ಸಂಸತ್ತಿನಲ್ಲಿ ಸುಳ್ಳು ಹೇಳಿದ ಶಾ! ಸ್ಥಾನದ ಘನತೆ ಕಳೆದ ಗೃಹಸಚಿವ

Date:

ಅಮಿತ್ ಶಾ ಅವರು ಸಂಸತ್ತಿನಲ್ಲಿಯೇ ಇಂತಹ ಸುಳ್ಳುಗಳನ್ನು ಹೇಳಿರುವುದು ನಿಜಕ್ಕೂ ಪ್ರಜಾಫ್ರಭುತ್ವ ವ್ಯವಸ್ಥೆಗೆ ಮಾಡುವ ಅಪಮಾನ. ಹೀಗಾಗಿ, ಅಮಿತ್ ಶಾ ಅವರ ಆರೋಪಗಳನ್ನು ಕಾಂಗ್ರೆಸ್, ‘ಬಂಡಲ್ ಆಫ್ ಲೈಸ್’ ಎಂದು ಕರೆದಿದೆ. ರಾಹುಲ್ ಗಾಂಧಿ ಅವರು ಶಾ ಅವರನ್ನು ‘ನರ್ವಸ್’ ಎಂದು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ವಿಷಯಗಳಲ್ಲಿ ‘ವೋಟ್ ಚೋರಿ’ಯೂ ಒಂದು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಳೆದೊಂದು ವರ್ಷದಿಂದ ‘ಮತ ಕಳವು’ ವಿಚಾರವಾಗಿ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಲ್ಲಿ ಮತಕಳವಿಗೆ ಯತ್ನಗಳು ನಡೆದಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದೀಗ, ರಾಹುಲ್ ಗಾಂಧಿ ಅವರ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತ್ಯಾರೋಪ ಮಾಡಿದ್ದು, ಸಂಸತ್ತಿನಲ್ಲೇ ಹಸಿ – ಹಸೀ ಸುಳ್ಳು ಹೇಳಿದ್ದಾರೆ.

- Advertisement -

ಡಿಸೆಂಬರ್ 10ರಂದು ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ಕಾಂಗ್ರೆಸ್ ಪಕ್ಷವು ಮೂರು ಬಾರಿ ವೋಟ್ ಚೋರಿ ಮಾಡಿದೆ” ಎಂದು ಆರೋಪಿಸಿದ್ದಾರೆ. ಅಮಿತ್ ಶಾ ಅವರು ನೆಹರು – ಗಾಂಧಿ ಕುಟುಂಬದ ಮೂರು ನಿರ್ದಿಷ್ಟ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಅವರ ಹೇಳಿಕೆಗಳು ಹೀಗಿವೆ; ಮೊದಲನೆಯದು ಜವಾಹರಲಾಲ್ ನೆಹರು ವಿರುದ್ಧ ಆರೋಪ: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು 28 ವೋಟ್ ಪಡೆದಿದ್ದರು. ಆದರೆ, ನೆಹರು ಕೇವಲ 2 ವೋಟ್ ಪಡೆದರೂ ಕೂಡ ಪ್ರಧಾನಿ ಆದರು. ಇದು ಕೂಡ ‘ವೋಟ್ ಚೋರಿ’ ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಎರಡನೆಯದು: ಇಂದಿರಾ ಗಾಂಧಿ ವಿರುದ್ಧದ ಆರೋಪ: 1975ರಲ್ಲಿ ಅಲಹಾಬಾದ್ ಹೈಕೋರ್ಟ್ ಇಂದಿರಾ ಅವರ ಚುನಾವಣಾ ಗೆಲುವನ್ನುಅಮಾನ್ಯಗೊಳಿಸಿತು. ಆದರೆ, ಅವರು ತಮಗೆ ಇಮ್ಯುನಿಟಿ ನೀಡಿ, ನ್ಯಾಯಾಧೀಶರನ್ನು ಬದಲಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದರು. ಇದು ಮತ್ತೊಂದು ‘ವೋಟ್ ಚೋರಿ’ ಎಂದು ಅಮಿತ್ ಶಾ ದೂರಿದ್ದಾರೆ.

ಮೂರನೆಯದು: ಸೋನಿಯಾ ಗಾಂಧಿ ವಿರುದ್ಧ ಆರೋಪ: ಸೋನಿಯಾ ಅವರು ಭಾರತೀಯ ನಾಗರಿಕತ್ವ ಪಡೆಯುವ ಮುಂಚೆಯೇ ಮತದಾರರಾಗಿ ನೋಂದಾಯಿಸಿಕೊಂಡರು ಎಂದು ದೆಹಲಿ ನ್ಯಾಯಾಲಯದಲ್ಲಿರುವ ಆರೋಪವನ್ನು ಅಮಿತ್ ಶಾ ಉಲ್ಲೇಖಿಸಿದ್ದಾರೆ. ಇದು ಮೂರನೇ ವೋಟ್ ಚೋರಿ ಎಂದು ಆರೋಪಿಸಿದ್ದಾರೆ.

images 28

ಈ ಆರೋಪಗಳನ್ನು ಕಾಂಗ್ರೆಸ್ ಸಂಸದರು ಖಂಡಿಸಿದ್ದಾರೆ. ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರಿಗೆ ಚರ್ಚೆಗೆ ಬರುವಂತೆ ಚಾಲೆಂಜ್ ಮಾಡಿದ್ದಾರೆ.

ರಾಜಕೀಯ ಚರ್ಚೆಗಳು ಏನೇ ಇರಲಿ, ಅಮಿತ್ ಶಾ ಮಾಡಿರುವ ಆರೋಪಗಳು ಎಷ್ಟು ಸತ್ಯ. ಅವರ ಆರೋಪಗಳಲ್ಲಿರುವ ಸುಳ್ಳುಗಳೆಷ್ಟು ಎಂಬುದನ್ನು ಪರಿಶೀಲಿಸೋಣ.

ಮೊದಲಿಗೆ, ನೆಹರು ಮತ್ತು ಪಟೇಲ್ ಕುರಿತಾದ ಆರೋಪವನ್ನು ನೋಡೋಣ. ಸ್ವಾತಂತ್ರ್ಯ ನಂತರ ಪ್ರಧಾನಿ ಆಯ್ಕೆಯಲ್ಲಿ ಪಟೇಲ್ 28 ವೋಟ್ ಪಡೆದರೂ 2 ಮತ ಪಡೆದಿದ್ದ ನೆಹರು ಪ್ರಧಾನಿ ಆದರು ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಆದರೆ, ಅವರ ಈ ಆರೋಪ ಸಂಪೂರ್ಣ ಸುಳ್ಳು.

1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತೇ ಹೊರತು, ಪ್ರಧಾನಿ ಆಯ್ಕೆಗಾಗಿ ಅಲ್ಲ. ಆ ಚುನಾವಣೆಯಲ್ಲಿ ಮತ ಚಲಾಯಿಸಿದ್ದ 15 ಪ್ರಾಂತೀಯ ಕಾಂಗ್ರೆಸ್ ಕಮಿಟಿಗಳ (PCC) ನಾಮನಿರ್ದೇಶಿತರಲ್ಲಿ 12 ಕಮಿಟಿಗಳು ಪಟೇಲ್ ಅವರನ್ನು ಸೂಚಿಸಿದ್ದವು. ನೆಹರುಗೆ 0 ಮತಗಳು ಬಂದಿದ್ದವು. ಆದರೆ, ಪಕ್ಷದಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಮಹಾತ್ಮ ಗಾಂಧಿ ಅವರು ಪಟೇಲ್ ಅವರಿಗೆ ಹಿಂದೆ ಸರಿಯುವಂತೆ ಕೇಳಿದ್ದರು. ಗಾಂಧಿ ಅವರ ಮಾತಿಗೆ ಮನ್ನಣೆ ಕೊಟ್ಟು, ಪಟೇಲ್ ಅವರು ಸ್ವ-ಇಚ್ಛೆಯಿಂದ ಹಿಂದೆ ಸರಿದರು. ನೆಹರು ಕಾಂಗ್ರೆಸ್ ಅಧ್ಯಕ್ಷರಾದರು.

ನಂತರ, 1947ರಲ್ಲಿ ಪ್ರಧಾನಿ ಆಯ್ಕೆಯು ಪಾರ್ಲಿಮೆಂಟರಿ ಪಾರ್ಟಿ ಮೂಲಕ ನಡೆಯಿತು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರು ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಗಾಂಧಿ ಅವರು ಪ್ರಸ್ತಾಪಿಸಿ, ಬೆಂಬಲಿಸಿದರು. ರಾಜಮೋಹನ್ ಗಾಂಧಿ ಅವರಂತಹ ಇತಿಹಾಸಕಾರರು ಹೇಳುವಂತೆ, ಇದೆಲ್ಲವೂ ಪ್ರಜಾತಾಂತ್ರಿಕವಾಗಿಯೇ ನಡೆದಿದೆ. ಇಲ್ಲಿ, ಯಾವುದೇ ವೋಟ್ ಚೋರಿಯೂ ಇಲ್ಲ.

ಎರಡನೆಯದಾಗಿ, ಅಲಹಾಬಾದ್ ಹೈಕೋರ್ಟ್ ಇಂದಿರಾ ಅವರ ಚುನಾವಣಾ ಗೆಲುವನ್ನು ಅಮಾನ್ಯಗೊಳಿಸಿತು. ಆದರೆ, ಅವರು ಎಮರ್ಜೆನ್ಸಿ ಘೋಷಿಸಿ ಕಾನೂನು ಬದಲಾಯಿಸಿ, ಪ್ರಧಾನಿ ಹುದ್ದೆ ಉಳಿಸಿಕೊಂಡರು ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇದು ಭಾಗಶಃ ಸತ್ಯವೇ ಆಗಿದ್ದರೂ, ಇದನ್ನು ವೋಟ್ ಚೋರಿ ಎನ್ನಲು ಸಾಧ್ಯವಿಲ್ಲ. ಅಂತಹ ಯಾವುದೇ ಪುರಾವೆಗಳೂ ಇಲ್ಲ. 1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಅವರ ರಾಯಬರೇಲಿ ಗೆಲುವನ್ನು ಚುನಾವಣಾ ದುರ್ನಡತೆ ಅಥವಾ ಸರ್ಕಾರಿ ಅಧಿಕಾರಿಗಳ ದುರ್ಬಳಕೆ ಆರೋಪದ ಮೇಲೆ ಅಮಾನ್ಯಗೊಳಿಸಿತು. 6 ವರ್ಷಗಳ ಕಾಲ ಚುನಾವಣಾ ಸ್ಪರ್ಧೆಯಿಂದ ದೂರ ಇಟ್ಟಿತು. ಇದಾದ ಬಳಿಕ, ಇಂದಿರಾ ಎಮರ್ಜೆನ್ಸಿ ಘೋಷಿಸಿದರು. ಪಾರ್ಲಿಮೆಂಟ್ ಕಾನೂನುಗಳಿಗೆ ತಿದ್ದುಪಡಿ ತಂದರು. ಈ ಬದಲಾವಣೆಗಳ ಆಧಾರದಲ್ಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಆದರೆ ಇದು ಚುನಾವಣಾ ಅಧಿಕಾರ ದುರ್ಬಳಕೆಯೇ ಹೊರತು, ನೇರ ‘ವೋಟ್ ಚೋರಿ’ಯಲ್ಲ. ಇಲ್ಲಿ, ಯಾವುದೇ ನಕಲಿ ಮತದಾನ, ವೋಟ್ ರಿಗ್ಗಿಂಗ್ ಅಥವಾ ಅಕ್ರಮವಾಗಿ ಮತ ಅಳಿಸುವಿಕೆಯಂತಹ ಯಾವುದೇ ಕೃತ್ಯಗಳು ನಡೆದಿಲ್ಲ.

ಈ ಸುದ್ದಿ ಓದಿದ್ದೀರಾ? ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ: ನಿತೀಶ್ ಕುಮಾರ್ ವಿಚಿತ್ರ ವರ್ತನೆ ಇದೇ ಮೊದಲಲ್ಲ!

ಮೂರನೆಯದಾಗಿ, ಸೋನಿಯಾ ಅವರು ಭಾರತದ ನಾಗರಿಕತ್ವ ಪಡೆಯುವ ಮುಂಚೆಯೇ ಮತದಾರರಾಗಿ ನೋಂದಣಿಯಾಗಿದ್ದರು ಎಂಬುದು.

images 30

ಇದೂ ಕೂಡ ಅಪ್ಪಟ ಸುಳ್ಳು ಆರೋಪ. ಸೋನಿಯಾ ಗಾಂಧಿ ಅವರು 1983ರಲ್ಲಿ ಭಾರತೀಯ ನಾಗರಿಕತ್ವ ಪಡೆದರು. ಆದರೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸೋನಿಯಾ ಅವರು 1980ರಲ್ಲಿಯೇ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 2011ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಆದರೆ, ಕೋರ್ಟ್ ಈ ಕೇಸ್ ಅನ್ನು 2013ರಲ್ಲಿ ರದ್ದುಗೊಳಿಸಿತ್ತು. ಸೋನಿಯಾ ಅವರು ನಾಗರಿಕತ್ವ ಪಡೆದ ನಂತರವೇ ಮತದಾರರಾಗಿ ನೋಂದಾಯಿಸಿಕೊಂಡಿದ್ದರು. ಹೀಗಾಗಿ, ಸುಬ್ರಮಣಿಯನ್ ಸ್ವಾಮಿ ಅವರ ಆರೋಪಗಳು ಸಾಕ್ಷ್ಯರಹಿತವೆಂದು ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿತ್ತು. ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಕೂಡ ಸೋನಿಯಾ ಗಾಂಧಿ ವಿರುದ್ಧದ ಆರೋಪ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ.

ಅಮಿತ್ ಶಾ ಅವರ ಈ ಆರೋಪವೂ ಸುಳ್ಳು ಎಂಬುದು ಸ್ಪಷ್ಟ. ಅಮಿತ್ ಶಾ ಅವರು ಸಂಸತ್ತಿನಲ್ಲಿಯೇ ಇಂತಹ ಸುಳ್ಳುಗಳನ್ನು ಹೇಳಿರುವುದು ನಿಜಕ್ಕೂ ಪ್ರಜಾಫ್ರಭುತ್ವ ವ್ಯವಸ್ಥೆಗೆ ಮಾಡುವ ಅಪಮಾನ. ಹೀಗಾಗಿ, ಅಮಿತ್ ಶಾ ಅವರ ಆರೋಪಗಳನ್ನು ಕಾಂಗ್ರೆಸ್, ‘ಬಂಡಲ್ ಆಫ್ ಲೈಸ್’ ಎಂದು ಕರೆದಿದೆ. ಶಾ ಅವರ ಭಾಷಣದಲ್ಲಿ ‘ನರ್ವಸ್’ ಆಗಿದ್ದರು ಎಂದು ರಾಹುಲ್ ಗಾಂಧಿ ಅವರು ವ್ಯಂಗ್ಯವಾಡಿದ್ದಾರೆ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...