ʼಶರಣರು ಶರಣಾರ್ಥಿ…ʼ- ಭಾರತೀಯ ಸಂಸ್ಕೃತಿಯ ಕೀರ್ತಿ

Date:

ಹನ್ನೆರಡನೆಯ ಶತಮಾನದವರೆಗೆ ಮೇಲ್ವರ್ಗದವರು ಹಾಗೂ ಶ್ರೀಮಂತರಿಗೆ ಸಲ್ಲಿಸಲಾಗುತ್ತಿದ್ದ ಕಡ್ಡಾಯ, ಔಪಚಾರಿಕ ಗೌರವದ ಆಚರಣೆಯಾಗಿದ್ದ ʼನಮಸ್ಕಾರʼ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನವನ್ನು ಬರೆದು, ಅದರ ಮೂಲ ಆಶಯವನ್ನೇ ಬದಲಾಯಿಸಿದ ಶ್ರೇಯ ಬಸವಣ್ಣನವರಿಗೆ ಸಲ್ಲುತ್ತದೆ.

- Advertisement -

ಕಳೆದ ಕೆಲವು ವರ್ಷಗಳಿಂದ ಬಲಪಂಥೀಯ ಫೇಸ್ಬುಕ್ ಪೇಜ್ ಮತ್ತು ಯು-ಟ್ಯೂಬ್ ಗಳು ನಾಯಿ ಕೊಡೆಯಂತೆ ಹಬ್ಬಿ ಜನತೆಗೆ ತಪ್ಪು ಸಂದೇಶಗಳನ್ನು, ಧರ್ಮಾಂಧತೆಯ ವಿಷವನ್ನು ಹರಡುತ್ತಿವೆ. ಅವು ಅನೇಕ ಜನ ಫೇಕ್ ಇತಿಹಾಸಕಾರಿಗೆ ಹಾಗೂ ಸನಾತನ ಬ್ರಾಹ್ಮಣ ಸಂಸ್ಕೃತಿಯ ವಿದ್ವಾಂಸರಿಗೆ ಸುಳ್ಳು ನಿರೂಪಣೆಗಳನ್ನು ಹರಡಲು ವೇದಿಕೆಯನ್ನು ಒದಗಿಸುತ್ತಿವೆ. ಈ ವಿದ್ವಾಂಸರ ಪಟ್ಟಿಯಲ್ಲಿ ಅನೇಕ ಜನ ಬ್ರಾಹ್ಮಣ ಸಂಸ್ಕೃತಿಯ ಮಹಿಳಾ ವಿದ್ವಾಂಸರಿದ್ದಾರೆ. ಈ ಬ್ರಾಹ್ಮಣ ʼವಿದ್ವಂಸಕರುʼ ಭಾರತೀಯ ಮೂಲ ಇತಿಹಾಸವನ್ನು ತಿರುಚುವುದರಲ್ಲಿ ನಿಸ್ಸಿಮರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಹಿಂದೊಮ್ಮೆ ಮಲೆಯಾಳಿ ಮೂಲದ ರಾಜಕಾರಣಿಯೊಬ್ಬರ ಮಾಲಿಕತ್ವದ ಕನ್ನಡ ಸುದ್ದಿ ವಾಹಿನಿಯಲ್ಲಿ “ಗೌತಮ ಬುದ್ಧನು ಉಪನಿಷತ್ತುಗಳ ಋಷಿ..” ಎನ್ನುವ ಹುಸಿ ನಿರೂಪಣೆ ಹರಡಿದ ಸಂಗತಿ ಬಹಳ ಜನಕ್ಕೆ ಗೊತ್ತಿಲ್ಲ. ಹೆಣ್ಣಿಗೆ ಕನಿಷ್ಠ ಧರ್ಮ ಸಂಸ್ಕಾರ ಮೊದಲುಗೊಂಡು ಯಾವುದೇ ಬಗೆಯ ಸ್ವಾತಂತ್ರ್ಯ ನೀಡದ ಸನಾತನ ಬ್ರಾಹ್ಮಣ ಧರ್ಮದ ಹೆಣ್ಣು ಮಕ್ಕಳು ಸ್ತ್ರೀ ಸಂವೇದನೆಯನ್ನೆ ಕಳೆದುಕೊಂಡು ಬ್ರಾಹ್ಮಣವಾದವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಸಂಗತಿ ಸ್ತ್ರೀ ಕುಲಕ್ಕೆ ಮಾಡುತ್ತಿರುವ ಘೋರ ದ್ರೋಹದ ಕ್ರೂರ ಹಾಗೂ ಲಜ್ಜೆಹೀನ ಮಾದರಿಯಾಗಿದೆ. ಸ್ತ್ರೀಯರಿಗೆ ಧಾರ್ಮಿಕ ಸಂಸ್ಕಾರದ ಹಕ್ಕನ್ನು ನಿರಾಕರಿಸಿದ ಕಾರಣದಿಂದ ಬಸವಣ್ಣನವರು ಬ್ರಾಹ್ಮಣ ಧರ್ಮವನ್ನು ಎಡಗಾಲಿನಿಂದ ಒದ್ದು ಹೊರಬಂದರು.

ಕೆಲವು ದಿನಗಳ ಹಿಂದೆ ಬಲಪಂಥಿಯ ವಿದ್ವಂಸಕ ವಿಚಾರಗಳಿಂದ ಪ್ರಭಾವಿತಳಾದ ಬ್ರಾಹ್ಮಣ ಸಂಸ್ಕೃತಿ ಚಿಂತಕಿಯೊಬ್ಬರು ನಾಡಿನ ಪತ್ರಿಕೆಯೊಂದರಲ್ಲಿ “ನಮಸ್ಕಾರ: ಭಾರತೀಯ ಸಾರ” ಎನ್ನುವ ಅಂಕಣವನ್ನು ಬರೆದಿದ್ದರು. ಇಡೀ ಲೇಖನ ಅನೇಕ ತಪ್ಪು ಸಂದೇಶಗಳನ್ನು ನೀಡುತ್ತಿತ್ತು ಮತ್ತು ಅದು ವಾಸ್ತವವನ್ನು ಮರೆಮಾಚುತ್ತಿತ್ತು. ಆಕೆಯ ಪ್ರಕಾರ “ನಮಸ್ಕಾರ” ಎನ್ನುವ ಪದವು ಇಡೀ ಭಾರತೀಯ ಸಂಸ್ಕೃತಿಯ ಸಾರ. ಮೂಲಭೂತವಾಗಿ ಇದು ಅತ್ಯಂತ ತಪ್ಪು ಸಂದೇಶವನ್ನು ರವಾನಿಸುವ ಶೀರ್ಷಿಕೆ. ನಮಸ್ಕಾರ ಯಾವತ್ತೂ ಇಡೀ ಬಹುಜನ ಭಾರತೀಯರಿಗೆ ಸೇರಿದ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ಬಹು ಹಿಂದಿನಿಂದ ನಮಸ್ಕಾರ ಪದವು ಅತ್ಯಂತ ಬಡವರು, ತುಳಿತಕ್ಕೊಳಗಾದವರು, ದಲಿತ, ದಮನಿತ, ಅಸ್ಪೃಶ್ಯರು ಸಮಾಜದಲ್ಲಿನ ಶ್ರೀಮಂತರು ಹಾಗು ಮೇಲ್ವರ್ಗದ ಗಣ್ಯರಿಗೆ ಕಡ್ಡಾಯವಾಗಿ ಸಲ್ಲಿಸುವ ಗೌರವದ ಭಾಗವಾಗಿ ಹುಟ್ಟಿಕೊಂಡಿದೆ ಹಾಗು ಅದರ ದೈನಂದಿನ ಆಚರಣೆಯನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕಾಲಕ್ರಮೇಣ ಅದು ಸಮಾನ ಧರ್ಮಿಯರು ಹಾಗು ಸಮಾನ ಅಂತಸ್ತು ಉಳ್ಳವರ ನಡುವಿನ ಉಭಯ ಕುಶಲೋಪರಿಯ ಪೀಠಿಕೆಯಾಗಿ ಬಳಸಲ್ಪಟ್ಟಿದೆ. ಕೆಳವರ್ಗದವರು ಹಾಗು ಬಡವರು ಮೇಲ್ವರ್ಗದವರು ಹಾಗು ಉಳ್ಳವರಿಗೆ ಕಡ್ಡಾಯವಾಗಿ ನಮಸ್ಕಾರ ಸಲ್ಲಿಸಿದಾಗ ಅದಕ್ಕೆ ಪ್ರತಿಯಾಗಿ ಆ ಕಡೆಯಿಂದ ಪ್ರತಿ ನಮಸ್ಕಾರ ಬರುವುದಿಲ್ಲ. ಇದು ಮೇಲ್ವರ್ಗದವರ ಮತ್ತು ಉಳ್ಳವರ ಅಂತಸ್ತಿನ ಗರ್ವದ ಸಂಕೇತವಾಗಿತ್ತು ಎನ್ನುವುದನ್ನು ಆ ಲೇಖಕಿ ಪ್ರಜ್ಞಾಪೂರ್ವಕವಾಗಿ ಮರೆಮಾಚಿದ್ದು ಎದ್ದು ಕಾಣುತ್ತಿತ್ತು.

ಹನ್ನೆರಡನೆಯ ಶತಮಾನದವರೆಗೆ ಮೇಲ್ವರ್ಗದವರು ಹಾಗು ಶ್ರೀಮಂತರಿಗೆ ಸಲ್ಲಿಸಲಾಗುತ್ತಿದ್ದ ಕಡ್ಡಾಯ ಹಾಗು ಔಪಚಾರಿಕ ಗೌರವದ ಆಚರಣೆಯಾಗಿದ್ದ ನಮಸ್ಕಾರ ಎನ್ನುವ ಪದಕ್ಕೆ ಹೊಸ ವ್ಯಾಖ್ಯಾನವನ್ನು ಬರೆದು ಅದರ ಮೂಲ ಆಶಯವನ್ನೇ ಬದಲಾಯಿಸಿದ ಶ್ರೇಯ ಬಸವಣ್ಣನವರಿಗೆ ಸಲ್ಲುತ್ತದೆ. ತಮ್ಮ ಮನೆಗೆ ಬಂದ ಲಿಂಗಾಯತ ಚಳವಳಿಯ ನಾಯಕ, ಕಳಚೂರಿ ಸಾಮ್ರಾಜ್ಯದ ಪ್ರಧಾನ‌ಮಂತ್ರಿ ಬಸವಣ್ಣನವರು ಹೊರಡುವಾಗ “ಶರಣು ಬಸವರಸರೆ” ಎಂದು ಸಮಗಾರ ಹರಳಯ್ಯನವರು ವಂದಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಬಸವಣ್ಣನವರು ವಿನಮ್ರವಾಗಿ “ಶರಣು ಶರಣಾರ್ಥಿಗಳು ಹರಳಯ್ಯನವರೆ” ಎಂದು ವಿನಮ್ರವಾಗಿ ಸಂಬೋಧಿಸುತ್ತಾರೆ. ಇದು ಸನಾತನ ಬ್ರಾಹ್ಮಣ ಸಂಸ್ಕೃತಿಯ ನಮಸ್ಕಾರ ಮಾದರಿಯ ಕ್ರೌರ್ಯ ಹಾಗು ದರ್ಪದ ಮೂಲ ಆಶಯವನ್ನು ಬುಡಮೇಲು ಮಾಡಿದ ಐತಿಹಾಸಿಕ ಪ್ರಸಂಗ. ಬಹುಶಃ ಭಾರತೀಯ ಇತಿಹಾಸದಲ್ಲಿ ಅಸ್ಪೃಶ್ಯನೊಬ್ಬನಿಗೆ ಮೇಲ್ವರ್ಗದ ಮಹಾಮಂತ್ರಿ ಪ್ರತಿ ಗೌರವ ನೀಡಿದ ಮೊದಲ ಪ್ರಸಂಗ ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಮಾತ್ರವಲ್ಲದೆ ಈ ಪ್ರಸಂಗವು ಭಾರತೀಯ ಸಮಾಜದಲ್ಲಿ ಒಂದು ಹೊಸ ಮನ್ವಂತರವನ್ನು ಸೃಷ್ಟಿಸಿದ ಕಾರಣ ಸನಾತನಿಗಳು ಈ ಉನ್ನತ ಪರಂಪರೆಯನ್ನು ನಾಶಗೊಳಿಸಲು ರಕ್ತಪಾತಕ್ಕೆ ಇಳಿದಿದ್ದು ನಾವು ಬಲ್ಲೆವು. ಶತಮಾನಗಳ ಏಕಮುಖ ನಮಸ್ಕಾರ ವ್ಯವಸ್ಥೆಯ ಸ್ಥಾಪಿತ ವೈದಿಕ ಮೌಲ್ಯವನ್ನು ಬಸವಣ್ಣನವರು ಹುಟ್ಟುಹಾಕಿ, ಪ್ರಯೋಗಿಸಿದ ‘ಶರಣು ಶರಣಾರ್ಥಿ’ ಪದ ಹೊಡೆದುರುಳಿಸಿದ ಅಪರೂಪದ ಪ್ರಸಂಗವಿದು.

ಒಬ್ಬ ರಾಜ ಹಾಗು ಸಾಮಾನ್ಯ ಪ್ರಜೆ, ಒಬ್ಬ ಜಗದ್ಗುರು ಹಾಗೂ ಸಾಮಾನ್ಯ ಭಕ್ತ ಎದುರುಗೊಂಡರೆ ಪರಸ್ಪರ ತಲೆಬಾಗಿ, ಕೈಮುಗಿದು ಶರಣು ಶರಣಾರ್ಥಿ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಶರಣ ಸಂಸ್ಕೃತಿಯು ಸನಾತನ ಬ್ರಾಹ್ಮಣ್ಯದ ಊಳಿಗಮಾನ ವ್ಯವಸ್ಥೆಯ ದೈಹಿಕ ಹಾಗು ಮಾನಸಿಕ ಗುಲಾಮಗಿರಿಯಿಂದ ಬಹುಜನ ಭಾರತೀಯರನ್ನು ಬಿಡುಗಡೆಗೊಳಿಸಿತು. ಶರಣು ಶರಣಾರ್ಥಿ! ಇದು ಭಾರತೀಯ ಮೂಲ ಸಂಸ್ಕೃತಿಗೆ ಶರಣರು ನೀಡಿದ ಅನನ್ಯ ಕಾಣಿಕೆ. ಶರಣು ಎಂದರೆ ಎದುರುಗೊಂಡವರಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಶರಣು ಹೋಗುವುದು ಎಂದರ್ಥ. ಹಾಗೆ ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರು ಪರಸ್ಪರ ಶರಣಾಗತರಾಗಿ ಬದುಕುವುದು ಎಂದರೆ, ಅದು ವೈದಿಕ ಪ್ರಣೀತ ಏಕಮುಖ ನಮಸ್ಕಾರ ಹುಟ್ಟುಹಾಕಿದ ಊಳಿಗಮಾನ ವ್ಯವಸ್ಥೆಯನ್ನು ದಿಕ್ಕರಿಸಿದಂತೆಯೆ. ಶರಣಾಗತ ಆಗುವುದು ಎಂದರೆ ಒಬ್ಬರು ಮತ್ತೊಬ್ಬರ ಕಾಲು ಮುಗಿಯುವ ಮೂಲಕ ತಮ್ಮ ಕೊರಳಲ್ಲಿ ಕಟ್ಟಿದ ತನ್ನ ಅರಿವಿನ ಕುರುಹಾದ ಇಷ್ಟಲಿಂಗವನ್ನು ಮತ್ತೊಬ್ಬರ ಪಾದಕ್ಕೆ ಹಾಕುವುದಲ್ಲ. ಹಾಗೆ ಮಾಡಿದರೆ ಅದು ಆ ಸೃಷ್ಟಿ ಚೈತನ್ಯಾತ್ಮಕ ಶಕ್ತಿ, ಆ ಮೂಲ ಪರವಸ್ತುವನ್ನು ಅವಮಾನಿಸಿದಂತೆ. ಹಾಗಾಗಿ ಕಾಲಿಗೆ ಎರಗುಗುವುದು ದಾಸ್ಯದ ಸಂಕೇತವಾಗಿದೆ. ಇಷ್ಟಲಿಂಗ ಅನುಸಂಧಾನದ ಮೂಲಕ ನಮ್ಮೊಳಗಿನ ಎಲ್ಲಾ ಬಗೆಯ ದೌರ್ಬಲ್ಯಗಳನ್ನು, ಹಾಗು ಋಣಾತ್ಮಕ ಅಂಶಗಳನ್ನು ಕಳೆದುಕೊಂಡು ನಾವೇ ಸ್ವತಃ ದೇವರಾಗುವ, ಆ ಪರವಸ್ತು, ಅಥವಾ ಮೂಲ ವಸ್ತುವಿನ ಅಂಶವಾಗುವ ಪ್ರಕ್ರಿಯೆಯೇ ಲಿಂಗಾಯತ ಮಹಾ ಮಾರ್ಗ. ಹಾಗಾಗಿ ನಾವು ದೇವರನ್ನು ಇನ್ನೆಲ್ಲೋ ಹೊರಗೆ ಹುಡುಕುವುದು ಅಥವಾ ಅನ್ಯರ ಕಾಲಿಗೆರಗುವುದು ಅಗತ್ಯವಿಲ್ಲ.

ಅದಕ್ಕಾಗಿಯೇ ಶರಣರು “ನಿನ್ನ ಬಿಟ್ಟು ಅನ್ಯ ದೇವರುಂಟೆ?” “ನಿನ್ನ ನೀನು ತಿಳಿದರೆ ನೀನೇ ದೇವ ನೋಡಾ”, ಎನ್ನುತ್ತಾರೆ. ವೈದಿಕ ಪ್ರಣೀತ ‘ನಮಸ್ಕಾರವು’ ಮಾನವರೊಳಗೆ ತಾರತಮ್ಯ ಮಾಡಿದರೆ ಶರಣರು ಕರುಣಿಸಿದ ‘ಶರಣು ಶರಣಾರ್ಥಿಯು’ ಮಾನವನನ್ನು ದೈವತ್ವಕ್ಕೆ ಏರಿಸಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ಮಹಾ ಮಂತ್ರವಾಗಿದೆ. ಏಕಮುಖ ನಮಸ್ಕಾರದ ಹಿಂದೆ ಅಡಗಿರುವ “ನಾನು” ಎನ್ನುವ ಅಹಂ ಹಾಗು ಪ್ರತ್ಯೇಕತೆಯ ಭಾವವನ್ನು ಅಳಿಸಿ, ‘ನಾವು’ ಎಲ್ಲರೂ ಸಮಾನರು ಎನ್ನುವ ಕೂಡಿ ಬಾಳುವ ವಿನಯ, ಸದ್ಗುಣವನ್ನು ಬೆಳೆಸುವ ಸಾಧನವೇ ಶರಣು ಶರಣಾರ್ಥಿ. ಜಗತ್ತಿನ

ಎಲ್ಲ ಧರ್ಮಗಳಲ್ಲಿ ಗೌರವ ವಾಚಕ ಪದಗಳು, ಆಚರಣೆಗಳಿವೆ. ಅದರಂತೆ ಸನಾತನ ಬ್ರಾಹ್ಮಣ ಧರ್ಮದಲ್ಲಿ ನಮಸ್ಕಾರ ಪದ್ದತಿ ಇದೆ. ಅವೆಲ್ಲವೂ ಪ್ರಾರ್ಥನೆಯ ವಿವಿಧ ಸಂಕೇತದ ಮುದ್ರೆಗಳೇ ವಿನಃ ಪರಸ್ಪರ ಸಮಾನತೆಯ ಸೂತ್ರಗಳಲ್ಲ. ಆದರೆ, ಶರಣ ಸಂಸ್ಕೃತಿಯ ಶರಣು ಶರಣಾರ್ಥಿ ಪದ್ಧತಿಯಲ್ಲಿ ಅಡಗಿರುವ ಸಾಂಸ್ಕೃತಿಕ ವೈವಿಧ್ಯತೆ ಮಾತ್ರ ಅತ್ಯಂತ ಅಸಾಧಾರಣವಾದದ್ದು. ದೇವರನ್ನು ಮನುಷ್ಯರಿಂದ ಪ್ರತ್ಯೇಕಿಸಿ ದೈವ ಕೇಂದ್ರಿತ ಜಗತ್ತನ್ನು ಪ್ರತಿಪಾದಿಸುವ ಸನಾತನ ಪದ್ದತಿಯ ನಮಸ್ಕಾರ, ಪ್ರಣಾಮಗಳಲ್ಲಿ ಮಾನಸಿಕ, ವಾಚಿಕ, ದೈಹಿಕ ಸಮರ್ಪಣೆ ಇರುವುದಿಲ್ಲ, ಸಮಾನತೆ ಮೊದಲೇ ಇಲ್ಲ. ಆದರೆ ಶರಣ ಸಂಸ್ಕೃತಿಯ ಶರಣು ಶರಣಾರ್ಥಿಯು ಕಾಣದ ದೇವರನ್ನು ದೂರವಿಟ್ಟು ಮನುಷ್ಯ ಕೇಂದ್ರಿತ ಶರಣು ಶರಣಾರ್ಥಿ ಭಾವವನ್ನು ಮುನ್ನೆಲೆಗೆ ತರುತ್ತದೆ.

ಏಕಮುಖ ಸನಾತನ ನಮಸ್ಕಾರವು ಕೈ ಮುಗಿದು ನಮಿಸುವವನು ‘ನ’ ಎಂದರೆ ನಾನು, ‘ಮ’ ಎಂದರೆ ದೊಡ್ಡವರ ಎದುರಿಗೆ ಏನೂ ಅಲ್ಲ ಎನ್ನುವ ದಾಸ್ಯವನ್ನು ಸಾಂಕೇತಿಸಿದರೆ ನಮಸ್ಕಾರ ಮಾಡಿಸಿಕೊಳ್ಳುವವನು ‘ನ’ ಎಂದರೆ ನಾನು, ‘ಮ’ ಎಂದರೆ ಮತ್ತಾರಿಗಿಂತ ಚಿಕ್ಕಂದಿನಲ್ಲ ಎನ್ನುವ ಅಹಂಭಾವವನ್ನು ಪ್ರತಿನಿಧಿಸುತ್ತದೆ. ಸನಾತನ ವ್ಯವಸ್ಥೆಯು ಯಾರ್ಯಾರಿಗೆ ಹೇಗೆಲ್ಲ ನಮಸ್ಕರಿಸಬೇಕು ಎನ್ನುವ ಕುರಿತು ಧರ್ಮಶಾಸ್ತ್ರಗಳಲ್ಲಿ ವಿವರಿಸಿದೆ. ದೇವರಿಗೆ ಪ್ರದಕ್ಷಿಣೆ ಹಾಕುವ ರೀತಿಯನ್ನೂ ಹೇಳುತ್ತದೆ. ಎಷ್ಟು ಸಲ ನಮಸ್ಕರಿಸಬೇಕು, ಯಾವ ರೀತಿ ನಮಸ್ಕರಿಸಬೇಕು, ಎಷ್ಟು ಪ್ರದಕ್ಷಿಣ ಹಾಕಬೇಕು ಮುಂತಾಗಿ ಒಂದು ಧಾರ್ಮಿಕ ಕ್ರಮವಾಗಿಸಿದೆ. ಆದರೆ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ “ಕಾಯಕದಲ್ಲಿ ನಿರತವಾಗಿದೆ ಗುರುವಾದಡು ಮರೆಯಬೇಕು, ಲಿಂಗವಾದಡು ಮರೆಯಬೇಕು, ಜಂಗಮದ ಹಂಗು ಹರಿಯಬೇಕು” ಎನ್ನುವ ಮೂಲಕ ದೇವರಿಗಿಂತ, ಮತ್ತು ಸ್ಥಾಪಿತ ಗೊಡ್ಡು ಕಟ್ಟಳೆಗಳಿಗಿಂತ ದುಡಿಮೆಗೆ ಮಹತ್ವವನ್ನು ನೀಡುತ್ತಾರೆ. ದೇವರಿಗೆ ಪ್ರದಕ್ಷಿಣೆ ಹಾಕುವವರನ್ನು ಶರಣರು “ಚಿತ್ತ ಶುದ್ಧವಿಲ್ಲದೆ ತಿರುಗುವ ಗಾಣದೆತ್ತು” ಎಂದು ವಿಡಂಬಿಸುತ್ತಾರೆ. ಶಾಸ್ತ್ರಬದ್ಧಗೊಳಿಸಿದ ಸನಾತನದ ಸಂಕೀರ್ಣ ಔಪಚಾರಿಕ ಆಚರಣೆಗಳನ್ನು ಅತ್ಯಂತ ಸರಳೀಕರಣಗೊಳಿಸಿದ ಶರಣ ಸಂಸ್ಕೃತಿಯು ಜನಮುಖಿ ಹಾಗು ಜೀವನ್ಮುಖಿ ಸಂಸ್ಕೃತಿಯನ್ನು ಸನಾತನ ಊಳಿಗಮಾನ ಸಂಸ್ಕೃತಿಗೆ ಪರ್ಯಾಯವಾಗಿ ಎದ್ದು ನಿಲ್ಲಿಸಿದೆ.

ನಮಸ್ಕಾರ ಸಂಸ್ಕೃತಿಯು ಮಾತ್ರ ಭಾರತೀಯ ಮೂಲ ಸಂಸ್ಕೃತಿ ಎಂದು ಬಿಂಬಿಸುವ ಸನಾತನಿ ವಿದ್ವಾಂಸರ ಹುನ್ನಾರವು ಭಾರತೀಯ ಮೂಲದ ಬಹುಜನ ಸಂಸ್ಕೃತಿಯನ್ನು ನಗಣ್ಯಗೊಳಿಸುವುದಾಗಿದೆ. ಈಗ ಭಾರತೀಯ ಬಹುಜನರು ಎಚ್ಚರಗೊಳ್ಳಲೇಬೇಕಾದ ಕಾಲ. ಯಾವುದೆಲ್ಲ ನಮ್ಮ ಬಹುಜನರದಲ್ಲವೊ, ಯಾವುದೆಲ್ಲವು ಕೇವಲ ಬೆರಳೆಣಿಕೆಯ ಜನರಿಗೆ ಸಂಬಂಧಿಸಿದ ಸೀಮಿತ ಸನಾತದ ಸಂಸ್ಕೃತಿಯಾಗಿದೆಯೋ ಅದೆಲ್ಲವೂ ಎಲ್ಲಾ ಭಾರತೀಯ ಬಹುಜನರಿಗೆ ಸೇರಿದ್ದು ಎನ್ನುವ ವಾದವೇ ಒಂದು ಬಹುದೊಡ್ಡ ಮೋಸವಾಗಿದೆ.

ಇಲ್ಲಿನ ಅಲೆಮಾರಿಗಳು, ಆದಿವಾಸಿಗಳು, ಬುಡಕಟ್ಟಿನ ಜನರು, ದಲಿತರು, ದಮನಿತರು ತಮ್ಮದೆಯಾದ ಸ್ವತಂತ್ರ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಹೊಂದಿದ್ದಾರೆ. ಅವೆಲ್ಲವೂ ಭಾರತೀಯರ ಮೂಲ ಸಂಸ್ಕೃತಿಯಾಗಿವೆ. ‘ಶರಣು ಶರಣಾರ್ಥಿ’ ಪದವು ನಮ್ಮೆಲ್ಲರನ್ನು ಗುಲಾಮಗಿರಿಗೆ ನೂಕುವ ಸನಾತನ ಸಂಸ್ಕೃತಿಯ ನಮಸ್ಕಾರ ಪದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ದೇಶಿ ಆಚರಣೆಯಾಗಿದೆ. ಪಾಪ-ಪುಣ್ಯ, ಸ್ವರ್ಗ-ನರಕ, ಪುನರ್ಜನ್ಮ ಮುಂತಾದ ಸನಾತನದ ಕರ್ಮ ಸಿದ್ಧಾಂತದ ಭಯವನ್ನು ದೂರಗೊಳಿಸಿ ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬುವ ಶರಣ ಸಂಸ್ಕೃತಿ ಮತ್ತು ಅದಕ್ಕೆ ತತ್ಸಮಾನವಾದ ಎಲ್ಲಾ ಶೋಷಣೆ ರಹಿತ ಬಹುಜನರ ದೇಶಿ ಸಂಸ್ಕೃತಿಗಳನ್ನು ನಮ್ಮ ಪೂರ್ವಜರು ನಮಗಾಗಿ ಜೀವಂತವಾಗಿಟ್ಟಿದ್ದಾರೆ.

ಇಂದಿನ ಧಾವಂತದ ಬದುಕಿನಲ್ಲಿ ಶರಣು ಶರಣಾರ್ಥಿಯ ಮಹತ್ವವನ್ನು ನಾವು ಮರೆಯಬಾರದು. ನಮಸ್ಕಾರವನ್ನು ನಾವು ಬದಿಗೆ ಸರಿಸಿ ಭಾರತೀಯತೆಯನ್ನು ಮೆರೆಸಬೇಕಾಗಿದೆ.

ಕೊನೆಯದಾಗಿ, ಭಾರತೀಯ ಮೂಲ ಸಂಸ್ಕೃತಿಯ ಭಾಗವಾಗಿರುವ ಈ ಶರಣ ಸಂಸ್ಕೃತಿಯ ಅದ್ಭುತ ಕೊಡುಗೆಯನ್ನು ನಮ್ಮ ಮುಂದಿನ ಪೀಳಿಗೆಗೂ ವಿಸ್ತರಿಸೋಣ. “ಶರಣು ಶರಣಾರ್ಥಿ” ಎಂಬ ಬಹುಜನರ ಮಂತ್ರವನ್ನು ಜಾಗತೀಕರಿಸೋಣ, ಆ ಮೂಲಕ ಭಾರತವನ್ನು ಗೆಲ್ಲಿಸಿ ವಿಶ್ವಗುರುವಾಗಿಸೋಣ.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...