ಕೊಲ್ಹಾರ | ಮಳೆಗೆ ನೆಲಕಚ್ಚಿದ ಬಾಳೆ: ಪರಿಹಾರಕ್ಕೆ ರೈತರ ಆಗ್ರಹ

Date:

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಬಿರುಸಿನ ಮಳೆ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದು ಮುದ ನೀಡಿದರೆ ಇತ್ತ ಬಾಳೆ ಬೆಳೆದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದು ಕಟಾವಿನ ಹಂತಕ್ಕೆ ಬಂದಿದ್ದ ನೂರಾರು ಎಕರೆಯಷ್ಟು ಬಾಳೆ ಬೆಳೆ ಇನ್ನೇನು ರೈತರ ಕೈ ಸೇರಬೇಕು ಎನ್ನುವಷ್ಟರಲ್ಲಿ ಮಣ್ಣು ಪಾಲಾಗಿದೆ.

ತಾಲ್ಲೂಕಿನ ಮಸೂತಿ ಗ್ರಾಮ ಸೇರಿದಂತೆ ಅತಿ ಹೆಚ್ಚು ಬಾಳೆ ಬೆಳೆಯುವ ಹೊಳೆ ಸಾಲು ಭಾಗದ ಕುಬಕಡ್ಡಿ, ದೇವಾಪುರ, ದೇವರಗೆಣ್ಣೂರು ಭಾಗಗಳಲ್ಲಿ ಹತ್ತಾರು ಎಕರೆಯಷ್ಟು ಬಾಳೆ ಬೆಳೆ ಹಾನಿಗೊಳಗಾಗಿದೆ. ಮಸೂತಿ ಗ್ರಾಮದಲ್ಲಿ ಬಾಳೆ ಬೆಳೆದ ರೈತ ಮಂಜುನಾಥ ಚನಗೊಂಡ ಅವರ ಎರಡು ಎಕರೆ, ಶ್ರೀಶೈಲ ಹಂಗರಗಿ, ಈರಣ್ಣ ಗಿಡ್ಡಪ್ಪಗೋಳ ಅವರ ಮೂರು ಎಕರೆ, ಚೆನ್ನಪ್ಪ ಬಿಸ್ನಗೊಂಡ ಅವರ ಒಂದು ಎಕರೆ, ಕಲ್ಲೇಶ ಬಾಗಾನರ ಹಾಗೂ ಇನ್ನೂ ಹಲವು ರೈತರ ಹತ್ತಾರು ಎಕರೆ ಬಾಳೆ ನೆಲಕಚ್ಚಿದೆ.

- Advertisement -

ಬಾಳೆ ಬೆಳೆಗಾರರಾದ ಮಂಜು ಚನಗೊಂಡ, ಶ್ರೀಶೈಲ ಹಂಗರಗಿ ಮಾತನಾಡಿ, “ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗಾಳಿಗೆ ಸುಮಾರು 3 ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ಹಾನಿಯಾಗಿ ನೆಲಕ್ಕುರುಳಿವೆ. ವರ್ಷಪೂರ್ತಿ ಕಷ್ಟಪಟ್ಟು, ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದಿದ್ದ ಬಾಳೆ ಗಿಡಗಳು ಕಟಾವಿಗೆ ಬಂದಿದ್ದವು. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಬೆಳೆ ಬಂದಿತ್ತು. ಅಲ್ಲದೇ ಉತ್ತಮ ಬೆಲೆಗೆ ಖರೀದಿಯಾಗುವ ಭರವಸೆಯಿತ್ತು ಆದರೆ, ಫಸಲು ಕೈ ಸೇರುವಷ್ಟರಲ್ಲೇ ಬಿರುಗಾಳಿ ಮಳೆಯ ಹೊಡೆತಕ್ಕೆ ಸಿಕ್ಕಿ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬೆಳೆನಷ್ಟದಿಂದ ಮುಂದೇನು ಮಾಡಬೇಕು ಎಂದು ದಿಕ್ಕು ತೋಚದಾಗಿದೆ” ಎಂದು ಸಂಕಟ ತೋಡಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕುಬಕಡ್ಡಿ ಗ್ರಾಮದ ಪ್ರಗತಿಪರ ರೈತ ಈರಪ್ಪ ಹಳ್ಳಿ ಮಾತನಾಡಿ, “ಹೊಳೆ ಸಾಲು ಭಾಗದಲ್ಲಿ ಸಾವಯವ ಪದ್ಧತಿಯಲ್ಲಿ ಉತ್ತಮ ಗುಣಮಟ್ಟದ ಬಾಳೆ ಬೆಳೆಯುತ್ತೇವೆ. ಅಕಾಲಿಕ ಮಳೆಗಾಳಿಗೆ ನನ್ನ ಮೂರು ಎಕರೆಯಷ್ಟು ಬಾಳೆ ಹಾನಿಯಾಗಿದೆ. ಬಾಳೆ ಬೆಳೆಯಲು ಎಕರೆಗೆ ಸುಮಾರು 1.5 ಲಕ್ಷ ಖರ್ಚಾಗಿದೆ. ಕಳೆದ ವರ್ಷವೂ ಅಕಾಲಿಕ ಮಳೆಯಿಂದ ಬಾಳೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಕೋವಿಡ್ ಸಂದರ್ಭದಿಂದಲೂ ಬಾಳೆ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗಲಿಲ್ಲ. ಈ ಬಾರಿ ಬಾಳೆಗೆ ಉತ್ತಮ ದರವಿದ್ದರೂ ಮಳೆಗೆ ಬಾಳೆ ಬೆಳೆ ಸಂಪೂರ್ಣ ಬಲಿಯಾಗಿದೆ. ಸಾವಯವದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಖರೀದಿ ಕೇಂದ್ರಗಳಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಕೂಡಲೆ ಸರ್ಕಾರ ಬಾಳೆ ಬೆಳೆಗಾರಿರಿಗಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ ರೈತರ ಬೆನ್ನಿಗೆ ನಿಲ್ಲಬೇಕು” ಎಂದು ಒತ್ತಾಯಿಸಿದರು.

ಬಸವನಬಾಗೇವಾಡಿ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಬಿ ಪಾಟೀಲ ಮಾತನಾಡಿ, “ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಜಂಟಿಯಾಗಿ ಅಕಾಲಿಕ ಮಳೆಗಾಳಿಗೆ ಹಾನಿಯಾದ ಬೆಳೆಗಳ ಸರ್ವೆ ಕಾರ್ಯ ಕೈಗೊಂಡಿದ್ದೇವೆ. 2-3 ದಿನಗಳಲ್ಲಿ ತಹಶೀಲ್ದಾರರಿಗೆ ಬೆಳೆಹಾನಿ ವರದಿ ಸಲ್ಲಿಸುತ್ತೇವೆ” ಎಂದರು.

ಇದನ್ನೂ ಓದಿ> ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ

“ಬೆಳೆನಷ್ಟದಿಂದ ಕಂಗಾಲಾಗಿರುವ ರೈತರ ನೋವಿಗೆ ಸರ್ಕಾರ ಸ್ಪಂದಿಸಿ, ಶೀಘ್ರದಲ್ಲೇ ಸಮರ್ಪಕ ಪರಿಹಾರ ಘೋಷಿಸುವ ಮೂಲಕ ಅವರ ಬೆನ್ನಿಗೆ ನಿಲ್ಲಬೇಕು. ರೈತರು ಮತ್ತೆ ಆತ್ಮವಿಶ್ವಾಸದಿಂದ ಕೃಷಿ ಚಟುವಟಿಕೆ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲುಸೊನ್ನದ ಒತ್ತಾಯಿಸಿದರು.

ಇಂಡಿ ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಬೀಸಿದ ಭಾರೀ ಬಿರುಗಾಳಿ ರೈತರಿಗೆ ಅಪಾರ ನಷ್ಟ ಉಂಟುಮಾಡಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಗಾಳಿಯ ತೀವ್ರತೆಗೆ ಹಲವೆಡೆ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಸಾಲೋಟಗಿ ಗ್ರಾಮದಿಂದ ಸಾತಪೂರವರೆಗೆ ವಿವಿಧ ರೈತರ ತೋಟಗಳಲ್ಲಿ ಒಟ್ಟು ಸುಮಾರು 10 ಎಕರೆ ವ್ಯಾಪ್ತಿಯ ನಿಂಬೆ ತೋಟಗಳು ನೆಲಕ್ಕುರುಳಿದ್ದು, ನಾಲ್ಕು ಎಕರೆ ಪ್ರದೇಶದಲ್ಲಿದ್ದ ಬಾಳೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದಲ್ಲದೆ, ತಾಲ್ಲೂಕಿನ ಅನೇಕ ಭಾಗಗಳಲ್ಲಿ ನೂರಾರು ಗಿಡಗಳು ಗಾಳಿಯ ಹೊಡೆತಕ್ಕೆ ನೆಲಸಮವಾಗಿವೆ.

ಸಾತಪುರ ಗ್ರಾಮದ ತುಕಾರಾಮ ಶಾಂತಪ್ಪ ವಾಲಿಕಾರ ಅವರ ಹೊಲದಲ್ಲಿ ಗಾಳಿ ರಭಸಕ್ಕೆ ಕಬ್ಬು, ನಿಂಬೆಗಿಡ, ಸಾಗವಾನಿ ಮರ, ಬೇವಿನ ಮರ. ಮಾವಿನ ಮರ,ವಿದ್ಯುತ್ ಕಂಬ ಕೃಷಿ ಹೊಂಡಕ್ಕೆ ಹಾಕಿದ ತಂತಿ ಧರೆಗೆ ಉರಳಿವೆ ಎಂದು ವರದಿಯಾಗಿದೆ.

“ಸಾತಪೂರ ಗ್ರಾಮದ ಜಟ್ಟೆಪ್ಪ ಸೋಮಣ್ಣರೂಗಿ ಅವರ ಹೊಲದಲ್ಲಿ ನಿಂಬೆ ಗಿಡಗಳು ಧರೆಗೆ ಉರುಳಿವೆ, ತಾಲ್ಲೂಕಿನಲ್ಲಿ ಹಲವೆಡೆ ನಿಂಬೆ, ಕಬ್ಬು, ಬಾಳೆ, ದಾಳಿಂಬೆ ಇನ್ನಿತರ ಬೆಳೆಗಳು ಹಾನಿಗೊಳಗಾಗಿದ್ದು, ಒಟ್ಟು ಹಾನಿಯ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇವೆ” ಎಂದು ಇಂಡಿ ತೋಟಕಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್ ಪಾಟೀಲ ತಿಳಿಸಿದ್ದಾರೆ.

ಈ ಬಾರಿ ಸುರಿದ ಮಳೆ ಧರೆಗೆ ತಂಪೆರೆದು ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ಜನರು ಮತ್ತು ರೈತರಿಗೆ ಸ್ವಲ್ಪ ನೆಮ್ಮದಿ ತಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನೀರಿನ ಕೊರತೆಯಿಂದ ಬಳಲುತ್ತಿದ್ದ ಪ್ರದೇಶಗಳಿಗೆ ಈ ಮಳೆ ಹೊಸ ಚೈತನ್ಯ ನೀಡಿದ್ದು, ಭೂಮಿಯಲ್ಲೂ ತೇವಾಂಶ ಹೆಚ್ಚುವಂತೆ ಮಾಡಿದೆ. ಆದರೆ ಇದೇ ಮಳೆ ಅನಾಹುತಕ್ಕೂ ಕಾರಣವಾಗಿದೆ. ಹೊಲಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳನ್ನು ಹಾನಿಗೊಳಪಡಿಸಿರುವುದು ರೈತರಲ್ಲಿ ತೀವ್ರ ಬೇಸರ ಮೂಡಿಸಿದೆ. ವರ್ಷಪೂರ್ತಿ ಶ್ರಮಪಟ್ಟು, ಹೆಚ್ಚಿನ ಹಣ ಹೂಡಿ ಬೆಳೆದ ಬೆಳೆಗಳು ಕಟಾವಿನ ಹಂತದಲ್ಲಿ ನಾಶವಾಗಿರುವುದು ರೈತರ ಸಂಕಷ್ಟವನ್ನು ದುಪ್ಪಟ್ಟಾಗಿಸಿದೆ. ಹೀಗಾಗಿ ಈ ಮಳೆ ಒಂದೆಡೆ ಸಂತಸ ತಂದಿದ್ದರೆ, ಮತ್ತೊಂದೆಡೆ ಅಪಾರ ನಷ್ಟದ ನೋವನ್ನು ಉಂಟುಮಾಡಿರುವುದು ದುಃಖಕರ.

ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ರಾಜ್ಯ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆ: ಅನ್ನಪೂರ್ಣ ಹೆಸರು ಮುನ್ನೆಲೆಗೆ!

ರಾಜ್ಯ ಸಚಿವ ಸಂಪುಟದಲ್ಲಿ ಸದ್ಯ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿದ್ದು,...