋಗವು ಆರೋಪಿಸಿತ್ತು. ಆದರೆ 2026ರ ಆಗಸ್ಟ್ 2ರಂದು ಕೊನೆಯ ಉಸಿರು ಇರುವವರೆಗೂ ಜಸ್ಟಿಸ್ ಲಿಬರ್ಹಾನ್ ತಮ್ಮ ಈ ತೀರ್ಮಾನಗಳಿಂದ ಎಂದಿಗೂ ಹಿಂದೆ ಸರಿಯಲಿಲ್ಲ. 2020ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರವೂ ಲಿಬರ್ಹಾನ್ ತಮ್ಮ ನಿಲುವಿಗೆ ಬದ್ಧರಾಗಿದ್ದರು.

ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಜಸ್ಟಿಸ್ ಲಿಬರ್ಹಾನ್, “ಇದು ನಾಗರಿಕ ಸಂಚು ಎಂದು ನಾನು ತನಿಖೆಯಲ್ಲಿ ಕಂಡುಕೊಂಡೆ. ಎಲ್ಲಾ ಸಾಕ್ಷ್ಯಾಧಾರಗಳ ಪ್ರಕಾರ ಬಾಬರಿ ಮಸೀದಿ ಧ್ವಂಸವನ್ನು ಸೂಕ್ಷ್ಮವಾಗಿ ಯೋಜಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ. ಉಮಾ ಭಾರತಿ ಅವರು ಇದರ ಹೊಣೆ ಹೊತ್ತುಕೊಂಡದ್ದು ನನಗೆ ನೆನಪಿದೆ. ಮಸೀದಿಯನ್ನು ಕೆಡವಿದ್ದು ಯಾವುದೋ ಕಣ್ಣಿಗೆ ಕಾಣದ ಶಕ್ತಿಯಲ್ಲ, ಮನುಷ್ಯರೇ ಅದನ್ನು ಮಾಡಿದ್ದು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

2009ರಲ್ಲಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನವೇ ಅದರ ಭಾಗಗಳು ಪ್ರಕಟವಾದಾಗ, ಲಿಬರ್ಹಾನ್ ಕೆಂಡಾಮಂಡಲವಾಗಿದ್ದರು. ತಮ್ಮ ಚಂಡೀಗಢದ ನಿವಾಸದಲ್ಲಿ ವರದಿಗಾರರಿಗೆ, “ನನ್ನ ಚಾರಿತ್ರ್ಯವನ್ನು ಪ್ರಶ್ನಿಸಬೇಡಿ… ತೊಲಗಿ ಇಲ್ಲಿಂದ. ತನಿಖೆಯನ್ನು ಮಾಧ್ಯಮಗಳಿಗೆ ಹಸ್ತಾಂತರಿಸುವ ಕ್ಯಾರೆಕ್ಟರ್‌ಲೆಸ್ ವ್ಯಕ್ತಿಯಲ್ಲ” ಎಂದು ಪ್ರತಿಪಾದಿಸಿದ್ದರು.

ಲಿಬರ್ಹಾನ್ ಅವರ ಮುಂದೆ ಸುಮಾರು 15 ವರ್ಷಗಳ ಕಾಲ ಎಲ್‌ಕೆ ಅಡ್ವಾಣಿ ಮತ್ತು ಇತರ ಹಿರಿಯ ನಾಯಕರ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್, ಲಿಬರ್ಹಾನ್ ಅವರನ್ನು “ಆಳವಾದ ಕಾನೂನು ಜ್ಞಾನ ಮತ್ತು ನಿಷ್ಕಳಂಕ ಪ್ರಾಮಾಣಿಕತೆ ಹೊಂದಿದ ಮಹಾನ್ ವ್ಯಕ್ತಿ” ಎಂದು ಬಣ್ಣಿಸಿದರು. “ಪ್ರಧಾನ ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಸಾರ್ವಜನಿಕ ಜೀವನದ ಎಲ್ಲಾ ಪ್ರಮುಖ ನಾಯಕರು ಹಾಜರಾದ ಬಹುಶಃ ಏಕೈಕ ಆಯೋಗ ಇದು. ಈ ನಾಯಕರನ್ನು ಪ್ರಶ್ನಿಸುವಾಗ ಅವರು ತಪ್ಪಿಲ್ಲದೆ ವಿನಮ್ರರಾಗಿದ್ದರು, ಆದರೆ ಅಷ್ಟೇ ದೃಢವಾಗಿದ್ದರು.”

ಲಿಬರ್ಹಾನ್ ಅವರ ಹಾಸ್ಯಪ್ರಜ್ಞೆಯನ್ನೂ ಜೈನ್ ನೆನಪಿಸಿಕೊಳ್ಳುತ್ತಾರೆ. “ಒಮ್ಮೆ ನಿವೃತ್ತ ನ್ಯಾಯಮೂರ್ತಿಯೊಬ್ಬರ ಪತ್ನಿ ಚಂಡೀಗಢಕ್ಕೆ ಅವರೊಂದಿಗೆ ಕಾರಿನಲ್ಲಿ ಸಾಗಿದ್ದರು. ಪಾಣಿಪತ್ ಬಳಿ ಅವರ ಕಾರು ಅಪಘಾತಕ್ಕೀಡಾಯಿತು. ಈ ಸುದ್ದಿ ರೇಡಿಯೋದಲ್ಲಿ ಬಂದಾಗ, ಅಪಘಾತದಿಂದ ಏನಾಯಿತು ಎಂಬುದಕ್ಕಿಂತ ಹೆಚ್ಚಾಗಿ ಲಿಬರ್ಹಾನ್ ಅವರ ಪತ್ನಿ ತಮ್ಮ ಪ್ರಯಾಣದ ಸಹಚರಿಯ ಬಗ್ಗೆ ಹೆಚ್ಚು ಕುತೂಹಲ ತಳೆದಿದ್ದರು ಎಂದು ಲಿಬರ್ಹಾನ್ ನನಗೆ ಹೇಳಿದ್ದರು”

‘ತೀವ್ರ ಸ್ವತಂತ್ರ, ಖಾಸಗಿ ವ್ಯಕ್ತಿ’

ಸಹೋದ್ಯೋಗಿಗಳು ಜಸ್ಟಿಸ್ ಲಿಬರ್ಹಾನ್ ಅವರನ್ನು ತೀವ್ರ ಸ್ವತಂತ್ರ ಮನೋಭಾವದವರೆಂದು ನೆನಪಿಸಿಕೊಳ್ಳುತ್ತಾರೆ. ಕಾನೂನು ಪ್ರೊಫೆಸರ್ ಎಮೆರಿಟಸ್ ಮತ್ತು ಇಂದೋರ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಮಾಜಿ ನಿರ್ದೇಶಕ ಡಾ. ಬಲರಾಮ್ ಗುಪ್ತಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅವರ ಮುಂದೆ ಹಾಜರಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.

“ಚೌಧರಿ ಬನ್ಸಿ ಲಾಲ್ ಅವರಿಂದಾಗಿ ತಾವು ನ್ಯಾಯಮೂರ್ತಿಯಾಗಿದ್ದರೆ, ಸಹೋದರ ನ್ಯಾಯಮೂರ್ತಿಯೊಬ್ಬರು ಜಿಯಾನಿ ಜೈಲ್ ಸಿಂಗ್ ಅವರಿಂದಾಗಿ ಆ ಹುದ್ದೆಗೆ ಏರಿದ್ದಾರೆ ಎಂದು ಅವರು ಬಹಿರಂಗ ನ್ಯಾಯಾಲಯದಲ್ಲಿ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದನ್ನು ಅವರು ಬಹಿರಂಗ ನ್ಯಾಯಾಲಯದಲ್ಲೇ ಹೇಳುತ್ತಿದ್ದರು. ಆದರೆ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ಕಡೆಗೆ ಅವರು ಒಲವು ತೋರುತ್ತಿದ್ದಾರೆ ಎಂದು ಯಾರೂ ಆರೋಪಿಸಲು ಸಾಧ್ಯವಿರಲಿಲ್ಲ. ಅವರು ಕಟ್ಟುನಿಟ್ಟಾಗಿ ಕಾನೂನಿನಂತೆ ನಡೆದರು. ಅವರ ತೀರ್ಪುಗಳಲ್ಲಿ ಯಾವುದೇ ಪಕ್ಷಪಾತ ಅಥವಾ ರಾಜಕೀಯ ಬಣ್ಣವಿರಲಿಲ್ಲ,” ಎಂದು ಗುಪ್ತಾ ನೆನೆಪಿಸಿಕೊಳ್ಳುತ್ತಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಲಿಬರ್ಹಾನ್ ಈ ಹಿಂದೆ “ನ್ಯಾಯಮೂರ್ತಿಯಾಗಿ, ನನಗೆ ಸಾಮಾಜಿಕವಾಕಿ ಓಡಾಟ ನಡೆಸಲು ಯಾವುದೇ ಸಮಯವಿರಲಿಲ್ಲ. ಓದಲು ತುಂಬಾ ಇದೆ, ಆಲೋಚಿಸಲು ತುಂಬಾ ಇದೆ. ನ್ಯಾಯದ ಕೆಲಸವು ನಿಮಗೆ, ನಿಮಗಾಗಿ ಯಾವುದೇ ಸಮಯವನ್ನು ನೀಡಲ್ಲ,” ಎಂದು ಒಮ್ಮೆ ಹೇಳಿದ್ದರು.

ಉತ್ತಮ ವಕೀಲನನ್ನು ಯಾವುದು ರೂಪಿಸುತ್ತದೆ ಎಂದು ಕೇಳಿದಾಗ, ಅವರು ಹೀಗೆ ಉತ್ತರಿಸಿದ್ದರು: “ಉತ್ತಮ ವಕೀಲರು ಓದುವುದನ್ನು ಆನಂದಿಸುವುದು ಬಹಳ ಮುಖ್ಯ. ನೀವು ಕಾನೂನನ್ನು ಕಲಿಯಲು ಬಯಸಿದರೆ ಅದು ಅತ್ಯಗತ್ಯ. ಆದರೆ ಅದರಲ್ಲಿ ಪ್ರವೀಣರಾಗುವುದು (Master) ಬಹುತೇಕ ಅಸಾಧ್ಯ.”

ನಿವೃತ್ತಿಯ ನಂತರ, ಲಿಬರ್ಹಾನ್ ಚಂಡೀಗಢದಲ್ಲಿ ವಾಸಿಸುತ್ತಿದ್ದರು. ಆಯೋಗದ ಶೋಧನೆಗಳ ಬಗ್ಗೆ ಅಪರೂಪಕ್ಕೆ ಮಾತನಾಡುತ್ತಿದ್ದರು. ತಮ್ಮ ಮುಂದೆ ಮಂಡಿಸಲಾದ ಸಾಕ್ಷ್ಯಾಧಾರಗಳು ಯಾವುದೇ ಅನುಮಾನಕ್ಕೆ ಆಸ್ಪದ ನೀಡದಂತಿವೆ ಎಂದು ಅವರು ಪ್ರತಿಪಾದಿಸುತ್ತಿದ್ದರು. 2009ರಲ್ಲಿ ವರದಿ ಸಲ್ಲಿಸುವ ಮುನ್ನ ಆಯೋಗವು ಸುಮಾರು 100 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು.

ಜಸ್ಟಿಸ್ ಲಿಬರ್ಹಾನ್ ಅವರು ಏಕಾಂತ ಬಯಸುವ, ನಾಚಿಕೆ ಸ್ವಭಾವದ ಖಾಸಗಿ ವ್ಯಕ್ತಿಯಾಗಿದ್ದರು. ಅವರು ಪ್ರಚಾರಕ್ಕಾಗಿ ಕಾದವರಲ್ಲ. ಆದರೆ ಅವರು ಎಂದೆಂದಿಗೂ, ಸ್ವತಂತ್ರ ಭಾರತದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದಕ್ಕಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಚುನಾವಣೆ | ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಮತಗಳನ್ನು 27,000 ಕಡಿತಗೊಳಿಸುತ್ತೇವೆ: ಅಖಿಲೇಶ್ ಪ್ರತಿಜ್ಞೆ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ....

ಅಮೃತಸರದಲ್ಲಿ ಕಳೆದುಹೋಗಿ ಗಯಾದಲ್ಲಿ ಪತ್ತೆ; ಎಐ ತಂತ್ರಜ್ಞಾನದ ನೆರವಿನಿಂದ ಕುಟುಂಬವನ್ನು ಸೇರಿದ ವ್ಯಕ್ತಿ

ಪಂಜಾಬ್‌ನಿಂದ ದಾರಿ ತಪ್ಪಿ 1,200 ಕಿಲೋಮೀಟರ್‌ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...