ಜಲದೊಳಗಣ ಕಿಚ್ಚು ಜಲವ ಸುಡಲಿಲ್ಲ- ದಲಿತ ಚಳವಳಿಯ ಮೌಲ್ಯ ಪ್ರಜ್ಞೆಯ ಹುಡುಕಾಟ

Date:

ಎಡಗೈ ಬಲಗೈ ಸಂಘಟನೆಗಳು ಒಗ್ಗಟ್ಟಾಗಿ ಖಾಸಗಿವಲಯ, ಸಹಕಾರಿ ವಲಯ ಹಾಗೂ ಹೊರಗುತ್ತಿಗೆಯಲ್ಲಿ ಮೀಸಲಾತಿ ಪ್ರಮಾಣವನ್ನು ಕೇಳಬೇಕಿದೆ. ನಾಳೆ ದಿವಸ ಹೊರಗುತ್ತಿಗೆಯ ಕೆಲಸಗಳು ಸರ್ಕಾರಿ ವ್ಯವಸ್ಥೆಯಲ್ಲಿ ಪರ್ಮನೆಂಟ್ ಆದರೆ, ಬೇಕು ಬೇಕಾದವರನ್ನು ಸೇರಿಸಿದ ರಾಜಕೀಯ ವ್ಯವಸ್ಥೆಗೆ ಮೀಸಲಾತಿಯ ಹಕ್ಕನ್ನೆ ನಿರಾಕರಿಸಿದಂತಾಗುತ್ತದೆ.

- Advertisement -

ಇಂದು ಒಳಮೀಸಲಾತಿಯ ವಿಚಾರ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದೆ. ಇದಕ್ಕೆ ಮುಖ್ಯಕಾರಣ ತಮಿಳಿನಾಡಿನಂತೆ ನಾವು ಮೀಸಲಾತಿಯ ಪ್ರಮಾಣ ಹೆಚ್ಚಿಸಿ ಕೇಂದ್ರ ಸರ್ಕಾರದ ಮೂಲಕ ಒಂಭತ್ತನೆಯ ಶೆಡ್ಯೂಲ್ ಗೆ ಸೇರಿಸಲಾಗದ ನಮ್ಮ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ನಮ್ಮಲ್ಲಿ ಮೀಸಲಾತಿ ಹೆಚ್ಚಿಸಿದವರಲ್ಲಿ ಅಗ್ರಗಣ್ಯರೆಂದರೆ ವೀರಪ್ಪ ಮೊಯ್ಲಿಯವರು ಆದರೆ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸಲಾರದಂತೆ ಒಂಭತ್ತನೆಯ ಶೆಡ್ಯೂಲ್‌ಗೆ ಸೇರಿಸುವಷ್ಟರಲ್ಲಿ ಅವರು ಸ್ಥಾನದಿಂದ ಕೆಳಗೆ ಇಳಿದುಬಿಟ್ಟಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದರು. ತಮ್ಮ ಕೆಲವು ಉತ್ತಮ ಕೆಲಸದೊಂದಿಗೆ ಮೀಸಲಾತಿಯ ಪ್ರಮಾಣ ಹೆಚ್ಚಿಸಿ ಒಂಭತ್ತನೆಯ ಶೆಡ್ಯೂಲ್‌ಗೆ ಸೇರಿಸಿದ್ದರೆ, ಇಂದು ದಲಿತರ ಕಣ್ಮಣಿಯಾಗಿ ಬಿಡುತ್ತಿದ್ದರು. ಅರಸು ಅವರ ಹಾಗೆ ಅವರ ಹೆಸರು ಚಾಲ್ತಿಯಲ್ಲಿರೋದು. ಈಗಲೂ ಅವರಿಗೆ ಆ ಅವಕಾಶವಿದೆ. ಸಿದ್ದರಾಮಯ್ಯನವರು ಸರ್ವಪಕ್ಷಗಳ ಸಭೆ ಕರೆದು ಕೇಂದ್ರವನ್ನು ಒತ್ತಾಯಿಸಲೇಬೇಕಾದ ಕಾಲ ಬಂದಿದೆ. ದಲಿತರ ಜನಸಂಖ್ಯೆಕ್ಕಿಂತಲೂ ಮೀಸಲಾತಿ ಪ್ರಮಾಣ ಕಡಿಮೆ ಇದೆ. ಇವತ್ತು ಮೀಸಲಾತಿ ಐವತ್ತು ಮೀರಲಾರದಂತೆ ಸುಪ್ರೀಂಕೋರ್ಟ್ ವಿಧಿಸಿರುವ ನಿಬಂಧನೆಯನ್ನು ಸಡಿಲಿಸುವ ಕಾಲ ಬಂದಿದೆ.

ಅಲ್ಲದೆ, ಸರ್ಕಾರಿ ವ್ಯವಸ್ಥೆಯಲ್ಲಿ ಮೀಸಲಾತಿ ಪ್ರಮಾಣವೇ ಒಂದರಿಂದ ಎರಡು ಪರ್ಸೆಂಟ್‌ಗೆ ಬಂದಿದೆ. ಅಗಾಧವಾಗಿ ಮೀಸಲಾತಿಯನ್ನು ವಿಸ್ತರಿಸಬೇಕಾದ ಪ್ರಮಾಣ ಖಾಸಗಿವಲಯ ಇರಬಹುದು, ಸಹಕಾರಿ ವಲಯ ಇರಬಹುದು, ಹೊರಗುತ್ತಿಗೆಯಲ್ಲಿ ಇರಬಹುದು ಮೀಸಲಾತಿಯನ್ನು ವಿಸ್ತರಿಸಬೇಕೆಂದು ಹೋರಾಟವೇ ಆಗುತ್ತಿಲ್ಲ. ಎಡಗೈ ಬಲಗೈ ಸಂಘಟನೆಗಳು ಒಗ್ಗಟ್ಟಾಗಿ ಖಾಸಗಿವಲಯ, ಸಹಕಾರಿ ವಲಯ ಹಾಗೂ ಹೊರಗುತ್ತಿಗೆಯಲ್ಲಿ ಮೀಸಲಾತಿ ಪ್ರಮಾಣವನ್ನು ಕೇಳಬೇಕಿದೆ. ನಾಳೆ ದಿವಸ ಹೊರಗುತ್ತಿಗೆಯ ಕೆಲಸಗಳು ಸರ್ಕಾರಿ ವ್ಯವಸ್ಥೆಯಲ್ಲಿ ಪರ್ಮನೆಂಟ್ ಆದರೆ ಬೇಕು ಬೇಕಾದವರನ್ನು ಸೇರಿಸಿದ ರಾಜಕೀಯ ವ್ಯವಸ್ಥೆಗೆ ಮೀಸಲಾತಿಯ ಹಕ್ಕನ್ನೆ ನಿರಾಕರಿಸಿದಂತಾಗುತ್ತದೆ.

ಹಾಗಾಗಿ ಈ ಒಂದೆರಡು ಪರ್ಸೆಂಟ್ ಮೀಸಲಾತಿಗಾಗಿ ಸಮುದಾಯದ ನಡುವೆ ಒಡಕು ಉಂಟು ಮಾಡಲು ಹೆಣಗಾಡುತ್ತಿರುವ ಬಿಜೆಪಿಯಂಥ ಪಕ್ಷಕ್ಕೆ ಸಮೃದ್ದವಾಗಿ ಕಬಳಿಸಿರುವ ಖಾಸಗಿ ರಂಗದಲ್ಲಿ ಸಹಕಾರಿ ರಂಗದಲ್ಲಿ, ಸರ್ಕಾರಿ ಸಂಸ್ಥೆಯ ಹೊರ ಗುತ್ತಿಗೆಯಲ್ಲಿ ದಲಿತರು ಬರಲಾರದಂತೆ ನೋಡಿಕೊಳ್ಳುವ ಹುನ್ನಾರವೂ ಅಡಗಿದೆ. ಕೇವಲ ಮೂರು ಪರ್ಸೆಂಟ್ ಇರುವ ಮೇಲ್ಜಾತಿಗಳಿಗೆ ಹತ್ತು ಪರ್ಸೆಂಟ್ ಮೀಸಲಾತಿ ಕೊಟ್ಟು ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡದಲ್ಲಿ ಕೋರ್ಟ್‌ನಲ್ಲಿ ಪ್ರಶ್ನೆಯನ್ನೇ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ ಬಿಜೆಪಿ ಹುನ್ನಾರಕ್ಕೆ ಹೊಲೆ-ಮಾದಿಗ ಸಮುದಾಯಗಳು ಒಗ್ಗಟ್ಟಾಗಿ ತಮ್ಮ ಶಕ್ತಿ ಪ್ರದರ್ಶನ ತೋರಬೇಕಿದೆ.

ಈಗ ಒಳಮೀಸಲಾತಿಯಲ್ಲೂ ಎರಡು‌-ಮೂರು ಹುದ್ದೆಗಳಲ್ಲಿ ಎದ್ದಿರುವ ಗೊಂದಲದಲ್ಲಿ ಕೇಳಿ ಬರುತ್ತಿರುವ ಕೂಗು ಮೊದಲ ಸ್ಥಾನದಲ್ಲಿರುವ ಮಾದಿಗರಿಗೆ ಅವಕಾಶ ಸಿಕ್ಕಿಬಿಟ್ಟರೆ ನಾವೇನು ಮಾಡುವುದು ಎಂದು ಹೊಲೆಯ ಸಮುದಾಯದ ಪ್ರಶ್ನೆ. ಇದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಎದ್ದಿರುವ ವಿವಾದ. ರೋಸ್ಟರ್ ಸಿಸ್ಟಮ್ ಅಡಿಯಲ್ಲಿ ಮುಂದೆ ಹೊಲೆಯ ಸಮುದಾಯಗಳಿಗೆ ಸಿಕ್ಕರೆ ಮುಂದಿನ ಸಾಲಿನಲ್ಲಿರುವ ಅಲೆಮಾರಿಗಳೋ, ಸ್ಪಶ್ಯ ಸಮುದಾಯಗಳೋ ಪ್ರಶ್ನಿಸಿದರೆ ಆಗ ಉತ್ತರ ಏನಾಗಿರಬೇಕು. ಆಗ ಒಳಮೀಸಲಾತಿ ಕಲ್ಪಿಸಿರುವುದೇ ಅನ್ಯಾಯಕ್ಕೊಳಗಾದವರಿಗೆ ಮೊದಲ ಅವಕಾಶ ಕೊಟ್ಟು ಆನಂತರ ಆ ಅವಕಾಶವನ್ನು ರೋಸ್ಟರ್ ಸಿಸ್ಟಮ್ ಅಡಿಯಲ್ಲಿ ಚಲನೆಗೊಂಡು ಎಲ್ಲರಿಗೂ ಪಾಲು ಸಿಗುತ್ತದೆ ಎಂಬ ವಿಶಾಲ ದೃಷ್ಟಿಕೋನವೇ ಮುಖ್ಯವಾಗಬೇಕು ಅಲ್ಲವೆ?

ಒಂದಾಗೋಣ ಕೈ ಜೋಡಿಸಿ ಸಂಘಟನೆಯ ಮೂಲಕ ಎರಡು ಸಮುದಾಯಗಳ ಮಾತಗಳನ್ನು ಕೇಳುವಾಗ ಬಲಗೈ ಸಮುದಾಯದ ಸ್ನಾತಕೋತ್ತರ ವಿದ್ಯಾರ್ಥಿ ಕೃಷ್ಣಮೂರ್ತಿ ಗಣಿಗನೂರು ನಾವು ಜನರಲ್ ನಲ್ಲಿ ಸ್ಪರ್ಧಿಸಿ ಉದ್ಯೋಗ ತೆಗೆದುಕೊಂಡಿದ್ದೇ ಹೆಚ್ಚು, ನಾವೇನು ಮಾದಿಗರಿಂದ ಕಿತ್ತು ತಿನ್ನುವವರಲ್ಲ ಎಂದು ಈ ಎರಡು ಸಮುದಾಯದ ಒಡಕಿಗೆ ಮುಲಾಮು ಹಂಚಿ ಸ್ನೇಹದ ಕೈಚಾಚಲು ನಿವೇದಿಸಿಕೊಂಡಿದ್ದ. ಇಂಥ ಮನಸ್ಸುಗಳು ಎರಡು ಸಮುದಾಯಗಳಲ್ಲೂ ಇದೆ. ಒಬ್ಬರ ತುತ್ತು ಒಬ್ಬರು ಕೊಟ್ಟು ಹಂಚಿ ತಿನ್ನೋಣ ಅಂತ. ಈ ಪದ್ಯವೋ, ಹೃದಯದ ಮಾತೋ ನೋಡಿ ರವಿಚಂದ್ರಪ್ರಸಾದ್ ಕಹಳೆ ಎನ್ನುವ ಬಲಗೈ ಸಮುದಾಯದ ಯುವಕನ ಮಾತುಗಳು ಎಲ್ಲರನ್ನು ಕಣ್ತೆರೆಸುವಂತಿದೆ.

“ಹನ್ನೆರಡನೇ ಶತಮಾನದಲ್ಲಿ
ಬಸವಣ್ಣನವರ ಕಲ್ಯಾಣಕ್ರಾಂತಿಯಲ್ಲಿ ಹೊಲೆಯರ
ಹೊನ್ನಯ್ಯನಾಗಲಿ ಮಾದಿಗರ
ಹರಳಯ್ಯನಾಗಲಿ ಕಚ್ಚಾಡಲಿಲ್ಲ
ಹದಿನೈದನೇಯ ಶತಮಾನದಲ್ಲಿ ಹೊಲೆಯರ ಮಂಟೇಸ್ವಾಮಿಯಾಗಲಿ, ಮಾದಿಗರ ಮಾದೇಶ್ವರನಾಗಲಿ ಎಂದೂ ಕಚ್ಚಾಡಲಿಲ್ಲ.
ನಮ್ಮ ಯುಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಗಲಿ ಬಾಬು ಜಗಜೀವನ್ ರಾಮರಾಗಲಿ ಎಂದೂ ಬೇರೆಯಾಗಲಿಲ್ಲ
ಬಿ.ರಾಚಯ್ಯನವರಾಗಲಿ, ಎನ್ ರಾಚಯ್ಯನವರಾಗಲಿ ರಾಜಕಾರಣದಲ್ಲಿ ಭಿನ್ನಭೇದವೆಣಿಸಲಿಲ್ಲ.
ಹೊಲೆಯನಾದ ನಾನಾಗಲಿ ನನ್ನ ಗೆಳೆಯ ಮಾದಿಗ ಅರಕಲವಾಡಿ ನಾಗೇಂದ್ರನಾಗಲಿ ಎಂದೂ ಸ್ನೇಹ ಕಳೆದುಕೊಳ್ಳಲಿಲ್ಲ.
ಇನ್ನು ಹೊಲೆಯರಿಗೂ, ಮಾದಿಗರಿಗೂ ಆದ ಪ್ರೇಮ ವಿವಾಹಗಳು, ಅಂತರ್ಜಾತಿ ವಿವಾಹಗಳಿಗೆ ಲೆಕ್ಕವಿಲ್ಲ. ಈಗ ಒಂದೇ ಬುದ್ದಮಾರ್ಗದಲ್ಲಿರುವ ದಾರಿ, ಹಸಿದಿದ್ದೀಯ ನನ್ನ ತುತ್ತು ನಿನಗೆ ಎಂದು ಹೇಳುವ ಮಾರ್ಗ.
ಜನಪದರಲ್ಲಿ, ತತ್ವಪದಕಾರರಲ್ಲಿ ಇಲ್ಲದ ಭೇದ ಅಕ್ಷರಮಾತೆಯನ್ನು ತಲೆಮೇಲೆ ಹೊತ್ತ ನಮಗೆ ಬರುವುದು ಬೇಡ ಒಂದಾಗೋಣ ನಾವೇ ನಾವೋಗೋಣ
ಸಿದ್ದಲಿಂಗಯ್ಯನವರ
ಹೊಲೆಮಾದಿಗರ ಹಾಡು ಎಂದೂ ನನ್ನೊಳಗೆ ಜೀವಂತ..”
-ರವಿಚಂದ್ರಪ್ರಸಾದ್ ಕಹಳೆ

ಇಂಥ ಮನಸ್ಸುಗಳು ಸಾಕಷ್ಟು ನಮ್ಮ ನಡುವೆ ಇದ್ದಾವೆ. ಅಲ್ಲದೆ ಈ ಐವತ್ತಾರು ಸಾವಿರ ಉದ್ಯೋಗಗಳ ಆಚೆ ಇರುವ ಕೋಟ್ಯಾಂತರ ದಲಿತರ ಮನದಾಳದ ಬಯಕೆ ದಲಿತ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಉದಯಿಸಬೇಕು ಎಂದು. ಒಗ್ಗಟ್ಟಾಗದಿದ್ದರೆ ಅದನ್ನು ತಪ್ಪಿಸಲು ಹಾತೊರೆಯುತ್ತಿರುವ ಬಿಜೆಪಿಯಂಥ ಪಕ್ಷಕ್ಕೆ ತಮ್ಮ ಒಡೆದಾಳುವ ನೀತಿಯನ್ನು ಜಾರಿಗೊಳಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಅಲೆಮಾರಿಗಳಿಗೂ ಒಂದು ಪರ್ಸೆಂಟ್ ಕೊಟ್ಟು ಒಳಮೀಸಲಾತಿಯನ್ನು ಒಬ್ಬರ ತುತ್ತನ್ನು ಮತ್ತೊಬ್ಬರಿಗೆ ಕೊಡುವ ಮೂಲಕವೇ ಒಗ್ಗಟ್ಟು ತೋರಬೇಕು. ಕುಂಬಾರ ಶೇಷಗಿರಿಯಪ್ಪನ ಕೊಲೆ ಪ್ರಕರಣದಲ್ಲಿ ಅನ್ಯಾಯದ ವಿರುದ್ದ ಇದ್ದ ದಲಿತ ಚಳವಳಿ, ಹಿಂದುಳಿದವರಿಗೆ ವರವಾದ ಮಂಡಲ್ ಆಯೋಗದ ಪರವಿದ್ದ ದಲಿತ ಚಳವಳಿ, ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಮುಗಿಬೀಳುವಾಗ ಸಹಾಯಕ್ಕೆ ಬರುವ ದಲಿತ ಚಳವಳಿ ತಮ್ಮ ವಿಚಾರಕ್ಕೆ ಇನ್ನು ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ.

ಸಿದ್ದಯ್ಯನವರ ಪತ್ನಿ ಗಂಗರಾಜಮ್ಮ ಬಲಗೈ ಸಮುದಾಯದವರು. ಅವರ ದಲಿತ ಚಳವಳಿಯ ಒಡನಾಟವೇ ಮಾದಿಗರಾದ ಸಿದ್ದಯ್ಯನವರ ಆಲೋಚನೆಯನ್ನು ವಿಸ್ತರಿಸುವಲ್ಲಿ ಸಹಾಯ ಮಾಡಿದೆ. ಅಲ್ಲದೇ, ದೇವನೂರು ಮಹದೇವರ ಕುಸುಮಬಾಲೆಯ I want be my home ಎಂದು ಹೇಳುವ ಮಾತಾಗಲಿ, ಚನ್ನನ ಕೊಲೆಗೆ ಅಥವಾ ಎಲ್ಲಾ ಅನ್ಯಾಯದ ವಿರುದ್ದ ದಲಿತ ಸಮುದಾಯದ ಎಲ್ಲರೂ ಮೆರವಣಿಗೆ ಹೋಗುವುದಾಗಲಿ ಮರೆಯಲು ಸಾಧ್ಯವೇ. ಹೊಲೆ-ಮಾದಿಗರ ನಡುವಿನ ಅಂತರ್ಜಾತಿ ಮದುವೆಯಾಗಲಿ, ಬೇರೆ ಜಾತಿ, ಧರ್ಮದವರೊಂದಿಗಿನ ಮದುವೆಗಳಾಗಲಿ ಕುವೆಂಪುರವರ ಮಾನವ ಮಂಟಪವನ್ನು ಕಟ್ಟಲು ಸಹಕಾರಿಯಾಗಿದೆ. ಅಂತಹ ಆಲೋಚನೆಗಳು ನಮ್ಮ ನಡುವೆ ಸಾಕಷ್ಟು ಇದೆ.

ಹಾಗಾಗಿ ಸರ್ಕಾರ 15 ರಿಂದ 17ಕ್ಕೆ ಏರಿಸಿದ ಮೀಸಲಾತಿಯ ಪ್ರಮಾಣಕ್ಕೆ ಕಾನೂನಿನ ಮಾನ್ಯತೆ ಬರುವಂತೆ ಮಾಡಬೇಕಿದೆ. ಮೀಸಲಾತಿ ಪ್ರಮಾಣವನ್ನು ಏರಿಸಿದ ಸಂದರ್ಭದಲ್ಲಿ ಆಗುವ ರೋಸ್ಟರ್ ಗೊಂದಲಗಳನ್ನು ಕಾನೂನು ತಜ್ಞರ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಆ ಸಮಯದಲ್ಲಿ ಹತ್ತೊಂಭತ್ತು ಹುದ್ದೆ ಮೇಲಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಉಳಿದ ಎರಡು ಮೂರು ಹುದ್ದೆಗಳನ್ನು ಹೊಸ ರೋಸ್ಟರ್ ಅನ್ವಯ ತುಂಬಬೇಕಿದೆ. ಇದಕ್ಕೆ ಎರಡು ಸಮುದಾಯದವರ ಒಪ್ಪಿಗೆ ಪಡೆದು ಮುಂದುವರೆದು ಬಿಟ್ಟರೆ ಬಿಜೆಪಿಯ ಒಡೆದಾಳುವ ನೀತಿ ಸೋತಂತೆಯೆ. ಈ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದೇ ಹೋದರೆ ಅಹಿಂದ ಒಗ್ಗಟ್ಟು ಎಲ್ಲಿ ಉಳಿಯುತ್ತದೆ. ಮುಖ್ಯಮಂತ್ರಿಗಳ ಅಹಿಂದ ರಾಜಕಾರಣಕ್ಕೆ ಅರ್ಥ ಎಲ್ಲಿ ಬರುತ್ತದೆ!.

ಮಾದಿಗ ಸಮುದಾಯದ ದಲಿತ ಚೇತನ ಕೃಷ್ಣಪ್ಪನವರ ಪತ್ನಿ ಇಂದಿರಾ ಕೃಷ್ಣಪ್ಪ ಬ್ರಾಹ್ಮಣರಾಗಿಯೂ ದಲಿತ ಸಮುದಾಯದ ಒಗ್ಗಟ್ಟಿನ ಜೊತೆ ಹೆಜ್ಜೆ ಹಾಕುತ್ತಾ ಅವರ ಪತಿಯ ಆಶಯವನ್ನು ಈಗಲೂ ಈಡೇರಿಸಲು ಮುಂದೆ ಬಂದು ಒಂದಾಗೋಣ ಕೈ ಜೋಡಿಸಿ ಉದ್ಘಾಟನೆ ಮಾಡಿ ಆಶಯ ನುಡಿಗಳನ್ನು ಹೇಳಿದ್ದು ಮಾನವಕುಲದ ಏಕತೆಯನ್ನೆ ಪ್ರತಿಪಾದಿಸುತ್ತದೆ. ಇಂಥ ಮನಸ್ಸುಗಳನ್ನು ಒಗ್ಗೂಡಿಸುವ ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ಕೊಡಲು ರವಿವರ್ಮಕುಮಾರ್ ಆಯೋಗದ ಮುಂದೆ ಹೋಗಿದ್ದೆವು ಎಂದು ಇಂದಿರಾ ಕೃಷ್ಣಪ್ಪನವರು ಹೇಳಿದ್ದು ಹೊಲೆಮಾದಿಗ ಜೋಡಿ ಪ್ರೇಮಿಗಳ ಪಾಲಿಗೂ ಒಂದು ಆಶಾಕಿರಣ.

ಇನ್ನು ದು ಸರಸ್ವತಿ ಅವರಂತಹ ಬೀದಿ ಹೋರಾಟಗಾರ್ತಿ ಲೈಂಗಿಕ ಕಾರ್ಯಕರ್ತೆಯರ ಪರವಾಗಿ ಮಾತನಾಡುತ್ತಾ ಇವರಿಗೆ ಯಾಕೆ ಮೀಸಲಾತಿ ಇಲ್ಲ ಎಂದು ಎಲ್ಲೇ ಹೋದರೂ ಕೇಳುತ್ತಿದ್ದಾರೆ. ಇಂಥ ದಲಿತ ಮೌಲ್ಯವೇ ನಮ್ಮಂಥ ಹಲವು ಜನರನ್ನು ಜಾತಿ, ಧರ್ಮದ ಆಚೆ ಸೆಳೆದಿದೆ. ಇಂಥ ಆಶಯಗಳನ್ನು ಇಟ್ಟುಕೊಂಡು ಎರಡು ಸಮುದಾಯದ ನಡುವೆ ಒಗ್ಗಟ್ಟಿನ ಮಂತ್ರ ಹೇಳಿಸಲು ಒಂದಾಗೋಣ ಕೈಜೋಡಿಸಿ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಒಳಗೊಂಡು ಎರಡು ಸಮುದಾಯಗಳ ಹಿರಿಯರು, ಹೋರಾಟಗಾರರು ಮಾತಾಡಿ ಒಂದು ನಿರ್ಣಯಕ್ಕೆ ಬರಲಾಯಿತು. ಈ ನಿರ್ಣಯ ಇನ್ನು ಉತ್ತಮಗೊಳಿಸಬಹುದು. ಒಂದಾಗಲು ಗಡ್ಡಮ್ ವೆಂಕಟೇಶ ಅವರಂತಹ ಹಿರಿಯರು ಯಾವುದೇ ಸಭೆಗಾದರೂ ಖುದ್ದು ಹಾಜರಿದ್ದು ಓಡಾಡುತ್ತಿರುವುದು ನೋಡಿದರೆ, ಇಂತಹ ಜೀವಗಳನ್ನು ಓಡಾಡಿಸಬೇಕೇ, ಒಗ್ಗಟ್ಟಾಗಿ ಅವರ ಮುಂದೆ ನಿಂತರೆ ಅವರ ದಲಿತ ಚಳವಳಿಯ ಅನುಭವಕ್ಕೆ ಒಂದು ಪ್ರೀತಿಯ ನಗೆ ನಕ್ಕು ಬಿಟ್ಟರೆ ಅದೇ ಅವರಿಗೆ ಕೊಡುವ ಬಹುದೊಡ್ಡ ಗೌರವ.

ನಾವು ಈ ಸಮುದಾಯದ ಒಪ್ಪಿಗೆ ಪಡೆದು ತೆಗೆದುಕೊಂಡ ನಿರ್ಣಯದ ಪಟ್ಟಿ ಇಂತಿದೆ.

  1. ಸಭೆಯಲ್ಲಿ ಎಲ್ಲಾ ಸಮುದಾಯಗಳು ಒಳಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸುವಂತೆ ಒಕ್ಕೊರಲಿನಿಂದ ನಿರ್ಧಾರಕೈಗೊಳ್ಳಲು ನಿರ್ಣಯಿಸಲಾಯಿತು.

2. ಪರಿಶಿಷ್ಟ ಜಾತಿಗಳ ನೋಡಲ್ ಏಜೆನ್ಸಿಯಾಗಿರುವ ಸಮಾಜಕಲ್ಯಾಣ ಇಲಾಖೆಯ ಅಧ್ಯಕ್ಷತೆಯಲ್ಲಿ ಕಾನೂನು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಪ್ರಧಾನ ಕಾರ್ಯದರ್ಶಿ ಹಾಗೂ ಕಾನೂನು ಇಲಾಖೆ ಸಮನ್ವಯತೆ ಹಾಗೂ ಚರ್ಚೆಯ ಮೂಲಕ ರೋಸ್ಟರ್ ಸಮಸ್ಯೆಯನ್ನು ಬಗೆಹರಿಸಬೇಕು. ಇದಕ್ಕೆ ಶಿಕ್ಷಣ ಹಾಗೂ ಉದ್ಯೋಗದ ಹಿಂದುಳಿದಿರುವಿಕೆ ಆಧರಿಸಿ ಸಾಮಾಜಿಕ ನ್ಯಾಯ ಪಾಲಿಸಬೇಕು. ಆನಂತರ ಕೂಡಲೇ ಉದ್ಯೋಗ ಭರ್ತಿ ಮಾಡಬೇಕು.

3. ರೋಸ್ಟರ್ ಸಮಸ್ಯೆ ಬಗೆಹರಿಸುವ ಹಂತದಲ್ಲಿ 19 ಹುದ್ದೆಗಳಿಗಿಂತ ಹೆಚ್ಚಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.

4. ಜನಸಂಖ್ಯಾ ಆಧಾರಿತವಾಗಿ ಹದಿನೇಳಕ್ಕೆ ಮೀಸಲಾತಿಯನ್ನು ವಿಸ್ತರಿಸಿ ಅದನ್ನು ಒಂಭತ್ತನೇ ಶೆಡ್ಯೂಲ್ ಗೆ ಸೇರಿಸಲು ಸರ್ವಪಕ್ಷಗಳ ಸಭೆ ಕರೆದು ತೀರ್ಮಾನಿಸಬೇಕು. ಈ ವಿಸ್ತರಣೆಯಲ್ಲಿ ಒಳಮೀಸಲಾತಿ ಕೂಡಲೇ ಜಾರಿ ಮಾಡಬೇಕು.

5. ಖಾಸಗಿ ವಲಯದಲ್ಲಿ ಹಾಗೂ ಹೊರಗುತ್ತಿಗೆಯಲ್ಲಿ ಹಾಗೂ ಸಹಕಾರಿ ರಂಗದಲ್ಲಿ ಮೀಸಲಾತಿ ಜಾರಿ ಮಾಡಬೇಕು.

6. ಮ್ಯಾನುಯಲ್ ಸ್ಕ್ಯಾವೆಂಜರ್ಸ್, ಲೈಂಗಿಕ ಕಾರ್ಯಕರ್ತೆಯರನ್ನು ಮೀಸಲಾತಿ ಒಳಗೆ ಆದ್ಯತೆ ನೀಡಬೇಕು.

  1. ಅಲೆಮಾರಿ ಸಮುದಾಯಗಳನ್ನು ಒಳಮೀಸಲಾತಿಯಲ್ಲಿ ಆದ್ಯತೆಯಾಗಿ ಪರಿಗಣಿಸಬೇಕು
  2. ಸಮುದಾಯಗಳ ನಡುವಿನ ಬಿಕ್ಕಟ್ಟು, ಒಡಕಿಗೆ ಮದ್ದಾಗಿ ಈ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಂಡ ನಂತರವೂ, ಬುದ್ಧ ಪ್ರಜ್ಞೆಯನ್ನು ಬೆಳೆಸಲು ದೀರ್ಘಕಾಲೀನ ಕಾರ್ಯಕ್ರಮಗಳನ್ನೂ ರೂಪಿಸಬೇಕು

ಇಂಥ ಮಾತುಗಳ ಆಚೆ ಯೋಚಿಸುವ ಅಲ್ಲಮಪ್ರಭುಗಳ ವಚನ ಈ ರೀತಿ ಇದೆ.
“ಜಲದೊಳಗಣ ಕಿಚ್ಚು ಜಲವ ಸುಡದೆ ತಾನಾಗಿದ್ದಿತು ನೋಡ
ನೆಲೆಯನರಿದೆನೆಂದರೆ ಅದು ಜಲವು ತಾನಲ್ಲ. ಕುಲದೊಳಗಿದ್ದು ಕುಲವ ಬೆರೆಸದೆ ನೆಲೆಗೆಟ್ಟು ನಿಂದುದನಾರು ಬಲ್ಲರು
ಒಳಹೊರಗಿದ್ದು ತೆರದೊರದಿಪ್ಪದು ಗುಹೇಶ್ವರ ನಿಮ್ಮ ನಿಲುವು ನೋಡಾ”


ಈ ವಚನ ದಾರಿದೀಪದಂತೆ, ಎಡವದಂತೆ ಕಾಪಾಡಲಿ. ನೈಜ ಬೋಧಿ ಪ್ರಜ್ಞೆಯೇ ಸಂರಚನೆ, ಒಂದಕ್ಕೊಂದರ ಸಂಬಂಧದ ಅರಿವು ಸ್ವಂತಿಕೆ ಎಂಬುದಿಲ್ಲ. ಒಂದರೊಳಗೊಂದು ಇದೆ ಎಂಬ ಮಹಾ ಅರಿವು ಆ ಅರಿವಿಗೆ ಬುದ್ದಗುರುಗಳು ನೀರೆರೆದು ಪೋಷಿಸಿರುವಾಗ ಅರಳಿಮರದಂತೆ ನೆರಳಾಗುವುದೊಂದೇ ದಾರಿ.

9b51663a efbf 46a8 8dd0 de5e56fd241d
ಅಪೂರ್ವ ಡಿಸಿಲ್ವ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...