ವಿಜಯಪುರ | ಪವಿತ್ರ ರಂಜಾನ್‌: ಬೆಲೆ ಏರಿಕೆ ಬಿಸಿ ಮಧ್ಯೆಯೂ ಕಳೆಗಟ್ಟಿದ ಮಾರುಕಟ್ಟೆಗಳು

Date:

ಪವಿತ್ರ ರಂಜಾನ್ ಮಾಸದ ಕಠಿಣ ಉಪವಾಸ (ರೋಜಾ) ಮುಕ್ತಾಯದ ಹಂತಕ್ಕೆ ತಲುಪಿದ್ದು, ಮುಸ್ಲಿಂ ಬಾಂಧವರು ‘ಈದ್-ಉಲ್-ಪಿತರ್‌’ ಸಂಭ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯಪುರದ ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ಮನೆಮಾಡಿದ್ದರೂ, ಈ ಬಾರಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ಬಿಸಿಯ ನಡುವೆಯೂ ಗ್ರಾಹಕರು ಹೊಸ ಬಟ್ಟೆ, ಆಭರಣ ಹಾಗೂ ಸಿಹಿ ಪದಾರ್ಥಗಳ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

- Advertisement -

ಹಬ್ಬದ ಪ್ರಯುಕ್ತ ವಿಜಯಪುರ ನಗರದ ವಿವಿಧ ಶಾಪ್ಗಳಲ್ಲಿ ಚಪ್ಪಲಿ, ಬಟ್ಟೆ ಮೇಲಿನ ಶೇ.30 ರಿಂದ 40 ರಷ್ಟು ರಿಯಾಯಿತಿ ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ಜೊತೆ ಬಟ್ಟೆ ತೆಗೆದುಕೊಳ್ಳುವಲ್ಲಿ ಗ್ರಾಹಕರು ಮೂರ್ನಾಲ್ಕು ಜೊತೆ ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಕೂಡಾ ಬಟ್ಟೆ ಜತೆಗೆ ಚಪ್ಪಲಿ, ಆಭರಣ ಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...
WhatsApp Image 2026 03 18 at 1.59.44 PM 1

ವಿಜಯಪುರ ನಗರದ ಕೆ ಸಿ ಮಾರುಕಟ್ಟೆಯಿಂದ ಟಿಪ್ಪು ಸುಲ್ತಾನ್ ಸರ್ಕಲ್, ಗಾಂಧಿ ವೃತ್ತದವರೆಗೂ ರಸ್ತೆಗಳು, ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಗಾಂಧಿ ಚೌಕ, ಕೆಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್‌ಗಾಗಿಯೇ ಕೆಲ ಹೊಸ ಅಂಗಡಿಗಳು ತಲೆಯೆತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹಂದಿ ಸೇರಿದಂತೆ ವಿಧ ವಿಧವಾದ ಆಭರಣಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಪುರುಷರು ಹಬ್ಬಕ್ಕಾಗಿ ಹೊಸ ಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ ಖರೀದಿಸುವಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳು ವಿಶೇಷವಾಗಿ ಸುರಕುಂಬ (ಶೀರ್‌ ಖುರ್ಮಾ) ಮಾಡಲು ಬೇಕಾಗುವ ಗೋಡಂಬಿ ಬಾದಾಮಿ ಸೇರಿದಂತೆ ಡ್ರೈ ಫ್ರೂಟ್ಸ್ ಹಾಗೂ ವಿವಿಧ ಮಸಾಲೆ ಪದಾರ್ಥಗಳು ಭರ್ಜರಿಯಾಗಿ ಮಾರಾಟವಾಗುತ್ತಿದ್ದರೂ, ಬೆಲೆ ಏರಿಕೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ವ್ಯಾಪಾರ ಕುಂಠಿತವಾಗಿದೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.

WhatsApp Image 2026 03 18 at 1.59.44 PM 2

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರತಿ ಕೆಜಿಗೆ ಸುಮಾರು ರೂ.400ರಷ್ಟು ದರ ಏರಿಕೆಯಾಗಿದೆ. 120 ಇದ್ದ ಕೊಬ್ಬರಿ ಬೆಲೆ 350 ಆಗಿದೆ. ಕಳೆದ ವರ್ಷ ಸುರಕುಂಬ ಮಸಾಲೆ ಪ್ರತಿಯೊಂದು 50 ಗ್ರಾಂನಂತೆ ಕೇವಲ 600 ರಿಂದ 700ಗಳಲ್ಲಿ ಸಿಗುತ್ತಿತ್ತು. ಆದರೆ, ಅದು ಈ ಬಾರಿ 1200 ರಿಂದ 1300 ಆಗಿದೆ. ಹೀಗಾಗಿ ಗ್ರಾಹಕರು ಕೊಂಡುಕೊಳ್ಳುವ ಪ್ರಮಾಣ ಇಳಿಮುಖವಾಗಿದೆ ಎನ್ನುತ್ತಾರೆ ವ್ಯಾಪಾರಿ ಪ್ರವೀಣ ಕುಮಾರ.

ರಂಜಾನ್ ಹಬ್ಬ ನಮಗೆ ಅತ್ಯಂತ ಪವಿತ್ರ ಹಬ್ಬ. ನಾವು ಅತ್ಯಂತ ಸಡಗರದಿಂದ ಆಚರಿಸುತ್ತೇವೆ. ಈ ಹಬ್ಬದಲ್ಲಿ ಹೊಸಬಟ್ಟೆ ಖರೀದಿಸುತ್ತೇವೆ. ಆದರೆ ಈ ವರ್ಷ ಯುದ್ಧದ ಪರಿಣಾಮ ಖರೀದಿಸುವುದು ಬಹಳ ಕಷ್ಟವಾಗಿದೆ. ಆದರೂ ಇದ್ದದ್ದರಲ್ಲಿ ಖರೀದಿಸುತ್ತಿದ್ದೇವೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಫಯಾಜ್ ಕಲಾದಗಿ.

WhatsApp Image 2026 03 18 at 1.59.44 PM

ಯುದ್ಧದಿಂದ ವ್ಯಾಪಾರ ಕುಸಿದಿರುವುದು ಸತ್ಯ. ಹೋದ ವರ್ಷ ಬೆಲೆ ಕಡಿಮೆ ಇತ್ತು. ವ್ಯಾಪಾರ ಛಲೋ ಇತ್ತು. ಆದರೆ ಈ ವರ್ಷ ವ್ಯಾಪಾರ ಮಾಡಲು ಬಹಳ ತೊಂದರೆ ಆಗಿದೆ ಎನ್ನುತ್ತಾರೆ ಅಶೋಕ ಕನ್ನೂರು.

ಇದನ್ನೂ ಓದಿ: ವಿಜಯಪುರ | ವೈದ್ಯಕೀಯ ನಿರ್ಲಕ್ಷ್ಯ ಕಾನೂನು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ

WhatsApp Image 2026 03 18 at 1.59.45 PM 1

ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಯುದ್ಧದ ಭೀತಿಯು ಸ್ಥಳೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರೂ, ಹಬ್ಬದ ಭಕ್ತಿ ಮತ್ತು ಸಡಗರಕ್ಕೆ ಯಾವುದೂ ಅಡ್ಡಿಯಾಗಿಲ್ಲ. ʼಖರ್ಚು ಹೆಚ್ಚಾದರೂ ಪವಿತ್ರ ಹಬ್ಬದ ಆಚರಣೆಯಲ್ಲಿ ಕುಂದು ಬರಬಾರದುʼ ಎಂಬ ಮನೋಭಾವದೊಂದಿಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಯ ಕಹಿಯ ನಡುವೆಯೂ ಈದ್ ಹಬ್ಬದ ಸಿಹಿಯನ್ನು ಸವಿಯಲು ವಿಜಯಪುರ ಜನತೆ ಸಜ್ಜಾಗಿದೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...