ಕಳೆದ ಹತ್ತು ವರ್ಷಗಳಲ್ಲಿ ಕಾಲ್ತುಳಿತ ದುರಂತಗಳ ಏರಿಕೆ: ಅವಘಡಗಳಿಗೆ ಹೊಣೆ ಯಾರು?

Date:

ಆದರೆ ಅನಾಹುತ ಸಂಭವಿಸಿದ ಬಳಿಕ ಕ್ರಮಕೈಗೊಳ್ಳವುದಕ್ಕಿಂತ ಅದಕ್ಕೂ ಮುನ್ನವೇ ಮಾರ್ಗಸೂಚಿಯನ್ನು ಸರಿಯಾಗಿ ಜಾರಿ ಮಾಡುವುದು ಮುಖ್ಯವಲ್ಲವೇ? ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದೆಯೇ ಎಂದು ನೋಡುವುದು ಯಾರ ಕರ್ತವ್ಯ? ಅಷ್ಟಕ್ಕೂ ಈ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾದಿಗಳು ತುಳಿತಕ್ಕೆ ಸಿಕ್ಕಿ ಸಾಯುವ ಸರಣಿಗೆ ಅಂತ್ಯ ಸಿಗುವುದು ಯಾವಾಗ?

ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2015ರಿಂದ 2025ರವರೆಗೆ ಕಾಲ್ತುಳಿತ ಪ್ರಕರಣಗಳು ಹೆಚ್ಚಳವಾಗಿದೆ. ಅದರಲ್ಲೂ ಧಾರ್ಮಿಕ ಕೇಂದ್ರಗಳಲ್ಲಿ ಕಾಲ್ತುಳಿತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಿವೆ. 2025ರಲ್ಲೇ ಹಲವು ದೇವಾಲಯಗಳು, ಧಾರ್ಮಿಕ ಕೂಟಗಳಲ್ಲಿ ಕಾಲ್ತುಳಿತ ಉಂಟಾಗಿ ದಾಖಲೆ ಮಟ್ಟದ ಸಾವು ನೋವುಗಳು ಸಂಭವಿಸಿವೆ. ಆದರೆ ಧರ್ಮರಕ್ಷಕರೆಂದು ಹೇಳಿಕೊಂಡು ಸರ್ಕಾರ ರಚಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮ ಮಾತ್ರ ಶೂನ್ಯ.

- Advertisement -

ಬಿಹಾರದ ನಳಂದ ಜಿಲ್ಲೆಯ ಮಘ್ರಾ ಗ್ರಾಮದಲ್ಲಿರುವ ಪ್ರಸಿದ್ಧ ಮಾತಾ ಶೀತಲಾ ದೇವಸ್ಥಾನದಲ್ಲಿ ಮಾರ್ಚ್ 31ರ ಮಂಗಳವಾರ ಭೀಕರ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 9 ಮಹಿಳಾ ಭಕ್ತರು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಬಿಹಾರ ಷರೀಫ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೈತ್ರ ಮಾಸದ ಕೊನೆಯ ಮಂಗಳವಾರವಾದ ಕಾರಣ ದೇವಸ್ಥಾನದಲ್ಲಿ ಹೆಚ್ಚು ಜನಸಂದಣಿ ಇತ್ತು. ಆದ್ದರಿಂದ ನೂಕುನುಗ್ಗಲು ಉಂಟಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಇದನ್ನು ಓದಿದ್ದೀರಾ? ಕುಂಭಮೇಳದಲ್ಲಿ ಕಾಲ್ತುಳಿತ: ದುರಂತ ಮತ್ತು ನಿರ್ಲಕ್ಷ್ಯಕ್ಕೆ ಯಾರು ಹೊಣೆ?

ಸ್ಥಳೀಯರು ಹೇಳುವಂತೆ ದೇವಸ್ಥಾನದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಸರಿಯಾದ ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆ ಇರಲಿಲ್ಲ. ಘಟನೆಯ ಸಮಯದಲ್ಲಿ ಜಿಲ್ಲಾಡಳಿತವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಳಂದಾ ವಿಶ್ವವಿದ್ಯಾಲಯದ ಭೇಟಿಯ ಭದ್ರತೆಯಲ್ಲಿ ಕಾರ್ಯನಿರತವಾಗಿತ್ತು. ಈ ಘಟನೆಗೆ ಸಂಬಂಧಿಸಿ ನಿರ್ಲಕ್ಷ್ಯದ ಆರೋಪದ ಮೇಲೆ ದೀಪನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ (SHO) ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ. ಬಿಹಾರ ಸರ್ಕಾರ ಮೃತರ ಕುಟುಂಬಕ್ಕೆ ₹6 ಲಕ್ಷ ಪರಿಹಾರ ಘೋಷಿಸಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿ ಅಡಿಯಲ್ಲಿ ಮೃತರ ಕುಟುಂಬಕ್ಕೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಸಹಾಯಧನ ಘೋಷಿಸಲಾಗಿದೆ.

ಆದರೆ ಅನಾಹುತ ಸಂಭವಿಸಿದ ಬಳಿಕ ಕ್ರಮಕೈಗೊಳ್ಳವುದಕ್ಕಿಂತ ಅದಕ್ಕೂ ಮುನ್ನವೇ ಮಾರ್ಗಸೂಚಿಯನ್ನು ಸರಿಯಾಗಿ ಜಾರಿ ಮಾಡುವುದು ಮುಖ್ಯವಲ್ಲವೇ? ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದೆಯೇ ಎಂದು ನೋಡುವುದು ಯಾರ ಕರ್ತವ್ಯ? ಅಷ್ಟಕ್ಕೂ ಈ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾದಿಗಳು ತುಳಿತಕ್ಕೆ ಸಿಕ್ಕಿ ಸಾಯುವ ಸರಣಿಗೆ ಅಂತ್ಯ ಸಿಗುವುದು ಯಾವಾಗ? – ಹೀಗೆ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಈ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶದ ದೇವಸ್ಥಾನಗಳಲ್ಲಿ ನಡೆದ ಕಾಲ್ತುಳಿತ ಪ್ರಕರಣಗಳತ್ತ ಕಣ್ಣಾಯಿಸೋಣ.

  1. ಪುಷ್ಕರ ಘಾಟ್ ಕಾಲ್ತುಳಿತ ಪ್ರಕರಣ

2015ರ ಜುಲೈ 14ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಗೋದಾವರಿ ಮಹಾ ಪುಷ್ಕರ ಮೇಳದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಗೋದಾವರಿ ನದಿಯ ತೀರದಲ್ಲಿ 144 ವರ್ಷಗಳಿಗೊಮ್ಮೆ ಬರುವ ‘ಮಹಾ ಪುಷ್ಕರ’ದ ಮೊದಲ ದಿನದಂದು ಪುಣ್ಯಸ್ನಾನ ಮಾಡಲು ಲಕ್ಷಾಂತರ ಭಕ್ತರು ರಾಜಮಂಡ್ರಿಯ ಪುಷ್ಕರ ಘಾಟ್‌ಗೆ ಆಗಮಿಸಿದ್ದರು. ಘಾಟ್‌ನ ಗೇಟ್‌ಗಳನ್ನು ತೆರೆದ ತಕ್ಷಣ ನೂಕಾಟ ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಕನಿಷ್ಠ 27 ರಿಂದ 29 ಮಂದಿ ಸಾವನ್ನಪ್ಪಿದ್ದರು. ಅತಿಯಾದ ಜನಸಂದಣಿ ಮತ್ತು ಘಾಟ್ ಬಳಿ ಜನದಟ್ಟಣೆಯನ್ನು ನಿಯಂತ್ರಿಸಲು ಸರಿಯಾದ ವ್ಯವಸ್ಥೆ ಇಲ್ಲದಿದ್ದುದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿತ್ತು.

  1. ಜೈ ಗುರುದೇವ್ ಸತ್ಸಂಗ ಕಾಲ್ತುಳಿತ ದುರಂತ

ಉತ್ತರ ಪ್ರದೇಶದ ವಾರಣಾಸಿಯಲ್ಲಿ 2016ರ ಅಕ್ಟೋಬರ್ 15ರಂದು ಬಾಬಾ ಜೈ ಗುರುದೇವ್ ಸತ್ಸಂಗ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಗಂಗಾ ನದಿಯ ರಾಜ್‌ಘಾಟ್ ಸೇತುವೆಯ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಸೇರಿದ್ದರು. ಈ ವೇಳೆ ಸೇತುವೆ ಕುಸಿಯುತ್ತಿದೆ ಎಂಬ ವದಂತಿ ಹರಡಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದರು. 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೃತರ ಪೈಕಿ ಹೆಚ್ಚಿನವರು ಮಹಿಳೆಯರು. ಈ ಸತ್ಸಂಗದಲ್ಲಿ ಕೇವಲ 3,000 ಮಂದಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಸುಮಾರು 70,000ರಿಂದ 1 ಲಕ್ಷಕ್ಕೂ ಹೆಚ್ಚು ಭಕ್ತರು ಸತ್ಸಂಗಕ್ಕೆ ಸೇರಿದ್ದರು. ಅದಾದ ಬಳಿಕ ಸರಿಯಾದ ಮಾಹಿತಿ ನೀಡದ ಕಾರಣ ಮತ್ತು ಅನುಮತಿಗಿಂತ ಹೆಚ್ಚು ಜನರನ್ನು ಸೇರಿಸಿದ್ದಕ್ಕಾಗಿ ಅಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಓದಿದ್ದೀರಾ? ಹಾಥರಸ್ ಕಾಲ್ತುಳಿತ ದುರಂತ: ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

  1. ಖಾತು ಶ್ಯಾಮ್‌ ಜಿ ದೇವಸ್ಥಾನ ಕಾಲ್ತುಳಿತ

ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಾತು ಶ್ಯಾಮ್‌ ಜಿ ದೇವಸ್ಥಾನದಲ್ಲಿ 2022ರ ಆಗಸ್ಟ್ 8ರಂದು ಮುಂಜಾನೆ ಭೀಕರ ಕಾಲ್ತುಳಿತ ಸಂಭವಿಸಿತ್ತು. ದುರ್ಘಟನೆಯಲ್ಲಿ ಮೂವರು ಮಹಿಳಾ ಭಕ್ತರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದರು. ಸೋಮವಾರದ ಏಕಾದಶಿಯ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಮಾಸಿಕ ಜಾತ್ರೆ ನಡೆಯುತ್ತಿತ್ತು. ಹೀಗಾಗಿ ಲಕ್ಷಾಂತರ ಭಕ್ತರು ಸೇರಿದ್ದರು. ಮುಂಜಾನೆ ಐದು ಗಂಟೆಗೆ ದೇವಸ್ಥಾನದ ಪ್ರವೇಶ ದ್ವಾರಗಳನ್ನು ತೆರೆಯುತ್ತಿದ್ದಂತೆ ಭಕ್ತರು ಒಮ್ಮೆಲೇ ನುಗ್ಗಲು ಯತ್ನಿಸಿ ಕಾಲ್ತುಳಿತ ಉಂಟಾಗಿತ್ತು.

  1. ವೈಷ್ಣೋದೇವಿ ದೇವಸ್ಥಾನ ಕಾಲ್ತುಳಿತ

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಪ್ರಸಿದ್ಧ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ 2022ರ ಜನವರಿ 1ರಂದು ಮುಂಜಾನೆ ಭೀಕರ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಕನಿಷ್ಠ 12 ಭಕ್ತರು ಸಾವನ್ನಪ್ಪಿ, 16ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹೊಸ ವರ್ಷದ ಪ್ರಯುಕ್ತ ದೇವಸ್ಥಾನದಲ್ಲಿ ಅಪಾರ ಜನಸಂದಣಿ ಇತ್ತು. ಮುಂಜಾನೆ ಸುಮಾರು 2:45ಕ್ಕೆ ಭಕ್ತರ ಎರಡು ಗುಂಪುಗಳ ನಡುವೆ ಉಂಟಾದ ಸಣ್ಣ ಜಗಳ ಅಥವಾ ಘರ್ಷಣೆಯು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ದೇವಸ್ಥಾನ ಮಂಡಳಿಯ ದುರ್ಬಲ ನಿರ್ವಹಣೆಯೇ ಈ ದುರಂತಕ್ಕೆ ಕಾರಣವೆಂದು ಕೆಲವು ಭಕ್ತರು ಆರೋಪಿಸಿದ್ದರು. ಆದರೆ ಮಂಡಳಿ ಮಾತ್ರ ಈ ಆರೋಪವನ್ನು ನಿರಾಕರಿಸಿತ್ತು.

  1. ಹಾಥರಸ್ ಸತ್ಸಂಗ ಕಾಲ್ತುಳಿತ

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ 2024ರ ಜುಲೈ 2ರಂದು ನಡೆದ ‘ಸತ್ಸಂಗ’ ಕಾರ್ಯಕ್ರಮವೊಂದರಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಸ್ವಯಂ ಘೋಷಿತ ಗುರು ಭೋಲೆ ಬಾಬಾ (ನಾರಾಯಣ ಸಾಕಾರ ಹರಿ) ಎಂಬುವವರು ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಈ ಅವಘಡ ಸಂಭವಿಸಿತ್ತು. ಈ ದುರಂತದಲ್ಲಿ ಬರೋಬ್ಬರಿ 121 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಅಧಿಕ. ಕಾರ್ಯಕ್ರಮಕ್ಕೆ ಕೇವಲ 8000 ಜನರಿಗೆ ಅನುಮತಿ ನೀಡಲಾಗಿತ್ತು. ಆದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಸತ್ಸಂಗ ಮುಗಿದ ನಂತರ ಗುರುವಿನ ಪಾದದ ಧೂಳನ್ನು ಸಂಗ್ರಹಿಸಲು ಭಕ್ತರು ನುಗ್ಗಿದಾಗ ಕಾಲ್ತುಳಿತ ಉಂಟಾಗಿತ್ತು.

ಇವಿಷ್ಟು ಧಾರ್ಮಿಕ ಕೇಂದ್ರ, ದೇವಸ್ಥಾನಗಳಲ್ಲಿ ನಡೆದ ಕಾಲ್ತುಳಿತ ಪ್ರಕರಣಗಳಾದರೆ ಈ ಎಲ್ಲ ಘಟನೆಗಳನ್ನು ದೇವರ ಇಚ್ಛೆ ಅಥವಾ ವಿಧಿಯಾಟ ಎಂದು ಹೇಳಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿರುವುದು ನಿಜ. ದುರಂತ ನಡೆದಾಗ ಸರ್ಕಾರ ಪರಿಹಾರ ಧನವನ್ನು ಘೋಷಿಸುತ್ತದೆ. ಆದರೆ, ಅದು ಜನರ ಆಕ್ರೋಶವನ್ನು ತಣಿಸುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ನಿಜ. ಮೂಲಭೂತ ಬದಲಾವಣೆಗಳ ಬದಲು ಹಣ ನೀಡಿ ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂಬುದೂ ವಾಸ್ತವ. ಏನೇ ಆದರೂ ಜನರು ಮಾತ್ರ ಈ ದುರಂತಗಳನ್ನು, ಇದಕ್ಕೆ ಕಾರಣವಾದ ಆಡಳಿತದ ಭದ್ರತಾ ವೈಫಲ್ಯವನ್ನು ಮರೆತುಬಿಡುತ್ತಾರೆ.

ಸದ್ಯ ಧರ್ಮದ ಆಧಾರದಲ್ಲಿ ಅಧಿಕಾರಗಿಟ್ಟಿಸಿಕೊಂಡ ಕೇಂದ್ರ ಸರ್ಕಾರವು ಧಾರ್ಮಿಕ ಪ್ರವಾಸೋದ್ಯಮದ ಮೂಲಕ ಆದಾಯ ಗಳಿಸುತ್ತಿದೆ. ಆದರೆ ಭಕ್ತರ ಸುರಕ್ಷತೆಗೆ ಬೇಕಾದ ಜನಸಂದಣಿ ನಿರ್ವಹಣೆ, ತಂತ್ರಜ್ಞಾನ ಬಳಕೆ, ಎಐ ಕ್ಯಾಮೆರಾಗಳು, ಸೆನ್ಸಾರ್‌ಗಳನ್ನು ಅಳವಡಿಸಲು ಯಾವುದೇ ಉತ್ಸಾಹ ತೋರುತ್ತಿಲ್ಲ ಎಂಬುದು ವಿಪರ್ಯಾಸ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ಬದಲಾವಣೆ ಗಾಳಿ: ಉಪಾಧ್ಯಕ್ಷರಾಗಿ ನಟ ಸಿಜೋಯ್ ವರ್ಗೀಸ್, ನಟಿ ಆಶಾ ಅರವಿಂದ್ ನೇಮಕ

ಸಾಲು ಸಾಲು ವಿವಾದಗಳು ಮತ್ತು ರಾಜೀನಾಮೆಗಳಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಮಲಯಾಳಂ...

ಬೆಂಗಳೂರು ವಾಹನ ಸವಾರರ ಗಮನಕ್ಕೆ: ನಿಯಮ ಪಾಲಿಸದಿದ್ದರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು!

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್...

ಮತದಾರರ ಹೆಸರು ಅಳಿಸಲು ಫಾರಂ-7 ದುರ್ಬಳಕೆ; ತನಿಖೆಗೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಆರೋಪಿಯನ್ನು ಹಿಡಿದರೂ FIRನಲ್ಲಿ ಹೆಸರಿಲ್ಲ; ಯುಪಿ ಪೊಲೀಸರ ನಡೆಗೆ ಸುಪ್ರೀಂ ಅಸಮಾಧಾನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖೆಯಲ್ಲಿ ಉತ್ತರ ಪ್ರದೇಶ ಪೊಲೀಸರ...