ವ್ಯಕ್ತಿಚಿತ್ರ | ಸಿಬಿಸಿಐ ಮೊದಲ ದಲಿತ ಅಧ್ಯಕ್ಷರಾಗಿ ಇತಿಹಾಸ ಬರೆದ ʼಪೂಲಾ ಆಂಥೋನಿʼ

Date:

"ದಲಿತ ಎಂಬ ಕಾರಣಕ್ಕೆ ಮೇಲ್ಜಾತಿಯವರು ಲೋಟದಲ್ಲಿ ನೀರು ಕೊಡುತ್ತಿರಲಿಲ್ಲ. ನಮ್ಮ ಕೈಗೆ ನೀರು ಸುರಿಯುತ್ತಿದ್ದರು" ಎಂದು ಹೇಳುವ ಪೂಲಾ ಆಂಥೋನಿ ಮೊದಲ ಭಾರತೀಯ ದಲಿತ ಕಾರ್ಡಿನಲ್. ಇದೀಗ ಸಿಬಿಸಿಐ ಮೊದಲ ದಲಿತ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ್ದಾರೆ. 

ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಆಂಥೋನಿ ಆಯ್ಕೆಗೊಂಡಿದ್ದಾರೆ. ಹೈದರಾಬಾದ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಪೂಲಾ, ಪೋಪ್ ಫ್ರಾನ್ಸಿಸ್ ಅವರ ಮರಣದ ನಂತರ, ಮುಂದಿನ ಮುಖ್ಯಸ್ಥರನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆದ ನಾಲ್ಕು ಕಾರ್ಡಿನಲ್‌ಗಳಲ್ಲಿ ಒಬ್ಬರಾಗಿದ್ದವರು. ಹಾಗೆಯೇ ಮೊದಲ ಭಾರತೀಯ ದಲಿತ ಕಾರ್ಡಿನಲ್. ಇದೀಗ ಸಿಬಿಸಿಐ ಮೊದಲ ದಲಿತ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

- Advertisement -

ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ನಡೆದ ಸಿಬಿಸಿಐನ ಸಾಮಾನ್ಯ ಸಭೆಯಲ್ಲಿ ಚುನಾವಣೆ ನಡೆದಿದ್ದು, 64 ವರ್ಷದ ಪೂಲಾ ಆಂಥೋನಿ ಅವರನ್ನು ಸಿಬಿಸಿಐನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಇದು ಭಾರತದ ಸುಮಾರು ಎರಡು ಕೋಟಿ ಕ್ಯಾಥೋಲಿಕರಿಗೆ ಐತಿಹಾಸಿಕ ಕ್ಷಣವೆಂದು ಸಿಬಿಸಿಐ ಹೇಳಿಕೊಂಡಿದೆ. ಆಂಥೋನಿ ಅಧಿಕಾರಾವಧಿ ಎರಡು ವರ್ಷಗಳಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ? ಇದೇ ಮೊದಲು | ಸಿಬಿಸಿಐ ಅಧ್ಯಕ್ಷರಾಗಿ ‘ದಲಿತ’ ಪೂಲಾ ಆಯ್ಕೆ

‘ಅಸ್ಪೃಶ್ಯ’ ಎನಿಸಿಕೊಂಡಿದ್ದಾಗಿನಿಂದ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪೋಪ್‌ಗೆ ಸಲಹೆ ನೀಡುವ ಮತ್ತು ಅವರ ನಂತರದ ಉನ್ನತ ಸ್ಥಾನದಲ್ಲಿರುವ ಪ್ರಮುಖ ಧರ್ಮಗುರು ‘ಕಾರ್ಡಿನಲ್’ ಆಗುವವರೆಗೆ ಸಾಕಷ್ಟು ಏಳುಬೀಳುಗಳ ಹಾದಿ ದಾಟಿ ಬಂದವರು ಪೂಲಾ ಆಂಥೋನಿ. ಈಗ ದೇಶದ ಕ್ಯಾಥೋಲಿಕ್ ಚರ್ಚ್‌ನ ಸರ್ವೋಚ್ಚ ಸಂಸ್ಥೆಯ ಮುಖ್ಯಸ್ಥರಾದ ಮೊದಲ ದಲಿತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಪೂಲಾ ಆಂಥೋನಿ ನಡೆದು ಬಂದ ಹಾದಿ ತಿಳಿಯೋಣ.

ಪೂಲಾ ಆಂಥೋನಿ ಯಾರು?

ಆಂಥೋನಿ ಪೂಲಾ ಕ್ಯಾಥೋಲಿಕ್ ಚರ್ಚ್‌ನ ಭಾರತೀಯ ಧರ್ಮಗುರುಗಳಾಗಿದ್ದು, 2021ರಿಂದ ಹೈದರಾಬಾದ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಆಗಿದ್ದಾರೆ. 2008ರಿಂದ 2020ರವರೆಗೆ ಕರ್ನೂಲ್‌ನ ಬಿಷಪ್ ಆಗಿದ್ದರು. ಬಿಷಪ್ ಆಗುವ ಮೊದಲು, ಅವರು ಕಡಪ ಡಯಾಸಿಸ್‌ನ ಪಾದ್ರಿಯಾಗಿ ಕೆಲಸ ಮಾಡಿದ್ದರು. 2022ರ ಆಗಸ್ಟ್‌ನಲ್ಲಿ ವ್ಯಾಟಿಕನ್‌ನಲ್ಲಿ ನಡೆದ ಕಾನ್ಸಿಸ್ಟರಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಪೂಲಾ ಅವರಿಗೆ ಕಾರ್ಡಿನಲ್ ಆಗಿ ಬಡ್ತಿ ನೀಡಿದ್ದರು. ಈ ಮೂಲಕ, ಪೂಲಾ ಕಾರ್ಡಿನಲ್ ಆಗಿ ಆಯ್ಕೆಯಾದ ಮೊದಲ ದಲಿತ ಮತ್ತು ಮೊದಲ ತೆಲುಗು ಭಾಷಿಕ ಎನಿಸಿಕೊಂಡಿದ್ದರು.

‘ಅಸ್ಪೃಶ್ಯತೆ’ಯಿಂದ ಕಾರ್ಡಿನಲ್‌ವರೆಗೆ…

1961ರಲ್ಲಿ ಹೈದರಾಬಾದ್‌ನ ಕರ್ನೂಲ್ ಡಯಾಸಿಸ್‌ನ ಪೋಲೂರಿನಲ್ಲಿ ಭಾರತದ ಕ್ಯಾಥೋಲಿಕ್‌ನ ಸುಮಾರು ಮೂರನೇ ಎರಡರಷ್ಟು ಭಾಗವಿರುವ ದಲಿತ ಕುಟುಂಬಕ್ಕೆ ಸೇರಿದ ಪೂಲಾ ಚಿನ್ನ ಆಂಥೋನಿ ಮತ್ತು ಆರೋಗ್ಯಮ್ಮ ದಂಪತಿಗಳಿಗೆ ಜನಿಸಿದವರು ಪೂಲಾ.

70 ವರ್ಷಗಳ ಹಿಂದೆ ಸಂವಿಧಾನವು ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ್ದರೂ, ದಲಿತ ಸಮುದಾಯ ದಬ್ಬಾಳಿಕೆಗೆ ಒಳಗಾಗುತ್ತಲೇ ಬಂದಿದ್ದಾರೆ. ಇಂದಿಗೂ ದಲಿತ ಸಮುದಾಯಕ್ಕೆ ಹಲವು ಸವಾಲುಗಳು ಎದುರಾಗುತ್ತಲೇ ಇದೆ. ಹಾಗಿದ್ದಾಗ ಪೂಲಾ ಅವರ ಶೈಕ್ಷಣಿಕ ಜೀವನವೂ ಸಂಕಷ್ಟದಿಂದಲೇ ಸಾಗಿತ್ತು. ಆರ್ಥಿಕ ಸಮಸ್ಯೆಯಿಂದಾಗಿ ಎಂಟನೇ ತರಗತಿಯ ನಂತರ ಪೂಲಾ ಅವರಿಗೆ ಮನೆಯಿಂದ ಶಿಕ್ಷಣಕ್ಕೆ ಬೆಂಬಲ ಸಿಕ್ಕಿಲ್ಲ. ಶಾಲೆ ತೊರೆದು ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಉಂಟಾಗಿತ್ತು.

ಆದರೆ ಒಂದು ಬೇಸಿಗೆ ಶಿಬಿರ ಅವರ ಶಿಕ್ಷಣ ಜೀವನವನ್ನೇ ಬದಲಾಯಿಸಿತ್ತು. ಡಚ್ ಮಿಷನರಿಗಳು ಪೂಲಾ ಅವರಿಗೆ ಶಿಕ್ಷಣದ ಮೇಲೆ ಇರುವ ಆಸಕ್ತಿಯನ್ನು ಗುರುತಿಸಿ ಮುಂದಿನ ಶಿಕ್ಷಣಕ್ಕೆ ಹಣಕಾಸು ಸಹಾಯ ಮಾಡಿದರು. ತಮ್ಮ ಈ ಸಂಕಷ್ಟದ ಬದುಕನ್ನು 2022ರಲ್ಲಿ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪೂಲಾ ಬಿಚ್ಚಿಟ್ಟಿದ್ದಾರೆ. “ದಲಿತ ಎಂಬ ಕಾರಣಕ್ಕೆ ಮೇಲ್ಜಾತಿಯವರು ಲೋಟದಲ್ಲಿ ನೀರು ಕೊಡುತ್ತಿರಲಿಲ್ಲ. ನಮ್ಮ ಕೈಗೆ ನೀರು ಸುರಿಯುತ್ತಿದ್ದರು” ಎಂದು ಹೇಳಿದ್ದರು.

ಇದನ್ನು ಓದಿದ್ದೀರಾ? ಪೋಪ್ ಫ್ರಾನ್ಸಿಸ್ ನಿಧನ: ಹೊಸ ಪೋಪ್ ಆಯ್ಕೆ ಹೇಗೆ?

ಪೂಲಾ ಹೇಳುವಂತೆ, ಅವರು 9ನೇ ತರಗತಿಯನ್ನು ತಲುಪಿದಾಗ, ಮಿಷನರಿ ಪಾದ್ರಿ ಫಾದರ್ ಬಾನ್ ಅವರನ್ನು ಸೆಮಿನರಿಗೆ ಸೇರಿಸಿದರು. ಆದ್ದರಿಂದ ಪೂಲಾ ಅವರಿಗೆ ಕರ್ನೂಲ್ ಸೆಮಿನರಿಯಿಂದ 9 ಮತ್ತು 10ನೇ ತರಗತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಅದಾದ ಬಳಿಕ ಪೂಲಾ ಪಾದ್ರಿಯಾಗಿ ಬಳಿಕ ಶಿಕ್ಷಣ ಪಡೆಯಲು ಬಯಸಿದ್ದರು. ಹಾಗಾಗಿ ಆಂಧ್ರಪ್ರದೇಶದ STBC ಕಾಲೇಜಿನಲ್ಲಿ ಬಿ. ಕಾಂ ಪದವಿ ಪಡೆದವರು.

“ನನ್ನ ಪದವಿ ಶಿಕ್ಷಣದ ಮೂರು ವರ್ಷಗಳು ಸುಲಭವಾಗಿರಲಿಲ್ಲ. ಆಹಾರ ಮತ್ತು ಕೊಠಡಿ ಬಾಡಿಗೆಗೆ ಹಣ ಹೊಂದಿಸುವುದು ದೊಡ್ಡ ಸವಾಲಾಗಿತ್ತು. ಆದ್ದರಿಂದ ನಾನು ಮೂರು ವರ್ಷಗಳ ಕಾಲ ಉಪಾಹಾರ ಸೇವಿಸುವುದನ್ನೇ ಬಿಟ್ಟಿದ್ದೆ. ನನ್ನ ಪದವಿ ಮುಗಿದ ನಂತರ ನನ್ನ ಆಧ್ಯಾತ್ಮಿಕ ಗುರು ಫಾದರ್ ಆಲ್ಬರ್ಟ್ ವೇಗಾಸ್ ನನ್ನ ಬದುಕಿನ ಪ್ರಮುಖ ನಿರ್ಧಾರ ಕೈಗೊಳ್ಳಲು ನನಗೆ ಪ್ರೋತ್ಸಾಹ ನೀಡಿದರು. ನಾನು ಈಗ ಇರುವುದು ನನ್ನ ಅಧ್ಯಯನ ಮತ್ತು ಶಿಕ್ಷಣಕ್ಕೆ ಸಾಕಷ್ಟು ಹಣವಿಲ್ಲದಿದ್ದಾಗ ನನಗೆ ಸಹಾಯ ಮಾಡಿದ ಅನೇಕ ಮಿಷನರಿಗಳ ಸಹಾಯದಿಂದಾಗಿ. ಆದ್ದರಿಂದ, ಬಡವರಿಗೆ ಸೇವೆ ಸಲ್ಲಿಸಲು ನಾನು ಅವರಂತೆ ಪಾದ್ರಿಯಾಗಲು ಬಯಸಿದೆ” ಎನ್ನುವ ಪೂಲಾ ಅವರು ಕಡಪ (ಕಡಪ್ಪ) ಮೈನರ್ ಸೆಮಿನರಿಯಲ್ಲಿ ಡಯೋಸಿಸನ್ ಸೆಮಿನರಿ ವಿದ್ಯಾರ್ಥಿಯಾಗಿದ್ದವರು.

ಪೂಲಾ ಅಧ್ಯಯನದ ನಂತರ 1992ರ ಫೆಬ್ರವರಿ 20ರಂದು ಪಾದ್ರಿಯಾಗಿ ನೇಮಕಗೊಂಡರು. ಕಾರ್ಡಿನಲ್ ಹುದ್ದೆಗೆ ಏರುವ ಮುನ್ನ ಪೂಲಾ ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ, ವಿಶೇಷವಾಗಿ ಕ್ರಿಶ್ಚಿಯನ್ ಫೌಂಡೇಶನ್ ಫಾರ್ ಚಿಲ್ಡ್ರನ್ ಅಂಡ್ ಏಜಿಂಗ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಸಂಸ್ಥೆ ಮೂಲಕ ಮಕ್ಕಳು ಮತ್ತು ವೃದ್ಧರಿಗೆ, ವಿಶೇಷವಾಗಿ ಬಡವರಿಗೆ ಸಹಾಯ ಮಾಡಿದವರು ಪೂಲಾ.

ಪೂಲಾ 1992ರಿಂದ 1993ರವರೆಗೆ ಸೇಂಟ್ ಮೇರಿಸ್ ಕ್ಯಾಥೆಡ್ರಲ್‌ನ ಪ್ಯಾರಿಷ್ ವಿಕಾರ್ ಆಗಿದ್ದರು. 1993ರಿಂದ 1994ರವರೆಗೆ ಅಮಗಂಪಲ್ಲಿಯಲ್ಲಿ ಪ್ಯಾರಿಷ್ ವಿಕಾರ್ ಆಗಿದ್ದರು. 1994ರಿಂದ 1995ರವರೆಗೆ ಟೆಕುರ್ಪೇಟೆಯಲ್ಲಿ ಪಾದ್ರಿಯಾಗಿದ್ದರು. 1995ರಿಂದ 2000ರವರೆಗೆ ಬದ್ವೇಲ್‌ನಲ್ಲಿ ಪಾದ್ರಿಯಾಗಿದ್ದರು. 2000ರಿಂದ 2001ರವರೆಗೆ ವೀರಪಲ್ಲಿಯಲ್ಲಿ ಪಾದ್ರಿಯಾಗಿದ್ದರು.

ಈ ನಡುವೆ health pastoral care ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾರೆ. ಚಿಕಾಗೋದ ಲೊಯೊಲಾ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರದಲ್ಲಿ (Theology) ಕೋರ್ಸ್‌ಗಳನ್ನು ಮಾಡಿದ್ದಾರೆ. ಚಿಕಾಗೋದ ಆರ್ಚ್‌ಡಯೋಸಿಸ್‌ನಲ್ಲಿರುವ ಸೇಂಟ್ ಜಿನೀವೀವ್ ಚರ್ಚ್‌ನಲ್ಲಿಯೂ ಕೆಲಸ ಮಾಡಿದ ಅನುಭವ ಪೂಲಾ ಅವರಿಗಿದೆ. ಕಡಪ ಡಯಾಸಿಸ್‌ಗೆ ಹಿಂದಿರುಗಿದ ಪೂಲಾ, 2004ರಿಂದ 2008ರವರೆಗೆ ಮಕ್ಕಳು ಮತ್ತು ವೃದ್ಧರಿಗಾಗಿ ಇರುವ ಕ್ರಿಶ್ಚಿಯನ್ ಫೌಂಡೇಶನ್‌ನ ನಿರ್ದೇಶಕರಾಗಿದ್ದರು. ಹಾಗೆಯೇ ಡಯೋಸಿಸನ್ ಸಲಹೆಗಾರ, ಶಿಕ್ಷಣ ಕಾರ್ಯದರ್ಶಿ, ಡಯೋಸಿಸನ್ ಶಾಲೆಗಳ ಉಪ ಆಡಳಿತಾಧಿಕಾರಿ ಮತ್ತು ಪ್ರಾಯೋಜಕತ್ವ ಕಾರ್ಯಕ್ರಮದ ಸಂಯೋಜಕರಾಗಿದ್ದರು.

2008ರ ಫೆಬ್ರವರಿಯಲ್ಲಿ ಪೋಪ್ ಬೆನೆಡಿಕ್ಟ್ XVI, ಪೂಲಾ ಅವರನ್ನು ಕರ್ನೂಲ್ ಬಿಷಪ್ ಆಗಿ ನೇಮಿಸಿದರು. 2020ರ ನವೆಂಬರ್‌ನಲ್ಲಿ ದಿವಂಗತ ಪೋಪ್ ಫ್ರಾನ್ಸಿಸ್ ಅವರು ಹೈದರಾಬಾದ್‌ನ ಆರ್ಚ್‌ಬಿಷಪ್ ಆಗಿ ನೇಮಿಸಿದರು. ಹಾಗೆಯೇ 2021ರ ಜನವರಿ 3ರಿಂದ ಆರ್ಚ್‌ಬಿಷಪ್ ಆಗಿ ಸೇವೆ ಸಲ್ಲಿಸಲು ಆರಂಭಿಸಿದರು. 2022ರ ಆಗಸ್ಟ್ 27ರಂದು ಪೂಲಾ ಅವರನ್ನು ಪೋಪ್ ಫ್ರಾನ್ಸಿಸ್ ಕಾರ್ಡಿನಲ್ ಪಾದ್ರಿಯನ್ನಾಗಿ ನೇಮಿಸಿದರು. ಇದೀಗ ಸಿಬಿಸಿಐ ಮೊದಲ ದಲಿತ ಅಧ್ಯಕ್ಷರಾಗಿದ್ದಾರೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...